Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹಳ್ಳಿ ಮದ್ದಿರುವಾಗ ತಲೆಹೊಟ್ಟಿನ ಸಮಸ್ಯೆಯ ಚಿಂತೆ ಏತಕ್ಕೆ?
ತಲೆ ಹೊಟ್ಟಿನ ಸಮಸ್ಯೆ ಈಗ ಎಲ್ಲಾ ಕಡೆ, ಎಲ್ಲರಲ್ಲಿಯೂ ಕಾಣಿಸಿಕೊಳ್ಳುವಷ್ಟು ದೊಡ್ಡ ಸಮಸ್ಯೆಯಾಗಿದೆ. ಬಹುಶಃ ನೀವು ಸಹ ಗಮನಿಸಿರಬಹುದು. ನಿಮ್ಮ ತಲೆ ಮತ್ತು ಹೆಗಲ ಮೇಲೆ ಬಿಳಿಯ ಬಣ್ಣದ ಪುಡಿ ರೀತಿಯ ತುಣುಕುಗಳು ಅಲ್ಲಲ್ಲಿ ಬಿದ್ದಿರುವುದನ್ನು. ಅದನ್ನೇ ತಲೆ ಹೊಟ್ಟು ಎಂದು ಕರೆಯುತ್ತಾರೆ. ಇಂದಿನ ಧಾವಂತದ ಜೀವನದಲ್ಲಿ ತಲೆಗೆ ನೀಡಲಾಗದ ಆರೈಕೆ ಈ ಸೂಕ್ಷ್ಮಾಣುಗಳಿಗೆ ಬೆಳೆಯಲು ಅವಕಾಶ ನೀಡಿದಂತಾಗುತ್ತದೆ. ಇವು ಅತಿ ಹೆಚ್ಚಾಗಿ ಬೆಳೆದು ತಲೆಹೊಟ್ಟನ್ನು ಹೆಚ್ಚಿಸುತ್ತವೆ.
ವಾಸ್ತವವಾಗಿ ತಲೆಹೊಟ್ಟು ಒಂದು ರೋಗವಲ್ಲ, ನಮ್ಮ ತಲೆಯ ಚರ್ಮದ ಜೀವಕೋಶಗಳು ಸತ್ತು ಒಣಗಿದ ಬಳಿಕ ಪಕಳೆಯಂತೆ ಏಳುವುದೇ ಹೊಟ್ಟು. ಇದಕ್ಕೆ ಹಲವು ಕಾರಣಗಳಿವೆ. ಪ್ರಮುಖವಾದ ಕಾರಣವೆನೆಂದರೆ ತಲೆಯ ಚರ್ಮಕ್ಕೆ ಸೂಕ್ತ ಆರ್ದ್ರತೆ ದೊರಕದೇ ಇರುವುದು. ಆಗ ಚರ್ಮ ಹೆಚ್ಚಾಗಿ ಒಣಗಿ ಪಕಳೆಗಳಂತೆ ಏಳುತ್ತದೆ.

ಇದು ಅರ್ಧ ಎದ್ದು ಅರ್ಧ ಚರ್ಮಕ್ಕೆ ಅಂಟಿಕೊಂಡೇ ಇರುವುದರಿಂದ ಕೂದಲು ಅಲುಗಾಡಿದಾಗಲೆಲ್ಲಾ ಈ ಅಂಟಿಕೊಂಡಿದ್ದ ಚರ್ಮ ಜೀವಂತ ಚರ್ಮವನ್ನು ಎಳೆದಂತಾಗುವುದೇ ತುರಿಕೆ. ಕೆಲವೊಮ್ಮೆ ಈ ಹೊಟ್ಟನ್ನು ಹಲವು ಕ್ರಿಮಿಗಳು ಮತ್ತು ಬ್ಯಾಕ್ಟೀರಿಯಾಗಳು ಬಿರಿಯಾನಿಯಂತೆ ಭಕ್ಷಿಸಿ ಮನೆಮಾಡಿಕೊಂಡಾಗಲೂ ತುರಿಕೆ ಉಂಟಾಗುತ್ತದೆ.
ಈ ತುರಿಕೆ ಮತ್ತು ಇದಕ್ಕೆ ಕಾರಣವಾದ ತಲೆಹೊಟ್ಟನ್ನು ನಿವಾರಿಸುವುದು ಅಷ್ಟು ಸುಲಭವಲ್ಲ, ಅಂತೆಯೇ ಕಷ್ಟವೂ ಅಲ್ಲ. ತುರಿಕೆ ಹೆಚ್ಚಾಗಿ ಗಾಯಗಳಾಗುವುದು, ಈಗಾಗಲೇ ಆಗಿರುವ ಗಾಯವನ್ನು ಇನ್ನಷ್ಟು ಕೆದಕಿ ಆಳವಾಗಿಸುವುದು, ತುರಿಸಿದಾದ ಆದ ಗೀರುಗಳಲ್ಲಿ ಸೋಂಕು ಮೊದಲಾದವು ತಲೆಹೊಟ್ಟಿನ ಪರೋಕ್ಷ ತೊಂದರೆಗಳು. ಇದನ್ನು ನಿವಾರಿಸಲು ಹಲವು ಫಲಪ್ರದ ಮನೆಮದ್ದುಗಳಿವೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ...
ಲಿಂಬೆಹಣ್ಣಿನ ರಸ
ಬಳಸಿ ಮೂರು ಲಿಂಬೆಹಣ್ಣಿನ ರಸವನ್ನು ಒಂದು ಬಕೆಟ್ ನೀರಿನಲ್ಲಿ ಸೇರಿಸಿ ಕಲಕಿ. ಈ ನೀರನ್ನು ನಿಧಾನವಾಗಿ ತಲೆಯ ಮೇಲೆ ಸುರಿದುಕೊಳ್ಳುತ್ತಾ ಮಸಾಜ್ ಮಾಡಿ. ಇಡಿಯ ಬಕೆಟ್ ಖಾಲಿಯಾಗುವವರೆಗೆ ನೀರು ಸುರಿಯುವುದನ್ನು ಮುಂದುವರೆಸಿ ಬಳಿಕ ದಪ್ಪ ಟವೆಲ್ಲನ್ನು ಒತ್ತಿಕೊಂಡು ಒರೆಸಿ. ಅಷ್ಟಕ್ಕೂ ತಲೆಹೊಟ್ಟಿನ ಸಮಸ್ಯೆಗೆ ನಿಜವಾದ ಕಾರಣವೇನು?
ಬೇವಿನ ಎಣ್ಣೆ
ಈರುಳ್ಳಿ ರಸ ಪ್ರಯತ್ನಿಸಿ
ಸೀಗೆಪುಡಿ ಬಳಸಿ



Click it and Unblock the Notifications




