Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಇಂದು(ಡಿ.11) ಮೋಕ್ಷದ ಏಕಾದಶಿ: ಧಾರ್ಮಿಕ ನಂಬಿಕೆ ಪ್ರಕಾರ ಈ ಏಕಾದಶಿ ವ್ರತ ಮಾಡಿದವರಿಗೆ ಈ ಪ್ರಯೋಜನಗಳಿವೆ
ಡಿಸೆಂಬರ್ 11ಕ್ಕೆ ಮೋಕ್ಷದ ಏಕಾದಶಿ, ಮಾರ್ಶಿರ ಮಾಸದ ಶುಕ್ಲಪಕ್ಷದಲ್ಲಿ ಬರುವ ಏಕಾದಶಿಯಿದು. ಈ ದಿನದ ಮತ್ತೊಂದು ವಿಶೇಷವೆಂದರೆ ಗೀತಾ ಜಯಂತಿ ಕೂಡ ಹೌದು. ಶ್ರೀ ಕೃಷ್ಣನು ಅರ್ಜುನನಿಗೆ ಗೀತೋಪದೇಶ ನೀಡಿದ ದಿನವೂ ಆಗಿದೆ. ಈ ದಿನ ತುಳಸಿ ಪೂಜೆ ಮಾಡಿ ಏಕಾದಶಿಯನ್ನು ಆಚರಿಸಲಾಗುವುದು.

ಮೋಕ್ಷದ ಏಕಾದಶಿ ಮಹತ್ವ, ಆಚರಣೆಯ ವಿಧಿ ನಿಯಮಗಳ ಬಗ್ಗೆ ತಿಳಿಯೋಣ:
ಮೋಕ್ಷದ ಏಕಾದಶಿ ತಿಥಿ: ಮುಂಜಾನೆ 3:24ಕ್ಕೆ ಪ್ರಾರಂಭವಾಗಿದೆ.
ಏಕಾದಶಿ ತಿಥಿ ಮುಕ್ತಾಯ ಮಧ್ಯರಾತ್ರಿ 1.09ಕ್ಕೆ ಮುಕ್ತಾಯವಾಗಲಿದೆ.
ಮೋಕ್ಷದ ಏಕಾದಶಿ ಹೆಸರೇ ಸೂಚಿಸುವಂತೆ ಮೋಕ್ಷ ಸಿಗುತ್ತದೆ ಎಂದು ಹೇಳಲಾಗುವುದು. ಈ ಏಕಾದಶಿ ಆಚರಣೆ ಉಳಿದ 23 ಏಕಾದಶಿ ಆಚರಣೆಗಳಿಗೆ ಸಮ ಎಂದು ಹೇಳಲಾಗುವುದು. ಯಾರು ಈ ಏಕಾದಶಿಯನ್ನು ಆಚರಣೆ ಮಾಡುತ್ತಾರೋ ಅವರಿಗೆ ಮೋಕ್ಷ ಸಿಗಲಿದೆ, ಜೀವನದಲ್ಲಿ ಎದುರಿಸುತ್ತಿದ್ದ ಕಷ್ಟಗಳು ದೂರಾಗಲಿದೆ ಎಂದು ಹೇಳಲಾಗುವುದು.
ಮೋಕ್ಷದ ಏಕಾದಶಿಯಂದು ತುಳಸಿ ಪೂಜೆ ಮಾಡುವುದರಿಂದ ಕಷ್ಟಗಳು ದೂರಾಗಲಿದೆ
ಮೋಕ್ಷದ ಏಕಾದಶಿಯಂದು ತುಳಸಿಯನ್ನು ಪೂಜಿಸುವುದರಂದ ಕಷ್ಟಗಳು ದೂರಾಗಿ ಸಂತೋಷ, ಸಮೃದ್ಧಿ ಹೆಚ್ಚಾಗಲಾಗಿದೆ ಎಂದು ಹೇಳಾಗುವುದು. ಸಂತಾನ ಭಾಗ್ಯಕ್ಕಾಗಿ ಕೂಡ ಈ ದಿನ ಪೂಜೆ ಸಲ್ಲಿಸಲಾಗುವುದು. ಮೋಕ್ಷದ ಏಕಾದಶಿ ಆಚರಣೆ ಮಾಡುವುದರಿಂದ ಆರ್ಥಿಕಸಮಸ್ಯೆಗಳಿದ್ದರೆ ದೂರಾಗುವುದು, ವೈವಾಹಿಕ ಬದುಕಿನಲ್ಲಿನ ಭಿನ್ನಾಭಿಪ್ರಾಯ ದೂರಾಗಲಿದೆ.
ಮೋಕ್ಷದ ಏಕಾದಶಿ ಆಚರಣೆಯನ್ನು ಹೇಗೆ ಮಾಡಲಾಗುವುದು?
ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಸಂಕಲ್ಪ ತೆಗೆದುಕೊಳ್ಳುಲಾಗುವುದು
ಈ ದಿನ ಉಪವಾಸವಿದ್ದು ಏಕಾದಶಿ ವ್ರತ ಆಚರಿಸಲಾಗುವುದು
ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಹೂವು, ಹಣ್ಣುಗಳನ್ನು ಅರ್ಪಿಸಿ, ಧೂಪ ಅರ್ಪಿಸಿ ಪೂಜೆ ಮಾಡಲಾಗುವುದು.
ಮಧ್ಯರಾತ್ರಿಯಲ್ಲಿ ಪೂಜೆ
ಮೋಕ್ಷದ ಏಕಾದಶಿ ಪೂಜೆಯನ್ನು ಮಧ್ಯರಾತ್ರಿಯಲ್ಲಿ ಮಾಡಲಾಗುವುದು, ಇಡೀ ದಿನ ನಿದ್ದೆ ಮಾಡದೆ ಶ್ರೀ ವಿಷ್ಣುವಿನ ಮಂತ್ರಗಳನ್ನು ಪಠಿಸುತ್ತಾ ಅಥವಾ ಭಗವದ್ಗೀತೆ ಓದುತ್ತಾ ಸಮಯ ಕಳೆಯಬೇಕು. ಹಗೆ ಮಾಡುವುದರಿಂದ ಕಷ್ಟಗಳು ದೂರಾಗಿ ಇಷ್ಟಾರ್ಥ ನೆರವೇರಲಿದೆ.
ಪಾರಣ ಸಮಯ
ಡಿಸೆಂಬರ್ 12 ಬೆಳಗ್ಗೆ 06:32ರಿಂದ 08:49
ಪಿತೃದೋಷ ನಿವಾರಣೆಯಾಗುವುದು
ಮೋಕ್ಷದ ಏಕಾದಶಿಯಂದು ವೈಕುಂಠದ ಬಾಗಿಲು ತೆರೆಯುತ್ತದೆ ಎಂದು ಹೇಳಲಾಗುವುದು, ಈ ದಿನ ಏಕಾದಶಿ ಆಚರಣೆ ಮಾಡಿದವರು ಮರಣದ ನಂತರ ವೈಕುಂಠಕ್ಕೆ ಹೋಗುತ್ತಾರೆ ಎಂಬುವುದು ಧಾರ್ಮಿಕ ನಂಬಿಕೆ.
ಪಿತೃದೋಷ ಎಂಬುವುದು ದೊಡ್ಡ ಶಾಪ, ಪಿತೃದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಆದರೆ ಮೋಕ್ಷದ ಏಕಾದಶಿ ಆಚರಣೆ ಮಾಡುವುದರಿಂದ ಪಿತೃದೋಷ ನಿವಾರಣೆಯಾಗುವುದು, ಆದ್ದರಿಂದ ಈ ಏಕಾದಶಿ ವ್ಯಕ್ತಿಯನ್ನು ಪಾಪ ಮುಕ್ತವಾಗಿಸುವುದು ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
