Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ಶುಕ್ರನಿಂದಾಗಿ ಕೇಂದ್ರ ತ್ರಿಕೋನ ರಾಜಯೋಗ: ಜುಲೈನಲ್ಲಿ ಈ ರಾಶಿಯವರಿಗೆ ಶುಭಯೋಗ!
ಜುಲೈ ತಿಂಗಳಲ್ಲಿ ಶುಕ್ರನು ಹಲವು ರೀತಿಯ ಶುಭ ಲಾಭಗಳಿಗೆ ಕಾರಣನಾಗುತ್ತಾನೆ. ಶುಕ್ರ ತನ್ನ ರಾಶಿ ಬದಲಾಯಿಸುವುದು ಹಾಗೆ ನಕ್ಷತ್ರ ಬದಲಾವಣೆಯ ಕಾರಣದಿಂದಾಗಿ ಹಲವು ರೀತಿಯ ಲಾಭ ನೋಡಬಹುದು. ಅದರಲ್ಲೂ ಜುಲೈನಲ್ಲಿ ಆತನ ಸಂಚಾರವು ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಬೀರಲಿದೆ. ಶುಕ್ರ ಸಂತೋಷ, ಐಶ್ವರ್ಯ, ಪ್ರೀತಿ, ಸೌಂದರ್ಯ, ಸಂಪತ್ತಿನ ಪ್ರತೀಕ ಎಂದು ಪರಿಗಣಿಸಲಾಗಿದೆ.
ಶುಕ್ರನ ಆಶೀರ್ವಾದಿಂದ ಶುಕ್ರ ದೆಸೆ ಒಲಿದರೆ ಒಬ್ಬಾತ ತನ್ನ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾನೆ. ಶುಕ್ರನ ಆಶೀರ್ವಾದ ಪಡೆದ ಜನರು ಜೀವನದ ಎಲ್ಲಾ ಸಂತೋಷಗಳನ್ನು ಪಡೆಯುತ್ತಾರೆ ಮತ್ತು ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರುತ್ತಾರೆ. ಶುಕ್ರನು 29 ಜೂನ್ 2025 ರಂದು ಮಧ್ಯಾಹ್ನ 02:17 ಕ್ಕೆ ವೃಷಭ ರಾಶಿಗೆ ಸಾಗಿದ್ದಾನೆ. ಅಲ್ಲಿ ಅವನು 26 ಜುಲೈ 2025 ರಂದು ಬೆಳಗ್ಗೆ 09:02ರ ವರೆಗೆ ಇರುತ್ತಾನೆ. ಶುಕ್ರನ ಈ ಸಂಚಾರವು ಕೇಂದ್ರ ತ್ರಿಕೋನ ಮತ್ತು ಮಾಲವ್ಯ ರಾಜ ಯೋಗವನ್ನು ಸೃಷ್ಟಿಸಲಿದೆ. ಇದು ಹಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ.

ಈ ರಾಜಯೋಗಗಳ ಪ್ರಭಾವವು ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಬೀರುತ್ತಿದೆ. ಅದ್ರಲ್ಲೂ ಕೇಂದ್ರ ತ್ರಿಕೋನ ರಾಜಯೋಗವು ಹಲವು ರಾಶಿಗಳಿಗೆ ಶುಭಯೋಗ ತರಲಿದೆ. ಯಾರಿಗೆ ಈ ಯೋಗದಿಂದ ಲಾಭದಾಯಕ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯ 2 ನೇ ಮನೆಯಲ್ಲಿ ಕೇಂದ್ರ ತ್ರಿಕೋನ ರಾಜಯೋಗ ರೂಪುಗೊಳ್ಳುತ್ತಿದೆ. ಇದರಿಂದಾಗಿ ಈ ರಾಶಿಯವರಿಗೆ ಕಾಲಕಾಲಕ್ಕೆ ಹಠಾತ್ ಆರ್ಥಿಕ ಲಾಭಗಳು ಒಲಿಯಲಿವೆ. ಹಲವು ಮಾರ್ಗಗಳಿಂದ ಹಣ ಬರುತ್ತದೆ. ನೀವು ನಿರೀಕ್ಷಿಸದ ಮೂಲದಿಂದಲೂ ನಿಮಗೆ ಹಣಕಾಸು ಸಿಗಬಹುದು. ಅದ್ರಲ್ಲೂ ನಿಮ್ಮ ಹಳೆಯ ಸಾಲಗಳು ಮರುಪಾವತಿಯಾಗಿ ನಿಮಗಿದ್ದ ಆತಂಕ ದೂರಾಗಲಿದೆ. ನಿಮ್ಮ ಔದ್ಯೋಗಿಕ ವಿಚಾರದಲ್ಲಿ ಅಚ್ಚರಿಯ ಯಶಸ್ವಿ ಫಲಿತಾಂಶ ಪಡೆಯಬಹುದು. ಹಲವರಲ್ಲಿ ಬಡ್ತಿಗೆ ಅವಕಾಶವಿದೆ. ದಾಂಪತ್ಯದಲ್ಲಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ.
ವೃಷಭ ರಾಶಿ
ವೃಷಭ ರಾಶಿಯ ಮೊದಲ ಮನೆಯಲ್ಲಿ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಂಡಿರುವುದರಿಂದ ವೃಷಭ ರಾಶಿಯವರ ವ್ಯಕ್ತಿತ್ವ ಉತ್ತಮಗೊಳಿಸುವ ಕಾರ್ಯವಾಗಲಿದೆ. ನಿಮ್ಮ ದಾಂಪತ್ಯದಲ್ಲಿದ್ದ ಸಮಸ್ಯೆಯೊಂದು ದೂರಾಗಲಿದೆ. ನಿಮ್ಮ ನ್ಯಾಯಾಲಯ ಸಂಬಂಧಿ ಸಮಸ್ಯೆಗಳು ಮನೆ ಕುರಿತಾದ ಸಮಸ್ಯೆಗಳು ದೂರಾಗಲಿವೆ. ಅವಿವಾಹಿತರಲ್ಲಿ ಶುಭ ಕಾರ್ಯ ಸಂಬಂಧವಾಗಿ ಶುಭ ಸೂಚನೆಗಳು ಸಿಗಬಹುದು. ವ್ಯಾಪಾರಿಗಳಲ್ಲಿ ಇದ್ದ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗಬಹುದು. ಬ್ಯಾಂಕಿಂಗ್ ವ್ಯವಹಾರಗಳು, ಮನೆಗೆ ಬೇಕಾಗಿದ್ದ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿಮಗೆ ಶುಭವಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ 9ನೇ ಮನೆಯಲ್ಲಿ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಂಡಿದೆ. ಇದರಿಂದಾಗಿ ಈ ರಾಶಿ ಜನರ ಅನಾರೋಗ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಬಹಳ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ದೂರ ಪ್ರಯಾಣಗಳಲ್ಲಿ ನೀವು ಬಯಸದೇ ಇರುವ ಫಲಿತಾಂಶ ಪಡೆಯಬಹುದು. ನೀವು ಉತ್ತಮ ಕೆಲಸಕ್ಕೆ ಬಯಸಿದ್ದ ಹಣಕಾಸು ನಿಮ್ಮ ಕೈ ಸೇರಲಿದೆ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಪಿತ್ರಾರ್ಜಿತ ಆಸ್ತಿ ಸಂಬಂಧ ಎದುರಾಗಿರುವ ಸಮಸ್ಯೆ ದೂರಾಗಬಹುದು. ಧನಾತ್ಮಕ ವಿಚಾರಗಳಲ್ಲಿ ಹೆಚ್ಚು ಒಲವು ಇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications