Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
New Year 2024: ಹೊಸ ವರ್ಷದಲ್ಲಿ ನಿಮ್ಮ ರಾಶಿಗೆ ಅದೃಷ್ಟದ ಸಂಖ್ಯೆಗಳಾವುವು?
2024 ಹೊಸ ವರ್ಷ ನಿಮ್ಮೆಲ್ಲರ ಬಾಳಲ್ಲಿ ಹೊಸ ಹರ್ಷ ತರುವಂತಾಗಲಿ. ನಾವು ಯಾವುದೇ ಹೊಸ ಕಾರ್ಯ ಮಾಡುವಾಗ ಅದೃಷ್ಟದ ಬೆಂಬಲವನ್ನು ಅಪೇಕ್ಷೆ ಮಾಡುತ್ತೇವೆ. ಸಂಖ್ಯಾಶಾಸ್ತ್ರ ಪ್ರಕಾರ ಕೆಲವೊಂದು ದಿನ, ಸಂಖ್ಯೆ ನಮ್ಮ ರಾಶಿಗೆ ಅದೃಷ್ಟದ ಸಂಖ್ಯೆಯಾಗಿರಲಿದೆ.
ನಮ್ಮ ರಾಶಿಗೆ ಅದೃಷ್ಟದ ಸಂಖ್ಯೆ ದಿನ ಏನಾದರೂ ಹೊಸ ಕಾರ್ಯ ಮಾಡಿದರೆ ಉದಾಹರಣೆಗೆ ಹೊಸ ಉದ್ಯೋಗ, ಹೊಸ ಉದ್ಯಮ ಹೀಗೆ ಅದರಲ್ಲಿ ಪ್ರಗತಿ ಪಡೆಯುತ್ತೇವೆ ಎಂಬ ನಂಬಿಕೆ. 2024ರಲ್ಲಿ ಯಾವ ರಾಶಿಯವರಿಗೆ ಯಾವ ಸಂಖ್ಯೆ ಅದೃಷ್ಟಕರ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರ ಅಧಿಪತಿ ಮಂಗಳ. ನಿಮಗೆ 6 ಹಾಗೂ 9 ಅದೃಷ್ಟದ ಸಂಖ್ಯೆ. ಈ ವರ್ಷ ನೀವು ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆವಹಿಸಬೇಕು. ನೀವು 2024ರಲ್ಲಿ ಯಶಸ್ಸು ಪಡೆಯುವಿರಿ.
ವೃಷಭ ರಾಶಿ
ವೃಷಭ ರಾಶಿಯ ಅಧಿಪತಿ ಶುಕ್ರ. 2024ರಲ್ಲಿ ವೃಷಭ ರಾಶಿಯವರಿಗೆ 2, 7 ಅದೃಷ್ಟದ ಸಂಖ್ಯೆಯಾಗಿದೆ. 2024 ವರ್ಷ ನಿಮಗೆ ತುಂಬಾ ಚೆನ್ನಾಗಿರಲಿದೆ, ನಿಮ್ಮ ಕೆಲಸದಲ್ಲಿ ತೃಪ್ತಿ ದೊರೆಯಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ.
ಮಿಥುನ ರಾಶಿ
2024ರಲ್ಲಿ ಮಿಥುನ ರಾಶಿಯವರಿಗೆ 3 ಹಾಗೂ 6 ಅದೃಷ್ಟದ ಸಂಖ್ಯೆಯಾಗಿದೆ. 2023ಕ್ಕೆ ವರ್ಷಕ್ಕೆ ಹೋಲಿಸಿದರೆ 2024 ನಿಮಗೆ ಸ್ವಲ್ಪ ಡಲ್ ಅನಿಸುವುದು. ಆದ್ದರಿಂದ ನೀವು ಬಯಸಿದ ಫಲ ಪಡೆಯಲು ಹೆಚ್ಚು ಶ್ರಮ ಹಾಕಿ ಕೆಲಸ ಮಾಡಬೇಕು.
ಕರ್ಕ ರಾಶಿ
ಕರ್ಕ ರಾಶಿಯ ಅಧಿಪತಿ ಚಂದ್ರ, ಕರ್ಕ ರಾಶಿಯವರ ಅದೃಷ್ಟದ ಸಂಖ್ಯೆ 2 ಮತ್ತು 6, ಈ ಎರಡು ಸಂಖ್ಯೆ ಇಟ್ಟು ಮಾಡಿದರೆ 8, 2024ರಲ್ಲಿ ನಿಮ್ಮ ಅದೃಷ್ಟದ ಸಂಖ್ಯೆ 8. ಈ ವರ್ಷ ನೀವು ನಿಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಶ್ರಮ ಹಾಕಿ ಕೆಲಸ ಮಾಡಬೇಕಾಗುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯವರ ಅಧಿಪತಿ ಸೂರ್ಯ. 2024ರಲ್ಲಿ ನಿಮಗೆ 1 ಹಾಗೂ 9 ಅದೃಷ್ಟದ ಸಂರ್ಖಯೆ ಆಗಿದೆ. ಈ ವರ್ಷ ನಿಮಗೆ ಆರ್ಥಿಕವಾಗಿ ಒಳ್ಳೆಯದಿದೆ, ಯಾವುದೇ ಅನಗ್ಯತ ವಿಷಯಗಳ ಕಡೆ ತಲೆ ಕೆಡಿಸಲು ಹೋಗಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ 2024ರಲ್ಲಿ 5 ಹಾಗೂ ಅದೃಷ್ಟದ ಸಂಖ್ಯೆಯಾಗಿದೆ. ಆರ್ಥಿಕವಾಗಿ ಒಳ್ಳೆಯದಿದೆ. ನೀವು ಸವಾಲುಗಳನ್ನು ಉತ್ತಮವಾಗಿ ಎದುರಿಸುತ್ತೀರಿ. ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗದಂತೆ ಜಾಗ್ರತೆವಹಿಸಿ.
ತುಲಾ ರಾಶಿ
ತುಲಾ ರಾಶಿಯವರ ಆಡಳಿತ ಗ್ರಹ ಶುಕ್ರ. ತುಲಾ ರಾಶಿಯವರಿಗೆ 2024ರಲ್ಲಿ 5 ಹಾಗೂ 8 ಅದೃಷ್ಟದ ಸಂಖ್ಯೆಯಾಗಿದೆ. ಈ ವರ್ಷ ನಿಮಗೆ ತುಂಬಾ ಚೆನ್ನಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ನೀವು ಬಯಸಿದಂತೆಯೇ ಯಶಸ್ಸು ಪಡೆಯುವಿರಿ. ಆರ್ಥಿಕ ಅಭಿವೃದ್ಧಿ ಕಾಣುವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ಆಡಳಿತ ಗ್ರಹ ಮಂಗಳ. 2024ರಲ್ಲಿ ನಿಮ್ಮ ಅದೃಷ್ಟದ ಸಂಖ್ಯೆ 6 ಹಾಗೂ 9 ಆಗಿದೆ. ಈ ವರ್ಷ ವೃಶ್ಚಿಕ ರಾಶಿಯವರಿಗೆ ಮಿಶ್ರಫಲ. ಆರ್ಥಿಕವಾಗಿ ಒಳ್ಳೆಯದಿದೆ, ಆದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು.
ಧನು ರಾಶಿ
ಧನು ರಾಶಿಯವರ ಆಡಳಿತ ಗ್ರಹ ಗುರು. ಧನು ರಾಶಿಯವರಿಗೆ 2024ರಲ್ಲಿ 3 ಹಾಗೂ 7 ಅದೃಷ್ಟದ ಸಂಖ್ಯೆಯಾಗಿದೆ. ಹೊಸ ವರ್ಷದಲ್ಲಿ ನೀವು ಖರ್ಚು ಬಗ್ಗೆ ಗಮನಹರಿಸಬೇಕು. ಉಳಿದಂತೆ ಯಾವುದೇ ದೊಡ್ಡ ಸಮಸ್ಯೆ ಇರಲ್ಲ.
ಮಕರ ರಾಶಿ
ಮಕರ ರಾಶಿಯವರ ಅಧಿಪತಿ ಶನಿ. 2024ರಲ್ಲಿ ಮಕರ ರಾಶಿಯವರಿಗೆ 4 ಹಾಗೂ 8 ಅದೃಷ್ಟದ ಸಂಖ್ಯೆಯಾಗಿದೆ. ಹೊಸ ವರ್ಷ ನಿಮಗೆ ಉತ್ತಮವಾಗಿರಲಿದೆ. ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ.
ಕುಂಭ ರಾಶಿ
ಕುಂಭ ರಾಶಿಯವರ ಅಧಿಪತಿ ಶನಿ. 2024ರಲ್ಲಿ ನಿಮಗೆ ಸಂಖ್ಯೆ 6 ಹಾಗೂ 8 ಅದೃಷ್ಟದ ಸಂಖ್ಯೆಯಾಗಿದೆ. ವೃತ್ತಿ ಜೀವನದಲ್ಲಿ ಹಾಗೂ ವ್ಯವಹಾರ ಮಾಡುತ್ತಿದ್ದರೆ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಕುಟುಂಬದಲ್ಲಿನ ಸಮಸ್ಯೆ ಕಡಿಮೆಯಾಗಲಿದೆ.
ಮೀನ ರಾಶಿ
ಮೀನ ರಾಶಿಯವರ ಅಧಿಪತಿ ಗುರು. ಮೀನ ರಾಶಿಯವರಿಗೆ 2024ರಲ್ಲಿ ಸಂಖ್ಯೆ 3 ಹಾಗೂ 7 ಅದೃಷ್ಟದದ ಸಂಖ್ಯೆಯಾಗಿದೆ. ಈ ವರ್ಷ ಆದಾಯ ಚೆನ್ನಾಗಿರಲಿದೆ, ಅದರಂತೆ ಖರ್ಚು ಕೂಡ ಅಧಿಕವಿರಲಿದೆ. ವೈಯಕ್ತಿಕ ಜೀವನದಲ್ಲಿ ಏರಳಿತವಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications