Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ಹೆಚ್ಚಿನ ಮಹಿಳೆಯರಿಗೆ ಇರುವ 10 ರೀತಿಯ ಸ್ನೇಹಿತರು
ಸ್ನೇಹಿತರು ಪ್ರತಿಯೊಬ್ಬರಿಗೂ ಇರುತ್ತಾರೆ ಮತ್ತು ಸ್ನೇಹಿತರ ಅವಶ್ಯಕತೆ ಕೂಡ ಪ್ರತಿಯೊಬ್ಬರಿಗೂ ಇರುತ್ತದೆ.ಆದರೆ ಮಹಿಳೆಯರಿಗೆ ಸ್ನೇಹಿತರು ಅಧಿಕ.ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಸ್ನೇಹಿತರ ಅಗತ್ಯ ಅತಿಯಾಗಿರುತ್ತದೆ.
ಕೆಲವೊಮ್ಮೆ ಯಾರ ಬಳಿಯೂ ಹೇಳಿಕೊಳ್ಳಲಾಗದ ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.ಅಷ್ಟೇ ಅಲ್ಲ ಹೊರಗೆ ಸುತ್ತಾಡಲು ಇನ್ನಿತರ ಸಂದರ್ಭದಲ್ಲಿ ಸ್ನೇಹಿತರೇ ಉತ್ತಮ ಜೋತೆಗಾರರಾಗುತ್ತಾರೆ.

ಅದು ಯಾವುದೇ ರೀತಿಯ ಸಂಘಟನೆ ಇರಲಿ ಅಥವಾ ಮನೆಯ ಕಾರ್ಯಕ್ರಮ,ಹಬ್ಬ,ಶಾಪಿಂಗ್ ಇನ್ನಿತರ ಸಂದರ್ಭಗಳಲ್ಲಿ ಮಹಿಳೆಯರಿಗೆ ಸೂಕ್ತ ಸ್ನೇಹಿತರ ಉದ್ದ ಪಟ್ಟಿಯೇ ಇರುತ್ತದೆ.ಸ್ನೇಹಿತರಲ್ಲಿ ವಿವಿಧ ರೀತಿಯ ಸ್ನೇಹಿತರಿರುತ್ತಾರೆ.ಅವುಗಳ ಬಗ್ಗೆ ತಿಳಿಯಲು ಈ ಕೆಳಗೆ ಓದಿನೋಡಿ.
ಹೆಂಗಸು ಕೇಳುವ 6 ಚಾಲಾಕಿನ ಪ್ರಶ್ನೆಗಳು
Promotionalcodes.org.uk ನಡೆಸಿರುವ ಇತ್ತೀಚಿನ ಅಧ್ಯಯನದ ಪ್ರಕಾರ ಮಹಿಳೆಯರು ಹೊಂದಿರುವ 10 ರೀತಿಯ ಸ್ನೇಹಿತರ ಬಗ್ಗೆ femalefirst.co.uk ವರದಿಯನ್ನು ತಿಳಿಸಿದೆ.
ಆ 10 ಸ್ನೇಹಿತರ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.
1.ಸ್ಥಿರವಾದ ಸ್ನೇಹಿತರು - ಅತ್ಯಂತ ವಿಶ್ವಾಸಾರ್ಹ ಮತ್ತು ನಂಬಿಕೆ ಉಳ್ಳ ಸ್ನೇಹಿತರು ಇವರಾಗಿರುತ್ತಾರೆ.ಮಹಿಳೆ ಇಂತಹ ಸ್ನೇಹಿತರೊಂದಿಗೆ ರಾತ್ರಿ ಹೊರಗೆ ಹೋಗುವುದು ಅಥವಾ ಯಾವುದೇ ಸಮಯದ ಶಾಪಿಂಗ್ ಗೆ ಜೊತೆಗೆ ಕರೆದುಕೊಂಡು ಹೋಗಲು ತಯಾರಿರುತ್ತಾರೆ.
ಈ ರೀತಿಯ ಸಂಬಂಧದಲ್ಲಿ ಅವರು ಕಡೇಪಕ್ಷ 5 ವರ್ಷದಿಂದ (ಅಥವಾ ಇನ್ನೂ ಹೆಚ್ಚು) ಒಬ್ಬರನ್ನೊಬ್ಬರು ಬಲ್ಲವರಾಗಿರುತ್ತಾರೆ.ಇಂತಹ ಸ್ನೇಹಿತರ ನಂಬರ್ ಸ್ಪೀಡ್ ಡಯಲ್ ನಲ್ಲಿ ನೋಂದಾವಣೆ ಆಗಿರುತ್ತದೆ.ಎಲ್ಲಕ್ಕಿಂತ ಹೆಚ್ಚಾಗಿ ಅವರಿಬ್ಬರೂ ಪರಸ್ಪರ ತಿಳಿದವರಾಗಿರುತ್ತಾರೆ.
ಮೋಸ ಮಾಡುವ ಪುರುಷರ ಆರು ಲಕ್ಷಣಗಳು...!
2.ಶಾಪಿಂಗ್ ಸ್ನೇಹ : ಈ ಸ್ನೇಹಿತರು ಹೆಚ್ಚು ಬಲಯುತವಾಗಿರುತ್ತಾರೆ,ಕ್ರೆಡಿಟ್ ಕಾರ್ಡ್ ನಲ್ಲಿ ಸದಾ ಬೇಕಾದಷ್ಟು ಹಣ ಜೊತೆಗಿರುತ್ತದೆ.ಇಂತಹ ಸ್ನೇಹಿತರು ಕರೆದ ತಕ್ಷಣ ಜೊತೆಗೆ ಹೊರಡುತ್ತಾರೆ ಮತ್ತು ಯಾವ ರೀತಿಯ ಡ್ರೆಸ್ ಸುಂದರವಾಗಿ ಒಪ್ಪುತ್ತದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಾರೆ.ಸೇಲ್ಸ್ ಅಥವಾ ಇನ್ನಿತರ ಸ್ಥಳಗಳಲ್ಲಿ ಬಟ್ಟೆಗಳನ್ನು ತೆಗೆದುಕೊಳ್ಳಲು ಹಾತೊರೆಯುತ್ತಾರೆ ಅವರಿಗೆ ತಮ್ಮ ಸ್ನೇಹಿತೆಗೆ ಏನು ಬೇಕು ಎಂಬುದರ ಸಂಪೂರ್ಣ ಅರಿವಿರುತ್ತದೆ. ಒಬ್ಬರಿಗೊಬ್ಬರ ಅಳತೆಗಳು ತಮ್ಮದೇ ಸ್ವಂತ ಎಂಬಷ್ಟು ತಿಳಿದಿರುತ್ತದೆ.
3.ಸಂಕಟ ಹಂಚಿಕೊಳ್ಳಲು ಚಿಕ್ಕಮ್ಮ - ಇವರು ತಾಯಿಯ ವಯಸ್ಸಿನವರಾಗಿರುತ್ತಾರೆ ಆದರೆ ತನ್ನ ತಾಯಿಗೆ ಯಾವುದೇ ರೀತಿಯ ದೂರು ನೀಡುವವರಾಗಿರುವುದಿಲ್ಲ ಮತ್ತು ಸದಾ ವಿಷಯವನ್ನು ಕೇಳಿ ತಿಳಿದುಕೊಳ್ಳುವಲ್ಲಿ ಕಾತರರಾಗಿರುತ್ತಾರೆ ಮತ್ತು ಇವರಿಗೆ ಸಾಕಷ್ಟು ಅನುಭವ ಕೂಡ ಇರುತ್ತದೆ.
4.ಅಳುಮುಂಜಿ ಸ್ನೇಹಿತರು - ಒಮ್ಮೆ ಮಹಿಳೆ ತನ್ನ ಭುಜದ ಮೇಲೆ ಒರಗಿ ಅವರು ಅಳುವಾಗ ಸಾಂತ್ವನ ನೀಡಲು ಮುಂದಾದರೆ ಸಾಕು ನಂತರ ಅವರು ಸದಾ ಕಾಲ ಸಾಂತ್ವನ ಕೇಳಿಕೊಂಡು ಬಂದುಬಿಡುತ್ತಾರೆ.ಆದರೆ ಇಲ್ಲಿ ತೊಂದರೆ ಎಂದರೆ ಆಫೀಸ್ ನ ಬ್ಯುಸಿ ಸಮಯದಲ್ಲಿ ಅಥವಾ ಸಾಕಷ್ಟು ಕುಡಿದಾಗ ಇವರಿಗೆ ಕಾಲ್ ಮಾಡಿ ತೊಂದರೆ ಕೊಡಲು ತಮ್ಮ ಕಷ್ಟ ಹೇಳಿಕೊಳ್ಳಲು ಪ್ರಾರಂಭಿಸಿಬಿಡುತ್ತಾರೆ.
5.ಸಮಂತಾ - ಸಾಮಂತ ಎಲ್ಲರಿಗೂ ತಿಳಿದೇ ಇದೆ.ಕಿಮ್ ಕಾತ್ರಲ್ ಪರಿಚಯಿಸಿದ 'ಸೆಕ್ಸ್ ಅಂಡ್ ಸಿಟಿ' ಯಲ್ಲಿ ಸಮಂತಾ ಏನು ಬೇಕಾದರೂ ಮಾಡಲು ಯಾವಾಗಲೂ ಸಿದ್ಧ.ಅವಳು ಯಾವಾಗಲೂ ಸಂಜೆಯ ಸಮಯದಲ್ಲಿ ಹೊರಗೆ ಹೋಗಲು ಇಚ್ಚಿಸುತ್ತಾಳೆ ಮತ್ತು ಯಾರು ಬೇಕಾದರೂ ಆಕೆಯೊಂದಿಗೆ ಮೋಜಿನ ಸಮಯ ನಿರೀಕ್ಷಿಸಬಹುದು.ಆದರೆ ಆಕೆಗೆ ಎಂದಿಗೂ ಸಾಕು ಎಂದೆನಿಸುವುದೇ ಇಲ್ಲ.
6.ನಿಗೆಲ್ಲಾ - ನೀವು ಯಾವಾಗಲು ಊಟಕ್ಕೆ ಕರೆಯಲು ಇಚ್ಚಿಸುತ್ತೀರಾ ? ಅಥವಾ ನೀವು ಸ್ನೇಹಿತರನ್ನು ಕರೆದು ಊಟ ಹಾಕಲು ಮತ್ತು ಅವರಿಗೆ ಮನೆಯ ಸುಧಾರಣೆ ಬಗ್ಗೆ ತೋರಿಸಲು ಇಷ್ಟಪಡುತ್ತೀರ ಮತ್ತು ಅದನ್ನು ಅನಂದಿಸುತ್ತೀರಾ? ಹಾಗಿದ್ದಲ್ಲಿ ನೀವು ನಿಗೆಲ್ಲಾ.
ನಿಗೆಲ್ಲಾ ಎಂಬುದು ಒಂದು ದೇಶೀಯ ದೇವತೆ. ಯಾವಾಗಲು ಚೆನ್ನಾಗಿ ಅಡುಗೆ ಮಾಡಿ, ಸ್ವಚ್ಚಗೊಳಿಸಿ ಪರಿಶುದ್ಧವಾಗಿರುವ ದೇವತೆ. ಆದ್ದರಿಂದ ಪ್ರತಿಯೊಬ್ಬರಿಗೂ ನಿಗೆಲ್ಲಾ ಎಂದರೆ ಒಂದು ರೀತಿಯ ಅಸೂಯೆ.
ಪುರುಷರ ಸ್ನೇಹ ಆತ್ಮೀಯತೆಗೆ ನಾಂದಿ ಹೇಗೆ?
7.ಸ್ನೇಹಿತರ ಸ್ನೇಹಿತರು : ಒಂದೆರಡು ಬಾರಿ ತನ್ನ ಸ್ನೇಹಿತೆಯ ಜೋರೆ ಎಲ್ಲೋ ಭೇಟಿ ಆಗಿರುತ್ತಾರೆ ಜೊತೆಗೆ ಫೇಸ್ಬುಕ್ ನಲ್ಲಿ ಸ್ನೇಹಿತರಾಗಿರುತ್ತಾರೆ.ಇಂತಹ ಸ್ನೇಹಿತರು ರಸ್ತೆಯಲ್ಲಿ ಎಲ್ಲಾದರೂ ಭೇಟಿ ಆದಾಗ ಏನು ಮಾತನಾಡಬೇಕು ಎಂಬುದು ತಿಳಿಯದೇ ಮುಜುಗರ ಅನುಭವಿಸುತ್ತಾರೆ ಮತ್ತು ಕೆಲವೊಮ್ಮೆ ಹೆಸರೇ ನೆನಪಿಗೆ ಬರುವುದಿಲ್ಲ.
8.ಮದುವೆಯಾಗಿ ಮಕ್ಕಳಿರುವವರು : ಕೆಲವರು ಮದುವೆಯಾಗುವ ಮೊದಲು ಸ್ನೇಹಿತರೊಂದಿಗೆ ಮೋಜು ಮಾಡುತ್ತಾರೆ ಆದರೆ ಒಮ್ಮೆ ಮದುವೆಯಾದೊಡನೆ ಎಲ್ಲವನ್ನು ಬಿಡಬೇಕಾಗುತ್ತದೆ.ಎಲ್ಲಾದರೂ ಒಂದು ಶನಿವಾರ ಕಾಫಿಗೆ ಕರೆದರೂ ಕೇವಲ ಮಗುವಿನ ಬಗ್ಗೆ ಅವರ ಆಟಗಳ ಬಗ್ಗೆ ಹೇಳುವವರಾಗಿರುತ್ತಾರೆ.ಅಷ್ಟಕ್ಕೇ ಸೀಮಿತವಾಗಿರುತ್ತದೆ.ಮದುವೆ,ಮಕ್ಕಳು ಇವುಗಳೆಲ್ಲ ಆದ ನಂತರ ಇವುಗಳು ಸಾಮಾನ್ಯವಾದರೂ ಕೂಡ ಅವರಿಗೆ ಹಳೆಯ ಸ್ನೇಹಿತರು ಬೇಕೆನಿಸುತ್ತದೆ.
9.ಪ್ಲಾನ್ ಬಿ : ಬಿ ಎಂದರೆ ಬೆಟರ್ ಫ್ರೆಂಡ್ ಎಂದರ್ಥ.ಯಾವುದಾದರೂ ಕೆಲಸಕ್ಕೆ ಒಂದು ಹೆಚ್ಚುವರಿ ಸ್ನೇಹಿತರು ಬೇಕಿರುತ್ತಾರೆ.ಒಬ್ಬರು ತಪ್ಪಿದಾಗ ಇನ್ನೊಬ್ಬರನ್ನು ಹೊರಗೆ ಕರೆದುಕೊಂಡು ಹೋಗಲು ಸಮಯ ಕಳೆಯಲು.ಇಂತವರು 'ನಾನು ನಿನ್ನ ಕರೆಯಬೇಕು ಎಂದುಕೊಂಡಿದ್ದೆ ಮತ್ತೆ ನೀನು ಬ್ಯುಸಿ ಇರಬಹುದು ಎಂದು ಸುಮ್ಮನಾದೆ' ಎಂಬ ಕಾರಣಗಳನ್ನು ಹೇಳುತ್ತಾರೆ.ಈ ರೀತಿ ಹೇಳುವ ಸ್ನೇಹಿತರನ್ನು ಪ್ಲಾನ್ ಬಿ ಎನ್ನಬಹುದು.
10.ಎಲ್ಲವನ್ನು ನೋಡುವ ಕಣ್ಣು : ಇಂತವರನ್ನು ಗಾಸಿಪ್ ರಾಣಿ ಎಂದೇ ಕರೆಯಬಹುದು.ಇವರಿಗೆ ಎಲ್ಲರ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುವ ಗುಣವಿರುತ್ತದೆ ಮತ್ತು ಅವರ ಬಗ್ಗೆ ಹೇಳಲು ಹಿಂಜರಿಯುವುದಿಲ್ಲ.ಬೇರೊಬ್ಬರ ಬಗ್ಗೆ ಏನಾದರೂ ತಿಳಿಯಬೇಕು ಎಂದಲ್ಲಿ ಇವರಲ್ಲಿ ಕೇಳಿದರೆ ತಿಳಿಯಬಹುದು.ಆದರೆ ಇಂತವರು ತಮ್ಮ ಸ್ವಂತ ವಿಷಯದ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ.



Click it and Unblock the Notifications