Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ವರ್ಷದ ಲಕ್ಷ್ಮಿ ಪೂಜೆ ಈ 5 ಯೋಗಗಳಿಂದಾಗಿ ತುಂಬಾನೇ ವಿಶೇಷ
ಈ ವರ್ಷ ನವೆಂಬರ್ 12-14ರವರೆಗೆ ದೀಪಾವಳಿ ಹಬ್ಬವನ್ನು ಆಚರಿಸಲಾಗುವುದು. ನಮ್ಮಲ್ಲಿ ಗೋವರ್ಧನ ಪೂಜೆಗೆ ದೀಪಾವಳಿ ಆಚರಣೆ ಮುಕ್ತಾಯವಾದರೆ ಉತ್ತರ ಭಾರತದ ಕಡೆ ಭಾಯಿ ದೂಜ್ ಎಂದು ಆಚರಿಸಲಾಗುವುದು. ಈ ವರ್ಷ ಭಾನುವಾರ ಅಕ್ಟೋಬರ್ 12ರಂದು ಲಕ್ಷ್ಮಿ ಪೂಜೆ ಬಂದಿದೆ. ಈ ಲಕ್ಷ್ಮಿ ಪೂಜೆಯಂದು ವಿಶೇಷ ಯೋಗಗಳು ರೂಪುಗೊಂಡಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಲಕ್ಷ್ಮಿ ಪೂಜೆಯಂದೇ ರಾಜಯೋಗ ಉಂಟಾಗಿರುವುದು ಇನ್ನೂ ವಿಶೇಷ. ಲಕ್ಷ್ಮಿ ಪೂಜೆಯಂದು ಉಂಟಾಗಿರುವ 5 ಶುಭ ಯೋಗಗಳ ಯಾವುವು ಎಂದು ನೋಡೋಣ ಬನ್ನಿ:

ನವೆಂಬರ್ 12ರಂದು ಲಕ್ಷ್ಮಿ ಪೂಜೆಯಂದು 5 ಶುಭಯೋಗ
ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆ ಮಾಡಲಾಗುವುದು. ಈ ದಿನ ಮೊದಲಿಗೆ ಗಣೇಶನಿಗೆ ಪೂಜೆ ಮಾಡಿ ನಂತರ ಲಕ್ಷ್ಮಿಯನ್ನು ಆರಾಧಿಸಲಾಗುವುದು. ಪ್ರದೋಷ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಲಾಗುವುದು, ಈ ಸಮಯ ಲಕ್ಷ್ಮಿ ಪೂಜೆಗೆ ತುಂಬಾ ಶ್ರೇಷ್ಠವಾಗಿರುವುದರಿಂದ ಸಂಜೆ ಹೊತ್ತಿಗೆ ಪೂಜೆ ಮಾಡಬೇಕು. ದೀಪಾವಳಿಯ ಸಂಜೆ ಲಕ್ಷ್ಮಿ ಪೂಜೆಯು ನಡೆಯುವಾಗ, 5 ರಾಜಯೋಗವೂ ರೂಪುಗೊಳ್ಳುತ್ತದೆ. ಇದಲ್ಲದೇ ಆಯುಷ್ಮಾನ್, ಸೌಭಾಗ್ಯ, ಮಹಾಲಕ್ಷ್ಮಿ ಯೋಗವೂ ರೂಪುಗೊಳ್ಳಲಿದೆ. ಈ ರೀತಿಯಾಗಿ ಒಟ್ಟು 8 ಶುಭ ಯೋಗಗಳಿರುವುದರಿಂದ ಈ ಬಾರಿ ಲಕ್ಷ್ಮಿ ಪೂಜೆಯಿಂದ ಹೆಚ್ಚಿನ ಫಲ ಪಡೆಯುವಿರಿ.
ಯಾವೆಲ್ಲಾ ಯೋಗಗಳು ಏರ್ಪಡಲಿದೆ?
ಗಜಕೇಸರಿ, ಹರ್ಷ, ಉಭಯಚಾರಿ, ಕಹಲ್ ಮತ್ತು ದುರ್ಧರ ಎಂಬ 5 ಯೋಗಗಳು ಏರ್ಪಡಲಿದೆ. ಶುಕ್ರ, ಬುಧ, ಚಂದ್ರ ಮತ್ತು ಗುರುಗಳ ಸ್ಥಾನಗಳಿಂದಾಗಿ ಈ ರಾಜಯೋಗವು ರೂಪುಗೊಳ್ಳುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಗಜಕೇಸರಿ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುವುದುದು. ಗಜ ಕೇಸರಿ ಯೋಗ ಗೌರವ ಹೆಚ್ಚಿಸುತ್ತದೆ. ಹರ್ಷ ಯೋಗವು ಸಂಪತ್ತು ಮತ್ತು ಖ್ಯಾತಿಯನ್ನು ಹೆಚ್ಚಿಸುತ್ತದೆ. ಉಳಿದ ಕಹಲ್, ಅಭಯಾಚಾರಿ ಮತ್ತು ದುರ್ಧರ ಯೋಗಗಳು ಶುಭ ಮತ್ತು ಶಾಂತಿಯನ್ನು ತರುತ್ತವೆ. ಅದೇ ಸಮಯದಲ್ಲಿ, ಹಲವು ವರ್ಷಗಳ ನಂತರ, ದೀಪಾವಳಿಯಂದು ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಉಪಸ್ಥಿತಿ ಇರುವುದರಿಂದ ಶಶ ಮಹಾಪುರುಷ ರಾಜಯೋಗ ಉಂಟಾಗಿದೆ. ಇದಲ್ಲದೇ ದೀಪಾವಳಿಯಂದು ಆಯುಷ್ಮಾನ್ ಮತ್ತು ಸೌಭಾಗ್ಯ ಯೋಗ ಕೂಡ ಸೃಷ್ಟಿಯಾಗಲಿದೆ. ಈ ಎಲ್ಲಾ ಕಾರಣದಿಂದ ಈ ಬಾರಿಯ ಲಕ್ಷ್ಮಿ ಪೂಜೆ ತುಂಬಾನೇ ವಿಶೇಷವಾಗಿದೆ.
ನವೆಂಬರ್ 12 ರಂದು ಬೆಳಿಗ್ಗೆ ಚತುರ್ದಶಿ , ಮಧ್ಯಾಹ್ನ ಅಮವಾಸ್ಯೆಯ ತಿಥಿ.
ಈ ವರ್ಷ ಚೋಟಿ ದೀಪಾವಳಿ ಹಾಗೂ ದೀಪಾವಳಿಯನ್ನುಒಂದೇ ದಿನದಂದು ಆಚರಿಸಲಾಗುವುದು. ನವೆಂಬರ್ 12ರಂದು 2.30 ರ ನಂತರ ಅಮವಾಸ್ಯೆಯ ತಿಥಿ ಪ್ರಾರಂಭವಾಗುತ್ತದೆ. ಶಾಸ್ತ್ರಗಳ ಪ್ರಕಾರ ಲಕ್ಷ್ಮಿ ಪೂಜೆಯನ್ನು ಯಾವಾಗಲೂ ಅಮಾವಾಸ್ಯೆಯಂದೇ ಮಾಡಲಾಗುವುದು. ಅಮಾವಾಸ್ಯೆ ತಿಥಿಯು ನವೆಂಬರ್ 13 ರಂದು ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ಇರುತ್ತದೆ.
ದೀಪಾವಳಿಯಂದು ಲಕ್ಷ್ಮಿ-ಗಣೇಶ ಪೂಜೆಯ ಶುಭ ಸಮಯ- 12 ನವೆಂಬರ್ 2023
ಲಕ್ಷ್ಮೀ ಪೂಜೆ ಮುಹೂರ್ತ: ಸಂಜೆ 05:40 ರಿಂದ 07:36 ರವರೆಗೆ.
ಅವಧಿ: 01 ಗಂಟೆ 54 ನಿಮಿಷ
ಪ್ರದೋಷ ಕಾಲ- ಸಂಜೆ 05:29 ರಿಂದ ರಾತ್ರಿ 08:07
ವೃಷಭ ರಾಶಿ- 05:40 ರಿಂದ 07:36
ದೀಪಾವಳಿ ಮಹಾನಿಶಿತ ಕಾಲ ಪೂಜೆ ಮುಹೂರ್ತ
ಲಕ್ಷ್ಮೀ ಪೂಜೆ ಮುಹೂರ್ತ- 11:39 ರಿಂದ 12:31
ಅವಧಿ - 52 ನಿಮಿಷಗಳು
ಮಹಾನಿಶಿತ ಕಾಲ- 11:39 ರಿಂದ 12:31
ಸಿಂಹ ರಾಶಿ- 12:12 ರಿಂದ 02:30
ದೀಪಾವಳಿಯ ಚೋಘಾಡಿಯ ಪೂಜಾ ಮುಹೂರ್ತ
ಮಧ್ಯಾಹ್ನ ಮುಹೂರ್ತ - 01:26 ರಿಂದ 02:47 ರವರೆಗೆ
ಸಂಜೆ ಮುಹೂರ್ತ - 05:29 ರಿಂದ 10:26
ರಾತ್ರಿ ಮುಹೂರ್ತ- 01:44 ರಿಂದ 03:23
ಉಷಕಾಲ ಮುಹೂರ್ತ - 05:02 ರಿಂದ 06:41 ರವರೆಗೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
