Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಾತ್ರೋ ರಾತ್ರಿ ಸಿಕ್ಕು ಕೂದಲಿನ ಸಮಸ್ಯೆಯಿಂದ ಮುಕ್ತಿ ಹೊಂದಿ!
ಸಿಕ್ಕಾದ ಕೂದಲಿನ ಸಮಸ್ಯೆಯ ಬಗ್ಗೆ ನೋಡುವವರಿಗೆ ನಗು ಬಂದರು, ಅನುಭವಿಸುವವರಿಗೆ ಮಾತ್ರ ಅದರ ಕಷ್ಟ ಗೊತ್ತಗುತ್ತದೆ. ಯಾರಿಗೆ ಈ ಸಮಸ್ಯೆ ಇರುತ್ತದೆಯೋ, ಅವರು ಬೇಗ ಕೆಲಸಕ್ಕೆ ಹೋಗಲು, ಕಾರ್ಯಕ್ರಮಗಳಿಗೆ ಹೋಗಲು ತಲೆ ಬಾಚಿಕೊಳ್ಳಲು ಆಗದೆ ಹೆಣಗಾಡುವ ಪರಿಯನ್ನು ನೋಡಿದರೆ, ಮುಂದೆ ಇದರ ಬಗ್ಗೆ ನೆನೆಸಿಕೊಳ್ಳಲು ಸಹ ನೀವು ಹೆದರುತ್ತೀರಿ.
ಅದೆಂತಹದೇ ಅದ್ಭುತ ಬಟ್ಟೆಯನ್ನು ಧರಿಸಿದ್ದರು, ಅದೆಂತಹ ಚಂದ ಕಾಣಿಸುವ ಮೇಕಪ್ ಧರಿಸಿದ್ದರು, ನಿಮಗೆ ಸಿಕ್ಕಾದ ಕೂದಲು ಇದ್ದಲ್ಲಿ, ಅವೆಲ್ಲವೂ ನೀರಿನಲ್ಲಿ ಮಾಡಿದ ಹೋಮವಾಗುತ್ತದೆ. ಕೂದಲಿನ ಬುಡವು ಎದ್ದು, ಎಳೆಗಳು ಸಡಿಲಗೊಂಡು, ತೇವಾಂಶ ಬಿಡುಗಡೆ ಮಾಡಿದಾಗ ಈ ಬಗೆಯ ಸಿಕ್ಕುತನ ಕೂದಲಿಗೆ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಕೂದಲುಗಳ ಬುಡವು ನಿರ್ಜಲೀಕರಣಗೊಂಡಾಗ ಸಂಭವಿಸುತ್ತದೆ.

ಜೊತೆಗೆ ನಿಮ್ಮ ಜೀವನಶೈಲಿ, ನಿಮ್ಮ ಆರೋಗ್ಯವು ನಿಮ್ಮ ಸೌಂದರ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಇಲ್ಲಿ ಅರ್ಥ ಮಾಡಿಕೊಳ್ಳಬೇಕು. ಈ ಬಗೆಯ ಸಿಕ್ಕುತನವನ್ನು ನಿವಾರಿಸಲು ಮಾರುಕಟ್ಟೆಯಲ್ಲಿ ಸಾವಿರಾರು ಬಗೆಯ ಶಾಂಪೂಗಳು, ಸೆರಮ್‌ಗಳು, ಕಂಡೀಶನರ್‌ಗಳು, ಇತ್ಯಾದಿಗಳು ದೊರೆಯುತ್ತವೆ. ಆದರೆ ಅವೆಲ್ಲವೂ ನಿಮ್ಮ ಕೂದಲಿನ ಬುಡವನ್ನು ಹಾಳು ಮಾಡುತ್ತವೆ.
ಹಾಗೆಂದು ನೀವು ಚಿಂತಿಸಬೇಕಾಗಿಲ್ಲ. ನಿಮಗಾಗಿ ಕೆಲವೊಂದು ಸ್ವಾಭಾವಿಕ ಪದಾರ್ಥಗಳು ದೊರೆಯುತ್ತವೆ. ಇವು ನಿಮ್ಮ ಕೂದಲಿನ ಸಿಕ್ಕುತನವನ್ನು ನಿವಾರಿಸಿ, ಅದಕ್ಕೆ ತನ್ನ ಹಿಂದಿನ ಆಕರ್ಷಣೆಯನ್ನು ಮತ್ತು ಲವಲವಿಕೆಯನ್ನು ಮರಳಿ ನೀಡುತ್ತವೆ. ಬನ್ನಿ ಬೋಲ್ಡ್ ಸ್ಕೈ ಇಂದು ಆ ಪದಾರ್ಥಗಳು ಯಾವುವು ಎಂಬುದನ್ನು ನಿಮಗೆ ತಿಳಿಸಿಕೊಡುತ್ತದೆ. ಈ ಪದಾರ್ಥಗಳನ್ನು ಬಳಸಿ, ನಿಮ್ಮ ಕೂದಲಿನ ಸಿಕ್ಕುತನವನ್ನು ನಿವಾರಿಸಿಕೊಳ್ಳಿ.
ನಾವು ನಿಮಗೆ ಹೇಳುತ್ತಿರುವ ಹೇರ್ ಮಾಸ್ಕ್ ಅನ್ನು ತಯಾರಿಸಲು ನಿಮಗೆ 3 ಪದಾರ್ಥಗಳ ಅವಶ್ಯಕತೆ ಇರುತ್ತದೆ. ಈ ಪದಾರ್ಥಗಳು ನಿಮ್ಮ ಮನೆಯ ಅಡುಗೆ ಮನೆಯಲ್ಲಿ ಈಗಾಗಲೇ ಇವೆ. ಅವೇ ಜೇನು ತುಪ್ಪ, ಮೊಸರು ಮತ್ತು ಬಾದಾಮಿ ಎಣ್ಣೆ. ಈ ಅನನ್ಯ ಪದಾರ್ಥಗಳು ನಿಮ್ಮ ಕೂದಲಿನ ಸಿಕ್ಕುತನವನ್ನು ಮತ್ತು ಒಣ ಕೂದಲಿನ ಸಮಸ್ಯೆಯನ್ನು ನಿವಾರಿಸಿ. ಇವು ಸ್ವಾಭಾವಿಕವಾಗಿ ಕೂದಲಿಗೆ ಮೊಯಿಶ್ಚರೈಸ್ ಮಾಡುತ್ತದೆ ಹಾಗು ಕೂದಲಿನ ಬುಡಕ್ಕೆ ಡೀಪ್ ಕಂಡೀಶನ್ ಮತ್ತು ಮೃದುತ್ವವನ್ನು ನೀಡುತ್ತದೆ. ಬನ್ನಿ ಈ ಹೇರ್ ಮಾಸ್ಕ್ ಅನ್ನು ತಯಾರಿಸಲು ಈ ಪದಾರ್ಥಗಳನ್ನು ಎಷ್ಟು ಪ್ರಮಾಣದಲ್ಲಿ ಬೆರೆಸಿಕೊಳ್ಳಬೇಕು ಎಂದು ನೋಡೋಣ ಬನ್ನಿ.
ಪದಾರ್ಥಗಳು:
*2 ಟೇಬಲ್ ಸ್ಪೂನ್‌ಗಳ ಬಾದಾಮಿ ಎಣ್ಣೆ
*1/2 ಕಪ್ ಮೊಸರು
*1/4th ಕಪ್ ಜೇನು ತುಪ್ಪ
ಬಳಸುವ ವಿಧಾನ:
*ಈ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿನಲಿ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇವುಗಳನ್ನು ಒಂದು ಗಟ್ಟಿಯಾದ ಪೇಸ್ಟ್ ರೀತಿ ಬೆರೆಸಿಕೊಳ್ಳಿ. ತದನಂತರ ಇದನ್ನು ನಿಮ್ಮ ಕೂದಲಿಗೆ ಲೇಪಿಸಿ, ಮೃದುವಾಗಿ 5-10 ನಿಮಿಷಗಳ ಕಾಲ ಬಿಡಿ.
*ಇನ್ನು 25-30 ನಿಮಿಷಗಳು ಈ ಮಾಸ್ಕ್ ನಿಮ್ಮ ಕೂದಲನ್ನು ನೆನೆಸಲು ಬಿಡಿ. ಇದನ್ನು ಮಾಡುವ ಮೊದಲು ನಿಮ್ಮ ಕೂದಲನ್ನು ಚೆನ್ನಾಗಿ ಶಾಂಪೂವಿನಿಂದ ತೊಳೆದುಕೊಂಡಿರಿ.
*ಈ ಮಾಸ್ಕಿನ ಪರಿಣಾಮವು ತುಂಬಾ ಕಾಲ ಇರುತ್ತದೆ. ಆದ್ದರಿಂದ ಈ ಪರಿಹಾರವನ್ನು ನೀವು ತಿಂಗಳಿಗೆ ಒಮ್ಮೆಯಾದರು ಮಾಡಬೇಕಾಗುತ್ತದೆ.
*ಸಿಕ್ಕಾದ ಕೂದಲು ಇರಿಸಿಕೊಂಡು, ಸೌಂದರ್ಯದ ಸಮಸ್ಯೆಗೆ ಸಿಕ್ಕಿಕೊಳ್ಳಬೇಡಿ. ಆದ್ದರಿಂದ ಮೊದಲು ಸಿಕ್ಕಾದ ಕೂದಲಿನಿಂದ ಮುಕ್ತರಾಗಿ.



Click it and Unblock the Notifications


