Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಅಯ್ಯಪ್ಪ ಸ್ವಾಮಿ ದೀಕ್ಷೆ ಯಾವಾಗ ತೆಗೆದುಕೊಳ್ಳಬೇಕು? ದೇವಾಲಯದ ಬಾಗಿಲು ಯಾವಗೆಲ್ಲಾ ಓಪನ್ ಇದೆ?
ಡಿಸೆಂಬರ್ ಮಾಸದಲ್ಲಿ ಲಕ್ಷಾಂತರ ಅಯ್ಯಪ್ಪ ಭಕ್ತರು ಸ್ವಾಮಿ ಮಾಲೆ ಧರಿಸಿ ಕಟ್ಟು ನಿಟ್ಟಿನ ವ್ರತ ನಿಯಮ ಪಾಲಿಸಿ, ಜನವರಿಯಲ್ಲಿ ಮಕರ ವಿಳಕ್ಕು ದರ್ಶನಕ್ಕೆ ಹೋಗುತ್ತಾರೆ. ಕೇರಳದಲ್ಲಿರುವ ಶಬರಿಮಲೆ ಕ್ಷೇತ್ರಕ್ಕೆ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಂದ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಬರುತ್ತಾರೆ.
ಅಯ್ಯಪ್ಪ ದೀಕ್ಷೆಯ ಸಮಯದಲ್ಲಿ ಮಾಲೆ ಧರಿಸಿ ಮಕರ ವಿಳಕ್ಕು ದರ್ಶನ ಪಡೆದು ಬರುತ್ತಾರೆ. ಈ ವರ್ಷ ನೀವು ಮಲೆಗೆ ಮಾಲೆ ಹಾಕುವುದಾರೆ ಮಂಡಲ ಪೂಜೆ, ದೀಕ್ಷ ತೆಗೆದುಕೊಳ್ಳುವ ದಿನ ಎಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ:

ಅಯ್ಯಪ್ಪ ದೀಕ್ಷೆಯನ್ನು ಮಂಡಲ ಪೂಜೆಯಂದು ತೆಗೆದುಕೊಳ್ಳಲಾಗುವುದು.
ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ಯಾವಾಗ ಓಪನ್ ?
ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ನವೆಂಬರ್ 16, ಮಂಡಲ ಪೂಜೆಯಿಂದ ಭಕ್ತರ ದರ್ಶನಕ್ಕೆ ತೆರೆದಿರುತ್ತದೆ.
2024ರಲ್ಲಿ ಶಬರಿಮಲೆ ಪೂಜೆ
ಡಿಸೆಂಬರ್ 26ರವರೆಗೆ ಇಡೀ ದಿನ ಹಾಗೂ ರಾತ್ರಿ ಸಮಯದಲ್ಲಿ ದರ್ಶನಕ್ಕೆ ಅವಕಾಶವಿದೆ.
ಡಿಸೆಂಬರ್ 26, 2024: ಮಂಡಲ ಪೂಜೆ
ಡಿಸೆಂಬರ್ 26, 2024 ರಾತ್ರಿ: ದೇವಾಲಯದ ಬಾಗಿಲು ಮುಚ್ಚಲಾಗುವುದು
ನಂತರ ಡಿಸೆಂಬರ್ 30ಕ್ಕೆ ಮತ್ತೆ ಭಕ್ತರು ಬಂದು ದರ್ಶನ ಪಡೆಯಲು ದೇವಾಲಯ ಓಪನ್ ಆಗುವುದು
2025 ಜನವರಿ 14ಕ್ಕೆ ಮಕರ ವಿಳಕ್ಕು
ಜನವರಿ 14ಕ್ಕೆ ಮಕರ ಜ್ಯೋತಿ ನೋಡಲು ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಬರುತ್ತಾರೆ, ದೇವಾಲಯದ ಬಾಗಿಲು ಜನವರಿ 20, 2025ರವರೆಗೆ ತೆರೆದಿರುತ್ತದೆ.
41 ದಿನಗಳ ದೀಕ್ಷೆ ತೆಗೆದುಕೊಂಡು ಅಯ್ಯಪ್ಪಸ್ವಾಮಿ ದರ್ಶನಕ್ಕೆ ಬರುತ್ತಾರೆ:
ಅಯ್ಯಪ್ಪ ಸ್ವಾಮಿ ದೀಕ್ಷೆಯನ್ನು 41 ದಿಇನಗಳವರೆಗೆ ತೆಗೆದುಕೊಳ್ಳುತ್ತಾರೆ, ಮಕರ ವಿಳಕ್ಕು ಅಥವಾ ಮಕರ ಜ್ಯೋತಿಗಿಂತ 41 ದಿನ ಮೊದಲು ದೀಕ್ಷೆ ತೆಗೆದುಕೊಳ್ಳಲಾಗುವುದು, ಮೊದಲ ಬಾರಿಗೆ ಮಲೆಗೆ ಮಾಲೆ ಹಾಕುವವರು 41ದಿನಗಳ ದೀಕ್ಷೆ ತೆಗೆದುಕೊಂಡರೆ, ಗುರು ಸ್ವಾಮಿಗಳು 21ದಿನಗಳ ದೀಕ್ಷೆ ತೆಗೆದುಕೊಳ್ಳುವುದುಂಟು, ಇನ್ನು ಕೆಲವರು 81 ದಿನ, 116 ದಿನ ಕೂಡ ತೆಗೆದುಕೊಳ್ಳುತ್ತರೆ.
ದೀಕ್ಷಾ ನಿಯಮಗಳು
- ಅಯ್ಯಪ್ಪ ದ್ವಾಮಿ ಮಾಲೆ ಹಾಕಿದ ಮೇಲೆ ಸಾತ್ವಿಕ, ಲಘು ಆಹಾ ಸೇವಿಸಬೇಕು: ಹಳಸಲು ಆಹಾರ ಸೇವಿಸಬಾರದು, ಸ್ನಾನ ಮಾಡಿದ ಬಳಿಕ ಆಹಾರ ಮಾಡಿ ಸೇವಿಸಬೇಕು. ಅಯ್ಯಪ್ಪಸ್ವಾಮಿ ಮಾಲೆ ಹಾಕಿದವರಿಗೆ ಅಡುಗೆ ಮಾಡಿ ಬಡಿಸುವವರು ಕೂಡ ಶುದ್ಧತೆ ಕಡೆ ಗಮನಹರಿಸಬೇಕು, ರಾತ್ರಿ ಮಾಡಿದ ಆಹಾರ ಬೆಳಗ್ಗೆ ಸೇವಿಸಬಾರದು, ಸಾತ್ವಿಕ ಆಹಾರ ಮಾತ್ರ ಸೇವಿಸಬೇಕು. ಪೂಜೆಗೆ ಮೊದಲು ಆಹಾರ ಸೇವಿಸಬಾರದು.
- ಬೆಳಗ್ಗೆ ಮತ್ತು ಸಂಜೆ ತಣ್ಣೀರಿನಲ್ಲಿ ಸ್ನಾನ ಮಾಡಬೇಕು: ಸೂರ್ಯೋದಯಕ್ಕೆ ಮೊದಲು ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಬೇಕು, ನದಿ ನೀರಿನ ಸ್ನಾನ ಒಳ್ಳೆಯದು
- ಕಾಲಿಗೆ ಚಪ್ಪಲಿ ಧರಿಸುವಂತಿಲ್ಲ: ಕೆಲವರು ಹವಾಯಿ ಚಪ್ಪಲಿ ಧರಿಸುತ್ತಾರೆ, ಆದರೆ ವ್ರತ ನಿಯಮದ ಪ್ರಕಾರ ಕಾಲಿಗೆ ಚಪ್ಪಲಿ ಧರಿಸಲೇಬಾರದು
- ಬೀಡಿ, ಸಿಗರೇಟ್, ಮಾಂಸ, ಮದ್ಯ ಇವುಗಳಿಂದ ದೂರವಿರಬೇಕು
- ಸ್ತ್ರೀ ಸಂಪರ್ಕ ಮಾಡುವಂತಿಲ್ಲ: ಈ ಸಮಯದಲ್ಲಿ ದೈಹಿಕ ಆಸೆಯಿಂದ ದೂರವಿರಬೇಕು, ರೊಮ್ಯಂಟಿಕ್ ಮಾತಗಳನ್ನಾಡುವುದು ಏನೂ ಮಾಡಬಾರದು.
- ಮನಸ್ಸಿನಲ್ಲಿ ಕೆಟ್ಟದ್ದು ಆ ಆಲೋಚಿಸಬಾರದು, ಸದಾ ಅಯ್ಯಪ್ಪಸ್ವಾಮಿ ನಾಮ ಜಪಿಸುತ್ತಲೇ ಇರಬೇಕು.
- ಕೋಪಗೊಳ್ಳಬಾರದು
- ಯಾರನ್ನೂ ನಿಂದಿಸಬಾರದು
- ಹಾಸಿಗೆಯಲ್ಲಿ ಮಲಗಬಾರದು: ನೆಲದ ಮೇಲೆ ಅಥವಾ ಬರಿ ಚಾಪೆಯಲ್ಲಿ ಮಲಗಬೇಕು
- ಹೀಗೆ ಕಟ್ಟುನಿಟ್ಟಿನ ದೀಕ್ಷೆ ತೆಗೆದುಕೊಳ್ಳಬೇಕು.
- ಮಾಲೆ ಧರಿಸುವ ಮುನ್ನವೇ ಈ ನಿಯಮ ಪಾಲಿಸಬೇಕು.
ವಸ್ತ್ರ: ಕಪ್ಪು ವಸ್ತ್ರವನ್ನೇ ಧರಿಸಬೇಕು, ಕಪ್ಪು ಪಂಚೆ, ಕಪ್ಪು ಶಾಲು ಹಾಕಿರುತ್ತಾರೆ, ಗುರು ಸ್ವಾಮಿಗಳು ಅಂದರೆ ಮೂರು ಬಾರಿಗಿಂತ ಹೆಚ್ಚು ಬಾರಿ ಮಾಲೆ ಹಾಕಿದವವರು ಖಾವಿ ಬಟ್ಟೆ ಧರಿಸುತ್ತಾರೆ. ವಸ್ತ್ರ ನೋಡಿದಾಗಲೇ ಅವರ ಅಯ್ಯಪ್ಪಸ್ವಾಮಿ ವ್ರತ ನಿಯಮದಲ್ಲಿರುತ್ತಾರೆ ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications