Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ಉಗುರಿನ ಬಣ್ಣ ಹಳದಿ ಆಗಿ ಬಿಟ್ಟಿದೆಯೇ? ಇಲ್ಲಿದೆ ನೋಡಿ ಸರಳ ಟಿಪ್ಸ್
ಉಗುರಿಗೆ ಹಚ್ಚುವ ಬಣ್ಣ ಹಾಗೂ ಇವನ್ನು ತೆಗೆಯಲು ಬಳಸುವ ನೇಲ್ ರಿಮೂವರ್ಗಳ ಅತಿಯಾದ ಬಳಕೆಯಿಂದ ಉಗುರಿನ ಬಣ್ಣ ಹಳದಿಯಾಗತೊಡಗುತ್ತದೆ. ಹಳದಿಯಾದ ಉಗುರುಗಳು ಸೌಂದರ್ಯವನ್ನು ಕ್ಷೀಣಿಸುವುದು ಮಾತ್ರವಲ್ಲ, ಅನಾರೋಗ್ಯಕರವೂ ಆಗಿದೆ. ಹಳದಿ ಉಗುರುಗಳಿಂದ ಸಾವಿರಾರು ಮಹಿಳೆಯರು ಚಿಂತಿತರಾಗಿದ್ದು ಈ ಉಗುರುಗಳನ್ನು ಇತರರಿಗೆ ತೋರಿಸಿಕೊಳ್ಳಲು ಮುಜುಗರಕ್ಕೊಳಗಾಗುತ್ತಾರೆ ಹಾಗೂ ಇದನ್ನು ತೋರ್ಪಡಿಸಿಕೊಳ್ಳದಿರಲು ಉಗುರಿನ ಬಣ್ಣಕ್ಕೆ ಇನ್ನಷ್ಟು ಮೊರೆಹೋಗುತ್ತಾರೆ.
ಪರಿಣಾಮವಾಗಿ ಈಗಾಗಲೇ ಹಳದಿಯಾಗಿದ್ದ ಉಗುರನ್ನು ಇನ್ನಷ್ಟು ಹಳದಿಯಾಗಿಸಲು ತಾವೇ ಕಾರಣರಾಗುತ್ತಾರೆ. ಬನ್ನಿ, ಈ ತೊಂದರೆಯಿಂದ ಪಾರಾಗಲು ನಿಸರ್ಗ ಹೇಗೆ ನೆರವಾಗುತ್ತದೆ ಎಂದು ನೋಡೋಣ... ಹಳದಿ ಉಗುರುಗಳನ್ನು ಮತ್ತೆ ಬಿಳಿಯಾಗಿಸಲು ಕೆಲವಾರು ಮನೆಮದ್ದುಗಳಿದ್ದು ಇವು ಸುರಕ್ಷಿತ ಹಾಗೂ ಬಳಸಲು ಸುಲಭವೂ ಆಗಿದೆ.
ಇವುಗಳನ್ನು ನಿತ್ಯವೂ ಅನುಸರಿಸುವ ಮೂಲಕ ಶೀಘ್ರವೇ ನಿಮ್ಮ ಉಗುರುಗಳು ತಮ್ಮ ಹಿಂದಿನ ವೈಭವವನ್ನು ಪಡೆದುಕೊಳ್ಳಲಿವೆ. ಈ ಮದ್ದುಗಳಲ್ಲಿ ನೈಸರ್ಗಿಕ ಬಿಳಿಚಿಸುವ ಗುಣವಿದ್ದು ಉಗುರುಗಳ ಬುಡಕ್ಕೆ ಇಳಿಯುವ ಮೂಲಕ ಉಗುರುಗಳನ್ನು ಬುಡದಿಂದಲೇ ಆರೋಗ್ಯಕರವಾಗಿಸುತ್ತ ಬರುತ್ತವೆ. ಪೂರ್ಣ ಪರಿಣಾಮ ಪಡೆಯಲು ಉಗುರು ಬುಡದಿಂದ ತುದಿಯವರೆಗೂ ಬೆಳೆಯಬೇಕಾಗಿರುವ ಕಾರಣ ಕೊಂಚ ತಾಳ್ಮೆ ಅಗತ್ಯ. ಆದರೆ ಇದು ಅತ್ಯಂತ ಆರೋಗ್ಯಕರ ಹಾಗೂ ಸುರಕ್ಷಿತವಾಗಿವೆ....

ಅಡುಗೆ ಸೋಡಾ
ಅಡುಗೆ ಸೋಡಾ ಸತ್ತ ಜೀವಕೋಶಗಳನ್ನು ನಿವಾರಿಸಲು ಅತ್ಯುತ್ತಮವಾದ ರಾಸಾಯನಿಕವಾಗಿದ್ದು ಹಳದಿ ಉಗುರುಗಳ ಬಣ್ಣ ಬದಲಿಸಲೂ ಸಮರ್ಥವಾಗಿದೆ. ಇದಕ್ಕಾಗಿ ಎರಡು ಚಿಕ್ಕ ಚಮಚ ಅಡುಗೆ ನೋಡಾವನ್ನು ಮೂರು ಅಥವಾ ನಾಲ್ಕು ದೊಡ್ಡ ಚಮಚ ಶುದ್ಧ ನೀರಿಗೆ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಉಗುರುಗಳಿಗೆ ಹಚ್ಚಿ ಕೊಂಚ ನಿಮಿಷ ಹಾಗೇ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿದರೆ ಸಾಕು.

ಟೀ ಟ್ರೀ ಎಣ್ಣೆ
ಉಗುರುಗಳ ಹಳದಿ ಬಣ್ಣವನ್ನು ನಿವಾರಿಸಲು ಟೀ ಟ್ರೀ ಎಣ್ಣೆ (Tea Tree oil) ಸಹಾ ಉತ್ತಮ ಆಯ್ಕೆಯಾಗಿದೆ. ಒಂದು ಚಿಕ್ಕ ಚಮಚ ಆಲಿವ್ ಎಣ್ಣೆಗೆ ಕೆಲವು ತೊಟ್ಟು ಈ ಎಣ್ಣೆಯನ್ನು ಬೆರೆಸಿ ಈ ಮಿಶ್ರಣವನ್ನು ಹಳದಿಯಾಗಿದ್ದ ಉಗುರುಗಳ ಮೇಲೆ ಹಚ್ಚಿಕೊಳ್ಳಿ. ಸುಮಾರು ಹತ್ತು ಹದಿನೈದು ನಿಮಿಷಗಳ ಕಾಲ ಇದನ್ನು ಹಾಗೇ ಒಣಗಲು ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ಉಗುರುಗಳು ಸಹಜವರ್ಣ ಪಡೆಯುವವರೆಗೂ ವಾರಕ್ಕೊಂದು ಬಾರಿ ಪುನರಾವರ್ತಿಸಿ.

ಸೇಬಿನ ಶಿರ್ಕಾ (apple cider vinegar)
ಈ ಶಿರ್ಕಾ ಕೊಂಚ ಆಮ್ಲೀಯವಾಗಿದ್ದು ಉಗುರಿನ ಬಣ್ಣವನ್ನು ನಿವಾರಿಸುವಷ್ಟೇ ಪ್ರಬಲವಾಗಿದೆ. ಒಂದು ಚಿಕ್ಕ ಬೋಗುಣಿಯಲ್ಲಿ ಅರ್ಧ ಚಿಕ್ಕ ಚಮಚ ಸೇಬಿನ ಶಿರ್ಕಾ ಬೆರೆಸಿ ಈ ನೀರಿನಲ್ಲಿ ಉಗುರುಗಳನ್ನು ಸುಮಾರು ಐದರಿಂದ ಹತ್ತು ನಿಮಿಷ ಮುಳುಗಿರುವಂತೆ ಇರಿಸಿ. ಬಳಿಕ . ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಒಣ ಬಟ್ಟೆಯಿಂದ ಒರೆಸಿಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ಪ್ರತಿ ವಾರವೂ ಈ ವಿಧಾನವನ್ನು ಪುನರಾವರ್ತಿಸಬೇಕು.

ಹೈಡ್ರೋಜೆನ್ ಪೆರಾಕ್ಸೈಡ್
ಹೈಡ್ರೋಜೆನ್ ಪೆರಾಕ್ಸೈಡ್ ಉತ್ತಮವಾದ ಬಿಳಿಚುಕಾರಕವಾಗಿದ್ದು ಉಗುರುಗಳ ಹಳದಿ ಬಣ್ಣವನ್ನು ಬದಲಿಸಲೂ ಉತ್ತಮ ಆಯ್ಕೆಯಾಗಿದೆ. ಒಂದು ದೊಡ್ಡ ಬೋಗುಣಿ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ದೊಡ್ಡ ಚಮಚ ಹೈಡ್ರೋಜೆನ್ ಪೆರಾಕ್ಸೈಡ್ ಬೆರೆಸಿ ಈ ಮಿಶ್ರಣದಲ್ಲಿ ಉಗುರುಗಳನು ಸುಮಾರು ಮೂರರಿಂದ ನಾಲ್ಕು ನಿಮಿಷ ಮುಳುಗಿಸಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಒಣಬಟ್ಟೆಯಿಂದ ಒರೆಸಿಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ಪ್ರತಿ ವಾರವೂ ಈ ವಿಧಾನವನ್ನು ಪುನರಾವರ್ತಿಸಬೇಕು.

ಕಿತ್ತಳೆ ರಸ
ಕಿತ್ತಳೆ ರಸದಲ್ಲಿರುವ ಸಿಟ್ರಿಕ್ ಆಮ್ಲಕ್ಕೂ ಹಳದಿಯಾಗಿರುವ ಉಗುರುಗಳನ್ನು ಮತ್ತೆ ಬಿಳಿಯಾಗಿಸುವ ಗುಣವಿದೆ. ಈಗತಾನೇ ಹಿಂಡಿ ತೆಗೆದ ಕಿತ್ತಳೆ ರಸದಲ್ಲಿ ಒಂದು ಚಿಕ್ಕ ಹತ್ತಿಯುಂಡೆಯನ್ನು ಮುಳುಗಿಸಿ ಈ ಉಂಡೆಯಿಂದ ಎಲ್ಲಾ ಉಗುರುಗಳನ್ನು ಒರೆಸಿಕೊಳ್ಳಿ. ಸುಮಾರು ನಾಲ್ಕೈದು ನಿಮಿಷ ಹಾಗೇ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಒಣಬಟ್ಟೆಯಿಂದ ಒರೆಸಿಕೊಳ್ಳಿ. ಈ ವಿಧಾನ ಹೆಚ್ಚು ಗಾಢವಾಗಿರುವ ಉಗುರುಗಳಿಗೆ ಸೂಕ್ತವಾಗಿದ್ದು ವಾರಕ್ಕೆ ಎರಡರಿಂದ ಮೂರು ಬಾರಿ ಪುನರಾವರ್ತಿಸುವ ಮೂಲಕ ಉತ್ತಮ ಪರಿಣಾಮವನ್ನು ನಿರೀಕ್ಷಿಸಬಹುದು.

ಬಿಳಿಯಾಗಿಸುವ ಟೂಥ್ ಪೇಸ್ಟ್ (Whitening toothpaste)
ಕೆಲವು ಹಲ್ಲುಜ್ಜುವ ಕ್ರೀಂಗಳಲ್ಲಿ ಬಿಳಿಚಿಸುವ ಗುಣವಿದೆ. ಈ ಗುಣ ಉಗುರನ್ನು ಬಿಳಿಯಾಗಿಸಲೂ ಉತ್ತಮವಾಗಿದೆ. ಕೊಂಚ ಟೂಥ್ ಪೇಸ್ಟ್ ಅನ್ನು ನೇರವಾಗಿ ಉಗುರುಗಳ ಮೇಲೆ ತೆಳುವಾಗಿ ಹಚ್ಚಿ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸುವ ಮೂಲಕ ಶೀಘ್ರವೇ ಬಿಳಿಯಾದ ಉಗುರುಗಳನ್ನು ಪಡೆಯಬಹುದು.

ಜ್ಯೂನಿಪರ್ ಬೆರ್ರಿಗಳು (Juniper Berries)
ಈ ಬೆರ್ರಿ ಹಣ್ಣುಗಳು ಉಗುರುಗಳ ಬಣ್ಣವನ್ನು ಬಿಳಿಯಾಗಿಸುವಲ್ಲಿ ಅದ್ಭುತವನ್ನೇ ಸಾಧಿಸುತ್ತವೆ. ಇದರಲ್ಲಿರುವ ಕ್ರಿಮಿನಾಶಕ ಹಾಗೂ ಬಿಳಿಚಿಸುವ ಗುಣ ಹಳದಿ ಬಣ್ಣವನ್ನು ಶೀಘ್ರವಾಗಿ ಬದಲಿಸಲು ನೆರವಾಗುತ್ತವೆ. ಇದಕ್ಕಾಗಿ ಸುಮಾರು ಐದಾರು ಬೆರ್ರಿ ಹಣ್ಣುಗಳನ್ನು ಕಿವುಚಿ ಒಂದು ಚಿಕ್ಕ ಚಮಚ ಗುಲಾಬಿ ನೀರನ್ನು ಬೆರೆಸಿ ಮಿಶ್ರಣ ಮಾಡಿ. ಈ ಲೇಪನವನ್ನು ಉಗುರುಗಳಿಗೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ನಾಲ್ಕೈದು ಬಾರಿ ಪುನರಾವರ್ತಿಸಿ.



Click it and Unblock the Notifications











