Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರತಿ ರಾತ್ರಿ ನೀವು ಪಾಲಿಸಬೇಕಾದಂತಹ ಟಾಪ್ 9 ಸೌಂದರ್ಯವರ್ಧಕ ಹವ್ಯಾಸಗಳು
ನಿಮ್ಮ ದೇಹವು ರಾತ್ರಿ ಮಲಗಿರುವಾಗಲು ಸಹ ತನ್ನ ಕಾರ್ಯದಲ್ಲಿ ನಿರತವಾಗಿರುತ್ತದೆ. ಬೆಳಗ್ಗೆ ನಿಮ್ಮ ದಿನ ಆಹ್ಲಾದಕರವಾಗಿ ಮತ್ತು ಅಂದವಾಗಿ ಆರಂಭಗೊಳ್ಳಬೇಕೆಂದರೆ ಇಲ್ಲಿ ನಾವು ನಿಮಗಾಗಿ ನೀಡಿರುವ ಯಾವುದಾದರು ಅಥವಾ ಎಲ್ಲಾ ಸಲಹೆಗಳನ್ನು ಪಾಲಿಸಿ.
ನಿಮ್ಮ ಮುಖದಲ್ಲಿ ಉಳಿದಿರುವ ಮಸ್ಕರ, ಲಿಪ್ ಕಲರ್ ಪ್ರತಿಯೊಂದನ್ನು ಮಲಗುವ ಮುನ್ನ ತೆಗೆಯಿರಿ. ಇವು ನಿಮ್ಮ ಮುಖದಲ್ಲಿನ ರಂಧ್ರಗಳನ್ನು ಅಂದರೆ ಕೋಶಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ನಿಮ್ಮ ಕಣ್ಣುಗಳನ್ನು ಅಳಿದುಳಿದ ಮೇಕಪ್ ಕಸದಿಂದ ರಕ್ಷಿಸುತ್ತದೆ. ಬನ್ನಿ ಇಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸಿ.

ನಿಮ್ಮ ಮೇಕಪನ್ನು ತೆಗೆಯಿರಿ
ನಿಜವಾಗಿ ಹೇಳಬೇಕೆಂದರೆ, ಹಾಸಿಗೆಯಿಂದ ನೀವು ಅತ್ಯಂತ ಲವಲವಿಕೆಯಿಂದ ಏಳಬೇಕೆಂದರೆ ಮಲಗುವ ಮುನ್ನ ನಿಮ್ಮ ಮೇಕಪನ್ನು ಒಂದು ಚೂರು ಬಿಡದಂತೆ ತೆಗೆಯಬೇಕು, ಎಂದು beautyforreal.comನ ಸಂಸ್ಥಾಪಕಿ ಹಾಗು ಮಾಲೀಕಳಾದ ಲೆಸ್ಲೀ ಮುನ್ಸೆಲ್ ಹೇಳುತ್ತಾರೆ. ಅಂದರೆ ನಿಮ್ಮ ಮುಖದಲ್ಲಿ ಉಳಿದಿರುವ ಮಸ್ಕರ, ಲಿಪ್ ಕಲರ್ ಪ್ರತಿಯೊಂದನ್ನು ಮಲಗುವ ಮುನ್ನ ತೆಗೆಯಿರಿ. ಇವು ನಿಮ್ಮ ಮುಖದಲ್ಲಿನ ರಂಧ್ರಗಳನ್ನು ಅಂದರೆ ಕೋಶಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ನಿಮ್ಮ ಕಣ್ಣುಗಳನ್ನು ಅಳಿದುಳಿದ ಮೇಕಪ್ ಕಸದಿಂದ ರಕ್ಷಿಸುತ್ತದೆ.

ಎರಡು ತಲೆದಿಂಬುಗಳನ್ನು ಬಳಸಿ
ನಿಮ್ಮ ಮುಖದಲ್ಲಿ ಬರುವ ಬೊಜ್ಜನ್ನು ನಿವಾರಿಸಲು ಮಲಗುವಾಗ ಎರಡು ತಲೆದಿಂಬನ್ನು ನಿಮ್ಮ ತಲೆ ಕೆಳಗೆ ಇಟ್ಟು ಮಲಗುವುದನ್ನು ಅಭ್ಯಾಸ ಮಾಡಿ. ನಿಮಗೆ ಬೇಕಾದಲ್ಲಿ ನಿಮ್ಮ ಹಾಸಿಗೆಯಲ್ಲಿ ತಲೆ ಇಡುವ ಭಾಗದ ಕೆಳಗೆ 2-4 ಇಂಚಿನ ಮರದ ಹಲಗೆಯನ್ನು ಇಡಬಹುದು. ಹೀಗೆ ಮಾಡುವುದರಿಂದ " ಈ ಬಾರಿ ಮಲಗುವಾಗ ಗುರುತ್ವಾಕರ್ಷಣೆಯಿಂದಾಗಿ ನಿಮ್ಮ ಕಣ್ಣಿನ ಕೆಳಗೆ ಬಿಳಿ ದ್ರವ ಮತ್ತು ರಕ್ತವು ಶೇಖರಣೆಯಾಗುವುದು ತಪ್ಪುತ್ತದೆ". ಎಂದು ಸ್ಕಿನ್ನ್ ಕಾಸ್ಮೆಟಿಕ್ಸ್‌ನ ಸಂಸ್ಥಾಪಕರಾದ ಹಾಗು ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಆಗಿರುವ ಡಿಮಿಟ್ರಿ ಜೇಮ್ಸ್ ಅಭಿಪ್ರಾಯಪಡುತ್ತಾರೆ.

ಪ್ಯೂರಿಫೈಯಿಂಗ್ ಮಾಸ್ಕ್‌ನಿಂದ ಕಲೆಗಳಿಗಾಗಿ ಚಿಕಿತ್ಸೆ ಪಡೆಯಿರಿ
ನೀವು ಇದನ್ನು ಮೊಡವೆ ಅಥವಾ ಕೆಂಪು ಮೊಡವೆಗಳನ್ನು (ರೋಸಾಸಿಯಾ ಪಿಂಪಲ್ಸ್) ನಿವಾರಿಸಿಕೊಳ್ಳಲು ಬಳಸಬಹುದು. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ರಾತ್ರಿಯೆಲ್ಲ ಬಿಟ್ಟು ಬಿಡಿ ಎಂದು ಚರ್ಮ ರೋಗ ತಙ್ಞರಾದ ಡೈಯ ಡೆ ಫಿಯೊರಿ, ಎಂಡಿ ಅವರು ಹೇಳುತ್ತಾರೆ. ಇವರು ಆಸ್ಟ್ರೇಲಿಯಾದ ಮೆಲ್‍ಬೋರ್ನ್‌ನಲ್ಲಿ ರೋಸಾಸಿಯಾ ಚಿಕಿತ್ಸೆಯನ್ನು ನೀಡುವ ಕ್ಲಿನಿಕ್ ನಡೆಸುತ್ತಿದ್ದಾರೆ. ಮಾಸ್ಕ್ ತ್ವಚೆಯ ಸಂಪರ್ಕಕ್ಕೆ ಹೆಚ್ಚು ಬಂದಷ್ಟು ಅತ್ಯುತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು.

ಹ್ಯುಮಿಡಿಫೈಯರ್ ಬಳಸಿ
ನಿಮ್ಮ ತ್ವಚೆಗೆ ಬಳಸುವ ಮೊಯಿಶ್ಚರೈಸರ್ ಜೊತೆಗೆ ನಿಮ್ಮ ಕೋಣೆಯಲ್ಲಿರುವ ಹ್ಯುಮಿಡಿಫೈಯರ್ ಎರಡೂ ಸೇರಿ ನಿಮ್ಮ ತ್ವಚೆಗೆ ಅಗತ್ಯವಾದ ನೀರಿನಂಶವನ್ನು ಒದಗಿಸುತ್ತವೆ. ಕೊಬ್ಬು ತುಂಬಿದ ತ್ವಚೆಯು ಅಲರ್ಜಿಗಳಿಗೆ ಮತ್ತು ಇನ್ನಿತರ ತ್ವಚೆಯ ತೊಂದರೆಗಳಿಗೆ ಬೇಗ ಗುರಿಯಾಗುತ್ತದೆ. ಜೊತೆಗೆ ಒಣ ತ್ವಚೆಯಂತೆ ಕಾಣಲು ಆರಂಭಿಸುತ್ತದೆ. ಆದ್ದರಿಂದಾಗಿ ರಾತ್ರಿಯ ಸಮಯದಲ್ಲಿಯೇ ನಿಮ್ಮ ತ್ವಚೆಯ ನೀರಿನಂಶಕ್ಕೆ ನೀವು ದಾರಿ ಮಾಡಿಕೊಡುವುದರಿಂದಾಗಿ, ಬೆಳಗ್ಗೆ ಬಳಸಬಹುದಾದ ಮೊಯಿಶ್ಚರೈಸರ್ ಬಳಕೆಯನ್ನು ಕಡಿಮೆ ಮಾಡಬಹುದು. ಕಡು ಮೊಯಿಶ್ಚರೈಸರನ್ನು ಸನ್‍ಸ್ಕ್ರೀನ್ ಅಥವಾ ಮೇಕಪ್ ಜೊತೆಗೆ ಬಳಸಲು ಆಗುವುದಿಲ್ಲ. ಹಾಗಾಗಿ ತೆಳ್ಳಗೆ ಇರುವ ಮೊಯಿಶ್ಚರೈಸರ್ ಬಳಸಿ.

ಹ್ಯಾಂಡ್ ಕ್ರೀಮ್ ಬಳಸಿ
ನಿಮ್ಮ ಕೈಗಳಿಗೆ ಗಡುಸಾದ, ಬಣ್ಣರಹಿತವಾದ ಮತ್ತು ಸ್ವಲ್ಪ ಜಿಡ್ಡಿನಿಂದ ಕೂಡಿದ ಹ್ಯಾಂಡ್ ಕ್ರೀಮ್ ಬಳಸಿ. ಇದು ನಿಮ್ಮ ಕೈ ಮತ್ತು ಕೈ ಬೆರಳುಗಳನ್ನು ಬೆಳಗ್ಗೆ ಸುಂದರವಾಗಿ ಕಾಣುವಂತೆ ಮಾಡುತ್ತವೆ. " ದಿನದ ಸಮಯದಲ್ಲಿ ಕೈಗಳು ಒಣ ಹವೆ ಮತ್ತು ಅಧಿಕವಾಗಿ ಕೈ ತೊಳೆಯುವ ಅಭ್ಯಾಸದಿಂದಾಗಿ ಒಣಗಳು ಶುರುವಾಗುತ್ತದೆ. ನಮ್ಮಲ್ಲಿ ಕೆಲವರು ಪ್ರತಿ ಬಾರಿ ಕೈತೊಳೆದಾಗಲು ಹ್ಯಾಂಡ್ ಕ್ರೀಮ್ ಬಳಸುವ ಅಭ್ಯಾಸವನ್ನು ಇರಿಸಿಕೊಂಡಿರುತ್ತಾರೆ." ಎಂದು ಆರ್ಟ್ ಆಫ್ ಡರ್ಮಟಾಲಜಿಯ ಸ್ಥಾಪಕರು ಮತ್ತು ಚರ್ಮ ರೋಗ ಮಂಡಳಿಯ ಪ್ರಮಾಣ ಪತ್ರವನ್ನು ಪಡೆದಿರುವ ಜೆಸ್ಸಿಕಾ ಕ್ರಂಟ್, ಎಂಡಿ ಯವರು ಅಭಿಪ್ರಾಯಪಡುತ್ತಾರೆ. " ರಾತ್ರಿಯು ಬೆಳಗ್ಗೆಯಾಗಿರುವ ಹಾನಿಗಳನ್ನು ಸರಿಪಡಿಸಿಕೊಳ್ಳಲು ಇರುವ ಉತ್ತಮ ಸಮಯವಾಗಿದೆ. ಇದರಿಂದ ನಮ್ಮ ಉಗುರು ಮತ್ತು ಕ್ಯುಟಿಕಲ್‍ಗಳ ಆರೋಗ್ಯವು ಸಹ ಸುಧಾರಿಸುತ್ತದೆ. ಇದರಿಂದಾಗಿ ಅವು ಉದ್ದವಾಗಿ ಬೆಳೆಯುವುದರ ಜೊತೆಗೆ, ಮುರಿಯುವ ಮತ್ತು ಒಡೆಯುವ ಸಮಸ್ಯೆ ಕಡಿಮೆಯಾಗುತ್ತದೆ."

ರೇಷ್ಮೆಯ ತಲೆದಿಂಬಿನ ಮೇಲೆ ಮಲಗಿ
ನಿಮ್ಮ ಕೂದಲನ್ನು ಯಾವಾಗಲು ಸಿಲಿಕಾನ್ ಮುಕ್ತವಾಗಿರುವ ಶಾಂಪೂವಿನಿಂದ ತೊಳೆಯಿರಿ ಮತ್ತು ರೇಷ್ಮೆಯ ತಲೆದಿಂಬನ್ನು ಬಳಸಿ. ರೇಷ್ಮೆ ಅಥವಾ ಸ್ಯಾಟಿನ್ ತಲೆದಿಂಬುಗಳು ನಿಮ್ಮ ಕೂದಲಿನ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತವೆ. ಬಹುತೇಕ ಹತ್ತಿಯ ತಲೆದಿಂಬುಗಳಲ್ಲಿರುವ ನಾರುಗಳು ನಿಮ್ಮ ಕೂದಲಿನ ಬುಡಕ್ಕೆ ಹಾನಿಯನ್ನುಂಟು ಮಾಡುತ್ತವೆ. ಹಾಗೆಂದು ರೇಷ್ಮೆಯ ತಲೆದಿಂಬಿಗೆ ಅಂಟಿಕೊಳ್ಳಬೇಡಿ. ದಿನ ಬಿಟ್ಟು ದಿನ ಹತ್ತಿಯ ಮತ್ತು ರೇಷ್ಮೆಯ ತಲೆದಿಂಬನ್ನು ಬಳಸುವುದರಿಂದ ಮತ್ತಷ್ಟು ಬೆಳವಣಿಗೆಯನ್ನು ಕಾಣಬಹುದು.

ನಿಮ್ಮ ಕೂದಲನ್ನು ಹಿಂದೆ ಕಟ್ಟಿ
ನಿಮ್ಮ ಕೂದಲು ಎಣ್ಣೆ ಮತ್ತು ಧೂಳನ್ನು ಹೊಂದಿರುತ್ತದೆ. ಇದು ನಿಮ್ಮ ತಲೆದಿಂಬು ಮತ್ತು ಮುಖದ ಮೇಲೆ ಬಂದು ಒಡೆಯುವ ಸಮಸ್ಯೆಯನ್ನುಂಟು ಮಾಡಬಹುದು. ಅದಕ್ಕಾಗಿ ನೀವು ಮಲಗುವಾಗ ನಿಮ್ಮ ಕೂದಲಿಗೆ ಪಿನ್ ಹಾಕಿ ಅಥವಾ ಕೊಂಡೆ ರೀತಿಯಲ್ಲಿ ಕಟ್ಟಿ ಮುಖದ ಮೇಲೆ ಬರದಂತೆ ತಡೆಯಿರಿ.

ದಿನಲೂ ಎಂಟು ಗಂಟೆ ನಿದ್ದೆ ಮಾಡಿ
ನೀವು ಅಂದವಾಗಿ ಕಾಣಬೇಕು ಎಂದರೆ ಎಂಟು ಗಂಟೆಗಳ ಕಾಲ ನಿದ್ದೆಯನ್ನು ಮಾಡಬೇಕು. " ನಿದ್ದೆಯು ಕಣ್ಣಿನ ಸುತ್ತ ಬರುವ ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಹೇಗೆಂದರೆ ನಿದ್ದೆಯು ನಿಮ್ಮ ದೇಹದ ರಕ್ತ ಪರಿಚಲನೆಯನ್ನು ಸುಧಾರಿಸಿ, ಕಣ್ಣಿನ ಸುತ್ತ ನಿಂತಿರುವ ರಕ್ತವನ್ನು ಚಲಿಸುವಂತೆ ಮಾಡುತ್ತದೆ. ಹಾಗಾಗಿ ಈ ಸಮಸ್ಯೆ ಚೆನ್ನಾಗಿ ನಿದ್ದೆ ಮಾಡುವವರಲ್ಲಿ ಬರುವುದಿಲ್ಲ," ಎಂದು ಸೆಲೆಬ್ರಿಟಿ ಮೇಕಪ್ ತಙ್ಞರಾದ ರೀನೀ ರೌಲಿಯೌರವರು ಅಭಿಪ್ರಾಯಪಡುತ್ತಾರೆ. ನಿದ್ರಾಹೀನತೆಯು ಕಣ್ಣಿನ ಸುತ್ತ ಕಲೆಗಳನ್ನು ಉಂಟು ಮಾಡುವ ಕಾರಣವಾಗಿದೆ. ಇದು ಕಣ್ಣುಗಳು ನಿಸ್ತೇಜಗೊಂಡಂತೆ ಮತ್ತು ಸುಸ್ತಾದಂತೆ ಕಾಣುವಂತೆ ಮಾಡುತ್ತದೆ.

ಕಣ್ಣಿನ ಕ್ರೀಮ್ ಬಳಸಿ
ಸಂಶಯವೇ ಇಲ್ಲ, ಈ ಮಾತನ್ನು ನೀವು ಲಕ್ಷ ಬಾರಿ ಕೇಳಿರುತ್ತೀರಿ. ಅಂದರೆ ಕಣ್ಣಿನ ಕ್ರೀಮ್ ಅಷ್ಟು ಪ್ರಮುಖವಾದ ಅಂಶವಾಗಿದೆ. ಕಣ್ಣಿನ ಕ್ರೀಮ್ ಮತ್ತು ಉತ್ತಮ ಮೊಯಿಶ್ಚರೈಸರನ್ನು ರಾತ್ರಿಯ ಹೊತ್ತು ಬಳಸಿ ( ಒಂದು ವೇಳೆ ನೀವಿನ್ನು 20 ವರ್ಷದವರಾಗಿದ್ದರು ಸಹ). ಬೆಳಗ್ಗೆ ಎದ್ದು ನೋಡಿದಾಗ ನಿಮ್ಮ ತ್ವಚೆಯು ನೀರಿನಂಶವನ್ನು ಹೊಂದಿ ಕಳೆ ಕಳೆಯಾಡುತ್ತಿರುತ್ತದೆ.



Click it and Unblock the Notifications