Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಯುಗಾದಿ ಭವಿಷ್ಯ 2025: ಹೊಸ ಸಂವತ್ಸರ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ಯುಗಾದಿ ಹಬ್ಬದ ಶುಭಾಶಯಗಳು, ಹೊಸ ಸಂವತ್ಸರ ನಿಮ್ಮ ಬದುಕಿನಲ್ಲಿ ಹೊಸತನ ತುಂಬಲಿ, ಸಂಪತ್ತು,ಆರೋಗ್ಯ ವೃದ್ಧಿಸಲಿ, ಕುಟುಂಬದಲ್ಲಿ ನೆಮ್ಮದಿ ನೆಲೆಸಲಿ, ಹೊಸ ಸಂವತ್ಸರ ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಹೊಸ ಸಂವತ್ಸರ ಮೇಷ ರಾಶಿಯವರಿಗೆ ಶುಭವಾಗಿದೆ. ನಿಮ್ಮ ಕೀರ್ತಿ, ಸಂಪತ್ತು ವೃದ್ಧಿಸಲಿದೆ. ಕುಟುಂಬದ ಕಡೆಗೆ ಗಮನಹರಿಸಬೇಕು, ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಗಟ್ಟಿಯಾಗಿಸಲು ಪ್ರಯತ್ನ ಹಾಕಬೇಕು.

ವೃಷಭ ರಾಶಿ
ವೃಷಭ ರಾಸಿಯವರಿಗೆ ಮಿಶ್ರಪಲ. ಗುರು ಸಂಚಾರ ನಿಮಗೆ ಶುಭ ಫಲ ನೀಡಲಿದೆ, ಧನ ಲಾಭ ತರಲಿದೆ. ಶನಿ ಸಂಚಾರ ನಿಮಗೆ ಶುಭ ಲಾಭ ತರಲಿದೆ. ವ್ಯಾಪಾರಸ್ಥರು ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಮಿಶ್ರಫಲ, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಉದ್ಯೋಗದಲ್ಲಿ ಅಭಿವೃದ್ಧಿ ಕಂಡು ಬರಲಿದೆ. ಆದರೆ ನಿಮಗೆ ಅಥವಾ ಕಟುಂಬದ ಸದಸ್ಯರಿಗೆ ಆರೋಗ್ಯ ಸಮಸ್ಯೆವಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಕರ್ಕ ರಾಶಿ
ಹಣದ ವ್ಯವಹಾರದ ಬಗ್ಗೆ ಜಾಗ್ರತೆ ಮಾಡಬೇಕು. ಕೆಲಸದ ಜಾಗದಲ್ಲಿ ಮಾನಸಿಕ ಒತ್ತಡ ಹೆಚ್ಚಿರಬಹುದು, ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಶನಿ ಧೈಯ್ಯದಿಂದ ಮುಕ್ತರಾಗುವುದರಿಂದ ಸಮಸ್ಯೆಗಳು ಎದುರಾದರು ಅದನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯವಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಯುಗಾದಿ ಸಂವತ್ಸರ ಶುಭ ಫಲ ನೀಡಲಿದೆ. ಗುರು ಸಂಚಾರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ನೀಡಲಿದೆ. ಶನಿ ಸಂಚಾರ ಹಣದ ವಿಚಾರದಲ್ಲಿ ಅಡಚಣೆ , ಕುಟುಂಬದವರಿಂದ ಅವಮಾನ ಕೆಲವು ಕಷ್ಟದ ಪರಿಸ್ಥಿತಿ ತರಬಹುದು. ಪ್ರತಿಕೂಲ ಸಂದರ್ಭದಲ್ಲಿ ತಾಳ್ಮೆಯಿಂದ ನಡೆದುಕೊಳ್ಳಿ.
ಕನ್ಯಾ ರಾಶಿ
ಗುರು ಸಂಚಾರ ಖರ್ಚು ಹೆಚ್ಚಿಸಲಿದೆ, ವ್ಯಾಪಾರಸ್ಥರಿಗೆ ಕೆಲವು ಸವಾಲುಗಳನ್ನು ತರಬಹುದು. ಶನಿ ಸಂಚಾರ ಶತ್ರುಗಳಿಂದ ತೊಂದರೆ, ಧನಹಾನಿ, ಅನಾರೋಗ್ಯ ಈ ಬಗೆಯ ಸಮಸ್ಯೆ ಉಂಟು ಮಾಡಬಹುದು. ವ್ಯಾಪಾರಿಗಳು ಹಣದ ಹೂಡಿಕೆ ಮಾಡುವಾಗ ಜಾಗ್ರತೆ ಮಾಡಿ.
ತುಲಾ ರಾಶಿ
ಈ ಯುಗಾದಿ ಸಂವತ್ಸರ ನಿಮಗೆ ಶುಭ ಫಲ ನೀಡಲಿದೆ. ವ್ಯಾಪಾರಿಗಳು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಸರ್ಕಾರಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಫಲ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಕೆಲಸದಲ್ಲಿ ಬಡ್ತಿ ಸಿಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಆರ್ಥಿಕ ಬದುಕಿನಲ್ಲಿ ಪ್ರಯೋಜನ ಪಡೆಯುತ್ತೀರಿ. ಆಸ್ತಿ ಖರೀದಿಗೆ ಪ್ರಯತ್ನ ಮಾಡಿದರೆ ನಿಮ್ಮ ಕನಸು ನನಸಾಗಲಿದೆ. ಕುಟುಂಬದ ಕಡೆಗೆ ಗಮನಹರಿಸಿ, ಸಂಬಂಧದಲ್ಲಿ ಭಿನ್ನಾಭಿಪ್ರಾಯ ಉಂಟಾದರೆ ಅದನ್ನು ಬಗೆಹರಿಸಲು ಪ್ರಯತ್ನಿಸಬೇಕು.
ಧನು ರಾಶಿ
ಯುಗಾದಿ ನಿಮಗೆ ಶುಭ ಲಾಭ ನೀಡಲಿದೆ. ಶನಿ ಸಂಚಾರ ಕೆಲ ಸಮಸ್ಯೆ ತರಬಹುದು, ಆದರೆ ಗುರುವಿನ ಸ್ಥಾನ ಬಲವಾಗಿರುವುದರಿಂದ ನೀವು ಉದ್ಯೋಗದಲ್ಲಿ ಪ್ರಗತಿ ಕಾಣಬಹುದು. ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.
ಮಕರ ರಾಶಿ
ಮಕರ ರಾಶಿಯವರು ಸ್ವಲ್ಪ ಜಾಗ್ರತೆವಹಿಸಬೇಕು. ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಿ. ಶನಿ ಸಂಚಾರ ನಿಮಗೆ ಶುಭ ಫಲ ನೀಡಲಿದೆ. ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ.
ಕುಂಭ ರಾಶಿ
ಗುರು ಸಂಚಾರ ನಿಮಗೆ ಶುಭ ಫಲ ಈಡಲಿದೆ. ಶನಿ ಸಂಚಾರ ಅಶುಭ ಫಲ ನೀಡುವುದು, ವ್ಯಾಪಾರಿಗಳು ಸವಾಲುಗಳನ್ನು ಎದುರಿಸಬಹುದು, ಉದ್ಯೋಗ ಕ್ಷೇತ್ರದಲ್ಲಿ ಅಡೆತಡೆ ಎದುರಿಸಬಹುದು. ನೀವು ಹೆಚ್ಚು ಶ್ರಮ ಹಾಕಬೇಕಾಗುತ್ತದೆ.
ಮೀನ ರಾಶಿ
ಗುರು ಸಂಚಾರ ಮೀನ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿದೆ. ಆದರೆ ಮೀನ ರಾಶಿಯಲ್ಲಿ ಶನಿ ಸಂಚಾರ ಮಾನಸಿಕ ಒತ್ತಡ ಹೆಚ್ಚಿಸಬಹುದು, ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಸವಾಲು ಎದುರಿಸಬಹುದು. ಉದ್ಯೋಗದಲ್ಲಿ ಅಧ್ರತೆ ಕಾಡಬಹುದು. ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
