Latest Updates
-
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು
ತುಲಾ ರಾಶಿಯಲ್ಲಿ ಶುಕ್ರ: ಈ ಮೂರು ರಾಶಿಗಳಿಗೆ ದೊರೆಯಲಿದೆ ಕೇಂದ್ರ ತ್ರಿಕೋನ ರಾಜಯೋಗದ ಪ್ರಯೋಜನ
ಶುಕ್ರನನ್ನು ಜ್ಯೋತಿಷ್ಯದಲ್ಲಿ ಅದೃಷ್ಟದ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರನು ವೃಷಭ ಹಾಗೂ ತುಲಾ ರಾಶಿಯಲ್ಲಿ ಸಂಚರಿಸಿದಾಗ ಅದು ಮಾಲವ್ಯ ಯೋಗ ಉಂಟು ಮಾಡುತ್ತದೆ. ಮಾಲವ್ಯ ಯೋಗವನ್ನು ಶುಭ ಯೋಗವೆಂದು ಪರಿಗಣಿಸಲಾಗಿದೆ. ಶುಕ್ರನು ತುಲಾ ರಾಶಿಯಲ್ಲಿದ್ದಾಗ ಉಂಟಾದ ಕೇಂದ್ರ ತ್ರಿಕೋನ ರಾಜ ಯೋಗದಿಂದ ಈ ಮೂರು ರಾಶಿಗಳು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ.
ಕೇಂದ್ರ ತ್ರಿಕೋನ ರಾಜ ಯೋಗದಿಂದಾಗಿ ಆರ್ಥಿಕವಾಗಿ ಉತ್ತಮ ಪ್ರಯೋಜನ ಪಡೆಯುತ್ತೀರಿ, ತುಂಬಾ ಸಮಯದಿಂದ ಕೆಲಸದಲ್ಲಿ ಬಯಸುತ್ತಿದ್ದ ಬಡ್ತಿ ಈ ಅವಧಿಯಲ್ಲಿ ನೆರವೇರಲಿದೆ. ಈ ರಾಶಿಯವರು ಆರ್ಥಿಕವಾಗಿ ಚಿಂತೆಯೇ ಮಾಡಬೇಕಾಗಿಲ್ಲ ನೋಡಿ:

ತುಲಾ ರಾಶಿ
ಮಾಲವ್ಯ ಯೋಗ ಮತ್ತು ಕೇಂದ್ರ ತ್ರಿಕೋನ ರಾಜಯೋಗವು ನಿಮಗೆ ತುಂಬಾ ಫಲಪ್ರದವಾಗಿದೆ. ಈ ಅವಧಿಯಲ್ಲಿ ನೀವು ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ನೀವು ಪ್ರಗತಿಯನ್ನು ಕಾಣುವಿರಿ. ಕೆಲಸಕ್ಕಾಗಿ ಮಾಡುವ ಪ್ರಯತ್ನದಲ್ಲಿ ಯಶಸ್ಸು ಕಾಣಬಹುದು.
ವೈಯಕ್ತಿಕ ಜೀವನದ ದೃಷ್ಟಿಯಿಂದಲೂ ಈ ಸಮಯ ನಿಮಗೆ ತುಂಬಾ ಉತ್ತಮವಾಗಿರಲಿದೆ. ಬರಬೇಕಾಗಿರುವ ಹಣ ಕೈ ಸೇರಲಿದೆ. ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ಗಂಡ-ಹೆಂಡತಿ ನಡುವೆ ಏನಾದರು ಭಿನ್ನಾಭಿಪ್ರಾಯವಿದ್ದರೆ ಅದು ಬಗೆಹರಿಯಲಿದೆ, ನಿಮ್ಮ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ, ಮಗುವಿನ ನಿರೀಕ್ಷೆಯಲ್ಲಿರಿವ ದಂಪತಿ ಈ ಅವಧಿಯಲ್ಲಿ ಶುಭ ಸುದ್ದಿಯನ್ನು ಪಡೆಯಬಹುದು. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ. ವೃತ್ತಿ ಬದುಕಿನಲ್ಲಿ ತುಂಬಾ ಪ್ರಗತಿ ಕಂಡು ಬರಲಿದೆ. ಕೇಂದ್ರ ತ್ರಿಕೋನ ರಾಜಯೋಗ ಮತ್ತು ಮಾಲವ್ಯ ಯೋಗವು ಉತ್ತಮವಾಗಿರುತ್ತದೆ. ವ್ಯಾಪಾರಿಗಳು ಈ ಅವಧಿಯಲ್ಲಿ ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಉದ್ಯೋಗಿಗಳಿಗೆ ಬಡ್ತಿ ಪಡೆಯುವ ಬಲವಾದ ಸಾಧ್ಯತೆಯಿದೆ. ಹಣವನ್ನು ಉಳಿಸುವಲ್ಲಿಯೂ ನೀವು ಯಶಸ್ವಿಯಾಗುತ್ತೀರಿ.
ಪತಿ ಪತ್ನಿಯರ ನಡುವೆ ಉತ್ತಮ ಹೊಂದಾಣಿಕೆ ಇರುತ್ತದೆ. ನಿರುದ್ಯೋಗಿಗಳು ತಮ್ಮ ಕೆಲಸದ ಪ್ರಯತ್ನಕ್ಕೆ ಶುಭ ಸುದ್ದಿ ಪಡೆಯುತ್ತೀರಿ. ಆರ್ಥಿಕವಾಗಿ ಈ ಅವಧಿ ತುಂಬಾ ಚೆನ್ನಾಗಿರಲಿದೆ, ಉಳಿತಾಯ ಮಾಡಲು ಸಾಧ್ಯವಾಗುವುದು, ಹಣದ ಕೊರತೆಯಿಂದ ಬಾಕಿಯಾಗಿದ್ದ ಕೆಲಸವು ಪೂರ್ಣಗೊಳ್ಳಲಿದೆ.
ವೈವಾಹಿಕ ಜೀವನ ಚೆನ್ನಾಗಿರಲಿದೆ, ನಿಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇರಲಿದೆ. ಉದ್ಯಮಿಗಳು ಹೆಚ್ಚಿನ ಲಾಭ ಪಡೆಯುತ್ತಾರೆ.
ನಿರುದ್ಯೋಗಿಗಳಿಗೆ ಕೆಲಸ ಸಿಗಲಿದೆ. ಉದ್ಯೋಗಿಗಳು ಬಯಸಿದ ಸ್ಥಳಕ್ಕೆ ವರ್ಗಾವಣೆಯಾಗಬಹುದು.
ಕುಂಭ ರಾಶಿ
ಕಂಭ ರಾಶಿಯ 9ನೇ ಮನೆಯಲ್ಲಿ ಕೇಂದ್ರ ತ್ರಿಕೋನ ರಾಜ ಯೋಗ ಉಂಟಾಗಿದೆ. ಕೆಲಸದ ದೃಷ್ಟಿಯಿಂದ ತುಂಬಾ ಉತ್ತಮವಾಗಿದೆ, ನಿಮ್ಮೆಲ್ಲಾ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಅದೃಷ್ಟವನ್ನು ಪಡೆಯುತ್ತೀರಿ.
ಉದ್ಯೋಗಿಗಳಿಗೆ ಬಡ್ತಿ ಮತ್ತು ಪ್ರಗತಿಯ ಸಾಧ್ಯತೆಗಳಿವೆ. ಉದ್ಯಮಿಗಳು ಬಯಸಿದ ಯಶಸ್ಸನ್ನು ಪಡೆಯುತ್ತಾರೆ. ಬರಬೇಕಾಗಿರುವ ಹಣ ಕೈ ಸೇರಲಿದೆ. ಆದಾಯ ಹೆಚ್ಚಾಗಲಿದೆ.
ವೃತ್ತಿ ಜೀವನದಲ್ಲಿ ಹಠಾತ್ ಯಶಸ್ಸು ಸಿಗಬಹುದು, ಸಂಬಳ ಕೂಡ ಹೆಚ್ಚಾಗಬಹುದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications