Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಕಾಡುವ ಸನ್ ಟ್ಯಾನ್ ಸಮಸ್ಯೆಗೆ ಮಜ್ಜಿಗೆ-ಓಟ್ಸ್ ಲೇಪನ
ಬೀಚುಗಳಲ್ಲಿ ಸಮಯ ಕಳೆಯುವ ಚಿತ್ರಗಳನ್ನು ನೋಡಿದಾಗ ನಿಮಗೂ ಅಲ್ಲಿ ಸಮಯ ಕಳೆಯಬೇಕೆಂದು ಮನಸ್ಸಾಯಿತೇ? ಆದರೆ ಸನ್ ಟ್ಯಾನ್ ಹೊರತಾಗಿ ಹೊರಗೆ ಹೋಗಬೇಡಿ. ಏಕೆಂದರೆ ಸೂರ್ಯನ ಕಿರಣಗಳು ಚರ್ಮದ ಬಣ್ಣವನ್ನು ಗಾಢಗೊಳಿಸಬಹುದು. ಅಭ್ಯಾಸವಿಲ್ಲದವರಿಗೆ ಉರಿ, ಕೆಂಪಗಾವುವುದು, ಸೂಕ್ಷ್ಮಗೆರೆಗಳು ಮೂಡುವುದು ಮೊದಲಾದ ತೊಂದರೆಗಳೂ ಎದುರಾಗಬಹುದು.
ಆದರೆ ಸನ್ ಟ್ಯಾನ್ ಹಚ್ಚಲಿಕ್ಕೂ ಒಂದು ಕ್ರಮವಿದೆ. ಇದನ್ನು ಕೆಳಗಿನಿಂದ ಮೇಲಕ್ಕೆ ಸವರುವಂತೆ, ಏಕಪ್ರಕಾರವಾಗಿರುವಂತೆ, ಸೂರ್ಯನಿಗೆ ಒಡ್ಡುವ ಚರ್ಮದ ಅಷ್ಟೂ ಭಾಗಕ್ಕೆ ಆವರಿಸುವಂತೆ ಹಚ್ಚಿಕೊಳ್ಳಬೇಕು. ಆದರೆ ಸರಿಯಾಗಿ ಹಚ್ಚಿಕೊಳ್ಳದೇ ಇದ್ದರೆ, ಮರೆತು ಒಂದು ಭಾಗಕ್ಕೆ ಹಚ್ಚಿಕೊಳ್ಳದೇ ಇದ್ದರೆ, ಚರ್ಮ ಗಾಢವರ್ಣಕ್ಕೆ ತಿರುಗಬಹುದು.

ಸೂರ್ಯರಶ್ಮಿಗೆ ಹೆಚ್ಚಿನ ಹೊತ್ತು ಒಡ್ಡಿಕೊಂಡಿದ್ದರೆ ಸೂರ್ಯ ಕಿರಣಗಳಲ್ಲಿರುವ UVA ಮತ್ತು UVB ಪ್ರಭೆಗಳು ಚರ್ಮದ ಮೇಲೆ ಗಾಢ ಪರಿಣಾಮ ಉಂಟುಮಾಡುತ್ತವೆ. ಇದರಿಂದ ಚರ್ಮದ ಕ್ಯಾನ್ಸರ್, ಎಕ್ಸಿಮಾ, ಮೆಲಾನೋಮಾ ಮೊದಲಾದ ತೊಂದರೆಗಳೂ ಎದುರಾಗಬಹುದು. ಆದ್ದರಿಂದ ಸೂರ್ಯನ ಕಿರಣಗಳಿಗೆ ಒಡ್ಡುವ ಸಂದರ್ಭ ಬಂದಾಗ ಸೂಕ್ತ ಎಚ್ಚರಿಕೆಗಳನ್ನು ವಹಿಸುವುದೇ ಜಾಣತನದ ಕ್ರಮವಾಗಿದೆ.
ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ಸೂರ್ಯನ ಕಿರಣಗಳಿಗೆ ಒಡ್ಡಲೇ ಬೇಕಾಗುತ್ತದೆ. ಆಗ ಅನಿವಾರ್ಯವಾಗಿ ಒಡ್ಡಿದ್ದ ಚರ್ಮದ ಭಾಗ ಹೆಚ್ಚು ಗಾಢಗೊಳ್ಳುತ್ತದೆ. ಎಷ್ಟೋ ಸಲ ಸರಿಯಾದ ಸನ್ ಟ್ಯಾನ್ ಉಪಯೋಗಿಸಿಯೂ ಚರ್ಮ ಗಾಢವರ್ಣ ಪಡೆಯುತ್ತದೆ. ವಿಶೇಷವಾಗಿ ಬಟ್ಟೆಗಳ ಅಂಚುಗಳಲ್ಲಿ ಈ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ.
ಇದನ್ನು ನಿವಾರಿಸಲು ಮಾರುಕಟ್ಟೆಯಲ್ಲಿ ಪ್ರಸಾದನಗಳು ಲಭ್ಯವಿದ್ದರೂ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಈ ಮುಖಲೇಪವನ್ನು ಬಳಸುವ ಮೂಲಕ ಸಮರ್ಥವಾಗಿ ಈ ವರ್ಣವನ್ನು ಸಹಜವರ್ಣದತ್ತ ತರಬಹುದು. ಇದಕ್ಕೆ ಬೇಕಾಗಿರುವುದು ಬರೆಯ ಓಟ್ಸ್ ಮತ್ತು ಮಜ್ಜಿಗೆ ಮಾತ್ರ. ಬನ್ನಿ, ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಕಲಿಯೋಣ: ಈ ಎಣ್ಣೆಗಳಿರುವಾಗ ಸನ್ ಟ್ಯಾನ್ ಚಿಂತೆ ಏಕೆ?
ಅಗತ್ಯವಿರುವ ಸಾಮಾಗ್ರಿಗಳು:
*ಓಟ್ಸ್ ಅಥವಾ ಓಟ್ಮೀಲ್ - ಮೂರು ದೊಡ್ಡಚಮಚ
*ಮಜ್ಜಿಗೆ: ಕಾಲು ಕಪ್
*ಲಿಂಬೆ ರಸ: ಎರಡು ಚಿಕ್ಕ ಚಮಚ
ಓಟ್ಮೀಲ್ ಅಥವಾ ಓಟ್ಸ್‌ನ ರವೆಯಲ್ಲಿ ಚರ್ಮದ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸಲು ಸಮರ್ಥವಾದ ಪೋಷಕಾಂಶಗಳಿವೆ. ಈ ಗುಣ ಚರ್ಮದ ಗಾಢವರ್ಣವನ್ನೂ ನಿವಾರಿಸಲು ಬಳಕೆಯಾಗುತ್ತದೆ. ಸತ್ತ ಜೀವಕೋಶಗಳ ಪದರ ನಿವಾರಣೆಯಾಗುವ ಮೂಲಕ ಗಾಢವಾದ ಹೊರಪದರ ನಿವಾರಣೆಯಾಗಿ ಸಹಜವರ್ಣದ ಹೊಸ ಜೀವಕೋಶಗಳು ಕಾಣತೊಡಗುತ್ತವೆ.
ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು ಇದು ಚರ್ಮದ ಜೀವಕೋಶಗಳನ್ನು ಸಡಿಲಿಸಿ ಗಾಢವಾಗಿದ್ದ ವರ್ಣದ್ರವ್ಯ ಕರಗಲು ನೆರವಾಗುತ್ತದೆ. ಅಲ್ಲದೇ ಮಜ್ಜಿಗೆಯಲ್ಲಿ ಮೊಡವೆಗಳನ್ನು ಉಂಟುಮಾಡುವ ಸೂಕ್ಷ್ಮಾಣುಗಳನ್ನು ನಿವಾರಿಸಿ ಹೊರಚರ್ಮ ಉತ್ತಮ ಆರೋಗ್ಯದಿಂದಿರಲು ನೆರವಾಗುತ್ತದೆ.
ಲಿಂಬೆರಸವೂ ಒಂದು ಆಮ್ಲವಾಗಿದ್ದು ಚರ್ಮವನ್ನು ಬಿಳಿಚಿಸಲು ನೆರವಾಗುತ್ತದೆ. ಅಲ್ಲದೆ ಸೂರ್ಯನ ಪ್ರಭಾವದಿಂದ ಘಾಸಿಗೊಂಡಿದ್ದ ಚರ್ಮದ ಜೀವಕೋಶಗಳನ್ನು ಮತ್ತೆ ಮೊದಲಿನಂತಾಗಿಸಲು ಲಿಂಬೆಯ ಪೋಷಕಾಂಶಗಳು ನೆರವಾಗುತ್ತವೆ. ಸನ್‍ಟ್ಯಾನ್ ನಿವಾರಿಸಲು ಮನೆಯಲ್ಲಿಯೇ ಇದೆ ಮದ್ದುಗಳು
ತಯಾರಿಕಾ ವಿಧಾನ:
*ಈ ಲೇಪನವನ್ನು ಒಂದು ಬೋಗುಣಿಯಲ್ಲಿ ಸಂಗ್ರಹಿಸಿ.
*ಸಂಜೆಯ ಹೊತ್ತಿನಲ್ಲಿ ಈಗ ತಾನೇ ತಣ್ಣೀರಿನಲ್ಲಿ ತೊಳೆದು ಒರೆಸಿಕೊಂಡು ಗಾಢವಾಗಿದ್ದ ಚರ್ಮದ ಭಾಗಗಳಿಗೆ ಈ ಲೇಪನವನ್ನು ತೆಳುವಾಗಿ ಹಚ್ಚಿ.
*ಸುಮಾರು ಇಪ್ಪತ್ತು ನಿಮಿಷ ಕಾಲ ಒಣಗಲು ಬಿಡಿ.
*ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಹಾಲಿನ ಅಂಶವಿರುವ ಸೋಪನ್ನು ಬಳಸಿ ತೊಳೆದುಕೊಳ್ಳಿ.



Click it and Unblock the Notifications

