Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವಾವ್! ಈ ರೀತಿ ಕೂಡ ಬಳಕೆ ಮಾಡಬಹುದಾ?
ದಿನ ನಿತ್ಯ ಬಳಸುವ ಸಾಧನಗಳಲ್ಲಿ ನಾವು ಕೆಲವೊಂದು ವಸ್ತುಗಳನ್ನು ನಿರ್ಧಿಷ್ಟ ಕೆಲಸಕ್ಕೆ ಅಂತ ಬಳಸುತ್ತೇವೆ ಉದಾಹರಣೆಗೆ ಟೂತ್ ಪೇಸ್ಟ್. ಇದನ್ನು ಹಲ್ಲುಜ್ಜಲು ಬಳಸುತ್ತೇವೆ. ಆದರೆ ಇದೇ ಟೂತ್ ಪೇಸ್ಟ್ ನಿಂದ ಹಲ್ಲು ಬಿಳಿ ಮಾಡುವುದು ಮಾತ್ರವಲ್ಲದೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇವತ್ತು ನಾವು ನಿರ್ಧಿಷ್ಟ ಕೆಲಸಕ್ಕೆ ಅಂತ ಬಳಸುವ ವಸ್ತುಗಳಿಂದ ಹೇಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಅನ್ನುವುದರ ಕುರಿತು ತಿಳಿಯೋಣ.

1. ಬಿಳಿಯ ಉಗುರು: ಉಗುರುಗಳು ಹಳದಿ ಬಣ್ಣದಲ್ಲಿದ್ದರೆ ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ. ಈ ರೀತಿಯ ಉಗುರುಗಳು ಬಿಳುಪಿನಿಂದ ಹೊಳೆಯುವಂತೆ ಮಾಡಲು ಟೂತ್ ಪೇಸ್ಟ್ ಜೊತೆ ಸ್ವಲ್ಪ ನಿಂಬೆರಸ ಹಾಕಿ ಉಜ್ಜಿದರೆ ಸಾಕು.
2. ಕೂದಲು ಬಲವಾಗಲು: ಮೊಟ್ಟೆಯ ಬಿಳಿಯನ್ನು ತಲೆಗೆ ಹಚ್ಚುವುದರಿಂದ ಕೂದಲು ಬಲವಾಗುವುದು ಮತ್ತು ಹೊಳಪನ್ನು ಪಡೆಯುತ್ತದೆ. ಮೊಟ್ಟೆಯ ಜೊತೆ ಸ್ವಲ್ಪ ಆಲೀವ್ ಎಣ್ಣೆ ಬೆರೆಸಿ ಹಾಕಿದರೆ ಕೂದಲು ಆಕರ್ಷಕವಾಗಿ ಕಾಣುವುದು.
3. ಮಾಯ್ಚಿರೈಸರ್: ನಿಮ್ಮ ತ್ವಚೆ ಸೂಕ್ಷ್ಮವಾಗಿದ್ದು ಅದು ಬಿಸಿಲಿನಿಂದಾಗಿ ಕಾಂತಿಯನ್ನು ಕಳೆದುಕೊಂಡಿದ್ದರೆ ಮುಖಕ್ಕೆ ಜೇನು ಹಚ್ಚಿ 10-15 ನಿಮಿಷ ಬಿಡಬೇಕು. ನಂತರ ಹದ ಬಿಸಿ ನೀರಿನಿಂದ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುವುದು.
5. ಐರನ್: ಕೂದಲಿಗೆ ಐರನ್ ಮಾಡಲು ಬಳಸುವ ಸ್ಟ್ರೈಟ್ನಿಂಗ್ ಮೆಷಿನ್ ಅನ್ನು ಶರ್ಟ್ ನ ಗುಂಡಿಗಳ ನಡುವೆ ಇರುವ ಬಟ್ಟೆಯನ್ನು ಇಸ್ತ್ರಿ ಮಾಡಲು ಬಳಸಬಹುದು.
6. ವಿನಿಗರ್: ವಿನಿಗರ್ ಅನ್ನು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಹಾಕಿದರೆ ಅದು ಕೀಟಾಣುಗಳ ವಿರುದ್ದ ಹೋರಾಡುತ್ತದೆ.
7. ಶೇವಿಂಗ್ ಕ್ರೀಮ್ : ಒಂದು ವೇಳೆ ಶೇವಿಂಗ್ ಕ್ರೀಮ್ ಮುಗಿದು ಹೋಗಿದ್ದರೆ ಹೇರ್ ಕಂಡೀಷನರ್ ಹಾಕಿ ಬಳಸಬಹುದು.
8. ಓಟ್ ಮೀಲ್ಸ್ ನಿಂದ ತ್ವಚೆ ರಕ್ಷಣೆ: ಸೊಳ್ಳೆ ಕಚ್ಚಿ ತುರಿಕೆ ಕಾಣಿಸಿಕೊಂಡರೆ ಅಥವಾ ಒಣ ತ್ವಚೆ ಉಂಟಾದರೆ ಓಟ್ಸ್ ಬಳಸಿ ಸ್ನಾನ ಮಾಡಿದರೆ ತ್ವಚೆಗೆ ಒಳ್ಳೆಯದು.



Click it and Unblock the Notifications
