Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಸುದೃಢ ಉಗುರುಗಳಿಗಾಗಿ 6 ಅತ್ಯುತ್ತಮ ಆಹಾರಗಳು
ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ವೈದ್ಯರು ಕಣ್ಣು, ನಾಲಿಗೆಯನ್ನು ಗಮನವಿಟ್ಟು ನೋಡಿದಂತೆಯೇ ಉಗುರುಗಳನ್ನೂ ಗಮನವಿಟ್ಟು ನೋಡಿ ದೇಹದಲ್ಲಿ ಯಾವ ಪೋಷಕಾಂಶ ಅಥವಾ ಖನಿಜ ಕಡಿಮೆಯಾಗಿದೆ ಎಂದು ಗುರುತಿಸಿರುವುದು ನಿಮಗೆ ನೆನಪಿರಬಹುದು. ಹಾಗಾಗಿ ಉಗುರುಗಳು ದೇಹದ ಆರೋಗ್ಯವನ್ನು ತಿಳಿಸುವ ಮಾಪಕವೂ ಹೌದು. ಕಳೆಗುಂದಿದ ಉಗುರುಗಳು ದೇಹದಲ್ಲಿ ಪೋಷಕಾಂಶದ ಕೊರತೆ, ವಿಟಮಿನ್‌ಗಳ ಕೊರತೆ ಅಥವಾ ಏರುಪೇರು, ವಿವಿಧ ಚರ್ಮದ ವ್ಯಾಧಿಗಳು, ಮಾದಕ ದ್ರವ್ಯಗಳ ಪ್ರಭಾವ ಮೊದಲಾದ ಸೂಚನೆಗಳನ್ನು ನೀಡಬಲ್ಲವು.
ಬ್ಯೂಟಿ ಪಾರ್ಲರುಗಳಲ್ಲಿ ಮ್ಯಾನಿಕ್ಯೂರ್ ಎಂದೇ ಪ್ರಸಿದ್ಧವಾಗಿರುವ ಉಗುರಿನ ಆರೈಕೆ ಕೊಂಚ ಬೆಲೆಬಾಳುವ ಸೇವೆಯಾಗಿದ್ದು ನಿಜಕ್ಕೂ ಈ ಸೇವೆ ಉತ್ತಮ ಪರಿಣಾಮವನ್ನೇ ನೀಡುತ್ತದೆ. ಆದರೆ ದುಬಾರಿಯಾದ ಈ ಸೇವೆಯನ್ನು ಎಲ್ಲರೂ ಪಡೆಯಲು ಸಾಧ್ಯವಿಲ್ಲ. ಆದರೆ ಕೆಲವರು ಕೃತಕ ಬಣ್ಣಗಳಿಂದ ಸ್ವತಃ ಉಗುರುಗಳಿಗೆ ಸೌಂದರ್ಯ ನೀಡುವ ನಿಟ್ಟಿನಲ್ಲಿ ಪ್ರಬಲ ರಾಸಾಯನಿಕಗಳಿಗೆ ಅರಿವಿಲ್ಲದೇ ತಮ್ಮ ಉಗುರುಗಳನ್ನು ಒಡ್ಡುತ್ತಾರೆ. ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ತಂಡ ಇಂದು ನಿಮ್ಮ ಉಗುರಿನ ಕಾಳಜಿಯನ್ನು ಹೇಗೆ ಮಾಡಬೇಕು ಹಾಗೂ ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದನ್ನು ನಾವು ವಿವರವಾಗಿ ತಿಳಿಸಲಿರುವೆವು, ಮುಂದೆ ಓದಿ..

ಸಾಲ್ಮನ್ ಮೀನನ್ನು ಮಿತವಾಗಿ ಸೇವಿಸಿ
ಸದೃಢ ಉಗುರುಗಳಿಗಾಗಿ ಸಾಲ್ಮನ್ ಮೀನಿನ ಖಾದ್ಯ ಅತ್ಯುತ್ತಮವಾದ ಆಹಾರವಾಗಿದೆ. ಇದರಲಿರುವ ಒಮೆಗಾ-3 ಮತ್ತು ಕೊಬ್ಬಿನ ಆಮ್ಲ (fatty acid) ನಮ್ಮ ಉಗುರುಗಳಲ್ಲಿರುವ ಕೆರಾಟಿನ್ ಎಂಬ ವಸ್ತುವನ್ನು ಬಲಪಡಿಸುತ್ತದೆ. ಕೂದಲ ಆರೈಕೆಗೂ ಈ ಖಾದ್ಯ ಸಹಕಾರಿಯಾಗಿದೆ. ವಾರದಲ್ಲಿ ಎರಡರಿಂದ ಮೂರು ಹೊತ್ತು ಈ ಮೀನಿನ ಖಾದ್ಯವನ್ನು ಸೇವಿಸುವುದರ ಮೂಲಕ ಉಗುರುಗಳು ಮತ್ತು ಕೂದಲು ಉತ್ತಮ ಆರೈಕೆಯನ್ನು ಪಡೆಯುತ್ತವೆ. ಉಗುರುಗಳ ಬಿಧುರತೆ ಕಡಿಮೆಯಾಗಿ ಹೊಳಪು ಪಡೆಯುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಈ ಮೀನು ತಿನ್ನುವುದರಿಂದ ಕೆರಾಟಿನ್ ಅಗತ್ಯಕ್ಕಿಂತಲೂ ಹೆಚ್ಚು ಪೂರೈಕೆಯಾಗಿ Keratosis ಎಂಬ ಸ್ಥಿತಿಗೆ ಕಾರಣವಾಗುತ್ತದೆ. ಉಗುರುಗಳ ಮಧ್ಯದಲ್ಲಿ ಉಬ್ಬುವಿಕೆ, ಚರ್ಮದಲ್ಲಿ ತುರಿಕೆ ಮತ್ತು ಚಿಕ್ಕ ನಾಣ್ಯದ ಗಾತ್ರದ ಕಲೆಗಳು ಮೂಡುತ್ತವೆ.

ಗಾಢವಾದ ಹಸಿರು ಬಣ್ಣದ ಎಲೆಗಳನ್ನು ಹೆಚ್ಚು ಸೇವಿಸಿ
ಉಗುರುಗಳ ಆರೈಕೆಗೆ ವಿಟಮಿನ್ ಎ, ಬಿ ಮತ್ತು ಸಿ ಗಳ ಅಗತ್ಯವಿದೆ. ಇವು ಗಾಢ ಹಸಿರು ಬಣ್ಣದ ಎಲೆಗಳಾದ ಬಸಲೆ, ಹರಿವೆಸೊಪ್ಪು, ಪಾಲಕ್ ಮೊದಲಾದ ಸೊಪ್ಪುಗಳಲ್ಲಿ ಹೇರಳವಾಗಿರುತ್ತವೆ. ಈ ಸೊಪ್ಪುಗಳನ್ನು ಬೇಯಿಸಿ ತಯಾರಿಸಿದ ಖಾದ್ಯವನ್ನು ಸೇವಿಸುವ ಮೂಲಕ ಉಗುರು ಮತ್ತು ಕೂದಲಿಗೆ ಉತ್ತಮ ಆರೈಕೆ ನೀಡಬಹುದು. ವಿಟಮಿನ್ ಸಿ ಸೇವನೆಯಿಂದ ದೇಹದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಈ ಕಬ್ಬಿಣ ಉಗುರುಗಳ ಬುಡ ಮತ್ತು ತಲೆಗೂದಲ ಬುಡವನ್ನು ಸದೃಢಗೊಳಿಸುತ್ತದೆ.

ಬೀನ್ಸ್ ಅಥವಾ ಅವರೆಯನ್ನು ಹೆಚ್ಚು ತಿನ್ನಿ
ಅವರೆ, ಚೌಳೀಕಾಯಿ ಮೊದಲಾದ ತರಕಾರಿಗಳಲ್ಲಿ (ಬೀನ್ಸ್) ಬಯೋಟಿನ್ (biotin) ಎಂಬ ಅಂಶ ಹೆಚ್ಚಾಗಿರುತ್ತದೆ. ಇದು ಉಗುರು ಮತ್ತು ಕೂದಲುಗಳ ಬೆಳವಣಿಗೆಗೆ ಪೂರಕವಾಗಿದೆ. ಜೊತೆಗೆ ಬೀನ್ಸ್ ನಲ್ಲಿರುವ ಕಬ್ಬಿಣ ಮತ್ತು ಪ್ರೋಟೀನ್‌ಗಳು ಉಗುರು ಮತ್ತು ಕೂದಲುಗಳನ್ನು ದೃಢವಾಗಿಸುತ್ತವೆ. ಹಾಲು ಮತ್ತು ಮೊಟ್ಟೆಯಲ್ಲಿ ಸಹಾ ಬಯೋಟಿನ್ ಅಂಶ ಹೇರಳವಾಗಿರುತ್ತದೆ.

ಇಡಿಯ ಕಾಳುಗಳು
ಉಗುರುಗಳ ಜೊತೆಗೆ ದೇಹದ ಆರೋಗ್ಯ ಕಾಪಾಡಲು ಫ್ರೀ ರಾಡಿಕಲ್ (free radical) ಎಂಬ ವಿಷವಸ್ತುವಿನೊಡನೆ ನಮ್ಮ ದೇಹದ ರೋಗನಿರೋಧಕ ಶಕ್ತಿ ಸೆಣೆಸಬೇಕಾಗುತ್ತದೆ. ಈ ವಿಷವಸ್ತುಗಳು ಉಗುರುಗಳಲ್ಲಿ ಬಿಧುರತೆ ಮತ್ತು ಕೂದಲುಗಳನ್ನು ಉದುರಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಓಟ್ಸ್, ಕುಚ್ಚಿಗೆ ಅಕ್ಕಿ, ಮೊಳಕೆ ಬರಿಸಿದ ಇಡಿಯ ಕಾಳುಗಳಲ್ಲಿ ಹಲವು ಆಂಟಿ ಆಕ್ಸಿಡೆಂಟುಗಳಿದ್ದು ಈ ಫ್ರೀ ರಾಡಿಕಲ್ ಗಳ ಜೊತೆಗೆ ಸೆಣೆಸುತ್ತವೆ. ಇವುಗಳಲ್ಲಿರುವ ಸಿಲಿಕಾ ಎಂಬ ವಸ್ತು ಕೂಡ ಉಗುರುಗಳ ಆರೋಗ್ಯಕ್ಕೆ ಪೂರಕವಾಗಿದೆ.

ಹೆಚ್ಚು ನೀರು ಕುಡಿಯಿರಿ
ದೇಹದ ಒಟ್ಟಾರೆ ಆರೋಗ್ಯದೊಂದಿಗೆ ಉಗುರು ಮತ್ತು ಕೂದಲುಗಳೂ ಉತ್ತಮ ಆರೋಗ್ಯ ಪಡೆಯುತ್ತವೆ. ದಿನಕ್ಕೆ ಅಗತ್ಯವಾದ ಕನಿಷ್ಟ ಎಂಟು ಲೋಟಗಳಷ್ಟು ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಅಂಶ ಹೆಚ್ಚಿ ಆರೋಗ್ಯ ಉತ್ತಮಗೊಳ್ಳುತ್ತದೆ.

ಬಾದಾಮಿಯನ್ನು ಸೇವಿಸಿ
ಒಣ ಬಾದಾಮಿಯಲ್ಲಿ ಪ್ರೋಟೀನ್ ಮತ್ತು ಮೆಗ್ನೀಶಿಯಂ ಅಂಶ ಹೆಚ್ಚಾಗಿದೆ. ಕೂದಲು ಮತ್ತು ಉಗುರುಗಳ ಆರೈಕೆಗಾಗಿ ಮೆಗ್ನೀಶಿಯಂ ಅಗತ್ಯವಿದೆ. ಉಗುರುಗಳಲ್ಲಿ ಒಂದು ವೇಳೆ ಬುಡದಿಂದ ತುದಿಯವರೆಗೆ ನೇರವಾದ ಗೆರೆಗಳು ಪಕ್ಕಪಕ್ಕದಲ್ಲಿ ಮೂಡಿದ್ದರೆ ಅದು ಮೆಗ್ನೀಶಿಯಂ ಕೊರತೆಯನ್ನು ಸೂಚಿಸುತ್ತದೆ. ಪ್ರತಿದಿನ ನಾಲ್ಕರಿಂದ ಐದು ಬಾದಾಮಿಯನ್ನು ಹಾಗೇ ಅಥವಾ ನೀರಿನಲ್ಲಿ ಸುಮಾರು ಒಂದು ಘಂಟೆ ಮುಳುಗಿಸಿಟ್ಟು ಬಳಿಕ ಸೇವಿಸುವುದರಿಂದ ಅಗತ್ಯವಾದ ಮೆಗ್ನೀಶಿಯಂ ಅನ್ನು ಪಡೆಯಬಹುದು. ಸೋಯಾ ಅವರೆ, ಹಸಿರು ಸೊಪ್ಪುಗಳಲ್ಲಿಯೂ ಹೆಚ್ಚಿನ ಮೆಗ್ನೀಶಿಯಂ ಇರುತ್ತದೆ. ಈ ಆಹಾರಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಕೂದಲು ಮತ್ತು ಉಗುರುಗಳಿಗೆ ಉತ್ತಮ ಆರೈಕೆಯನ್ನು ಪಡೆಯಬಹುದು.



Click it and Unblock the Notifications