Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಪಾರ್ಟಿ ಸೀಜನ್‌ಗೆ ನ್ಯೂ ಲುಕ್ ನೀಡುವ ಹೇರ್‌ಲೈನ್
ಪಾರ್ಟಿಯೆಂದರೆ ಯಾರಿಗೆ ಇಷ್ಟವಾಗುವುದಿಲ್ಲ? ಗಂಟೆಗಳ ಕಾಲ ಸಿಂಗರಿಸಿಕೊಂಡು, ತರಹೇವಾರಿ ರೀತಿಯ ಕೇಶವಿನ್ಯಾಸ ಮಾಡಿಕೊಂಡು, ಚೆಂದನೆಯ ಡ್ರೆಸ್‌ಕೋಡ್‌ನೊಂದಿಗೆ ಪಾರ್ಟಿಗೆ ಕಾಲಿಟ್ಟರೆ ಅದರ ಸೊಗಸೇ ಬೇರೆ.. ಪಾರ್ಟಿಗಳಲ್ಲಿ ಚೆನ್ನಾಗಿ ಕಾಣಲು ಎಲ್ಲರೂ ಹಂಬಲಿಸುತ್ತಾರೆ. ಇದರ ಭಾಗವಾಗಿ ತಮ್ಮ ದಟ್ಟ ಕೂದಲನ್ನು ಗಾಳಿ ತೇಲಿಸುತ್ತ ಸಂತಸದಲ್ಲಿ ಮೈಮರೆಯಲು ಇಷ್ಟಪಡುತ್ತಾರೆ. ಅಕರ್ಷಣೆಯ ಕೇಂದ್ರಬಿಂದುವಾಗಲು ತಹತಹಿಸುತ್ತಾರೆ. ಮಹಿಳೆಯರಂತೂ ತಮ್ಮ ಸುಂದರ ತುಟಿಗೊಪ್ಪುವ ಲಿಪ್‌ಸ್ಟಿಕ್ ಬಳಿದುಕೊಂಡು, ಸುವಾಸನೆಯ ಪರ್‌ಫ್ಯೂಮ್ ಪೂಸಿಕೊಂಡು ತಮ್ಮ ಜೋಡಿಯೊಂದಿಗೆ ಮನೆ ಬಿಡುತ್ತಾರೆ. ಎಲ್ಲಾ ಬೆಡಗು ಬಿನ್ನಾಣದಿಂದ ರಾತ್ರಿಯ ಪಾರ್ಟಿಯ ಗಮನಸೆಳೆಯಲು ಪ್ರಯತ್ನಿಸುತ್ತಾರೆ. ಅಂತಿಮವಾಗಿ ಶೃಂಗಾರ ಎಂಬುದು ಸೌಂದರ್ಯ ಉಪಾಸಕರಿಗೆ ಅರ್ಪಿತವಾಗುತ್ತದೆ...
ಎಲ್ಲರ ಸೌಂದರ್ಯಕ್ಕೆ ಬಹುಮುಖ್ಯವಾಗಿ ಸಾಥ್ ನೀಡುವುದು ಕೂದಲು, ಪಾರ್ಟಿಗಳಲ್ಲಂತೂ ಕೂದಲಿನ ಅಂದ, ಬಣ್ಣವೇ ಸೆಂಟರ್ ಆಫ್ ಅಟ್ರಾಕ್ಷನ್. ಇಂತಹ ಕೂದಲಿನ ಪೋಷಣೆ ಹಾಗೂ ಅಂದ ಹೆಚ್ಚಿಸಲು 'ಹೇರ್‌ಲೈನ್' ನಿಮಗೆ ಸಾಥ್ ನೀಡುತ್ತದೆ. ಹೇರ್‌ಲೈನ್ ಶಾಪ್ ಹೊಕ್ಕು ಹೊರಬಂದರೆ ನಿಮಗೆ ಹೊಸ ಜಗತ್ತಿನ ಅನಾವರಣವಾಗುತ್ತದೆ.
ಕೂದಲು ಉದ್ದ ಹೆಚ್ಚಿಸುವುದು ಹಾಗೂ ವಿಸ್ತರಿಸುವುದು: ಕೂದಲು ಉದ್ದ ಹೆಚ್ಚಿಸಿಕೊಳ್ಳುವ ಮೂಲಕ ಅಂದವಾಗಿ ಕಾಣಲು ಸಾಧ್ಯವಿದೆ. ನಿಮ್ಮ ಆಯ್ಕೆಗೆ ಅನುಗುಣವಾಗಿ
ನೈಜ ಅಥವಾ ಸಿಂಥೆಟೆಕ್ ಕೂದಲನ್ನು ನಿಮ್ಮ ಮೂಲ ಕೂದಲಿನ ಜೊತೆಗೆ ಬ್ಲೆಂಡ್ ಮಾಡಲಾಗುತ್ತದೆ. ಅ ಮೂಲಕ ಕೂದಲಿನ ಉದ್ದ ಹೆಚ್ಚಿಸಲಾಗುತ್ತದೆ. ಹಲವು ಬಣ್ಣಗಳ ಕೂದಲು ಬ್ಲೆಂಡ್‌ಗೆ ಲಭ್ಯವಿದೆ. ತರಹೇವಾರಿ ಶೈಲಿಯ ಕೂದಲು ಜೋಡಿಸಲಾಗುತ್ತದೆ.

ಹೈಲೈಟೆಡ್ ಕೂದಲು ವಿಸ್ತರಣೆ:
ನಾವು ನಮ್ಮ ಕೂದಲಿನ ಬಗ್ಗೆ ಇನ್ನಿಲ್ಲದಂತೆ ಕಾಳಜಿ ತೋರುತ್ತೇವೆ. ಅವು ಸದಾ ಚೆನ್ನಾಗಿ ಕಾಣಬೇಕೆಂದು ಇಷ್ಟಪಡುತ್ತೇವೆ. ಕಪ್ಪು ಕೂದಲಿನ ನಡುವೆ ವಿವಿಧ ಬಣ್ಣಗಳ ಬಿಡಿ ಬಿಡಿ ಕೂದಲು ರಚನೆ ಇತ್ತೀಚಿನ ಟ್ರೆಂಡ್ ಆಗಿ ಪರಿವರ್ತಿತವಾಗಿದೆ. ಇದಕ್ಕೆ ತಕ್ಕಂತೆ ಹೇರ್‌ಲೈನ್ ಶಾಪ್‌ನಲ್ಲಿ ಹಲವು ವರ್ಣಗಳ ಕೂದಲು ರಚನೆ ವ್ಯವಸ್ಥೆಯಿದೆ. ಕೆಂಪು, ಹಳದಿ, ತಾಮ್ರವರ್ಣ, ಕಡು ಬೂದುಬಣ್ಣಗಳ ಕೆಮಿಕಲ್ ಬ್ಲೀಚಿಂಗ್ ಮತ್ತು ಕಲರಿಂಗ್ ಲಭ್ಯವಿದೆ.

ಕೃಶವಾದ ಕೂದಲಿಗೆ ಚಿಕಿತ್ಸೆ:
ಕೃಶವಾದ, ತೆಳವು ಸತ್ವಹೀನ ಕೂದಲಿನ ಸಮಸ್ಯೆ ಕೆಲವರಿಗೆ ಕಾಡುತ್ತದೆ. ಇಂದಿನ ಮಾಲಿನ್ಯ ಪರಿಸರದಲ್ಲಿ ಕೂದಲು ವಿವಿಧ ಕಾರಣಗಳಿಗೆ ಕೃಶವಾಗುತ್ತದೆ. ಅವು ಸತ್ವಹೀನವಾಗುತ್ತಲೇ ಬೇರೆ ಬೇರೆ ರೀತಿಯ ಶೇಪ್‌ಗಳಿಗೆ ಬದಲಾಗುತ್ತವೆ. ಕೆಲವರಿಗೆ ಗುಂಗುರ ಕೂದಲು ಆದರೆ ಕೆಲವರಿಗೆ ಬಾಚಲು ಬಾರದ ಸಿಕ್ಕು ಕೂದಲಾಗುತ್ತವೆ. ಇಂತಹ ಸಮಸ್ಯೆಗೆ ಹೇರ್‌ಲೈನ್ ಶಾಪ್‌ನಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿದೆ.

ಇನ್‌ಸ್ಟಂಟ್ ಫೇಶಿಯಲ್ ಗ್ಲೋ ಮತ್ತು ಸ್ಕಿನ್ ಪಾಲಿಶಿಂಗ್:
ಇದು ಫೇಶಿಯಲ್ ಮಸಾಜ್‌ನ ಕಾಂಬಿನೇಷನ್. ಸ್ನಾಯುಗಳಿಗೆ ಬಲ ನೀಡಿ ರಕ್ತಚಲನೆಗೆ ಸಹಕಾರಿಯಾಗುವ ಇದು ವಿಟಮಿನ್ ಸಿ ಸೆರಮ್ ಅನ್ನು ಉದ್ದೀಪಿಸುವ ಕಾರ್ಯವಾಗಿದೆ. ಸ್ಕಿನ್ ಹೀಲಿಂಗ್‌ನ ಭಾಗವಾಗಿ ಕೆಲಸ ಮಾಡುತ್ತದೆ. ೪೫ನಿಮಿಷಗಳ ಈ ಮಸಾಜ್‌ನ ನಂತರ ನಿಮ್ಮ ಮುಖದಲ್ಲಿ ಅಂದ ಮಿನುಗುತ್ತದೆ.

ನಿಮ್ಮ ಚರ್ಮದ ಕಾಂತಿಯನ್ನು ಹೊರಗೆಳೆಯಿರಿ:
ಒಣಗಿದ ಸತ್ವಹೀನ ಚರ್ಮದ ಪದರವನ್ನು ಕಿತ್ತೊಗೆದು ಹೊಸ ಅಂದ ನೀಡಿ ಚರ್ಮವನ್ನು ನಳನಳಿಸುವಂತೆ ಮಾಡುವ ಚಿಕಿತ್ಸೆ ಹೇರ್‌ಲೈನ್‌ನಲ್ಲಿ ಲಭ್ಯವಿದೆ. ಲ್ಯಾಕ್ಟಿಕ್ ಅಸಿಡ್ ಬಳಸಿ ಒಣಗಿದ ಚರ್ಮವನ್ನು ಸುಲಭವಾಗಿ ಸುಲಿಯಲಾಗುತ್ತದೆ. ಕೇವಲ ೧೫ ನಿಮಿಷಗಳ ಅವಧಿಯಲ್ಲಿ ನಿಮ್ಮ ಚರ್ಮ ಕಾಂತಿಯುಕ್ತವಾಗಿ ಕಂಗೊಳಿಸುತ್ತದೆ.

ನೋವಿಲ್ಲದ ಕೂದಲು ಕೀಳುವ ಚಿಕಿತ್ಸೆ:
ಹೇರ್‌ಲೈನ್‌ನಲ್ಲಿ ಲೇಸರ್ ತಂತ್ರಜ್ಞಾನ ಬಳಸಿ ದೇಹದ ಯಾವುದೇ ಭಾಗದ ಅನುಪಯುಕ್ತ ಕೂದಲನ್ನು ಕೀಳಲಾಗುತ್ತದೆ. ನುರಿತ ವೈದ್ಯರ ಸಲಹೆ ಸೂಚನೆ ಮೇರೆಗೆ ನಡೆಯುವ ಈ ಚಿಕಿತ್ಸೆ ದೇಹದ ಅನುಪಯುಕ್ತ ಕೂದಲನ್ನು ಶಾಶ್ವತವಾಗಿ ನಿರ್ನಾಮ ಮಾಡುತ್ತದೆ. ಮುಖ, ಕೈಕಾಲು, ಅಲ್ಲದೆ ಬಿಕಿನಿ ಲೈನ್‌ನಲ್ಲಿರುವ ಕೂದಲನ್ನು ನಿವಾರಿಸಲಾಗುತ್ತದೆ.

ಚರ್ಮಕ್ಕೆ ನೈಜ ಬಣ್ಣ ನೀಡುವ ಚಿಕಿತ್ಸೆ:
ಕಾರಣಾಂತರಗಳಿಂದ ನಿಮ್ಮ ಚರ್ಮದ ಬಣ್ಣ ಬದಲಾಗಿದ್ದರೆ ಅದನ್ನು ನೈಜ ಬಣ್ಣಕ್ಕೆ ತಿರುಗಿಸುವ ಚಿಕಿತ್ಸೆಯೂ ಹೇರ್‌ಲೈನ್‌ನಲ್ಲಿ ಲಭ್ಯವಿದೆ. ಮುಖ, ಕುತ್ತಿಗೆ, ತೋಳುಗಳ ಚರ್ಮದ ಬಣ್ಣವನ್ನು ಮತ್ತೆ ನೈಜಸ್ಥಿತಿ ತರಲು ಇದರಿಂದ ಸಾಧ್ಯವಿದೆ.



Click it and Unblock the Notifications