Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಚಳಿಗಾಲದಲ್ಲಿ ಹಿಮ್ಮಡಿ ಒಡೆದು ಸಹಿಸಲಾಗದ ನೋವಾಗಿದ್ಯಾ? ಸುಲಭದ ಮನೆ ಪರಿಹಾರ ಇಲ್ಲಿದೆ!
ಚಳಿಗಾಲ ಆರಂಭಗೊಂಡಿದೆ. ಹಲವು ಕಡೆ ಚಳಿ ಈಗಾಗಲೇ ಸಮಸ್ಯೆಗಳ ತರಲು ಆರಂಭಿಸಿದೆ. ಚಳಿಗಾಲದಲ್ಲಿ ತಾಪಮಾನ ಇಳಿಕೆ ಒಂದು ಕಡೆಯಾದರೆ ಶೀತಗಾಳಿಯಿಂದ ಸಮಸ್ಯೆಗಳನ್ನು ಎದುರಿಸುವುದು ಮತ್ತೊಂದು ಕಡೆ. ಈ ಶೀತಗಾಳಿಯಿಂದ ತ್ವಚೆ ಒಣಗುವುದು ಹಾಗೆ ಒಡೆಯುವುದು ಸಾಮಾನ್ಯ. ಚರ್ಮದಲ್ಲಿನ ತೇವಾಂಶ ಒಣಗುವ ಕಾರಣದಿಂದ ಒಡೆಯುವುದು, ಬಿರುಕು ಬಿಡುವುದು ನೋಡಬಹುದು. ಇದಕ್ಕಾಗಿ ಹಲವು ರೀತಿಯ ಕ್ರೀಮ್‌ಗಳನ್ನು ನೀವು ಬಳಸಿರಬಹುದು.
ಇನ್ನು ಚಳಿಗಾಲದಲ್ಲಿ ಬಹುದೊಡ್ಡ ಸಮಸ್ಯೆ ಅಂದ್ರೆ ಅದು ಹಿಮ್ಮಡಿ ಒಡೆಯುವುದು. ಮಹಿಳೆಯರು ಹಾಗೂ ಪುರುಷದಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆಯನ್ನು ನೋಡಬಹುದು, ಇದಕ್ಕೆ ವಿಟಮಿನ್ ಸಮಸ್ಯೆ ಇದ್ದರೂ ಪ್ರಮುಖ ಕಾರಣ ಶೀತಗಾಳಿ ಎನ್ನಬಹುದು. ಬಹಳ ಮೃದುವಾದ ಈ ಚರ್ಮವು ಚಳಿಯ ಕಾರಣಕ್ಕೆ ಬಿರುಕು ಬಿಡುತ್ತದೆ.

ಹಿಮ್ಮಡಿ ಒಡೆಯುವುದರಿಂದ ರಾತ್ರಿ ಸಮಯದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಸರಿಯಾಗಿ ಹಿಮ್ಮಡಿ ಬಳಸಿ ನಡೆಯಲಾಗದ ಸ್ಥಿತಿಗೂ ತಲುಪಬೇಕಾಗುತ್ತದೆ. ಹಾಗೆ ಇದು ನಿಮ್ಮ ಕಾಲಿನ ಅಂದವನ್ನೂ ಕೆಡಿಸುತ್ತವೆ. ಆದ್ರೆ ಚಳಿಗಾಲದಲ್ಲಿ ಕಾಡುವ ಹಿಮ್ಮಡಿ ಒಡೆಯುವ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುವ ಒಂದಿಷ್ಟು ಟ್ರಿಕ್ಸ್ ನಾವಿಲ್ಲಿ ಹೇಳಲಿದ್ದೇವೆ.
ಹರಳೆಣ್ಣೆ ಹಚ್ಚುವುದು
ನೀವು ಒಡೆದ ಹಿಮ್ಮಡಿಯಿಂದ ಬಳಲುತ್ತಿದ್ದರೆ ನಿತ್ಯ ಮಲಗುವ ಮುನ್ನ ಹರಳೆಣ್ಣೆ ಹಚ್ಚಿಕೊಂಡು ಮಲಗುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗಲಿದೆ. ಈ ಹರಳಣ್ಣೆ ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣ ಹೊಂದಿದೆ. ಇದರಿಂದ ಹಿಮ್ಮಡಿಯಲ್ಲಿನ ಬಿರುಕುಗಳು ವಾರದಲ್ಲಿ ನಿವಾರಣೆ ಮಾಡಿಕೊಳ್ಳಬಹುದು. ಹರಳೆಣ್ಣೆ ಹಚ್ಚಿ ಬಳಿಕ ಬಟ್ಟೆಯನ್ನು ಕಟ್ಟಿಕೊಂಡು ಮಲಗಬಹುದು, ಇಲ್ಲವೆ ಸಾಕ್ಸ್ ಧರಿಸಿ ಮಲಗಬಹುದು.
ಬಾಳೆಹಣ್ಣಿನ ಪೇಸ್ಟ್
ಬಾಳೆ ಹಣ್ಣಿನಿಂದ ಹಲವು ರೀತಿಯ ಉಪಯೋಗಗಳ ನೀವು ಸಹ ಕೇಳಿರಬಹುದು. ಆದ್ರೆ ಬಾಳೆಹಣ್ಣಿನಿಂದ ಮಾಡಿದ ಪೇಸ್ಟ್ ನಿಮ್ಮ ಕಾಲಿನ ಒಡೆದ ಭಾಗವನ್ನು ನಿವಾರಿಸಲಿದೆ. ಬಾಳೆ ಹಣ್ಣನ್ನು ಕಿವುಚಿ ಪುಡಿ ಮಾಡಿ ಅದಕ್ಕೆ ಸ್ವಲ್ಪ ಆಲಿವ್ ಆಯಿಲ್ ಹಾಕಿ ಮಿಶ್ರಣ ಮಾಡಿ. ನಂತರ ಒಡೆದ ಹಿಮ್ಮಡಿಗೆ ಹಚ್ಚಿಕೊಂಡು ಸುಮಾರು 15 ನಿಮಿಷ ಹಾಗೆಯೇ ಬಿಟ್ಟು ಅನಂತರ ತೊಳೆಯಿರಿ. ಇದು ಚರ್ಮವನ್ನು ಮತ್ತೆ ಬೆಳೆಯುವಂತೆ ಮಾಡಲಿದೆ.
ಅಕ್ಕಿ ಹಿಟ್ಟಿನ ಮಸಾಜ್
ಮನೆಯಲ್ಲಿ ಸುಲಭವಾಗಿ ಸಿಗುವಂತಹ ಅಕ್ಕ ಹಿಟ್ಟಿನ ಪೇಸ್ಟ್ ಮಾಡಿಕೊಂಡು ಅದರಿಂದ ಹಿಮ್ಮಡಿಗಳ ಮಸಾಜ್ ಮಾಡಬೇಕು. ಒಂದು ಚಮಚ ಅಕ್ಕಿ ಹಿಟ್ಟು, ಎರಡು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಲಿಂಬೆರಸ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇದನ್ನು ಹಿಮ್ಮಡಿಗೆ ಹಚ್ಚಿ ಹತ್ತು ನಿಮಿಷ ಮಸಾಜ್ ಮಾಡಿಕೊಳ್ಳಿ. ನಿತ್ಯ ಹೀಗೆ ಮಾಡಿಕೊಳ್ಳುವುದರಿಂದ ಒಡೆದ ಹಿಮ್ಮಡಿ ಸಮಸ್ಯೆ ದೂರಾಗಲಿದೆ.
ಹಾಲು ಮತ್ತು ಜೇನುತುಪ್ಪದ ಮಿಶ್ರಣ
ಒಡೆದ ಕಾಲುಗಳನ್ನು ಸುಂದರವಾಗಿಸಲು ಹಾಲು ಮತ್ತು ಜೇನು ತುಪ್ಪ ಬಳಸಿಕೊಂಡು ಮಾಡುವ ಈ ಪೇಸ್ಟ್ ಅತ್ಯತ್ತಮ ವಿಧಾನವಾಗಿದೆ. ಒಂದು ಬೌಲ್‌ನಲ್ಲಿ ಹಾಲು ಹಾಗೂ ಅದರ ಅರ್ಧ ಪ್ರಮಾಣದಲ್ಲಿ ಜೇನು ತುಪ್ಪ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ದಪ್ಪವಾಗಿ ಹಿಮ್ಮಡಿಗೆ ಹಚ್ಚಿ ಮಸಾಜ್ ಮಾಡಿ. ಬಹಳ ತೆಳುವಾಗಿದ್ದರೆ ಇದಕ್ಕೆ ಅಕ್ಕಿ ಹಿಟ್ಟನ್ನು ಸೇರಿಸಬಹುದು. ದಪ್ಪವಾದ ಪೇಸ್ಟ ಮಾಡಿ ಹಚ್ಚಿಕೊಂಡು 10 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
