Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಉದ್ಯೋಗಸ್ಥ ಮಹಿಳೆಗೆ 5 ನಿಮಿಷದ ಮೇಕಪ್ ಟಿಪ್ಸ್
ಗೃಹಿಣಿ ಎನಿಸಿಕೊಂಡಿರುವ ಸ್ತ್ರೀಗಿಂತ, ಕಛೇರಿಯಲ್ಲಿ ಕೆಲಸಮಾಡುವ ಮಹಿಳೆ ಇನ್ನಷ್ಟು ಹೆಚ್ಚು ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ. ಒಂದೇ ಸಮಯದಲ್ಲಿ ಹಲವಾರು ವಿಷಯಗಳ ಬಗ್ಗೆ ಆಕೆ ಗಮನವಹಿಸಬೇಕಾಗುತ್ತದೆ. ಮನೆಯಲ್ಲಿ ಎಲ್ಲಾ ಕೆಲಸವನ್ನು ಪೂರೈಸಿ ಸರಿಯಾದ ಸಮಯಕ್ಕೆ ಹೊರಗಡೆ ಕೆಲಸಕ್ಕೂ ಹೋಗುವುದು ಎಂದರೆ ಸುಲಭದ ಮಾತಲ್ಲ. ಈ ಎರಡೂ ಕಾರ್ಯವನ್ನು ಅತ್ಯಂತ ಜಾಗರೂಕತೆಯಿಂದ ನಿಭಾಯಿಸಬೇಕಾಗುತ್ತದೆ.
ಮುಂಜಾನೆಯೇ ಎದ್ದು ಮನೆಯ ಎಲ್ಲಾ ಕೆಲಸವನ್ನು ಮುಗಿಸಿ ಕಚೇರಿಗೆ ಹೊರಡುವಾಗ ನಿಮಗೆ ಸರಿಯಾಗಿ ಮೆಕಪ್ ಅಥವಾ ಸರಿಯಾಗಿ ವಿನ್ಯಾಸವನ್ನು ಮಾಡಿಕೊಳ್ಳಲು ಸಾಧ್ಯವಾಗದೇ ಹೋಗಬಹುದು. ಆದರೆ ಕಚೇರಿ ಕೆಲಸ ಎಂದಮೇಲೆ ಸರಿಯಾದ ಶಿಸ್ತು, ಸರಿಯಾದ ಉಡುಗೆ ಧರಿಸುವುದು ಅತ್ಯಗತ್ಯ ತಾನೇ? ತನಗೆ ಬೆಳಗ್ಗೆ ಸಮಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ಸರಿಯಾಗಿ ಉಡುಪು ಅಥವಾ ಮೇಕಪ್ ಮಾಡದೇ ಕಚೇರಿಗೆ ತೆರಳುವುದೂ ಸರಿಯಲ್ಲ. ಅದರಲ್ಲೂ ಕೆಲವೊಂದು ಕಂಪನಿಗಳಲ್ಲಿ ಇಂತಹುದೇ ಉಡುಗೆ ತೊಡಬೇಕು ಅಥವಾ ಮೇಕಪ್ ಮಾಡಿರಬೇಕು ಎಂಬ ನೀತಿಗಳಿರುತ್ತವೆ. ಆದ್ದರಿಂದ ಕನ್ನಡಿಯ ಮುಂದೆ ಸಿದ್ಧರಾಗಲು ಒಂದಿಷ್ಟು ಸಮಯವನ್ನು ಕಳೆಯುವುದು ಅನಿವಾರ್ಯ!

ಆದ್ದರಿಂದ ಹೆಚ್ಚು ಸಮಯವನ್ನು ಕಳೆಯದೇ ಕೇವಲ ಹತ್ತು ನಿಮಿಷಗಳಲ್ಲಿ ನೀವು ಶಿಸ್ತಿನಿಂದ ಸಿದ್ಧರಾಗಿ ಹೊರಡಲು ಇಲ್ಲಿದೆ ಉಪಾಯ!
ತಾಜಾತನ – ಇದು ಅತ್ಯಂತ ಮುಖ್ಯವಾದುದು. ನೀವು ಆಫೀಸ್ ಗೆ ತಲುಪುತ್ತಿದ್ದಂತೆ ನಿಮ್ಮ ಮುಖದಲ್ಲಿ ತಾಜಾತನವಿರಬೇಕು. ಬೇರೆಯವರೂ ಸಹ ನಿಮ್ಮನ್ನು ನೋಡಿ ಖುಷಿಪಡುವಂತಿರಬೇಕು. ಬೆಳಗ್ಗೆನೆ ನಿಮ್ಮ ಮುಖ ಬಾಡಿದ್ದರೆ ಅದು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಬಹುದು! ಆದ್ದರಿಂದ ಈ ವಿಷಯದ ಬಗ್ಗೆ ಹೆಚ್ಚು ಗಮನವಿರಲಿ!
ಮೇಕಪ್ ವಿಷಯದಲ್ಲಿ ತೃಪ್ತಿ – ಕಾಲಕ್ಕೆ ತಕ್ಕ ಹಾಗೇ ಮೇಕಪ್ ಮಾಡುವ ಗುಣ ನಿಮ್ಮದಾಗಿರಲಿ. ಉದಾಹರಣೆಗೆ ನಿಮ್ಮ ತ್ವಚೆ ಒಣ ತ್ವಚೆಯಾಗಿದ್ದರೆ ಚಳಿಗಾಲದಲ್ಲಿ ಎಣ್ಣೆಯುಕ್ತ ಮೇಕಪ್ ವಸ್ತುಗಳನ್ನೇ ಬಳಸಿ. ಆದರೆ ಬೇಸಿಗೆಯಲ್ಲಿ ಖಂಡಿತವಾಗಿಯೂ ನೀವು ಈ ಮೇಕಪ್ ವಸ್ತುಗಳನ್ನು ಬದಲಾಯಿಸಬೇಕು. ನಿಮ್ಮ ತ್ವಚೆಗೆ ಸರಿಹೊಂದುವಂತಹ ಹಾಗೂ ತಕ್ಷಣದಲ್ಲಿ ಸಿದ್ಧರಾಗಬಲ್ಲ ಮೇಕಪ್ ವಸ್ತುಗಳನ್ನೇ ಬಳಸುವುದು ಉತ್ತಮ.
ಸರಿಯಾದ ಲುಕ್ ಬೇಕೇ ಬೇಕು - ದಿನವೂ ಕಚೇರಿಗೆ ಹೋಗುವಾಗ ನಿಮ್ಮ ತ್ವಚೆಗೆ ಅತಿಯಾದ ಮೇಕಪ್ ಮಾಡದಿರುವುದು ಅತ್ಯಂತ ಒಳ್ಳೆಯದು. ಸಮಾರಂಭಗಳಿಗೆ ಸಿದ್ಧರಾದ ಹಾಗೇ ದಿನದ ಕೆಲಸಕ್ಕೆ ಸಿದ್ಧರಾಗುವುದು ನಿಮ್ಮ ಸೌಂದರ್ಯವನ್ನು ಸಾಮಾನ್ಯವಾಗಿಸಿಬಿಡುತ್ತದೆ! ನಿಮ್ಮ ತ್ವಚೆ ಹಾಳಾಗದಿರಲು ಮತ್ತು ನೀವು ಶಿಸ್ತಿನಿಂದ ಕಾಣಲು ಕಡಿಮೆ ಮೇಕಪ್ ಮಾಡಿರಿ. ಕಡುಗಪ್ಪು ಬಣ್ಣದ ಐಲೈನರ್, ಕಾಡಿಗೆ, ಅತಿಯಾದ ಲಿಪ್ಸ್ಟಿಕ್ ಗಳನ್ನು ಬಳಸದಿರುವುದು ಉತ್ತಮ.
ಮೇಕಪ್ ಗೆ ಸೀಮಿತವಾಗದಿರಲಿ – ದಿನವೂ ಅತಿಯಾಗಿ ಮೇಕಪ್ ಮಾಡಿಕೊಂಡು ಆಪೀಸ್ ಗೆ ಹೋದರೆ ಅಲ್ಲಿ ನಿಮ್ಮ ವ್ಯಕ್ತಿತ್ವದ ಮೇಲೆ ನಕಾರಾತ್ಮಕ ಭಾವನೆ ಉಂಟಾಗಬಹುದು. ನೀವು ಕೆಲಸಕ್ಕಿಂತ ಹೆಚ್ಚಾಗಿ ಮೇಕಪ್ ಗೆ ಹೆಚ್ಚು ಗಮನಕೊಡುತ್ತೀರಿ ಎಂಬ ಭಾವನೆ ಉಂಟಾಗಬಹುದು. ಆದ್ದರಿಂದ ಮಿತವಾಗಿ ಮೇಕಪ್ ಮಾಡಿ. ಕೆಲಸ ಮಾಡುವ ಸ್ಥಳಗಳಲ್ಲಿ ನೈಸರ್ಗಿಕ ಸೌಂದರ್ಯವೇ ಒಳ್ಳೆಯದು.
ಮೆಕಪ್ ಹೇಗಿರಬೇಕು? – ನಿಮ್ಮ ಕಚೇರಿಯ ಪರಿಸರಕ್ಕೆ ತಕ್ಕ ಹಾಗೆ ತೆಳುವಾದ ಮೇಕಪ್ ನಿಮ್ಮದಾಗಿರಲಿ. ಸಾಮಾನ್ಯವಾಗಿ ಕಚೇರಿಗಳಲ್ಲಿ ಒಂದೇ ರೀತಿಯ ಬಣ್ಣವನ್ನು ಬಳಸುತ್ತಾರೆ, ಹಸಿರು ಅಥವಾ ಬಿಳಿಯ ಬಣ್ಣವನ್ನು ಇಡೀ ಕಚೇರಿಯಲ್ಲಿ ಕಾಣಬಹುದು. ಆದ್ದರಿಂದ ನಿಮ್ಮ ಮೇಕಪ್ ಅಥವಾ ಉಡುಪು ಆ ಬಣ್ಣಕ್ಕೆ ಹೊಂದಿಕೊಳ್ಳುವಂತಿರಲಿ. ಕೆಂಪು ಅಥವಾ ಕಡು ಗುಲಾಬಿ ಬಣ್ಣವನ್ನು ಬಳಸದಿರಿ.
ನಸು ಬಣ್ಣದ ಲಿಪ್ ಸ್ಟಿಕ್ - ಲಿಪ್ ಸ್ಟಿಕ್ ಬಳಸುವಾಗ ಮೊದಲೇ ಶೆಡ್ ಗಳನ್ನು ಬಳಸಬೇಡಿ. ಕಡು ಬಣ್ಣವನ್ನು ಬಳಸುವುದಕ್ಕಿಂತ ಹೊಳೆಯುವ ಬಣ್ಣವನ್ನು ತುಟಿಹೆ ಹಚ್ಚುವುದು ಉತ್ತಮ. ಇದು ನಸು ಬಣ್ಣವಾಗಿದ್ದರೂ ತುಟಿಯನ್ನು ಚೆನ್ನಾಗಿ ಹೊಳೆಯುವಂತೆ ಮಾಡುತ್ತದೆ.
ಕಣ್ಣಿನ ಮೇಕಪ್ – ಕಣ್ಣುಗಳಿಗೆ ತೆಳುವಾದ ಶೆಡ್ ಬಳಸಿ. ಕಣ್ಣಿಗೆ ಬೇರೆ ಬೇರೆ ಶೆಡ್ ಬಳಸುವುದಾದರೆ ಉಡುಪಿಗೆ ತಕ್ಕಂತ ತೆಳು ಬಣ್ಣದ ಶೆಡ್ ಗಳನ್ನು ಬಳಸಿ. ಕಂದು ಬಣ್ಣದ ಕಣ್ಣಿನ ಮೇಕಪ್ ಬಳಸಬಹುದು. ಆದರೆ ಕಡುಗಪ್ಪು ಬಣ್ಣದ ಕಣ್ಣಿನ ಮೇಕಪ್ ದಿನವೂ ಮಾಡದಿರುವುದು ಒಳ್ಳೆಯದು.
ಒಟ್ಟಿನಲ್ಲಿ ನೈಸರ್ಗಿಕ ಸೌಂದರ್ಯದ ಜೊತೆಗೆ ತೆಳುವಾಗಿ ಮಾಡಿರುವ ಮೇಕಪ್ ನಿಮ್ಮ ವ್ಯಕ್ತಿತ್ವವನ್ನು ಹೇಳುವಂತಿರಲಿ.



Click it and Unblock the Notifications
