Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಅಕ್ಟೋಬರ್ 30ಕ್ಕೆ ರಾಹು-ಕೇತು ಸಂಚಾರ: ರಾಹು-ಕೇತು ದೋಷಕ್ಕೆ ಪರಿಹಾರವೇನು?
ಅಕ್ಟೋಬರ್ 30ರಂದು ಎರಡು ಪ್ರಮುಖ ಗ್ರಹಗಳು ರಾಶಿ ಬದಲಾವಣೆ ಮಾಡುತ್ತಿವೆ. ಈ ದಿನ ನೆರಳು ಗ್ರಹಗಳಾದ ರಾಹು ಹಾಗೂ ಕೇತು ಸಂಚಾರ. ಶನಿಯ ನಂತರ, ನಿಧಾನವಾಗಿ ಚಲಿಸುವ ಗ್ರಹಗಳು ರಾಹು ಮತ್ತು ಕೇತುಗಳಾಗಿವೆ. ರಾಹು-ಕೇತುಗಳು ಹಿಮ್ಮುಖವಾಗಿ ಚಲಿಸುತ್ತವೆ, ಈ ಗ್ರಹಗಳು 1.8 ವರ್ಷಕ್ಕೊಮ್ಮೆ ತಮ್ಮ ರಾಶಿ ಬದಲಾವಣೆ ಮಾಡುತ್ತವೆ. ಈ ಸಂಚಾರದಲ್ಲಿ ರಾಹು ಮೀನ ರಾಶಿಗೆ ಕೇತು ಕನ್ಯಾ ರಾಶಿಗೆ ಪ್ರವೇಶಿಸಲಿದೆ.
ರಾಹು-ಕೇತುವನ್ನು ಶುಭ ಗ್ರಹಗಳೆಂದು ಪರಿಗಣಿಸುವುದಿಲ್ಲ, ಇವುಗಳು ಅನೇಕ ಸಮಸ್ಯೆಗಳನ್ನು ತರುವ ಗ್ರಹಗಳಾಗಿರುವುದರಿಂದ ಇವುಗಳನ್ನು ಅಶುಭ ಗ್ರಹಗಳೆಂದು ಕರೆಯಲಾಗುವುದು. ಜ್ಯೋತಿಷ್ಯವು ರಾಹು-ಕೇತು ದೋಷಕ್ಕೆ ಕೆಲವು ಪರಿಹಾರ ಹೇಳಿದೆ, ಆ ಪರಿಹಾರಗಳೇನು ಎಂದು ನೋಡೋಣ:

ಮೊದಲಿಗೆ ರಾಹು-ಕೇತು ದೋಷ ವ್ಯಕ್ತಿಯ ಮೇಲೆ ಬೀರುವ ಪ್ರಭಾವವೇನು?
ರಾಹು-ಕೇತು ದೋಷವಿದ್ದಾಗ ಮಾನಸಿಕ ಅಸ್ವಸ್ಥತೆ, ಹಣಕಾಸಿನಲ್ಲಿ ನಷ್ಟ, ಕಾನೂನು ಸಂಬಂಧಿತ ಸಮಸ್ಯೆ, ಕುಟುಂಬದಲ್ಲಿ ಸಾವು ಅಥವಾ ಕಾಯಿಲೆ, ಬದುಕಿನಲ್ಲಿ ಇದ್ದಕ್ಕಿದ್ದಂತೆ ತುಂಬಾ ತೊಂದರೆ ಬರುವುದು, ತ್ವಚೆ ಸಮಸ್ಯೆ, ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ಈ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು.
ಕೇತುವಿನ ಸ್ಥಾನ ಸರಿಯಾಗಿ ಇಲ್ಲದಿದ್ದರೆ ಮೆದುಳಿನ ಸಮಸ್ಯೆ, ಕಿವಿ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಈ ರೀತಿಯ ತೊಂದರೆಗಳು ಉಂಟಾಗುವುದು. ರಾಹು-ಕೇತು ದೊಷವಿದ್ದರೆ ಬದುಕಿನ ಮೇಲೆ ತುಂಬಾನೇ ಋಣಾತ್ಮಕ ಪ್ರಭಾವ ಬೀರುವುದು.
ರಾಹು-ಕೇತುವಿಗೆ ಪರಿಹಾರ
* ಅನಾಥ ಮಕ್ಕಳಿಗೆ ಸಿಹಿತಿಂಡಿ ನೀಡಿ
* ದೋಷ ನಿವಾರಣ ಮಂತ್ರ 108 ಮಂತ್ರ ಪಠಿಸಿ.
* ರುದ್ರಾಕ್ಷ ಮಾಲೆ ಧರಿಸಿ
* ಬೆಳ್ಳಿಯ ನಿವಾರಣ ರಿಂಗ್ ಧರಿಸಿ
* ಶಿವನ ದೇವಾಲಯಕ್ಕೆ ಬೆಳ್ಳಿ ಅಥವಾಚಿನ್ನದ ಹೂವಿನ ಮೂರ್ತಿ ನೀಡಿ
* ಕೇತು, ರಾಹು ಮಂತ್ರ ಪಠಿಸಿ.
* ಸಾಸಿವೆಯೆಣ್ಣೆ ದಾನ ಮಾಡಿ
* ಬೀದಿ ನಾಯಿಗಳಿಗೆ ಆಹಾರ ನೀಡಿ.
* ಕಪ್ಪು ಬಟ್ಟೆ ಧರಿಸಿ
* ಹಳದಿ ಮತ್ತು ಬಿಳಿ ಕೇತುವಿಗೆ ಪ್ರಿಯವಾದ ಬಣ್ಣಗಳಾಗಿದೆ.
* ರಾಹು ದೋಷದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಅಥವಾ ನೀಲಿ ಬಣ್ಣದ ಕರವಸ್ತ್ರ ಇಟ್ಟುಕೊಳ್ಳಿ. ಕೇತುದೋಷದ ಸಂದರ್ಭದಲ್ಲಿ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ, ಗುಲಾಬಿ ಬಣ್ಣದ ಕರವಸ್ತ್ರ ಸದಾ ನಿಮ್ಮ ಜೊತೆ ಇರಿಸಿ.
* ಪ್ರತಿದಿಮ 108 ಬಾರಿ 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಿ. ಸೋಮವಾರ ರುದ್ರಾಭಿಷೇಕ ಮಾಡಿಸಿ.
* ರಾಹು ಮತ್ತು ಕೇತು ಗ್ರಹಗಳನ್ನು ಶಾಂತಗೊಳಿಸಲು, ಮನೆಯಲ್ಲಿ ಶ್ರೀಕೃಷ್ಣನ ಫೋಟೋವಿರಿಸಿ, ನಿತ್ಯವೂ ಪೂಜಿಸಿ.
* 'ಓಂ ನಮೋ ಭಗವತೇ ವಾಸುದೇವಾಯ ನಮಃ' ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
