Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ಒಣಗಿದ ಮತ್ತು ಮಂಕಾದ ಕೂದಲಿಗೆ 9 ಮಾಸ್ಕ್ಗಳು
ಮಂಕಾದ, ಒಣಗಿದ ಕೂದಲಿನಿಂದಾಗಿ ಬೇಸತ್ತಿದ್ದೀರಾ?ಈ ಕೆಳಗೆ ನೀಡಿರುವ ಮನೆಯಲ್ಲಿಯೇ ಮಾಡುವ ಮಾಸ್ಕ್ ಗಳನ್ನು ಮಾಡಿನೋಡಿ ಮತ್ತು ಹೊಳೆಯುವ ಆರೋಗ್ಯಯುತ ಕೂದಲು ನಿಮ್ಮದಾಗುವುದನ್ನು ಆನಂದಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸಾಂಪ್ರಾಯಿಕ ಧಿರಿಸಿಗೆ ಅತ್ಯುತ್ತಮ ಕೇಶವಿನ್ಯಾಸ

ಸಾಂಪ್ರದಾಯಿಕ ಮೆಹಂದಿ/ಮದರಂಗಿ ಮಾಸ್ಕ್
ಬ್ಲಾಕ್ ಟೀ ಜೊತೆಗೆ ಮದರಂಗಿಯನ್ನು ಒಂದು ರಾತ್ರಿ ನೆನೆಸಿಡಿ.ಬೆಳಗ್ಗೆ ಅದಕ್ಕೆ ಎರಡು ಮೊಟ್ಟೆ,ನಾಲ್ಕು ಚಮಚ ಮೊಸರು,ಅರ್ಧ ಲೋಟ ನಿಂಬು ರಸ ಮತ್ತು ಒಂದು ಚಮಚ ಆಲಿವ್ ಅಥವಾ ತೆಂಗಿನ ಎಣ್ಣೆ ಸೇರಿಸಿ.ಇದನ್ನು ಕೂದಲಿಗೆ ಹಚ್ಚಿ ಎರಡು ಗಂಟೆಯ ಕಾಲ ಬಿಡಿ.ನಂತರ ತಣ್ಣನೆಯ ನೀರಿನಲ್ಲಿ ಮೈಲ್ಡ್ ಶಾಂಪೂ ಬಳಸಿ ಸ್ನಾನ ಮಾಡಿ.

ಪ್ರೋಟೀನ್ ಅಧಿಕವಿರುವ ಕೂದಲ ಮಾಸ್ಕ್
ಮೊಟ್ಟೆಯ ಹಳದಿ ಭಾಗ,ಒಂದು ಚಮಚ ಕ್ಯಾಸ್ಟೆರ್ ಎಣ್ಣೆ,ಒಂದು ಚಮಚ ಜೇನುತುಪ್ಪ ಇದನ್ನು ಚೆನ್ನಾಗಿ ಬೆರೆಸಿ,ನಿಮ್ಮ ಕೂದಲಿನ ಬುಡದಿಂದ ಹಚ್ಚಿ.ಇದನ್ನು ಕೂದಲಿಗೆ ಹಚ್ಚಿ ಷವರ್ ಕ್ಯಾಪ್ ಹಾಕಿ ನಂತರ ಟವಲ್ ನಿಂದ ಕಟ್ಟಿಬಿಡಿ.ಅರ್ಧ ಗಂಟೆಯ ನಂತರ ತೊಳೆಯಿರಿ ಮತ್ತು ಕೊನೆಯಲ್ಲಿ ಆಪಲ್ ಸೈಡರ್ ವಿನೆಗರ್ ಬಳಸಿ.ಇದನ್ನು ಮೂರು ವಾರ ಮಾಡುವುದರಿಂದ ಉತ್ತಮ ಪಲಿತಾಂಶ ಪಡೆಯಬಹುದು.

ಬಾಳೆಹಣ್ಣಿನ ಮಾಸ್ಕ್
ಎರಡು ಕಳಿತ ಬಾಳೆಹಣ್ಣನ್ನು ಚೆನ್ನಾಗಿ ನುರಿಯಿರಿ.ಇದಕ್ಕೆ ಎರಡು ಚಮಚ ಮಯೋನೀಸ್ ಮತ್ತು ಒಂದು ಚಮಚ ಆಲಿವ್ ಆಯಿಲ್ ಬೆರೆಸಿ.ಇದನ್ನು ಕೂದಲಿಗೆ ಹಚ್ಚಿ ಬಿಟ್ಟುಬಿಡಿ.ಒಂದು ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ಕೂದಲನ್ನು ತೊಳೆಯಿರಿ.ಬಾಳೆಹಣ್ಣು ಮೃದುವಾಗಿಸುವ ಗುಣವನ್ನು ಹೊಂದಿರುವುದರಿಂದ ಇದು ಒಣಗಿದ,ಡಲ್ ಆದ ಕೂದಲನ್ನು ಹೊಂದಿದ ಮಹಿಳೆಯರಿಗೆ ಹೆಚ್ಚು ಉಪಯುಕ್ತವಾಗುತ್ತದೆ.

ತೆಂಗಿನ ಕ್ರೀಂ ಮಾಸ್ಕ್
ಎಳನೀರಿನ ಕೆಳಭಾಗದಲ್ಲಿ ದೊರೆಯುವ ಕ್ರೀಂ ಅನ್ನು ಒಂದು ಬೌಲ್ ಗೆ ತೆಗೆದಿಡಿ.ಇದನ್ನು ಸ್ವಲ್ಪ ಬಿಸಿ ಮಾಡಿ.ನಂತರ ನಿಧಾನವಾಗಿ ನಿಮ್ಮ ಕೂದಲಿನ ಬುಡದಿಂದ ಮಸಾಜ್ ಮಾಡಿ.ನಂತರ ಬೆಚ್ಚಗಿನ ಟವಲ್ ನಿಂದ ಕೂದಲನ್ನು ಕಟ್ಟಿ ಮತ್ತು ಒಂದು ಗಂಟೆ ಹಾಗೆಯೇ ಬಿಡಿ.ಮೈಲ್ಡ್ ಶಾಂಪೂವಿನಿಂದ ಕೂದಲನ್ನು ವಾಶ್ ಮಾಡಿ ನಂತರ ಕೂದಲನ್ನು ಒಣಗಲು ಬಿಡಿ.ಇದನ್ನು ನಿಯಮಿತವಾಗಿ ಮಾಡುತ್ತಿದ್ದರೆ ಕೂದಲು ಹೊಳಪನ್ನು ಪಡೆದುಕೊಳ್ಳುತ್ತದೆ.

ಅವಕಾಡೋ ಮಾಸ್ಕ್
ಬೆನ್ನೆಹಣ್ಣು ಜೊತೆಗೆ ಅರ್ಧದಷ್ಟು ಮಯೋನೀಸ್ ಅನ್ನು ಚೆನ್ನಾಗಿ ಬೆರೆಸಿ.ಇದು ದಪ್ಪ ಟೆಕ್ಸ್ಚರ್ ಕೊಡುವುದರಿಂದ ಕೂದಲನ್ನು ಮೃದುವಾಗಿಸುವಲ್ಲಿ ಯಶಸ್ವಿಯಾಗುತ್ತದೆ. ಇದನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಯ ನಂತರ ವಾಶ್ ಮಾಡಿಕೊಳ್ಳಿ.

ತಲೆಹೊಟ್ಟು ಹೋಗಲಾಡಿಸಲು ಮೆಂತೆ ಮಾಸ್ಕ್
ಮೆಂತೆಕಾಳನ್ನು ಒಂದು ರಾತ್ರಿ ನೆನೆಸಿಡಿ. ಮಾರನೆಯದಿನ ಇದನ್ನು ನುಣ್ಣಗೆ ರುಬ್ಬಿ ತಲೆಗೆ ಹಚ್ಚಿಕೊಳ್ಳಿ.ಇಪ್ಪತ್ತು ನಿಮಿಷ ಬಿಟ್ಟು ನಂತರ ತೊಳೆದುಕೊಳ್ಳಿ.ಶಾಂಪೂ ಬಳಸಿದ ನಂತರ ಮತ್ತೆ ನೀರಿನಿಂದ ತೊಳೆದುಕೊಳ್ಳಬಹುದು.

ಪ್ರೋಟಿನ್ ಅಧಿಕವಿರುವ ಕಡಲೆ ಹಿಟ್ಟಿನ ಮಾಸ್ಕ್
ಮೂರು ಚಮಚ ಕಡಲೆ ಹಿಟ್ಟನ್ನು ರಾತ್ರಿ ನೆನೆಸಿ ಮಾರನೆಯ ದಿನ ಪೇಸ್ಟ್ ಮಾಡಿ,ಒಂದು ಮೊಟ್ಟೆಯನ್ನು ಅದಕ್ಕೆ ಬೆರೆಸಿ,ಜೊತೆಗೆ ಒಂದು ಚಮಚ ನಿಂಬು ರಸ ಮತ್ತು ಒಂದು ಕಪ್ ಮೊಸರನ್ನು ಸೇರಿಸಿ.ನಂತರ ಇದನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಯ ನಂತರ ತಣ್ಣೀರಿನಲ್ಲಿ ಸ್ನಾನ ಮಾಡಿ.

ದಾಸವಾಳ ಮಾಸ್ಕ್
ಒಂದು ಕೈತುಂಬಾ ಕೆಂಪು ದಾಸವಾಳದ ದಳಗಳನ್ನು ತೆಗೆದುಕೊಂಡು ಒಂದು ರಾತ್ರಿ ನೆನೆಸಿಡಿ.ಇದನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿ ನಂತರ ಅದಕ್ಕೆ ಆಲಿವ್ ಎಣ್ಣೆ ಬೆರೆಸಿ.ಸುಂದರವಾದ ಕೂದಲು ನಿಮ್ಮದಾಗಲು ಇದನ್ನು ನಿಮ್ಮ ಕೂದಲಿಗೆ ಹಚ್ಚಿ ಅರ್ಧ ಗಂಟೆಯ ನಂತರ ತೊಳೆದುಕೊಳ್ಳಿ.



Click it and Unblock the Notifications