Latest Updates
-
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ!
ನವರಾತ್ರಿ ಮಹಾಷ್ಟಮಿಗೆ 50 ವರ್ಷಗಳ ರೂಪುಗೊಂಡಿದೆ 3 ಶುಭಯೋಗ: ಈ 3 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ
ನವರಾತ್ರಿಯಲ್ಲಿ ದುರ್ಗಾಷ್ಟಮಿಗೆ ತುಂಬಾನೇ ಮಹತ್ವವಿದೆ. ಈ ವರ್ಷ ಮಹಾಷ್ಟಮಿಯನ್ನು ಅಕ್ಟೋಬರ್ 11ರಂದು ಆಚರಿಸಲಾಗುವುದು. ಈ ಬಾರಿ ಮಹಾಷ್ಟಮಿ ತುಂಬಾನೇ ವಿಶೇಷವಾಗಿದೆ, ಏಕೆಂದರೆ ಈ ದಿನ 3 ಯೋಗ ಕೂಡ ಇದೆ. ಹಾಗಾಗಿ ಈ ಬಾರಿಯ ಮಹಾಷ್ಟಮಿ ತುಂಬಾ ವಿಶೇಷವಾಗಿದೆ.
ಮಹಾಷ್ಟಮಿ ತಿಥಿ ಅಕ್ಟೋಬರ್ 10, ಬೆಳಗ್ಗೆ 7:29ಕ್ಕೆ ಶುರುವಾಗಲಿದೆ, ಅಕ್ಟೋಬರ್ 11 ಬೆಳಗ್ಗೆ 06:52ಕ್ಕೆ ಮುಕ್ತಾಯವಾಗಲಿದೆ, ನಂತರ ನವಮಿ ತಿಥಿ ಪ್ರಾರಂಭವಾಗುವುದು. ಈ ಮಹಾಷ್ಟಮಿಯಂದು ಸರ್ವಾರ್ಥ ಸಿದ್ಧಿ ಯೋಗ, ರವಿಯೋಗ ಮತ್ತು ಬುಧಾದಿತ್ಯ ರಾಜಯೋಗವಿದೆ.
ಜ್ಯೋತಿಷ್ಯ ಪ್ರಕಾರ 50 ವರ್ಷಗಳ ಬಳಿಕ ಇಂಥದ್ದೊಂದು ಶುಭ ಯೋಗವಿದೆ. ಈ ಯೋಗ ಕೆಲ ರಾಶಿಯವರಿಗೆ ಉತ್ತಮ ಪ್ರಯೋಜನ ನೀಡಲಿದೆ. ಆ ಅದೃಷ್ಟದ ರಾಶಿಗಳೆಂದರೆ..........

ಮೇಷ ರಾಶಿ
ಈ ಮಹಾಷ್ಟಮಿ ಮೇಷ ರಾಶಿಯವರಿಗೆ ಅದ್ಭುತವಾಗಿರಲಿದೆ. ಈ ನವರಾತ್ರಿ ಬಳಿಕ ನಿಮ್ಮ ಬದುಕಿನಲ್ಲಿ ಅನೇಕ ಧನಾತ್ಮಕ ಘಟನೆಗಳು ನಡೆಯಲಿದೆ. ನೀವು ವೃತ್ತಿ ಬದುಕಿನಲ್ಲಿ ಉತ್ತಮ ಯಶಸ್ಸು ದೊರೆಯಲಿದೆ. ವ್ಯವಹಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ. ಆರ್ಥಿಕವಾಗಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ನೀವು ಇಡುವ ಪ್ರತಿಯೊಂದು ಹೆಜ್ಜೆಯಲ್ಲಿ ಯಶಸ್ಸು ಪಡೆಯುತ್ತೀರಿ.
ಈ ಮಹಾಷ್ಟಮಿ ನಿಮ್ಮ ಪಾಲಿಗೆ ವರದಾನವಾಗಿದೆ. ದುರ್ಗೆಯ ಕೃಪೆಯಿಂದ ಬದುಕಿನಲ್ಲಿ ಹೊಸ ಎತ್ತರಕ್ಕೆ ಬೆಳೆಯುತ್ತೀರಿ. ವೈಯಕ್ತಿಕ ಬದುಕಿನಲ್ಲಿಯೂ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ.
ಕರ್ಕ ರಾಶಿ
ಈ ಮಹಾಷ್ಟಮಿ ಬಳಿಕ ಕರ್ಕ ರಾಶಿಯವರಿಗೆ ಉತ್ತಮ ಪ್ರಯೋಜನ ದೊರೆಯಲಿದೆ. ನೀವು ವೃತ್ತಿ ಬದುಕಿನಲ್ಲಿ ಉತ್ತಮ ಯಶಸ್ಸು ಪಡೆಯುತ್ತೀರಿ. ಹೊಸ ಉದ್ಯೋಗಾವಕಾಶಕ್ಕೆ ಹುಡುಕುತ್ತಿದ್ದರೆ ನೀವು ಬಯಸಿದ ಕೆಲಸ ಪಡೆಯುತ್ತೀರಿ. ವ್ಯಾಪಾರಿಗಳು ಹೊಸ ವ್ಯಾಪಾರ ಮಾಡಬೇಕು. ವ್ಯಾಪಾರವನ್ನು ವಿಸ್ತರಿಸಬೇಕು ಎಂದು ಬಯಸಿದರೆ ನಿವು ಬಯಸಿದಂತೆ ಎಲ್ಲವೂ ನೆರವೇರಲಿದೆ. ಅಪೂರ್ಣವಾಗಿ ಬಿಟ್ಟ ಯಾವುದೇ ಕೆಲಸವನ್ನು ಪೂರ್ಣಗೊಳಿಸಬಹುದು. ಉದ್ಯೋಗಿಗಳು ಬಡ್ತಿ ಪಡೆಯುತ್ತೀರಿ.
ಆರ್ಥಿಕವಾಗಿ ಉತ್ತಮವಾಗಿದೆ, ಉಳಿತಾಯ ಮಾಡಲು ಸಾಧ್ಯವಾಗುವುದು.
ಕನ್ಯಾ ರಾಶಿ
ಮಹಾಷ್ಟಮಿಯಂದು ರೂಪುಗೊಳ್ಳುವ 3 ಯೋಗದಿಂದಾಗಿ ಕನ್ಯಾ ರಾಶಿಯವರು ಅತ್ಯುತ್ತಮವಾದ ಪ್ರಯೋಜನ ಪಡೆಯುತ್ತೀರಿ. ಈ ಅವಧಿಯಲ್ಲಿ ಉತ್ತಮ ಲಾಭ ಪಡೆಯುತ್ತೀರಿ. ಉದ್ಯೋಗಿಗಳಿಗೆ ಸಮಯವು ತುಂಬಾ ಅನುಕೂಲಕರವಾಗಿರುತ್ತದೆ. ಹೊಸ ಆದಾಯ ಅವಕಾಶಗಳು ದೊರೆಯಲಿದೆ. ಈ ಹಿಂದೆ ಮಾಡಿದ ಹೂಡಿಕೆಯಿಂದ ಲಾಭ ಪಡೆಯುತ್ತೀರಿ. ಆರ್ಥಿಕವಾಗಿ ಉತ್ತಮ ಲಾಭ ಪಡೆಯುತ್ತೀರಿ. ಮಗುವಿನ ಅಪೇಕ್ಷಿತ ದಂಪತಿ ಸಿಹಿ ಸುದ್ದಿ ಪಡೆಯುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
