Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಕರ್ಷಕ ಕಣ್ಣಿಗಾಗಿ ನೀಲಿ ಬಣ್ಣದ ಐಶ್ಯಾಡೊ
ಕಾಲಕ್ಕೆ ತಕ್ಕಂತೆ ಮೇಕಪ್ ಬದಲಾಗುತ್ತಾ ಇರುತ್ತದೆ. ಅದರಲ್ಲೂ ಕಾಲೆಜು ಯುವತಿಯರು, ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಹೆಚ್ಚಿನ ಯುವತಿಯರು ಫ್ಯಾಷನ್ ಆಗಿ ಇರಲು ಇಷ್ಟಪಡುತ್ತಾರೆ. ಈಗ ನೀಲಿ ಬಣ್ಣದ ಈ ಶ್ಯಾಡೊ ಹಚ್ಚುವುದು ಟ್ರೆಂಡ್. ಐ ಶ್ಯಾಡೊ ಹಚ್ಚಿ ಮತ್ತಷ್ಟು ಆಕರ್ಷಕವಾಗಿ ಕಾಣಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.
1. ನೀಲಿ ಬಣ್ಣದ ಐ ಶ್ಯಾಡೊ ಕಂದು ಮತ್ತು ಸಾಧಾರಣ ಕಣ್ಣಿನ ಬಣ್ಣಕ್ಕೆ ಚೆನ್ನಾಗಿ ಕಾಣಿಸುವುದು. ಈ ಐಶ್ಯಾಡೊವನ್ನು ಹಗಲಿನಲ್ಲಿ ಹಚ್ಚುವಾಗ ಅದಕ್ಕೆ ಕಂದು ಬಣ್ಣವನ್ನು ಮಿಶ್ರ ಮಾಡಿ ಹಚ್ಚಿದರೆ ಮತ್ತಷ್ಟು ಆಕರ್ಷಕವಾಗಿ ಕಾಣುವುದು. ರಾತ್ರಿ ಪಾರ್ಟಿಗಳಿಗೆ ಹಚ್ಚುವುದಾದರೆ ನೀಲಿ ಮತ್ತು ಸಿಲ್ವರ್ ಬಣ್ಣದ ಐ ಶ್ಯಾಡೊ ಮಿಶ್ರ ಮಾಡಿ ಹಚ್ಚಿದರೆ ಮುಖದ ಹೊಪು ಹೆಚ್ಚುವುದು.

2. ಇದನ್ನು ಹಚ್ಚುವ ಮೊದಲು ಮುಖವನ್ನು ಕ್ಲೆನ್ಸ್ ಮಾಡಬೇಕು. ನಂತರ ಐ ಶ್ಯಾಡೊ ಹಚ್ಚುವಾಗ ಅದು ಕಣ್ಣಿನ ಒಳಭಾಗದಂತೆ ತಾಗದಂತೆ ಎಚ್ಚರಿಕೆವಹಿಸಬೇಕು.
3. ಐ ಶ್ಯಾಡೊ ಹಚ್ಚುವ ಮೊದಲು ಮುಖ ಮತ್ತು ಕಣ್ಣಿನ ರೆಪ್ಪೆಗಳ ಮೇಲೆ ಫೌಂಡೇಶನ್ ಹಚ್ಚಬೇಕು. ಇದರಿಂದ ಕಣ್ಣಿನ ಮೇಕಪ್ ಬೇಗನೆ ಹಾಳಾಗುವುದಿಲ್ಲ.
4. ಐ ಬ್ರಷ್ ಬಳಸಿ ಕಣ್ಣಿನ ಮೇಲಿನ ರೆಪ್ಪೆಗಳಿಗೆ ಐ ಶ್ಯಾಡೊ ಹಚ್ಚಬೇಕು. ಹೀಗೆ ಹಚ್ಚುವಾಗ ಹುಬ್ಬಿನವರೆಗೆ ಹಚ್ಚಬಾರದು.
5. ತೆಳ್ಳನೆಯ ಬ್ರಷ್ ಮೂಗಿನ ತುದಿಗೆ ಸ್ವಲ್ಪ ಗೆರೆ ರೀತಿ ಎಳೆಯಬೇಕು.
6. ಬೇರೆ ಯಾವುದೇ ಬಣ್ಣ ಮಿಶ್ರ ಮಾಡದೆ ಐ ಶ್ಯಾಡೊವನ್ನು ತೆಳುವಾಗಿ ಕೆಳ ರೆಪ್ಪೆಗಳಿಗೆ ಹಚ್ಚಬೇಕು.
7. ಈಗ ಕಂದು ಬಣ್ಣದ ಐ ಶ್ಯಾಡೊವನ್ನು ನೀಲಿ ಬಣ್ಣದ ಜೊತೆ ಮಿಶ್ರ ಮಾಡಿ ಹುಬ್ಬಿನ ಕೆಳಭಾಗದ ಮೂಳೆ ಭಾಗಕ್ಕೆ ಹಚ್ಚಿದರೆ ಫ್ಯಾಷನೇಬಲ್ ಆಗಿ ಕಾಣುವುದು ಮತ್ತು ಅಂದ ಹೆಚ್ಚುವುದು.



Click it and Unblock the Notifications
