Latest Updates
-
ಮಕ್ಕಳಿಗಾಗಿ ದಾಂಪತ್ಯ ಉಳಿಸಿಕೊಳ್ಳಬೇಕೇ? ಜೀನತ್ ಅಮಾನ್ ಅವರ ವೈರಲ್ ಸಲಹೆ ಮತ್ತು ಪೋಷಕರಿಗೆ ಮಹತ್ವದ ಪಾಠ -
ಇಂದು ಬೆಂಗಳೂರಿನಲ್ಲಿ ಪವರ್ ಕಟ್: ವೈಟ್ಫೀಲ್ಡ್, ಪೀಣ್ಯ, ಮಲ್ಲೇಶ್ವರಂ ಸೇರಿ ಪ್ರಮುಖ ಏರಿಯಾಗಳ ಪಟ್ಟಿ ಇಲ್ಲಿದೆ -
ಇನ್ಮುಂದೆ ಬಿಸ್ಕತ್ತು, ಕೂಲ್ ಡ್ರಿಂಕ್ಸ್ ಮೇಲೆ ಕೆಂಪು ಎಚ್ಚರಿಕೆ ಲೇಬಲ್: FSSAI ಹೊಸ ನಿಯಮವೇನು? -
ಮುಂಬೈ ಲೋಕಲ್ ರೈಲು ಪ್ರಯಾಣಿಕರೇ ಗಮನಿಸಿ: ಇಂದು ಮೆಗಾ ಬ್ಲಾಕ್, ಯಾವ ಮಾರ್ಗದಲ್ಲಿ ಸಂಚಾರ ಸ್ಥಗಿತ? -
ರಾಷ್ಟ್ರೀಯ ಪೋಷಕಾಂಶ ವಾರ: ಕನ್ನಡಿಗರ ಆರೋಗ್ಯಕ್ಕಾಗಿ 7 ದಿನಗಳ ಸಿಂಪಲ್ ಡಯಟ್ ಮತ್ತು ವ್ಯಾಯಾಮ ಪ್ಲಾನ್! -
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'! -
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ!
ಮುತ್ತಿನಂತಹ ಹಲ್ಲುಗಳ ಒಡೆಯರು ನೀವಾಗಬೇಕೆ?

ಬ್ರಷ್ ಮಾಡುವ ವಿಧಾನ:
ಬ್ರಷ್ ಅನ್ನು 45% ಕೋನದಲ್ಲಿ ಹಿಡಿದುಕೊಂಡು ಮೆದುವಾಗಿ ವಸಡುಗಳನ್ನು ತಿಕ್ಕಬೇಕು. ವಸಡುಗಳನ್ನು ತುಂಬಾ ಬಲವಾಗಿ ತಿಕ್ಕಿದರೆ ಗಾಯವಾಗಿ ರಕ್ತಬರುವುದು, ಆದ್ದರಿಂದ ವಸಡುಗಳನ್ನು ಮೆಲ್ಲನೆ ತಿಕ್ಕಿ ನಂತರ ಹಲ್ಲುಗಳನ್ನು ಸರಿಯಾದ ರೀತಿಯಲ್ಲಿ ತಿಕ್ಕಬೇಕು. ಹಲ್ಲುಜ್ಜುವಾಗ ಮೊದಲು ಉಪ್ಪು ಹಾಕಿ ಉಜ್ಜಿ ನಂತರ ಪೇಸ್ಟ್ ಹಾಕಿ ಉಜ್ಜಿದರೆ ಮತ್ತಷ್ಟು ಒಳ್ಳೆಯದು. ನಂತರ ನಾಲಗೆಯನ್ನು ಟಂಗ್ ಕ್ಲೀನರ್ ಬಳಸಿ ಶುಚಿಗೊಳಿಸಬೇಕು.
ಬ್ರಷ್ ಗಳನ್ನು ಆಯ್ಕೆ ಮಾಡುವಾಗ ಒಳ್ಳೆಯ ಗುಣಮಟ್ಟದ ಬ್ರಷ್ ಗಳನ್ನು ಕೊಳ್ಳುವುದು ಒಳ್ಳೆಯದು. ತುಂಬಾ ಗಟ್ಟಿಯಾಗಿರುವ ಬ್ರಷ್ ಬಳಸುವುದಕ್ಕಿಂತ ಸ್ವಲ್ಪ ಮೃದುವಾದ ಬ್ರಷ್ ಬಳಸುವುದು ಒಳ್ಳೆಯದು.
ಟೂತ್ ವೈಟ್ನರ್:
ವಯಸ್ಸಾದಂತೆ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ ಎಂಬ ಕಲ್ಪನೆ ಅನೇಕರಿಲ್ಲದೆ. ಆದರೆ ಹಲ್ಲುಗಳನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡಿದರೆ ಹಲ್ಲುಗಳು ಕಪ್ಪು ಅಥವಾ ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯಬಹುದು. ಹಲ್ಲುಗಳು ಹಳದಿ ಬಣ್ಣದಲ್ಲಿದ್ದರೆ ಎರಡು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಕಂಡು ಹಲ್ಲುಗಳನ್ನು ಶುಚಿಗೊಳಿಸುವುದು ಅವರ ಸಲಹೆ ಮೇರೆಗೆ ಟೂತ್ ವೈಟ್ನರ್ ಬಳಸಿದರೆ ಹಲ್ಲುಗಳು ಬಿಳಿ ಬಣ್ಣದಿಂದ ಕೂಡಿರುತ್ತದೆ.
ಹಲ್ಲುಗಳ ಆರೋಗ್ಯ ಹೆಚ್ಚಿಸುವ ಆಹಾರಗಳು:
1. ಚಿಕ್ಕನ್, ನಟ್ಸ್, ಹಾಲು, ಮೀನು ಇವುಗಳಲ್ಲಿರುವ ಕ್ಯಾಲ್ಸಿಯಂ ಹಲ್ಲುಗಳನ್ನು ಗಟ್ಟಿಯಾಗಿಸುತ್ತದೆ.
2. ಸೇಬು ಮತ್ತು ತರಕಾರಿಗಳ ಸೇವನೆ ಒಳ್ಳೆಯದು.
3. ಸಿಟ್ರಸ್ ಆಹಾರ, ಟೊಮೆಟೊ ಸೇವನೆ ಒಳ್ಳೆಯದು.
ಆಹಾರ ತಿಂದ ತಕ್ಷಣ ಬಾಯಿಯನ್ನು ನೀರು ಹಾಕಿ ತೊಳೆಯಬೇಕು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದು.



Click it and Unblock the Notifications