Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಮಿಥುನ ರಾಶಿಯಲ್ಲಿ ಶುಕ್ರ-ಗುರು ಸಂಗಮ: ಕೈ ಹಿಡಿಯಲಿದೆ ಅದೃಷ್ಟ..ಧನ ಲಾಭಕ್ಕಿದೆ ದಾರಿ!
ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಲ್ಲಿ ದೇವತೆಗಳ ಗುರು ಎಂದು ಪರಿಗಣಿಸಲಾದ ಗುರು ಗ್ರಹದ ಚಲನೆಯನ್ನು ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗಿದೆ. ಗುರು ನಿಧಾನವಾಗಿ ಸಂಚರಿಸುವ ಗ್ರಹ ಆಗಿರುವುದರಿಂದ ದೀರ್ಘ ಕಾಲದವರೆಗೂ ಗುರುವಿನಿಂದ ಪರಿಣಾಮ ಎದುರಿಸಬಹುದು. ಗುರುವಿನ ಪ್ರಭಾವವು ವ್ಯಕ್ತಿಯ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆಗಳ ತರುವುದು ನೋಡಬಹುದು. ಹಾಗೆ ಶುಭ ಹಾಗೂ ಅಶುಭವಾಗಿಯೂ ಪರಿಣಾಮ ಬೀರುವುದು ನೋಡಬಹುದು.
ಪ್ರಸ್ತುತ ಗುರುವು ಬುಧನ ಮಿಥುನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಹೀಗಿರುವಾಗ ಗುರುವು ದೀರ್ಘಕಾಲ ಒಂದೇ ರಾಶಿಯಲ್ಲಿದ್ದಾಗ ಹಲವು ಗ್ರಹಗಳೊಂದಿಗೆ ಸಂಯೋಗವಾಗುವುದು ನೋಡಬಹುದು. ಹಾಗೆ ಈ ಸ್ಥಿತಿಯಲ್ಲಿ ಗುರುವಿನೊಂದಿಗೆ ಹಲವು ಗ್ರಹಗಳ ಸಂಯೋಗವು ಲಾಭಗಳಿಗೆ ಕಾರಣವಾಗುವ ಸಂಭವವೇ ಹೆಚ್ಚಾಗಲಿದೆ. ಹಾಗೆ ಶುಭ ಅಶುಭ ಯೋಗಗಳಿಗೆ ಇದು ಕಾರಣವಾಗುವುದು ನೋಡಬಹುದು.

ನವರಾತ್ರಿಯ ಸಮಯದಲ್ಲಿ ಗುರುವಿನೊಂದಿಗೆ ಶುಕ್ರನು ಸಂಯೋಗವಾಗುತ್ತಾನೆ. ಈ ಸಮಯದಲ್ಲಿ ಅರ್ಧ ಕೇಂದ್ರ ಯೋಗಕ್ಕೆ ಕಾರವಾಗಲಿದೆ. ಸೆಪ್ಟೆಂಬರ್ 25 ರಂದು ರೂಪುಗೊಳ್ಳುತ್ತದೆ. ಈ ಯೋಗದ ಸಮಯದಲ್ಲಿ ಗುರು ಮತ್ತು ಶುಕ್ರ ಪರಸ್ಪರ 45 ಡಿಗ್ರಿಗಳಲ್ಲಿ ಚಲಿಸುತ್ತಾರೆ. ಈ ಯೋಗದ ಸಮಯದಲ್ಲಿ, ಶುಕ್ರ ಸಿಂಹದಲ್ಲಿರುತ್ತಾನೆ. ಈ ಯೋಗವು ಎಲ್ಲಾ ರಾಶಿ ಜನರ ಜೀವನದ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು.
ಗುರು ಹಾಗೂ ಶುಕ್ರರ ಸಂಗಮದಿಂದಾಗು ಉಂಟಾಗುವ ಅರ್ಧ ಕೇಂದ್ರ ಯೋಗವು ಯಾರಿಗೆಲ್ಲಾ ಶುಭ ತರಲಿದೆ. ಯಾರಿಗೆ ಲಾಭದಾಯಕ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಅರ್ಧ ಕೇಂದ್ರ ಯೋಗವು ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳ ತರಲುದೆ. ತಮ್ಮ ಕುಟುಂಬದೊಂದಿಗೆ ನಿಮಗೆ ಸಂಬಂಧ ಗಟ್ಟಿಯಾಗಲಿದೆ. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಹರಿದುಬರಲಿದೆ. ಆಸ್ತಿ, ವಾಹನ ಖರೀದಿಯಂತಹ ಆಲೋಚನೆಗಳು ನಿಮಿಗೆ ಬರಲಿದೆ. ವ್ಯವಹಾರ ಸಂಬಂಧವಾಗಿ ಹೊಸ ಒಪ್ಪಂದಗಳು ಏರ್ಪಡಲಿವೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವ ಸಮಯ ಎನ್ನಬಹುದು. ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಈ ಸಮಯದಲ್ಲಿ ಬಹಳ ಲಾಭದಾಯಕ. ನ್ಯಾಯಾಲಯ ಸಂಬಂಧಿ ವಿಚಾರದಲ್ಲಿ ನಿಮಗೆ ಗೆಲುವಿದೆ. ಆರೋಗ್ಯ ಸುಧಾರಿಸಲಿದೆ.
ಸಿಂಹ ರಾಶಿ
ಗುರು ಮತ್ತು ಶುಕ್ರರಿಂದ ರೂಪುಗೊಂಡ ಅರ್ಧ ಕೇಂದ್ರ ಯೋಗದಿಂದಾಗಿ ಸಿಂಹ ರಾಶಿಯವರಿಗೆ ತಮ್ಮ ಕೆಲಸದಲ್ಲಿ ಯಶಸ್ಸು ಸಿಗವ ಸಮಯ ಆಗಿರಲಿದೆ. ನೀವು ಬಯಸಿದಂತಹ ದಿನಗಳನ್ನು ಎದುರು ನೋಡುವಿರಿ. ಸಾಲದ ಹೊರೆ ಕಡಿಮೆಯಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದವರಿಗೆ ಉತ್ತಮ ಸಮಯ. ಗೃಹಿಣಿಯರಲ್ಲಿ ಈ ಸಮಯವು ಧನಲಾಭಕ್ಕೆ ಕಾರಣವಾಗಲಿದೆ. ದಾಂಪತ್ಯದಲ್ಲಿ ಸುಖ ಇರಲಿದೆ. ಕುಟುಂಬದಲ್ಲಿದ್ದ ಹಣಕಾಸು ಸಮಸ್ಯೆಯೊಂದು ಬಗೆಹರಿಯಲಿದೆ. ಸ್ಪರ್ಧೆಗಳಲ್ಲಿ ಗೆಲುವು ಪಡೆಯುತ್ತೀರಿ.
ಧನು ರಾಶಿ
ಧನು ರಾಶಿಯವರಿಗೆ ಅರ್ಧ ಕೇಂದ್ರ ಯೋಗವು ಪ್ರಗತಿಗೆ ಹಲವು ಅವಕಾಶಗಳ ಮಾಡಿ ಕೊಡಲಿದೆ. ವಿದೇಶ ಪ್ರವಾಸಕ್ಕೆ ಅವಕಾಶಗಳು ಇರುತ್ತವೆ. ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳು ಉತ್ತಮ ಆರ್ಥಿಕ ಲಾಭವನ್ನು ಪಡೆಯುವ ಸಮಯ. ವಿದೇಶ ಪ್ರವಾಸದಂತಹ ವಿಚಾರದಲ್ಲಿ ಹೊಸ ಆಲೋಚನೆ ಇರಲಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಸಂದಾಯವಾಗಬಹುದು. ಸಂಬಂಧಿಕರೊಬ್ಬರಿಂದ ನಿಮಗೆ ಉತ್ತಮ ಸುದ್ದಿ ಕೇಳಬಹುದು. ವ್ಯಾಪಾರಿಗಳಲ್ಲಿ ಹಣಕಾಸು ಓಡಾಟ ಚೆನ್ನಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
