Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮೇಕಪ್ ಬ್ಯೂಟಿ ಹೆಚ್ಚಿಸುವುದಿಲ್ಲ, ಹಾಳು ಮಾಡುತ್ತೆ!
ಇತ್ತೀಚಿನ ದಿನಗಳಲ್ಲಿ ಮೇಕಪ್ ಇಲ್ಲದೆ ಯಾರೂ ಕೂಡ ಹೊರ ಹೊರಡುವುದಿಲ್ಲ, ಯಾವುದೇ ಕಾರ್ಯಕ್ರಮ, ಅಥವಾ ಮದುವೆ ಸಮಾರಂಭಕ್ಕೆ ಹೋಗಬೇಕಾದರೂ ಕೂಡ ಸಾಕಷ್ಟು ಬಾರಿ ಕನ್ನಡಿ ಮುಂದೆ ನಿಂತು ಮೇಕಪ್‌ನ ಮೊರೆಹೋಗುತ್ತಾರೆ, ಅದರಲ್ಲೂ ಹುಡುಗಿಯರಂತೂ ಕೇಳುವುದೇಬೇಡ, ಆದರೆ ಇದರ ಪರಿಣಾಮ ಮಾತ್ರ ನೇರವಾಗಿ ನಿಮ್ಮ ತ್ವಚೆಯ ಮೇಲೆ ಬೀಳುತ್ತದೆ.
ಇಂತಹ ಮೇಕಪ್ ಸಾಕಷ್ಟು ಸಮಯ ಹಚ್ಚಿಕೊಂಡಿರುವುದರಿಂದ ರಾಸಾಯನಿಕ ವಸ್ತುಗಳು ಮುಖವನ್ನು ಹಾಳು ಮಾಡಿಬಿಡುತ್ತವೆ. ಬನ್ನಿ ಮೇಕಪ್ ನಿಂದಾಗುವ ಅಡ್ಡಪರಿಣಾಮಗಳೇನು ಎಂಬುದನ್ನು ನೋಡೋಣ..

ಲಿಪ್‍ಸ್ಟಿಕ್
ಲಿಪ್‍ಸ್ಟಿಕ್‍ಗಳು ನಿಮ್ಮ ಹೊರತುಟಿಯ ತೇವಾಂಶವನ್ನು ಒಣಗಿಸುತ್ತವೆ. ಇದಕ್ಕಿಂತ ತುಟಿಯ ಮುಲಾಮುಗಳು ಒಳ್ಳೆಯದು. ಕೆಲವು ಲಿಪ್‍ಸ್ಟಿಕ್‍ಗಳು ಮತ್ತು ಲಿಪ್ ಗ್ಲಾಸ್ಸಿಗಳು ತುಟಿಯನ್ನು ಅಂದಗೊಳಿಸುವ ಬದಲು, ಅದರಲ್ಲಿರುವ ಎಣ್ಣೆ ಮತ್ತು ರಾಸಾಯನಿಕಗಳು ನಿಮ್ಮ ತುಟಿಯನ್ನು ಹಾಳು ಮಾಡುತ್ತವೆ. ಕೆಲವೊಮ್ಮೆ ಕೆಂಪು ಲಿಪ್‍ಸ್ಟಿಕ್‍ನಲ್ಲಿ ಪಾದರಸವು ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಕಂಡು ಬರುತ್ತದೆ. ಪಾದರಸವನ್ನು ಸೇವಿಸುವುದರಿಂದಾಗಿ ಮೆದುಳಿನ ಮೇಲೆ ಹೊಡೆತ ಬಿದ್ದು, ನಮ್ಮ ವರ್ತನೆಯಲ್ಲಿ ಅಪಸವ್ಯಗಳನ್ನುಂಟು ಮಾಡುತ್ತವೆ.

ಮಾಯಿಶ್ಚರೈಸರ್
ಎಲ್ಲ ಪ್ರಸಿದ್ಧ ಕಂಪೆನಿಗಳ ಮಾಯಿಶ್ಚರೈಸರ್ ತಮ್ಮೊಳಗೆ ಅಧಿಕ ಪ್ರಮಾಣದ ಡಿಟರ್ಜೆಂಟ್ ಮತ್ತು ಡಿಟರ್ಜೆಂಟ್ ಮಾದರಿಯ ರಾಸಾಯನಿಕಗಳನ್ನು ಹೊಂದಿರುತ್ತದೆ. ಇವು ತ್ವಚೆಯನ್ನು ಹಾನಿ ಉಂಟು ಮಾಡಿ, ತ್ವಚೆಯ ನೈಸರ್ಗಿಕ ರಕ್ಷಣಾ ವ್ಯವಸ್ಥೆಯನ್ನು ಹಾಳು ಮಾಡುತ್ತದೆ.

ಬ್ಲೀಚ್ ಕ್ರೀಮ್‍ಗಳು
ಪ್ರಬಲವಾದ ರಾಸಾಯನಿಕ ಬ್ಲೀಚ್‍ಗಳು ನಿಮ್ಮ ಚರ್ಮವನ್ನು ಮೃದು ಮತ್ತು ಸುಕ್ಕು ಬರದಂತೆ ತಡೆಯುವ ಎಣ್ಣೆಯನ್ನು ತೊಡೆದು ಹಾಕುತ್ತವೆ.

ವ್ಯಾಕ್ಸಿಂಗ್
ಅನಾವಶ್ಯಕ ಕೂದಲು ತೆಗೆಯಲು ಬಳಸುವ ವ್ಯಾಕ್ಸಿಂಗ್ ತನ್ನದೇ ಆದ ಅಡ್ಡ ಪರಿಣಾಮಗಳನ್ನು ಹೊಂದಿದೆ; ಕೆಲವರ ಅನುಭವದ ಪ್ರಕಾರ ಇದನ್ನು ಮಾಡುವುದರಿಂದ ಆಂತರಿಕವಾಗಿ ಬೆಳೆಯುವ ಕೂದಲುಗಳು, ಕೆಂಪು ಬಾವುಗಳು ಮತ್ತು ಸಣ್ಣ ಪ್ರಮಾಣದ ರಕ್ತ ಸ್ರಾವವುಂಟಾಗುತ್ತದೆ. ವ್ಯಾಕ್ಸಿಂಗ್ ಮಾಡಿಸುವುದರಿಂದಾಗಿ ನಿಮ್ಮ ಮುಖದಲ್ಲಿರುವ ತ್ವಚೆಯು ಮೊದಲಿಗಿಂತ ಹೆಚ್ಚಾಗಿ ಜೋಲು ಬೀಳುವ ಸಾಧ್ಯತೆಯಿರುತ್ತದೆ. ಅಲ್ಲದೆ ಅದು ಅಗತ್ಯಕ್ಕಿಂತ ಒರಟಾಗಿ ಪರಿವರ್ತನೆಗೊಳ್ಳುತ್ತದೆ. ತ್ವಚೆಯು ಅತ್ಯಂತ ಸಂವೇದನಶೀಲವಾದ ಅಂಶ. ಆದರೆ ವ್ಯಾಕ್ಸಿಂಗ್ ಅದನ್ನು ಹಾಳು ಮಾಡುತ್ತದೆ.



Click it and Unblock the Notifications
