Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಈ ವರ್ಷ ಕಾರ್ತಿಕ ಅಮವಾಸ್ಯೆ ಯಾವಾಗ? ಈ ದಿನ ತುಂಬಾ ಮಹತ್ವವಾದದ್ದು ಏಕೆ?
ಕಾರ್ತಿಕ ಅಮವಾಸ್ಯೆಗೆ ಹಿಂದೂ ಧರ್ಮದಲ್ಲಿ ತುಂಬಾನೇ ಮಹತ್ವವಿದೆ. ಕಾರ್ತಿಕ ಅಮವಾಸ್ಯೆಯ ದಿನ ತುಳಸಿ ಪೂಜೆಗೆ ವಿಶೇಷವಾದ ಮಹತ್ವವಿದೆ. ಈ ದಿನ ನದಿ ಸ್ನಾನ ಮಾಡಿ, ಸೂರ್ಯನಿಗೆ ಆರ್ಘ್ಯ ಅರ್ಪಿಸಿ, ಈ ದಿನ ತುಳಸಿ ಗಿಡಗಳನ್ನು ದಾನ ಮಾಡಲಾಗುವುದು. ಈ ದಿನ ವಿಷ್ಣುವನ್ನು ಪೂಜಿಸಲಾಗುವುದು. ಅಲ್ಲದೆ ಲಕ್ಷ್ಮಿ ಪೂಜೆಯನ್ನು ಮಾಡಲಾಗುವುದು.

ಈ ಬಾರಿ ಕಾರ್ತಿಕ ಅಮವಾಸ್ಯೆ ಯಾವಾಗ? ಈ ದಿನದ ಮಹತ್ವವೇನು?
ಕಾರ್ತಿಕ ಅಮವಾಸ್ಯೆ ಈ ಬಾರಿ ಡಿಸೆಂಬರ್ 12ರಂದು ಬಂದಿದೆ.
ಕಾರ್ತಿಕ ಅಮವಾಸ್ಯೆ ಪ್ರಯೋಜನಗಳು
* ಕಾರ್ತಿಕ ಅಮವಾಸ್ಯೆಯಂದು ಗಣಪತಿ, ಲಕ್ಷ್ಮಿ, ಶ್ರೀ ವಿಷ್ಣುವನ್ನು ಆರಾಧನೆ ಮಾಡುವುದರಿಂದ ಆರ್ಥಿಕ ಸಂಕಷ್ಟ ದೂರಾಗುವುದು, ನೆಗೆಟಿವಿಟಿ ದೂರಾಗುವುದು.
* ಈ ದಿನ ಉಪವಾಸವಿದ್ದರೆ ಒಳ್ಳೆಯದು.
* ಈ ದಿನ ಅಮವಾಸ್ಯೆಯಂದು ಪೂಜೆ ಮಾಡುವುದರಿಂದ ಪಿತೃದೋಷ ನಿವಾರಣೆಯಾಗುವುದು.
* ಈ ದಿನ ವಿಷ್ಣು ಸಹಸ್ರನಾಮ ಪಠಣೆ ಮಾಡುವುದರಿಂದ ನವಗ್ರಹ ದೋಷ ನಿವಾರಣೆಯಾಗುವುದು.
* ಈ ದಿನ ಶಿವಲಿಂಗಕ್ಕೆ ಅಭಿಷೇಕ ಮಾಡಿಸಿದರೆ ಒಳ್ಳೆಯದು.
* ಈ ದಿನ ಶನಿ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ಅಥವಾ ಸಾಸಿವೆಯೆಣ್ಣೆ ದೀಪ ಹಚ್ಚುವುದರಿಂದ ಶನಿ ದೋಷ ಕಡಿಮೆಯಾಗುವುದು.
* ಆರೋಗ್ಯ ಸಮಸ್ಯೆಯಿದ್ದರೆ ಮೃತ್ಯಂಜಯ ಮಂತ್ರ ಪಠಣೆ ಮಾಡಿದರೆ ಒಳ್ಳೆಯದು.
ಕಾರ್ತಿಕ ಅಮವಾಸ್ಯೆ ಕುರಿತ ಪೌರಾಣಿಕ ಕತೆ
ದಂತಕತೆಯ ಪ್ರಕಾರ, ಬಲಿ ಮಹಾರಾಜ ಎಲ್ಲಾ ದೇವತೆಗಳು ಹಾಗೂ ಲಕ್ಷ್ಮಿಯನ್ನು ಬಂಧಿಸುತ್ತಾನೆ, ಆದರೆ ಶ್ರೀ ವಿಷ್ಣುವು ಅವರನ್ನು ಕಾರ್ತಿಕ ಅಮಾವಾಸ್ಯೆಯಂದು ಬಣಧ ಮುಕ್ತಗೊಳಿಸಿದನು. ಆದ್ದರಿಂದ ಈ ದಿನ ಶ್ರೀ ವಿಷ್ಣುವಿನ ಆರಾಧನೆ ಮಾಡಿದರೆ ಎಲ್ಲಾ ಕಷ್ಟಗಳು ನಿವಾರಣೆಯಾಗುವುದು ಎಂದು ನಂಬಲಾಗಿದೆ. ಈ ದಿನ ಶ್ರೀ ವಿಷ್ಣು, ಲಕ್ಷ್ಮಿಯನ್ನು ಆರಾಧನೆ ಮಾಡುವುದರಿಂದ ಆರ್ಥಿಕ ತೊಂದರೆಗಳಿದ್ದರೆ ಅದು ನಿವಾರಣೆಯಾಗುವುದು, ಸಂಪತ್ತು ವೃದ್ಧಿಸುವುದು.
ಕಾರ್ತಿಕ ಅಮವಾಸ್ಯೆಯಂದು ಪೂಜಾ ನಿಯಮಗಳೇನು?
* ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಎದ್ದು ನದಿ ಸ್ನಾನ ಮಾಡಬೇಕು.
* ನಂತರ ಮಡಿ ಬಟ್ಟೆಗಳನ್ನು ಧರಿಸಬೇಕು.
* ನಂತರ ಶ್ರೀ ವಿಷ್ಣು ಹಾಗೂ ಲಕ್ಷ್ಮಿಗೆ ತುಪ್ಪದ ದೀಪವನ್ನು ಹಚ್ಚಿ.
* ಹೂಗಳು, ಹಣ್ಣುಗಳು, ಸಿಹಿತಿಂಡಿಗಳನ್ನು ದೇವರಿಗೆ ಅರ್ಪಿಸಿ. ಜೇನು, ಹಾಲು, ನೈವೇದ್ಯಗಳನ್ನು ಅರ್ಪಿಸಿ.
* ಓಂ ನಮೋ ಭಗವತೇ ವಾಸುದೇವಾಯ ನಮಃ ಎಂಬ ಮಂತ್ರವನ್ನು ಪಠಿಸಿ.
* ಬ್ರಾಹ್ಮಣರಿಗೆ ದಕ್ಷಿಣೆ ನೀಡಿ.
ಪರಿಹಾರ
* ಈ ದಿನ ಲಕ್ಷ್ಮಿಯನ್ನು ಪೂಜಿಸಿದರೆ ಆರ್ಥಿಕ ಸಂಕಷ್ಟ ದೂರಾಗಲಿದೆ
* ಈ ದಿನ ಸಾಸಿವೆಯೆಣ್ಣೆಯ ದೀಪ ಹಚ್ಚಿದರೆ ನಮ್ಮ ಸುತ್ತ ಇರುವ ನೆಗೆಟಿವಿಟಿ ದೂರಾಗುವುದು
* ವಿಷ್ಣು ಸಹಸ್ರನಾಮ ಪಠಿಸುವುದರಿಂದ ಶಾಂತಿ, ಉತ್ತಮ ಆರೋಗ್ಯ ಎಲ್ಲವೂ ಸಿಗಲಿದೆ.
* ಮಹಾ ಮೃತ್ಯುಂಜಯ ಮಂತ್ರ ಪಠಿಸಿದರೆ ಅವ್ಯಕ್ತ ಭಯ ದೂರಾಗುವುದು
* ನದಿ ಸ್ನಾನ ಮಾಡುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
