Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ಲಾಸ್ಟಿಕ್ ಸರ್ಜರಿ ಮಾಡಿಸುತ್ತೀರಾ? ಎಚ್ಚರ!
ಸುಂದರವಾಗಿ ಕಾಣಬೇಕು ಎಂಬುದು ಪ್ರತಿಯೊಬ್ಬರ ಆಸೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗದಿದ್ದಾಗ ಕೊರಗಬೇಕಾಗಿಲ್ಲ. ಈಗ ಕಾಲ ಬದಲಾಗಿದೆ. ಕೈಯಲ್ಲಿ ಹಣವೊಂದಿದ್ದರೆ ನಿಮಗೆ ಬೇಕಾದ ಹಾಗೆ ನಿಮ್ಮ ಆಕಾರವನ್ನು ಬದಲಾಯಿಸಬಹುದು. ಆದ್ದರಿಂದಲೇ ಕಾಸ್ಮೆಟಿಕ್ ಸರ್ಜರಿ ದಿನದಿಂದ ದಿನಕ್ಕೆ ಪ್ರಸಿದ್ಧಿಯನ್ನು ಪಡೆಯುತ್ತಿದೆ.
ಸಾಮಾನ್ಯ ಜನರು ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕೆಂದು ಯೋಚಿಸುವುದಕ್ಕೆ ಸ್ಪೂರ್ತಿ ಸೆಲೆಬ್ರಿಟಿಗಳೆಂದರೆ ತಪ್ಪಾಗಲಾರದು. ಕಾಸ್ಮೆಟಿಕ್ ಸರ್ಜರಿ ಮೂಲಕ ವಯಸ್ಸನ್ನು ಮರೆಮಾಚಿ ಹದಿನೆಂಟರ ಯೌವನದಿಂದ ಮಿಂಚುತ್ತಿರುವ ನಟಿಯರನ್ನು ನೋಡುವಾಗ, ಕೈ ತುಂಬಾ ದುಡ್ಡಿರುವವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಅಂದ ಹೆಚ್ಚಿಸಕೊಳ್ಳಬೇಕೆಂದು ಬಯಸುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಈ ಪ್ಲಾಸ್ಟಿಕ್ ಸರ್ಜರಿ ಅನ್ನುವುದು ಕೆಲವೊಮ್ಮೆ ವರದಾನವಾಗಿದೆ. ಅಪಘಾತದಲ್ಲಿ ಮುಖದ ಆಕಾರ ಬದಲಾಗಿದ್ದರೆ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿ, ಅಂದವಾದ ಮುಖ ಪಡೆಯಬಹುದು, ಇದರಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು.
ಆದರೆ ಈ ಚಿಕಿತ್ಸೆ ಮಾಡಿಕೊಳ್ಳುವ ಮೊದಲು ಮತ್ತು ನಂತರ ಇದರ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ. ಆದ್ದರಿಂದ ಚಿಕಿತ್ಸೆಯ ಮೊದಲು ಮತ್ತು ನಂತರ ತೆಗೆದುಕೊಳ್ಳಬೇಕಾದ ಕೆಲ ಮುನ್ನೆಚ್ಚರಿಕೆಯ ಬಗ್ಗೆಟಿಪ್ಸ್ ನೀಡಿದ್ದೇವೆ, ನೋಡಿ:

1.ಕಾಸ್ಮೆಟಿಕ್ ಉಪಯೋಗಿಸಬೇಡಿ
ಸರ್ಜರಿ ಆದ ನಂತರ ಯಾವುದೇ ರೀತಿಯ ಸೌಂದರ್ಯವರ್ಧಕಗಳನ್ನು ಉಪಯೋಗಿಸಬೇಡಿ.ಇದು ಅಲರ್ಜಿ ಅಥವಾ ಸೋಂಕುಗಳನ್ನು ಉಂಟುಮಾಡಬಹುದು. ಸರ್ಜರಿ ಮಾಡಿಸಿದ ಜಾಗದಲ್ಲಿ ಯಾವುದೇ ರೀತಿ ಕೊಳೆ ಇರದಂತೆ ಸ್ವಚ್ಚವಾಗಿ ಇಟ್ಟುಕೊಂಡಿರಿ. ಸ್ವಚ್ಚವಾದ ನೀರಿನಿಂದ ತೊಳೆಯಿರಿ.

2.ಬಿಸಿಲಿಗೆ ಹೋಗಬಾರದು
ಸೂರ್ಯನ ಕಿರಣಗಳಿಗೆ ಹೆಚ್ಚು ಹೋಗುವಂತಿಲ್ಲ. ಹೊಲಿಗೆ ಹಾಕಿದ ಜಾಗದಲ್ಲಿ ಸೂರ್ಯನ ನೇರಳಾತೀತ ಕಿರಣಗಳು ತಾಗಿದರೆ ಗಾಯ ಮಾಗುವುದು ಕಷ್ಟವಾಗುತ್ತದೆ ಆದ್ದರಿಂದ ಆದಷ್ಟು ಮನೆಯ ಒಳಗೆ ಇರಿ. ಹೊಲಿಗೆ ತೆಗೆದ ನಂತರ ವೈದ್ಯರ ಸಲಹೆಯಂತೆ ಮುಲಾಮುಗಳನ್ನು ಹೆಚ್ಚಿ.

3.ಆರೋಗ್ಯಯುತ ಆಹಾರ ಬಳಸಿ
ಹಾಲು, ಹಣ್ಣುಗಳು ಮತ್ತು ಇತರ ತರಕಾರಿಗಳನ್ನು ಸೇವಿಸಬೇಕು. ಮುಖಕ್ಕೆ ಚಿಕಿತ್ಸೆ ಮಾಡಿಕೊಂಡರೆ ಆಹಾರ ತೆಗೆದುಕೊಳ್ಳಲು ತೊಂದರೆಯಾಗಬಹುದು ಆಗ ಲಿಕ್ವಿಡ್ ಆಹಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಮಧ್ಯಪಾನ ಅಥವಾ ಧೂಮಪಾನ ಮಾಡಬೇಡಿ. ಚಿಕಿತ್ಸೆಯ ಮೊದಲು ಕೂಡ ಧೂಮಪಾನ ಮತ್ತು ಮಧ್ಯಪಾನ ಮಾಡಕೂಡದು.

4.ಔಷಧಿಗಳನ್ನು ತೆಗೆದುಕೊಳ್ಳಬೇಡಿ
ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ರಕ್ತ ಹೆಪ್ಪುಗಟ್ಟುತ್ತದೆ. ಚಿಕಿತ್ಸೆ ತೆಗೆದುಕೊಳ್ಳುವ ಮೊದಲೇ ವ್ಯಕ್ತಿಯು ಹೆಚ್ಚು ಬಲಯುತವಾಗಿ ಇರಬೇಕು.ವೈದ್ಯರ ಸಲಹೆ ತೆಗೆದುಕೊಳ್ಳದೆ ಯಾವುದೇ ಔಷಧಿ ತೆಗೆದುಕೊಂಡರೂ ಹಾನಿಕಾರಕ.

5.ಆಲೋವೆರ ಜ್ಯೂಸ್
ಲೋಳೆಸರ ಔಷಧೀಯ ಗುಣಗಳನ್ನು ಹೊಂದಿದೆ.ಆಲೋವೆರ ತೆಗೆದುಕೊಳ್ಳುವುದರಿಂದ ಬಿರುಕುಗೊಂಡ ಜೀವಕೋಶಗಳನ್ನು ಸೇರಿಸಿ ಚರ್ಮವನ್ನು ಸುಂದರವಾಗಿಸುತ್ತದೆ.ಮುಖದ ಸರ್ಜರಿಯಿಂದ ಚರ್ಮದ ಹೊಳಪು ಮಾಸಿರುತ್ತದೆ.ಆ ಲೋವೆರ ಇದನ್ನು ಮತ್ತೆ ನೀಡಲು ಸಹಕರಿಸುತ್ತದೆ. ಆದರೆ ಇದನ್ನು ಕೂಡ ವೈದ್ಯರ ಸಲಹೆ ಪಡೆದು ಬಳಿಕವಷ್ಟೇ ತೆಗೆದುಕೊಳ್ಳಿ.

6. ವೈದ್ಯರ ಸಲಹೆ ಪಡೆಯಿರಿ
ನೀವು ಸರ್ಜರಿ ಮಾಡಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಮೊದಲು ವೈದ್ಯರ ಬಗ್ಗೆ ಸಂಪೂರ್ಣ ಮಾಹಿತಿ ಅವರ ವಿಶೇಷ ಜ್ಞಾನದ ಬಗ್ಗೆ ತಿಳಿದುಕೊಳ್ಳಿ. ಲಿಪೊಸೆಕ್ಷನ್ ತಜ್ಞ ರಲ್ಲಿ ಹೋಗಿ ಮೂಗಿನ ಚಿಕಿತ್ಸೆ ಮಾಡಿಸಿಕೊಳ್ಳುವುದು ಸೂಕ್ತವಲ್ಲ. ವೈದ್ಯಕೀಯ ಕಾರ್ಯವಿಧಾನಗಳು ಮತ್ತು ಇತಿಹಾಸದ ಬಗ್ಗೆ ಮೊದಲೇ ಚರ್ಚಿಸಿ ತಿಳಿದುಕೊಳ್ಳುವುದು ಉತ್ತಮ.



Click it and Unblock the Notifications