Latest Updates
-
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ!
ಅಪ್ಪಟ ದೇಸಿ ತುಪ್ಪಕ್ಕೆ ಭೇಷ್ ಎನ್ನಲೇಬೇಕು
ಅಪ್ಪಟ ಬೆಣ್ಣೆಯನ್ನು ಕಾಯಿಸಿ ತಯಾರಿಸಿದ ಶುದ್ಧ ದೇಸಿ ತುಪ್ಪ ಭಾರತೀಯ ಅಡುಗೆಮನೆಗಳಲ್ಲಿ ಸಾವಿರಾರು ವರ್ಷಗಳಿಂದ ಅಡುಗೆಯ ಸ್ವಾದ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತಾ ಬಂದಿದೆ. ಆಹಾರದಲ್ಲಿ ರುಚಿ ಹೆಚ್ಚಿಸಲೂ ಊಟದೊಂದಿಗೆ ಚಿಕ್ಕ ಮಿಳ್ಳೆ ಅಥವಾ ಚಮಚದಷ್ಟು ತುಪ್ಪ ಸೇರಿಸಿ ತಿನ್ನುವ ವಾಡಿಕೆ ಭಾರತದಲ್ಲಿದೆ. ಅಷ್ಟೇ, ಅಲ್ಲ ತುಪ್ಪವನ್ನು ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಧಿಗಳಲ್ಲಿಯೂ ಉಪಯೋಗಿಸಲಾಗುತ್ತದೆ. ಹೋಮ, ಹವನ, ಪೂಜೆಯ ದೀಪ, ಅಷ್ಟೇ ಏಕೆ ಹರಕೆ ಹೊತ್ತ ಮಹಿಳೆಯರು ಹರಕೆ ಪೂರೈಸಿದ ಬಳಿಕ ತುಪ್ಪದ ದೀಪವನ್ನೇ ದೇವರಿಗೆ ಹಚ್ಚುತ್ತಾರೆ.
ಇದರ ಉಪಯೋಗ ಇಷ್ಟಕ್ಕೇ ನಿಂತಿಲ್ಲ, ಕೂದಲ ಆರೈಕೆ ಮತ್ತು ಚರ್ಮದ ಪೋಷಣೆಗೂ ಬಳಕೆಯಾಗುತ್ತಿದೆ. ಚರ್ಮಕ್ಕೆ ಆರ್ದ್ರತೆ ನೀಡುವಲ್ಲಿ ತುಪ್ಪ ಅತ್ಯುತ್ತಮವಾಗಿದೆ. ಇದೇ ಕಾರಣಕ್ಕೆ ಒಣಚರ್ಮಕ್ಕೆ ಪೋಷಣೆ ನೀಡುವ ಸಹಿತ ಹಲವು ಚರ್ಮರೋಗಗಳಿಗೆ ತುಪ್ಪದ ಪೋಷಣೆ ಶೀಘ್ರವಾಗಿ ಉಪಶಮನ ನೀಡುತ್ತದೆ. ಚಳಿಗೆ ಒಡೆದ ಅಥವಾ ಒಡೆಯುವ ಸಂಭವವಿರುವ ತುಟಿಗಳನ್ನು ಪೋಷಿಸಿ ರಕ್ಷಿಸುತ್ತದೆ. ಇದರಿಂದ ಹೊಳಪುಳ್ಳ ತುಟಿಗಳು ಬೆಳೆಯಲು ಸಹಾಯವಾಗುತ್ತದೆ. ಚರ್ಮದ ಕಲ್ಮಶಗಳನ್ನು ಹೊರಹಾಕಿ ಸ್ವಾಭಾವಿಕ ಮತ್ತು ಕಾಂತಿಯುಕ್ತ ಚರ್ಮ ಹೊಂದಲು ನೆರವಾಗುತ್ತದೆ. ಪಕ್ಕಾ ದೇಸಿ ತುಪ್ಪ, ಆರೋಗ್ಯದ ಲವಲವಿಕೆಯ ಕೀಲಿಕೈ
ತುಪ್ಪದ ಸೇವನೆಯಿಂದ ಉತ್ತಮ ಪ್ರಮಾಣದ ಪೋಷಕಾಂಶಗಳು ದೊರಕುವುದು ಮಾತ್ರವಲ್ಲ, ದೇಹದಲ್ಲಿ ಸಂಗ್ರಹವಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಲೂ ಸಾಧ್ಯವಾಗುತ್ತದೆ. ತನ್ಮೂಲಕ ಹಲವು ಹೃದಯಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ. ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ವಿಶೇಷವಾಗಿ ಚರ್ಮದ ಆರೈಕೆಯಕ್ಕೆ ಹೆಚ್ಚಿನ ಪಾತ್ರವನ್ನು ವಹಿಸುತ್ತವೆ. ಅಲ್ಲದೇ ತುಪ್ಪದಲ್ಲಿರುವ ಕ್ಯಾರೋಟಿನಾಯ್ಡ್ ಎಂಬ ಪೋಷಕಾಂಶಗಳು ಮತ್ತು ವಿಟಮಿನ್ ಎ ಮತ್ತು ಇ ದೇಹದಲ್ಲಿ ಕ್ಯಾನ್ಸರ್ ಹುಟ್ಟು ಹಾಕಲು ನೆರವಾಗುವ ಕಣಗಳನ್ನು ಎದುರಿಸಿ ಹೋರಾಡಿ ವಿವಿಧ ರೀತಿಯ ಕ್ಯಾನ್ಸರ್ ಬರದಂತೆ ಕಾಪಾಡುತ್ತವೆ ಹಾಗೂ ಹೊಸ ಜೀವಕೋಶಗಳು ಹುಟ್ಟಲು ನೆರವಾಗುತ್ತವೆ. ಇವೆಲ್ಲಾ ಕಾರಣಗಳಿಂದ ದಿನದ ಆಹಾರಸೇವನೆಯಲ್ಲಿ ತುಪ್ಪವನ್ನು ಅಳವಡಿಸಿಕೊಳ್ಳುವುದು ಆರೋಗ್ಯಕರವಾಗಿದ್ದು ಆಯುರ್ವೇದದ ಸಲಹೆಯೂ ಆಗಿದೆ. ಬನ್ನಿ, ತುಪ್ಪದ ಉತ್ತಮ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಚರ್ಮಕ್ಕೆ ಆರ್ದ್ರತೆ ನೀಡುತ್ತದೆ
ಚರ್ಮಕ್ಕೆ ಸತತವಾಗಿ ಆರ್ದ್ರತೆಯ ಅಗತ್ಯವಿದೆ. ತುಪ್ಪದಲ್ಲಿ ಉತ್ತಮ ಪ್ರಮಾಣದ ಕೊಬ್ಬಿನ ಆಮ್ಲಗಳಿದ್ದು ಚರ್ಮಕ್ಕೆ ಆರ್ದ್ರತೆ ನೀಡುವಲ್ಲಿ ಸಕ್ಷಮವಾಗಿವೆ. ಇದಕ್ಕಾಗಿ ಕೊಂಚ ತುಪ್ಪವನ್ನು ಬಿಸಿಮಾಡಿ ಕರಗಿದ ಬಳಿಕ ಉಗುರುಬೆಚ್ಚನೆಯ ತಾಪಮಾನವಿದ್ದಾಗ ಮುಖದ ಮೇಲೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಕೊಂಚ ಹೊತ್ತು ಕಳೆದ ಬಳಿಕ ಸೌಮ್ಯ ಫೇಸ್ ವಾಶ್ ಮತ್ತು ಉಗುರುಬೆಚ್ಚನೆಯ ನೀರನ್ನು ಬಳಸಿ ತೊಳೆದುಕೊಳ್ಳಿ. ಇದರಿಂದ ಚರ್ಮಕ್ಕೆ ಅಗತ್ಯವಾದ ಆದ್ರತೆ ಪಡೆಯಲು ಸಹಾಯವಾಗುತ್ತದೆ.

ಸೂಕ್ಷ್ಮ ಚರ್ಮಕ್ಕೂ ಆದ್ರತೆ ನೀಡುತ್ತದೆ
ನಮ್ಮ ದೇಹದಲ್ಲಿ ಚರ್ಮ ಕೆಲವು ಭಾಗಗಳಲ್ಲಿ ಅತಿ ಸೂಕ್ಷ್ಮವಾಗಿದ್ದು ರಾಸಾಯನಿಕಗಳಿಂದ ಕೂಡಿದ ಪ್ರಸಾಧನಗಳನ್ನು ಹಚ್ಚುವುದು ಆತಂಕಕಾರಿಯಾಗಿದೆ. ಆದರೆ ತುಪ್ಪವನ್ನು ದೇಹದ ಯಾವುದೇ ಭಾಗಕ್ಕೂ ಸುರಕ್ಷಿತವಾಗಿ ಹಚ್ಚಿಕೊಳ್ಳಬಹುದಾಗಿದೆ. ಇದು ಚರ್ಮವನ್ನು ಸೌಮ್ಯ ಮತ್ತು ಆರೋಗ್ಯಕರವಾಗಿಸಲು ನೆರವಾಗುತ್ತದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ಉಗುರುಬೆಚ್ಚನೆಯ ನೀರು ಮತ್ತು ತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಕಿ. ಈ ಮಿಶ್ರಣವನ್ನು ಚರ್ಮಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ಸ್ನಾನ ಮಾಡಿ.

ಚರ್ಮದ ಕಾಂತಿ ಹೆಚ್ಚಿಸುತ್ತದೆ
ಚರ್ಮದ ಕಾಂತಿ ಹೆಚ್ಚಿಸಲು ತುಪ್ಪ ಸಾವಿರಾರು ವರ್ಷಗಳಿಂದ ಬಳಕೆಯಾಗುತ್ತಾ ಬಂದಿದೆ. ಇದು ಚರ್ಮದ ಅಡಿಯಲ್ಲಿರುವ ಕಲ್ಮಶಗಳನ್ನು ಹೊರಹಾಕಿ ನೈಸರ್ಗಿಕ ಆರ್ದ್ರತೆಯನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಇದರಿಂದ ಕಳೆಗುಂದಿದ್ದ ಚರ್ಮವೂ ಉತ್ತಮ ಪೋಷಣೆ ಹಾಗೂ ಕಾಂತಿಯನ್ನು ಪಡೆಯುತ್ತದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ಹಸಿಹಾಲು ಮತ್ತು ತುಪ್ಪವನ್ನು ಮಿಶ್ರಣಮಾಡಿ ಮುಖ, ಕುತ್ತಿಗೆ ಕೈಗಳಿಗೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತೊಳೆದುಕೊಳ್ಳಿ.

ಚರ್ಮದಲ್ಲಿ ವೃದ್ಧಾಪ್ಯದ ಚಿಹ್ನೆಗಳು ಮೂಡುವುದನ್ನು ತಡಮಾಡುತ್ತದೆ
ಚರ್ಮದಲ್ಲಿ ನೆರಿಗೆ, ಕಡಿಮೆಯಾಗುವ ಸೆಳೆತ ಮೊದಲಾದ ಲಕ್ಷಣಗಳು ವೃದ್ಧಾಪ್ಯವನ್ನು ಸೂಚಿಸುತ್ತವೆ. ನಿಯಮಿತವಾಗಿ ತುಪ್ಪದಿಂದ ಶರೀರವನ್ನು ಮಸಾಜ್ ಗೊಳಿಸುವ ಮೂಲಕ ಯೌವನವನ್ನು ಬಹಳಷ್ಟು ವರ್ಷಗಳ ಕಾಲ ಉಳಿಸಿಕೊಳ್ಳಬಹುದು. ತುಪ್ಪ ಚರ್ಮದ ಹೊರಪದರದಿಂದ ಒಳಪದರಕ್ಕೆ ಸೂಕ್ಷ್ಮರಂಧ್ರಗಳ ಮೂಲಕ ಇಳಿದು ಪೋಷಣೆ ನೀಡುವ ಕಾರಣ ಚರ್ಮದ ಜೀವಕೋಶಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಹಾಗೂ ಉತ್ತಮ ಆರೋಗ್ಯದಿಂದಿರುತ್ತವೆ. ಪರಿಣಾಮವಾಗಿ ವೃದಾಪ್ಯ ದೂರಾಗುತ್ತದೆ.

ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳನ್ನು ತೊಲಗಿಸುತ್ತದೆ
ಮಲಗುವ ಮುನ್ನ ನಿಯಮಿತವಾಗಿ ಕಣ್ಣುಗಳ ಕೆಳಗೆ ಕೊಂಚ ತುಪ್ಪವನ್ನು ಹಚ್ಚಿ ಮಸಾಜ್ ಮಾಡುತ್ತಿರುವ ಮೂಲಕ ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳನ್ನು ಮೂಡದಂತೆ ತಡೆಯಬಹುದು ಹಾಗೂ ಕಪ್ಪಗಾಗಿದ್ದರೆ ಸಹಜವರ್ಣ ಪಡೆಯಲು ನೆರವಾಗುತ್ತದೆ. ಅಷ್ಟೇ ಅಲ್ಲ ಕಣ್ಣುಗಳ ಕೆಳಭಾಗ ಚೀಲದಂತೆ ಉಬ್ಬಿಕೊಂಡಿರುವುದನ್ನೂ ನಿವಾರಿಸುತ್ತದೆ ಹಾಗೂ ಸುಸ್ತಾಗಿದ್ದ ಕಣ್ಣುಗಳಿಗೆ ಪುನಃಶ್ಚೇತನ ನೀಡುತ್ತದೆ. ಸಾಮಾನ್ಯವಾಗಿ ಅತಿ ಸೂಕ್ಷ್ಮವಾದ ಚರ್ಮ ಹೊಂದಿರುವ ಕಣ್ಣುಗಳ ಕಳಭಾಗವನ್ನು ತುಪ್ಪ ಸಮರ್ಥವಾಗಿ ಪೋಷಿಸುತ್ತದೆ.

ಕೂದಲ ತುದಿ ಸೀಳಿರುವುದನ್ನು ದುರಸ್ತಿಗೊಳಿಸುತ್ತದೆ
ಸಾಮಾನ್ಯವಾಗಿ ಪೋಷಣೆಯ ಕೊರತೆ ಮತ್ತು ಒಣಚರ್ಮ ಕೂದಲ ತುದಿಗಳನ್ನು ಸೀಳುವಂತೆ ಮಾಡುತ್ತದೆ. ತುಪ್ಪದ ಬಳಕೆಯಿಂದ ಈ ತೊಂದರೆಯನ್ನು ನಿವಾರಿಸಬಹುದು. ಇದಕ್ಕಾಗಿ ಕೂದಲ ತುದಿಗಳಿಗೆ ಕೊಂಚ ತುಪ್ಪವನ್ನು ಹಚ್ಚಿ ಒಂದು ಘಂಟೆಯ ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಿ.

ಕೂದಲನ್ನು ಸಿಕ್ಕುರಹಿತವಾಗಿಸುತ್ತದೆ
ಉತ್ತಮ ಪೋಷಣೆ ಇಲ್ಲದ ಕೂದಲು ಗುಂಗುರಾಗಿ ಸಿಕ್ಕು ಸಿಕ್ಕಾಗಿದ್ದು ಬಾಚಣಿಗೆಯಲ್ಲಿ ಸರಿಯಾಗಿ ಬಾಚಲು ತೊಡಕಾಗುತ್ತದೆ. ಆದರೆ ತುಪ್ಪದ ಬಳಕೆಯಿಂದ ಕೂದಲು ಸುಲಭವಾಗಿ ಸಿಕ್ಕುಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಇದಕ್ಕಾಗಿ ತುಪ್ಪ ಮತ್ತು ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ಕೊಂಚ ಬಿಸಿಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ ಕೊಂಚ ಹೊತ್ತಿನ ಬಳಿಕ ಸೌಮ್ಯ ಶಾಂಪೂ ಮತ್ತು ಉಗುರುಬೆಚ್ಚನೆಯ ನೀರನ್ನು ಬಳಸಿ ತೊಳೆದುಕೊಳ್ಳಿ. ಬಳಿಕ ಕೂದಲನ್ನು ಬಾಚಿದರೆ ಇದು ಎಷ್ಟೇ ಸಿಕ್ಕಾಗಿದ್ದರೂ ಸುಲಭವಾಗಿ ಬಾಚಲು ಸಾಧ್ಯವಾಗುತ್ತದೆ ಹಾಗೂ ಕೇಶಸೌಂದರ್ಯವನ್ನು ಹೆಚ್ಚಿಸಲು ನೆರವಾಗುತ್ತದೆ.



Click it and Unblock the Notifications