Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನೀಳ ಕೇಶರಾಶಿಗೆ ಬೇಕು, ಗಿಡಮೂಲಿಕೆಯ ಆರೈಕೆ...
ಆರೋಗ್ಯಕರ, ನೀಳ, ಸೊಂಪಾದ, ಕಾಂತಿಯುಕ್ತ ಕೂದಲು ಯಾರಿಗೆ ಬೇಡ? ಇದನ್ನು ಪಡೆಯಲು ಎಷ್ಟು ಖರ್ಚು ಮಾಡಲೂ ನಾವೆಲ್ಲಾ ತಯಾರಾಗಿದ್ದೇವೆ. ಇದನ್ನು ಮನಗಂಡ ಪ್ರಸಾದನಾ ತಯಾರಿಕಾ ಸಂಸ್ಥೆಗಳು ಸುಂದರ ಮತ್ತು ಭಾರೀ ಖರ್ಚಿನ ಜಾಹೀರಾತುಗಳ ಮೂಲಕ ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ಆದರೆ ಬಹುತೇಕ ಎಲ್ಲವೂ ಜಾಹೀರಾತಿನಲ್ಲಿ ಮೂಡಿಸಿದ ಆಶಾವಾದವನ್ನು ಉಳಿಸಿಕೊಳ್ಳಲು ವಿಫಲವಾಗುತ್ತವೆ (ಆದರೆ ಹಣ ಮಾತ್ರ ಪೂರ್ಣವಾಗಿ ವಸೂಲಿ ಮಾಡಿರುತ್ತವೆ). ಇಷ್ಟೇ ಆದರೆ ಪರವಾಗಿರಲಿಲ್ಲ, ಹೆಚ್ಚಿನವು ಅನುಕೂಲ ಮಾಡುವುದಕ್ಕಿಂತಲೂ ಹೆಚ್ಚಾಗಿ ಹಾನಿಯನ್ನೇ ಉಂಟುಮಾಡುತ್ತವೆ.
ಕೆಲವಂತೂ ಕೂದಲ ಬುಡವನ್ನೇ ಹಾನಿಗೊಳಿಸಿ ಇದ್ದ ಕೂದಲನ್ನೂ ಉದುರಿಸಿ ಆರೋಗ್ಯವನ್ನು ಇನ್ನಷ್ಟು ಕದಡುತ್ತವೆ. ಇದಕ್ಕೆ ಇದರಲ್ಲಿರುವ ಅಲರ್ಜಿಕಾರಕ ಮತ್ತು ಪ್ರಬಲ ರಾಸಾಯನಿಕಗಳೇ ಕಾರಣ. ಆದ್ದರಿಂದ ಕೂದಲ ರಕ್ಷಣೆಗೆ ನೈಸರ್ಗಿಕ ತೈಲಗಳೇ ಅತ್ಯುತ್ತಮವಾಗಿವೆ. ಇವು ಕೂದಲಿಗೆ ಪೋಷಣೆ ನೀಡುತ್ತವೆ ಹಾಗೂ ಬೆಳವಣಿಗೆಗೂ ನೆರವಾಗುತ್ತವೆ. ತೈಲಗಳ ಹೊರತಾಗಿ ಹಲವಾರು ಗಿಡಮೂಲಿಕೆಗಳೂ ಕೂದಲ ರಕ್ಷಣೆಗೆ ಸಮರ್ಥವಾಗಿವೆ.
ಇದರ ಒಂದೇ ಅವಗುಣವೆಂದರೆ ಇದರ ಪ್ರಭಾವ ಕಂಡುಬರುವುದು ನಿಧಾನವಾಗಿ. ಆದರೆ ಈ ಪ್ರಭಾವ ಸುರಕ್ಷಿತವಾಗಿದ್ದು ಸಮರ್ಪಕ ಆರೈಕೆಯಿದ್ದರೆ ಬಹುಕಾಲದವರೆಗೆ ಆರೋಗ್ಯಕರವಾಗಿರುತ್ತವೆ. ಕೂದಲು ನೀಳವಾಗಿಯೂ, ಕಾಂತಿಯುಕ್ತವಾಗಿಯೂ, ಸೊಂಪಾಗಿಯೂ ಗಾಢಕಪ್ಪುಬಣ್ಣವನ್ನೂ ಹೊಂದಿರುತ್ತದೆ. ಪ್ರತಿ ಗಿಡಮೂಲಿಕೆಯೂ ತನ್ನದೇ ಆದ ಪರಿಣಾಮವನ್ನು ಹೊಂದಿದ್ದು ಉತ್ತಮ ಫಲಿತಾಂಶ ಪಡೆಯಲು ಭಿನ್ನವಾದ ಗಿಡಮೂಲಿಕೆ ಹಾಗೂ ನೈಸರ್ಗಿಕ ಫಲಗಳನ್ನು ಉಪಯೋಗಿಸುವುದು ಉತ್ತಮ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ.

ನೆಲ್ಲಿಕಾಯಿ
ನೆಲ್ಲಿಕಾಯಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು ಕೂದಲ ಪೋಷಣೆಗೆ ನೆರವಾಗುತ್ತದೆ. ಇದಕ್ಕಾಗಿ ಒಣ ನೆಲ್ಲಿಕಾಯಿಯ ಪುಡಿಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಬೇಕು. ಇದರಿಂದ ಕೂದಲ ಬೆಳವಣಿಗೆ ಹೆಚ್ಚುತ್ತದೆ ಹಾಗೂ ಕೂದಲಿಗೆ ಉತ್ತಮ ಹೊಳಪು ಲಭ್ಯವಾಗುತ್ತದೆ. ನಿಯಮಿತವಾದ ಬಳಕೆಯಿಂದ ಕೂದಲು ಸೊಂಪಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅಲ್ಲದೇ ಕೂದಲ ಬೆಳವಣಿಗೆಯ ವೇಗವೂ ಹೆಚ್ಚುತ್ತದೆ.

ಲೋಳೆಸರ
ಆಲೋವೆರಾ ಅಥವಾ ಲೋಳೆಸರ ಒಂದು ಉತ್ತಮ ತೇವಕಾರಕವಾಗಿದ್ದು ಕೂದಲ ಬುಡಕ್ಕೆ ಹೆಚ್ಚು ಪೋಷಣೆ ನೀಡುತ್ತದೆ. ಇದರಲ್ಲಿ salicylic acid ಎಂಬ ಪೋಷಕಾಂಶವಿದ್ದು ಇದರ ಉರಿಯೂತ ನಿವಾರಕ ಮತ್ತು ಪ್ರತಿಜೀವಕ ಗುಣಗಳು ತಲೆಗೂದಲ ಬುಡದಲ್ಲಿ ಚರ್ಮದ ಸೂಕ್ಷ್ಮರಂಧ್ರಗಳನ್ನು ತೆರೆದು ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ಲೋಳೆಸರವನ್ನು ಜಜ್ಜಿ ಅರೆದು ನಯವಾದ ಲೇಪನವಾಗಿಸಿ ಕೂದಲ ಬುಡಕ್ಕೆ ಹಚ್ಚಿಕೊಂಡು ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿಕೊಳ್ಳುವ ಮೂಲಕ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.

ತುಳಸಿ ಎಲೆಗಳು
ತುಳಸಿ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳಿದ್ದು ಕೆಲವು ಗುಣಗಳು ಕೂದಲಿಗೂ ಉತ್ತಮವಾಗಿವೆ. ಕೂದಲು ಶಿಥಿಲವಾಗಿದ್ದು ಬಾಚುವಾಗ ಸುಲಭವಾಗಿ ಕಿತ್ತು ಬರುತ್ತಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ.ಚೆನ್ನಾಗಿ ಬಲಿತ ಕೆಲವು ತುಳಸಿ ಎಲೆಗಳನ್ನು ನಯವಾಗಿ ಅರೆದು ನೇರವಾಗಿ ತಲೆಗೂದಲ ಬುಡಕ್ಕೆ ಹಚ್ಚಿಕೊಳ್ಳಬೇಕು. ಇದರಿಂದ ಕೂದಲ ಬುಡಕ್ಕೆ ಹೆಚ್ಚಿನ ಪೋಷನೆ ದೊರೆತು ಬುಡ ಸುದೃಢವಗುತ್ತದೆ. ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ತಲೆಯ ಚರ್ಮದ ಸೆಳೆತ ಹೆಚ್ಚುತ್ತದೆ. ಇದರಿಂದ ಕೂದಲು ಉದುರುವುದು ನಿಲ್ಲುತ್ತದೆ.

ಬ್ರಾಹ್ಮಿ ಎಣ್ಣೆ ಅಥವಾ ಪುಡಿ
Indian pennywort ಎಂದೂ ಕರೆಯಲ್ಪಡುವ ಬ್ರಾಹ್ಮಿ ಎಲೆಗಳು ಪುಡಿಯ ಅಥವಾ ಎಣ್ಣೆಯ ರೂಪದಲ್ಲಿ ದೊರಕುತ್ತದೆ. ಈ ಎಣ್ಣೆ ಸಹಾ ಕೂದಲು ಉದುರುವುದನ್ನು ನಿಲ್ಲಿಸಲು ಮತ್ತು ಗಾಢವಾಗಿ, ಆರೋಗ್ಯಕರವಾಗಿ ಬೆಳೆಯಲು ನೆರವಾಗುತ್ತದೆ. ಪುಡಿಯನ್ನು ಬೆಳೆಸುವುದಾದರೆ ನೀರಿನೊಂದಿಗೆ ಬೆರೆಸಿ ನಯವಾದ ಲೇಪನ ತಯಾರಿಸಿ ಕೂದಲ ಬುಡಕ್ಕೆ ದಪ್ಪನಾಗಿ ಹಚ್ಚಿಕೊಂಡು ಸುಮಾರು ಅರ್ಧಘಂಟೆಯಿಂದ ಒಂದು ಘಂಟೆ ಬಳಿಕ ಸ್ನಾನ ಮಾಡಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬ್ರಾಹ್ಮಿ ಎಣ್ಣೆ ಅಥವಾ ಪುಡಿ
ಎಣ್ಣೆಯನ್ನು ಬಳಸುವುದಾದರೆ ನಿತ್ಯದ ಬಳಕೆಗೆ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಬಳಸಬಹುದು. ನೇರವಾಗಿ ಬಳಸುವುದಾದರೆ ಕೊಂಚ ಬಿಸಿಮಾಡಿ ನೇರವಾಗಿ ತಲೆಗೂದಲ ಬುಡಕ್ಕೆ ಹಚ್ಚಿಕೊಳ್ಳಿ. ಉತ್ತಮ ಪರಿಣಾಮ ಪಡೆಯಲು ರಾತ್ರಿ ಹಚ್ಚಿ ಬೆಳಿಗ್ಗೆ ಸ್ನಾನ ಮಾಡಬೇಕು. ಈ ಎಣ್ಣೆ ತಲೆಹೊಟ್ಟು ಮತ್ತು ತುರಿಕೆಯನ್ನು ನಿವಾರಿಸಲೂ ಸಮರ್ಥವಾಗಿದೆ. ಅತ್ಯುತ್ತಮ ಪರಿಣಾಮ ಪಡೆಯಲು ಎರಡು ದೊಡ್ಡಚಮಚ ಬ್ರಾಹ್ಮಿ ಪುಡಿ, ಒಂದು ದೊಡ್ಡಚಮಚ ನೆಲ್ಲಿಕಾಯಿ ಪುಡಿ, ನೂರು ಮಿ.ಲೀ. ಎಳ್ಳೆಣ್ಣೆ, ಮೂವತ್ತು ಮಿ.ಲೀ ಆಲಿವ್ ಎಣ್ಣೆ, ಇಪ್ಪತ್ತು ಮಿ.ಲೀ ಹರಳೆಣ್ಣೆ ಮತ್ತು ಕೆಲವು ಹನಿ ನಿಮ್ಮ ಆಯ್ಕೆಯ ಅವಶ್ಯಕ ತೈಲ ಗಳನ್ನು ಒಂದು ಪಾತ್ರೆಯಲ್ಲಿ ಕೊಂಚ ನೀರಿನೊಂದಿಗೆ ಬೆರೆಸಿ ಅತಿ ಚಿಕ್ಕ ಉರಿಯಲ್ಲಿ ಕುದಿಸಿ. ಇದರಲ್ಲಿರುವ ನೀರೆಲ್ಲಾ ಆವಿಯಾದ ಬಳಿಕ ಗಾಢವಾದ ಎಣ್ಣೇ ಬ್ರಾಹ್ಮಿ ಆಮ್ಲ ತೈಲ. ಈ ಎಣ್ಣೆಯ ನಿತ್ಯದ ಬಳಕೆಯಿಂದ ಕೂದಲಿಗೆ ಅತ್ಯುತ್ತಮ ಪೋಷಣೆ ಸಿಗುತ್ತದೆ.

ಹಸಿಶುಂಠಿ
ಕೂದಲ ಬುಡದ ರಕ್ತಸಂಚಾರ ಹೆಚ್ಚಿಸಲು ಹಸಿಶುಂಠಿ ಉತ್ತಮವಾಗಿದೆ. ಇದು ಕೂದಲ ಬೆಳವಣಿಗೆ ಹೆಚ್ಚಿಸಲು ನೆರವಾಗುತ್ತದೆ. ಶುಂಠಿಯ ತೇವಕಾರಕ ಮತ್ತು ಪ್ರತಿಜೀವಕ ಗುಣಗಳು ಕೂದಲ ಬೆಣವಣಿಗೆ ಮತ್ತು ಸೋಂಕಿನಿಂದ ರಕ್ಷಿಸಲು ನೆರವಾಗುತ್ತದೆ. ಇದಕ್ಕಾಗಿ ಒಂದು ದೊಡ್ಡಚಮಚ ಶುಂಠಿಯ ರಸವನ್ನು ಕೊಂಚ ಆಲಿವ್ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ತಲೆಗೂದಲ ಬುಡಕ್ಕೆ ಬೆರಳುಗಳ ತುದಿಯಿಂದ ನಯವಾದ ಮಸಾಜ್ ನೊಂದಿಗೆ ಹಚ್ಚಿಕೊಳ್ಳಿ. ಇದನ್ನು ಸುಮಾರು ಹದಿನೈದರಿಂದ ಮೂವತ್ತು ನಿಮಿಷ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ದಾಸವಾಳ
ದಾಸವಾಳದ ಹೂವಿನಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ನುಗಳು ಮತ್ತು ಆಂಟಿ ಆಕ್ಸಿಡೆಂಟುಗಳಿವೆ. ಇವು ತಲೆಗೂದಲ ಮತ್ತು ಕೂದಲ ಬುಡದ ಪೋಷಣೆಗೆ ಪೂರಕವಾಗಿವೆ. ಕೆಲವು ದಾಸವಾಳ ಹೂವುಗಳ ದಳಗಳನ್ನು ಅರೆದು ಕೊಂಚ ಕೊಬ್ಬರಿಎಣ್ಣೆಯೊಂದಿಗೆ ಮಿಶ್ರಣ ಮಾಡಿ ಈ ಲೇಪನವನ್ನು ನಿತ್ಯವೂ ತಲೆಗೆ ಹಚ್ಚಿಕೊಳ್ಳಬೇಕು. ಇದರಿಂದ ಕೂದಲ ಬೆಳವಣೆಗೆ ಉತ್ತಮವಾಗುತ್ತದೆ.

ಮದರಂಗಿ
ಮದರಂಗಿ ಒಂದು ನೈಸರ್ಗಿಕ ಕಂಡೀಶನರ್ ಆಗಿದೆ. ಇದರಲ್ಲಿರುವ ಪ್ರೋಟೀನುಗಳು ಕೂದಲನ್ನು ಗಾಢವಾಗಿ ಮತ್ತು ಸೊಂಪಾಗಿ ಬೆಳೆಯಲು ನೆರವಾಗುತ್ತವೆ. ಇದಕ್ಕಾಗಿ ಉತ್ತಮ ಗುಣಮಟ್ಟದ ಮದರಂಗಿ ಪುಡಿಯನ್ನು ಕೊಂಚ ನೀರಿನೊಂದಿಗೆ ಬೆರೆಸಿ ಈ ಲೇಪನವನ್ನು ದಪ್ಪನಾಗಿ ಕೂದಲಿಗೆ ಹಚ್ಚಿಕೊಳ್ಳಿ. ಕೊಂಚ ಹೊತ್ತು ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ಕೂದಲ ಸೊಂಪು ಹೆಚ್ಚುತ್ತದೆ ಹಾಗೂ ನೆರೆತ ಕೂದಲು ಕೊಂಚ ಕಂದುಬಣ್ಣವನ್ನೂ ಪಡೆಯುತ್ತದೆ.



Click it and Unblock the Notifications











