Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ರಾಹು ಸಂಕ್ರಮಣ 2025: ಈ 4 ರಾಶಿಯವರಿಗೆ ಬದಲಾಗಲಿದೆ ಯೋಗ..!
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹುವನ್ನು ಒಬ್ಬರ ಜೀವನ ಬದಲಿಸುವಷ್ಟು ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ನೆರಳಿನ ಗ್ರಹ ಎಂದು ರಾಹುವನ್ನು ಕರೆಯಲಾಗುತ್ತದೆ. ಸಾಮಾನ್ಯವಾಗಿ ರಾಹುವನ್ನು ಅಶುಭಕರ ಗ್ರಹವೆಂದು ಕೂಡ ಕರೆಯಲಾಗಿದೆ. ರಾಹುವಿನ ಚಲನೆಯಲ್ಲಿ ಬದಲಾವಣೆಯಾದಾಗ 12 ರಾಶಿಗಳಲ್ಲೂ ಒಂದಿಷ್ಟು ಬದಲಾವಣೆಯಾಗುವುದು ನೋಡಬಹುದು. ಹೋಗಾಗಿ ರಾಹು ಯಾವುದೇ ಗ್ರಹದಲ್ಲಿದ್ದರೂ ಎಲ್ಲಾ ರಾಶಿಯವರಿಗೂ ಅದರ ಪ್ರಭಾವ ಉಂಟಾಗಲಿದೆ.
ಸದ್ಯ ರಾಹು ಶನಿಯ ನಕ್ಷತ್ರವಾದ ಉತ್ತರಾಷಾಢ ಪ್ರವೇಶಿಸಲಿದೆ. ರಾಹುವಿನ ಈ ಬದಲಾವಣೆಯು ಹಲವು ರಾಶಿಯವರ ಮೇಲೆ ಪ್ರಭಾವ ಬೀರುತ್ತಿದೆ. ಹಾಗಾದ್ರೆ ನಾವಿಂದು ರಾಹು ಶನಿಗ್ರಹದ ಉತ್ತರಾಷಾಢ ನಕ್ಷತ್ರ ಪ್ರವೇಶಿಸುವುದು ಯಾವೆಲ್ಲಾ ರಾಶಿಯವರಿಗೆ ಯಾವ ರೀತಿಯ ತೊಡಕು, ಲಾಭಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಮೇಷ ರಾಶಿ
ರಾಹುವಿನ ಸಂಚಾರವು ಮೇಷ ರಾಶಿಯವರಿಗೆ ಲಾಭವಾಗುತ್ತಿದೆ. ಈ ರಾಶಿಯವರ ಜಾತಕದ ದೋಷ ನಿವಾರಣೆಯ ಸಾಧ್ಯತೆ ಇದೆ. ಹಲವು ವರ್ಷದಿಂದ ಉಂಟಾದ ಕಂಟಕವೊಂದು ನಿರ್ಮೂಲನೆಯಾಗುವ ಸಮವಿದು. ಹಾಗೆ ನಿಮಗೆ ಅನೇಕ ಶುಭ ಸುದ್ದಿಗಳು, ಒಳ್ಳೆಯ ದಿನಗಳು ಮುಂದೆ ಬರಲಿವೆ. ನಿಮ್ಮಲ್ಲಿ ಆರ್ಥಿಕ ಪ್ರಗತಿ ಕಾಣಬಹುದಾಗಿದೆ, ಹೀಗಾಗಿ ನೀವು ಮತ್ತಷ್ಟು ಉತ್ತಮ ಕಾರ್ಯಗಳ ಮಾಡಲು ಮುಂದಾಗಬಹುದು. ಉದ್ಯೋಗ ಹುಡುಕುತ್ತಿದ್ದವರಿಗೆ ನೀವು ಬಯಸಿದಂತೆ ಕೆಲಸ ಸಿಗಬಹುದು. ಹಾಗೆ ಬಹಳ ದಿನದಿಂದ ನೀವು ಮಾಡಬೇಕಿದ್ದ ಕೆಲಸಗಳು ಅರ್ಧಕ್ಕೆ ನಿಂತಿದ್ದರೆ ಈ ಸಮಯದಲ್ಲಿ ಯಾವುದೇ ಅಡೆತಡೆಯಿಲ್ಲದೆ ಮಾಡಿ ಮುಗಿಸಬಹುದು.
ಕರ್ಕ ರಾಶಿ
ಕರ್ಕಾಟಕ ರಾಶಿಯವರು ರಾಹು ಸಂಚಾರದಿಂದ ಅನೇಕ ಲಾಭಗಳನ್ನು ಪಡೆಯಲಿದ್ದಾರೆ. ನಿಮ್ಮ ವೈಯಕ್ತಿಕ ವರ್ಚಸ್ಸು ಹೆಚ್ಚಾಗಲಿದೆ. ನಿಮಗೆ ಅಗತ್ಯವಾಗಿ ಬೇಕಿದ್ದ ವಸ್ತುವೊಂದು ಈ ಸಮಯದಲ್ಲಿ ನೀವು ಖರೀದಿಸುತ್ತೀರಿ. ಅವಿವಾಹಿತರಿಗೆ ಶುಭ ಸುದ್ದಿಗಳು ಕೇಳಿಬರಲಿವೆ. ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುವವರಿಗೆ ಒಳ್ಳೆಯ ದಿನಗಳಿವೆ. ಕುಟುಂಬಸ್ಥರಲ್ಲಿ ನಿಮ್ಮ ಕಡೆಗಿದ್ದ ಭಾವನೆ ಬದಲಾಗಲಿದೆ. ಅವರಿಂದ ನಿಮ್ಮ ಕೆಲಸಕ್ಕೆ ಬೆಂಬಲ ಸಿಗಲಿದೆ. ಹೊಸ ವ್ಯಾಪಾರ, ವ್ಯವಹಾರ ಆರಂಭಿಸುವವರಿಗೆ ಶುಭವಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ರಾಹು ಸಂಚಾರದಿಂದ ಅನೇಕ ಆರ್ಥಿಕ ಲಾಭಗಳು ಒಲಿದು ಬರಲಿವೆ. ಹಾಗೆ ಈ ರಾಶಿಯವರಲ್ಲಿ ಆರ್ಥಿಕ ಪ್ರಗತಿಗೆ ಕಾರಣರಾಗಲಿದ್ದೀರಿ. ಕೆಲವು ಅದೃಷ್ಟದಿಂದ ನಿಮ್ಮ ಬಯಕೆಗಳು ಈಡೇರಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ನಿಮ್ಮ ವ್ಯಾಪಾರ ವ್ಯವಹಾರವು ಕೂಡ ನಿಮ್ಮ ಲಾಭಕ್ಕೆ ಕಾರಣವಾಗಲಿದೆ. ಈ ರಾಶಿ ಜನರು ಹೊಸ ಕ್ಷೇತ್ರದಲ್ಲಿ ವ್ಯವಹಾರವನ್ನು ಪ್ರಾರಂಭಿಸುವ ಅವಕಾಶವನ್ನು ಪಡೆಯುತ್ತಾರೆ. ಹಾಗೆ ನಿಮ್ಮಲ್ಲಿ ಹೊಸ ಆದಾಯ ಮೂಲ ಹುಟ್ಟಿಕೊಳ್ಳಬಹುದು.
ಮೀನ ರಾಶಿ
ರಾಹು ಸಂಚಾರದಿಂದಾಗಿ ಮೀನರಾಶಿಯ ಜನರಿಗೆ ಅತ್ಯಧಿಕ ಆರ್ಥಿಕ ಲಾಭ ನೋಡಬಹುದು. ನೀವು ಬಯಸಿದಂತೆ ನಿಮ್ಮ ಕೆಲಸಗಳು ನಡೆಯಲಿವೆ. ಇದಕ್ಕೆ ಪೂರಕವಾಗಿ ನಿಮಗೆ ಲಾಭದಾಯಕವಾದ ವಿಚಾರಗಳು ನಡೆಯಬಹುದು. ನಿಮ್ಮ ಹಲವು ವರ್ಷದ ಹಿಂದಿನ ಕಂಕಟ ನಿವಾರಣೆಯಾಗಲಿದೆ. ರಾಹುವಿನಿಂದ ನೀವು ಅನುಭವಿಸಿದ್ದ ಕಷ್ಟಗಳು ನಿವಾರಣೆಯಾಗುತ್ತವೆ. ನಿಮ್ಮ ವ್ಯಾಪಾರಕ್ಕೆ ಅಡ್ಡಿಯಾಗಿದ್ದ ಸಮಸ್ಯೆ ಕೂಡ ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
