Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಏಪ್ರಿಲ್ 5ಕ್ಕೆ , ಪಾಪವಿಮೋಚನೆ ಏಕಾದಶಿ: ಪಾರಣ ಸಮಯ ಯಾವಾಗ? ಪೂಜಾ ವಿಧಾನ, ವ್ರತ ಕತೆ
ವರ್ಷದಲ್ಲಿ 24 ಏಕಾದಶಿ, ಪ್ರತಿ ಮಾಸ 2 ಏಕಾದಶ ಬರುತ್ತದೆ, ಪ್ರತಿಯೊಂದು ಏಕಾದಶಿ ಅದರದ್ದೇ ಆದ ವಿಶೇಷತೆ, ಮಹತ್ವ ಹೊಂದಿದೆ. ಏಪ್ರಿಲ್ ಮಾಸದ ಮೊದಲ ವಾರದಲ್ಲಿ ಪಾಪ ವಿಮೋಚನೆ ಏಕಾದಶಿ ಬಂದಿದೆ.
ಈ ಏಕಾದಶಿ ಹೆಸರೇ ಸೂಚಿಸುವಂತೆ ಪಾಪಗಳನ್ನು ನಿವಾರಿಸುವ ಏಕಾದಶಿಯಾಗಿದೆ. ಈ ಏಕಾದಶಿಯನ್ನು ಯಾವಾಗ ಆಚರಿಸಲಾಗುವುದು? ಪೂಜಾ ಸಮಯ ಯಾವಾಗ, ಇದರ ಹಿಂದಿನ ಪೌರಾಣಿಕ ಕತೆಯೇನು ಎಂದು ನೋಡೋಣ ಬನ್ನಿ:

ಪಾಪವಿಮೋಚನೆ ಏಕದಶಿ ದಿನಾಂಕ ಮತ್ತು ಪಾರಣ ಸಮಯ
ಪಾಪ ವಿಮೋಚನೆ ಏಕಾದಶಿ ದಿನಾಂ ಏಪ್ರಿಲ್ 5, 2024
ಪಾರಣ ಸಮಯ: ಏಪ್ರಿಲ್ 6 ಬೆಳಗ್ಗೆ 06:05ರಿಂದ 08:37ರವರೆಗೆ
ಏಕಾದಶಿ ತಿಥಿ ಪ್ರಾರಂಭ: ಏಪ್ರಿಲ್ 4 ಸಂಜೆ 04:14ರಿಂದ ಪ್ರಾರಂಭ
ಏಕಾದಶಿ ತಿತಿ ಮುಕ್ತಾಯ: ಏಪ್ರಿಲ್ 5 ಮಧ್ಯಾಹ್ನ 01:28ಕ್ಕೆ ಮುಕ್ತಾಯ
ಏಕಾದಶಿಯಂದು ಪೂಜಾ ವಿಧಾನ
ಈ ದಿನ ಸೂರ್ಯೋದಯಕ್ಕೆ ಮುನ್ನ ಎದ್ದೇಳಬೇಕು. ನಂತರ ಸ್ನಾನ ಮಾಡಿ ಪೂಜಾ ಸ್ಥಳ, ಶ್ರೀ ವಿಷ್ಣುವಿನ ಮೂರ್ತಿ ಅಥವಾ ಫೋಟೋವನ್ನು ಶುದ್ಧ ಮಾಡಿಸಬೇಕು. ನಂತರ ಶ್ರೀ ವಿಷ್ಣುವಿನ ಮೂರ್ತಿಯನ್ನು ಹಳದಿ ಬಣ್ಣದಿಂದ ಹೂವುಗಳಿಂದ ಅಲಂಕರಿಸಿ.
ಶ್ರೀ ವಿಷ್ಣುವಿಗೆ ಹಳದಿ ಬಣ್ಣದ ಹಣ್ಣುಗಳು ಹಾಗೂ ಸಿಹಿ ತಿಂಡಿಯನ್ನು ಅರ್ಪಿಸಿ
ಶ್ರೀ ವಿಷ್ಣುವಿನ ಮಂತ್ರಗಳನ್ನು ಪಠಿಸಿ.
ಈ ದಿನ ವ್ರತ ಕತೆಯನ್ನು ಕೇಳುವುದು ಅಥವಾ ಓದುವುದು ಮಾಡಬೇಕು.
ವ್ರತಕತೆ
ಶ್ರೀಕೃಷ್ಣನ ಬಳಿ ಹೋಗಿ ಹೇಳುತ್ತಾನೆ, ಈ ಪಾಪಗ ಆಗ ಶ್ರೀಕೃಷ್ಣನು "ಪಾಪವಿಮೋಚನಿ ಏಕಾದಶಿ" ಯ ಬಗ್ಗೆ ಹೇಳುತ್ತಾನೆ. ಈ ಏಕಾದಶಿ ಮಾಡುವುದರಿಂದ ಎಲ್ಲಾ ಪಾಪಗಳು ದೂರಾಗಿ ಮೋಕ್ಷವನ್ನು ಪಡೆಯಬಹುದು.
ಮತ್ತೊಂದು ಕತೆಯ ಪ್ರಕಾರ
ಕುಬೇರನ ಆಸ್ಥಾನದಲ್ಲಿರುವ "ಚೈತ್ರರಥ" ಎಂಬ ವನದಲ್ಲಿ ಋಷಿಗಳು ತಪ್ಪಸ್ಸು ಮಾಡುತ್ತಿದ್ದರು. ಅಲ್ಲಿಗೆ ಬಂದ ಅಪ್ಸರೆಯರಲ್ಲಿ ಮಂಜುಗೋಷ ಎಂಬ ಅಪ್ಸರೆಗೆ ಅಲ್ಲಿ ತಪ್ಪಸ್ಸಿನಲ್ಲಿ ನಿರತವಾಗಿದ್ದ ಮೇಧಾವಿ ಎಂಬ ಋಷಿ ಮೇಲೆ ಮೋಹ ಉಂಟಾಗುವುದು.
ಆಕೆ ಋಷಿ ಬಳಿ ಬಂದು ತನ್ನ ಮೋಹದ ಬಲೆ ಬೀಸುತ್ತಾಳೆ, ಇದರಿಂದ ಕೋಪಗೊಂಡ ಮನ್ಮಥ ತನ್ನ ಬಾಣವನ್ನು ಆ ಋಷಿ ಮೇಲೆ ಪ್ರಯೋಗಿಸುತ್ತಾನೆ. ಋಷಿ ತನ್ನ ಕರ್ಮ ಮರೆತು ಈಕೆಯ ಮೋಹಕ್ಕೆ ಒಳಗಾಗುತ್ತಾನೆ. ಇಬ್ಬರು ಮೈ ಮರೆತೂ ರತಿ ಕ್ರೀಡೆಯಲ್ಲಿ ಮುಳುಗುತ್ತಾರೆ, ವರ್ಷಗಳು ಕಳೆದಿದ್ದೇ ಗೊತ್ತಾಗಲ್ಲ.
ಒಂದು ದಿನ ಅಪ್ಸರೆ ತಾನು ದೇವ ಲೋಕಕ್ಕೆ ಹಿಂತಿರುಗುವುದಾಗಿ ಹೇಳುತ್ತಾಳೆ, ಆದರೆ ಆ ಋಷಿ ಸಮ್ಮತಿಸುವುದಿಲ್ಲ. ಆಗ ಅಪ್ಸರೆ ಕೋಪಗೊಂಡು ನೀನು ನಿನ್ನ ಗುರಿ ಮರೆತಿರುವೆ ಎಂದು ಹೇಳುತ್ತಾಳೆ, ಆವಾಗ ಋಷಿಗೆ ತಾನು ಮಾಡಿದ ತಪ್ಪು ಅರಿವಾಗಿ ಬೇಸರವಾಗುತ್ತದೆ, ಅದಕ್ಕೆ ಕಾರಣಳಾದ ಅಪ್ಸರೆ ಮೇಲೆ ಕೋಪಗೊಂಡು ಆಕೆಗೆ ಪಿಶಾಚಿಯಾಗಿ ಹುಟ್ಟು ಎಂದು ಶಾಪ ನೀಡುತ್ತಾನೆ.
ಆಗ ಆಕೆ ತನ್ನ ಪಾಪ ವಿಮೋಚನೆ ಮಾಡುವಂತೆ ಕೇಳುತ್ತಾಳೆ, ಆಗ ಆ ಚವನ ಋಷಿ ಬಳಿ ಪರಿಹಾರ ಕೇಳಲು ಸೂಚಿಸುತ್ತಾನೆ, ಅದರಂತೆ ಆಕೆ ಚವನ ಋಷಿಗಳ ಬಳಿ ಏನು ಮಾಡಬೇಕೆಂದು ಕೇಳುತ್ತಾಳೆ, ಮೇಧಾವಿ ಋಷಿ ಕೂಡ ಚವನ ಋಷಿ ಬಳಿ ತನ್ನ ತಪ್ಪಿಗೆ ಪ್ರಾಯಶ್ಚಿ ಕೇಳುತ್ತಾರೆ. ಆಗ ಚವನ ಋಷಿ "ಪಾಪವಿಮೋಚನಿ ಏಕದಾಶಿ" ಮಾಡುವಂತೆ ಸೂಚಿಸಿರುತ್ತಾರೆ. ಅದರಂತೆ ಈ ಏಕಾದಶಿ ಆಚರಣೆ ಮಾಡಿ ಪಾದದಿಂದ ಮುಕ್ತಳಾಗುತ್ತಾಳೆ.
ಈ ಏಕಾದಶಿ ಆಚರಣೆಯಿಂದ ಶ್ರೀ ವಿಷ್ಣುವಿನ ಕೃಪೆಯಿಂದ ಪಾಪದಿಂದ ಮೋಕ್ಷ ಸಿಗುವುದು, ಬದುಕಿನಲ್ಲಿ ನೆಮ್ಮದಿ ನೆಲಿಸುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
