Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಚಂದ್ರ-ಮಂಗಳನ ಸಂಗಮ: ಮಹಾಲಕ್ಷ್ಮಿ ರಾಜಯೋಗದಿಂದ ಈ ರಾಶಿಯವರಿಗೆ ಅದೃಷ್ಟದ ಮಳೆ!
ಜ್ಯೋತಿಷ್ಯದಲ್ಲಿ ಮಂಗಳನನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಮಂಗಳವು ಧೈರ್ಯ, ಶೌರ್ಯ, ಶಕ್ತಿ ಮತ್ತು ಶೌರ್ಯದ ಅಂಶವಾಗಿದ್ದು, ಮಂಗಳ 45 ದಿನಗಳ ಕಾಲ ಒಂದೇ ರಾಶಿಯಲ್ಲಿ ಚಲಿಸುತ್ತಾನೆ. ಈ ಕಾರಣದಿಂದಾಗಿಯೇ ಎಲ್ಲಾ ರಾಶಿಯನ್ನು ಮಂಗಳ ಚಲಿಸಲು 18 ತಿಂಗಳು ಹಿಡಿಯಲಿದೆ. ಮಂಗಳ ಸಂಚಾರದಿಂದ ಹಲವು ರಾಶಿಗಳಿಗೆ ಶುಭವಾಗುವುದು ನೋಡಬಹುದು.
ಮಂಗಳವು ಪ್ರಸ್ತುತ ತನ್ನದೇ ರಾಶಿಯಾದ ವೃಶ್ಚಿಕ ರಾಶಿಯಲ್ಲಿ ಪ್ರಯಾಣಿಸುತ್ತಿದೆ. ಈ ಸಂದರ್ಭದಲ್ಲಿ ಮಂಗಳವು ಚಂದ್ರನೊಂದಿಗೆ ಸಂಯೋಗವಾಗುವ ಮೂಲಕ ಮಹಾಲಕ್ಷ್ಮಿ ರಾಜಯೋಗವನ್ನು ರೂಪಿಸುತ್ತದೆ. ಈ ಅಪರೂಪದ ರಾಜಯೋಗವು ವಿಶೇಷ ಎಂದು ಪರಿಗಣಿಸಲಾಗಿದೆ. ಹಾಗೆ ಯೋಗಗಲ್ಲಿಯೇ ಅತ್ಯಂತ ಶಕ್ತಿಶಾಲಿ ಎಂದು ಕೂಡ ಪರಿಗಣಿಸಲಾಗಿದೆ.

ಈ ನವೆಂಬರ್ 20ರಂದು ಚಂದ್ರನು ವೃಶ್ಚಿಕ ರಾಶಿಗೆ ಚಲಿಸಲಿದ್ದಾನೆ. ಇದರಿಂದ ಅದೃಷ್ಟ ದೇವಿ ಹಾಗೆ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯುವಂತಹ ಯೋಗ ರೂಪುಗೊಳ್ಳಲಿದೆ. ಮಂಗಳ ಕೂಡ ಇದೇ ರಾಶಿಯಲ್ಲಿ ಎರಡೂವರೆ ದಿನಗಳ ಕಾಲ ಚಲಿಸುತ್ತಾನೆ. ಹಾಗಾದ್ರೆ ಈ ಲಕ್ಷ್ಮಿ ರಾಜಯೋಗದಿಂದ ಯಾರಿಗೆಲ್ಲಾ ಶುಭದಾಯಕವಾಗಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಈ ಯೋಗವು ಲಕ್ಷ್ಮಿ ದೇವಿಯ ಆಶೀರ್ವಾದ ಮತ್ತು ಅದೃಷ್ಟದ ಸಂಪೂರ್ಣ ಬೆಂಬಲವನ್ನು ತರುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಪ್ರಗತಿ ಇರುತ್ತದೆ. ಪ್ರಗತಿಗೆ ಅವಕಾಶಗಳು ಲಭ್ಯವಿರುತ್ತವೆ. ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿ ಜನರ ಜೀವನದಲ್ಲಿ ಈ ಯೋಗದ ಪ್ರಭಾವವು ಕಂಡುಬಂದರೂ, ಕೆಲವು ರಾಶಿ ಜನರಿಗೆ ಇದು ಅದೃಷ್ಟಶಾಲಿಯಾಗಲಿವೆ. ಹಾಗಾದ್ರೆ ಯಾರಿಗೆಲ್ಲಾ ಇದು ಶುಭದಾಯಕ? ಯಾರಿಗೆ ಅದೃಷ್ಟದಾಯಕ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮೊದಲ ಮನೆಯಲ್ಲಿ ಮಂಗಳ ಮತ್ತು ಚಂದ್ರನ ಸಂಯೋಗದಿಂದಾಗಿ ಮಹಾಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತದೆ. ಈ ರಾಜಯೋಗವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ತರಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಸಂಪತ್ತು ಹೆಚ್ಚಾಗುತ್ತದೆ. ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗುತ್ತದೆ. ನಿಮ್ಮ ವ್ಯವಹಾರ ಹಾಗೂ ವ್ಯಾಪಾರ ಸಂಬಂಧಿತ ವಿಚಾರಗಳು ವೇಗ ಪಡೆದುಕೊಳ್ಳಲಿವೆ. ಆದಾಯದ ಹೊಸ ಮೂಲಗಳನ್ನು ನೀವು ಹುಡುಕಬಹುದು. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ನೀವು ಕಟುವಾದ ನಿರ್ಧಾರಗಳ ತೆಗೆದುಕೊಳ್ಳಬೇಕಾಗಬಹುದು. ಸರ್ಕಾರಿ ಉದ್ಯೋಗದಲ್ಲಿರುವ ಮಂದಿಗೆ ಈ ದಿನದಲ್ಲಿ ಶುಭ ಸುದ್ದಿಗಳ ಕೇಳಬಹುದು.
ತುಲಾ ರಾಶಿ
ತುಲಾ ರಾಶಿಯ 2 ನೇ ಮನೆಯಲ್ಲಿ ಮಂಗಳ ಮತ್ತು ಚಂದ್ರನ ಸಂಯೋಗವು ಮಹಾಲಕ್ಷ್ಮಿ ರಾಜಯೋಗವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಈ ರಾಶಿ ಜನರ ಪ್ರತಿಯೊಂದು ಕೆಲಸದಲ್ಲೂ ಉತ್ತಮ ಯಶಸ್ಸನ್ನು ಪಡೆಯಬಹುದು. ಉದ್ಯಮಿಗಳು, ಸ್ವಂತ ಉದ್ಯೋಗ ಮಾಡುವ ಮಂದಿಗೆ ಈ ಸಮಯ ಲಾಭದಾಯಕ. ಅದ್ರಲ್ಲೂ ಕಾಲ ಕಾಲಕ್ಕೆ ನೀವು ನಿರೀಕ್ಷಿಸಿದ್ದ ಲಾಭವನ್ನು ಈ ಎರಡು ದಿನದಲ್ಲಿ ಪಡೆಯುವ ಸಂಭವವಿದೆ. ಬಹಳ ಕಾಲದ ಹಿಂದೆ ನೀಡಿದ್ದ ಸಾಲವೊಂದನ್ನು ಮರಳಿ ಪಡೆಯುವ ನಿರೀಕ್ಷೆಯೂ ಇದೆ. ಬಹುಮುಖ್ಯ ಕೆಲಸವೊಂದಕ್ಕೆ ನಿಮ್ಮಲ್ಲಿ ಹಣ ಒಟ್ಟಾಗಲಿದೆ. ಮಕ್ಕಳಿಂದ ನಿಮಗೆ ಶುಭ ಸುದ್ದಿ ಕೇಳುವ ಸಮಯ ಎನ್ನಬಹುದು.
ಮೀನ ರಾಶಿ
ಮೀನ ರಾಶಿಯ 9 ನೇ ಮನೆಯಲ್ಲಿ ಮಂಗಳ ಮತ್ತು ಚಂದ್ರನ ಸಂಯೋಗವು ಮಹಾಲಕ್ಷ್ಮಿ ರಾಜಯೋಗವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ನಿಮ್ಮ ಹಣಕಾಸು ವಿಚಾರದಲ್ಲಿ ಅದೃಷ್ಟ ಬರಲಿದೆ. ನಿಮಗೆ ಆಪ್ತರಿಂದ ಬರಬೇಕಿದ್ದ ಹಣ ಕೈಸೇರಲಿದೆ. ಅದ್ರಲ್ಲೂ ಆಸ್ತಿ, ನಿವೇಶನ, ಜಮೀನು ಕುರಿತಾದ ವಿಚಾರದಲ್ಲಿ ನಿಮ್ಮ ಪರವಾದ ಅದೃಷ್ಟ ಇರಲಿದೆ. ಪ್ರಯಾಣದ ವಿಚಾರದಲ್ಲಿ ಆರ್ಥಿಕ ಸಮಸ್ಯೆ ನೋಡಬಹುದು. ಇದರಿಂದ ನೀವು ಸಾಲ ಮಾಡಬೇಕಾಗಬಹುದು. ಹಾಗೆ ಹಣ ಕೈ ಸೇರುವ ಕಾರಣ ಖರ್ಚುಗಳು ಸಹ ಹೆಚ್ಚಾಗಿರಲಿದೆ. ಬಹುಮುಖ್ಯ ವಸ್ತುವೊಂದನ್ನು ಖರೀದಿಸಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications