2024 ದ್ವಾದಶ ರಾಶಿಗಳ ವೃತ್ತಿ ರಾಶಿಫಲ: ಈ ವರ್ಷ ಯಾವ ರಾಶಿಗಳ ವೃತ್ತಿ ಜೀವನ ಅದ್ಭುತವಾಗಿರಲಿದೆ?

ಹೊಸ ವರ್ಷ ಬರ್ತಿದೆ... ಈ ಹೊಸ ವರ್ಷದಲ್ಲಿ ದ್ವಾದಶ ರಾಶಿಗಳ ವೃತ್ತಿ ಜೀವನ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ವರ್ಷವು ಬಹಳ ಮುಖ್ಯವಾಗಿರುತ್ತದೆ. ಈ ವರ್ಷ ನಿವು ಬಯಸಿದಂತೆಯೇ ನಿಮ್ಮ ವೃತ್ತಿ ಜೀವನದಲ್ಲಿ ಫಲಿತಾಂಶಗಲೂ ದೊರೆಯಲಿದೆ. ಕೆಲವೊಂದು ಸವಾಲುಗಳು ಬರಬಹುದು, ಆದರೆ ಅವುಗಳನ್ನು ಸಮರ್ಥವಾಗಿ ನಿಭಾಯಿಸಲು ನಿಮ್ಮಿಂದ ಸಾಧ್ಯವಾಗುವುದು. ವರ್ಷದ ಮಧ್ಯದಲ್ಲಿ ಕೆಲಸ ಬಿಡುವ ಆಲೋಚನೆ ಮಾಡಬಹುದು, ಆದರೆ ಒಂದು ಕೆಲಸ ಸಿಗುವ ಮುನ್ನ ಬಿಡಬೇಡಿ, ಈ ಅವಧಿಯಲ್ಲಿ ನೀವು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸಬಹುದು. ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಬರುವ ಹೊಸ ವರ್ಷಫಲಪ್ರದವಾಗಿದೆ.

Job Horoscope 2024

ವೃಷಭ ರಾಶಿ
ಬರುವ ಹೊಸ ವರ್ಷ ನಿಮಗೆ ತುಂಬಾ ಒಳ್ಳೆಯದಿದೆ.ಈ ವರ್ಷ ನಿಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾಗುತ್ತೀರಿ. ಕೆಲಸದ ನಿಮಿತ್ತ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ಕೆಲಸದಲ್ಲಿ ತೃಪ್ತಿ ಇರಲಿದೆ. ಹೊಸ ವರ್ಷದಲ್ಲಿ ನಿಮ್ಮ ಆದಾಯವು ಹೆಚ್ಚಾಗುವ ಬಲವಾದ ಸಾಧ್ಯತೆಯಿದೆ. ನಿಮ್ಮ ಕಠಿಣ ಪರಿಶ್ರಮವು ವ್ಯರ್ಥವಾಗುವುದಿಲ್ಲ, ನೀವು ಬಯಸಿದ ಫಲಿತಾಂಶವನ್ನು ಪಡೆಯುತ್ತೀರಿ. ಆದರೆ ವೃತ್ತಿ ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಹೊಸ ವರ್ಷ ಅದ್ಭುತವಾಗಿರಲಿದೆ. ಇದು ನಿಮ್ಮ ವೃತ್ತಿ ಜೀವನದಲ್ಲಿ ಅದ್ಭುತ ಯಶಸ್ಸು ಸಿಗಲಿದೆ. ವರ್ಷದ ಆರಂಭದ ತಿಂಗಳು ನಿಮಗೆ ತುಂಬಾನೇ ಅದೃಷ್ಟಕರವಾಗಿದೆ. ಮಾರ್ಚ್, ಏಪ್ರಿಲ್ ನಡುವಿನ ಸಮಯವು ನಿಮಗೆ ಬಹಳ ಮುಖ್ಯವಾಗಿದೆ. ವಿದೇಶಕ್ಕೆ ಹೋಗಲು ಬಯಸುವವರಿಗೆ ಆಗಸ್ಟ್, ಸೆಪ್ಟೆಂಬರ್ ತಿಂಗಳು ಉತ್ತಮವಾಗಿದೆ. ಆದರೆ ಅಕ್ಟೋಬರ್-ಡಿಸೆಂಬರ್ ನಡುವೆ ನಿಮ್ಮ ಕೆಲಸದಲ್ಲಿ ನೀವು ಸ್ವಲ್ಪ ಹೆಚ್ಚು ಜಾಗ್ರತೆವಹಿಸಿದರೆ ಒಳ್ಳೆಯದು.

ಕರ್ಕ ರಾಶಿ
ಕರ್ಕ ರಾಶಿಯವರಿಗೆ 2024 ವೃತ್ತಿ ಜೀವನದ ದೃಷ್ಟಿಯಿಂದ ಉತ್ತಮವಾಗಿದೆ. ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತೀರಿ. ಕೆಲವೊಂದು ಪ್ರತಿಕೂಲ ಸಂದರ್ಭ ಎದುರಾದರೂ ನೀವು ಕೆಲಸವನನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುವುದು.

ಸಿಂಹ ರಾಶಿ
2024 ಸಿಂಹ ರಾಶಿಯವರಿಗೆ ತುಂಬಾನೇ ಉತ್ತಮವಾಗಿದೆ. ನಿಮ್ಮ ಶ್ರಮಕ್ಕೆ ತಕ್ಕಂತೆ ಉತ್ತಮ ಫಲ ಪಡೆಯುತ್ತೀರಿ. ವರ್ಷದ ಆರಂಭದಲ್ಲಿ ಕೆಲವು ಒತ್ತಡಗಳಿರುತ್ತದೆ. ಆದರೆ ಏಪ್ರಿಲ್ ನಂತರ ನಿಮಗೆ ಉದ್ಯೋಗದಲ್ಲಿ ತುಂಬಾ ಶುಭವಾಗಿದೆ. ವಿದೇಶಕ್ಕೆ ಹೋಗಿ ಉದ್ಯೋಗ ಪಡೆಯುವ ನಿಮ್ಮ ಕನಸು ಕೂಡ ನನಸಾಗುವ ಸಾಧ್ಯತೆ ಇದೆ. ಜುಲೈ ಅಂತ್ಯದಲ್ಲಿ ಪರಿಸ್ಥಿತಿ ಅಷ್ಟು ಚೆನ್ನಾಗಿರಲ್ಲ. ಈ ಸಮಯದಲ್ಲಿ ಕೆಲಸದ ಒತ್ತಡ ತುಂಬಾ ಹೆಚ್ಚಾಗಲಿದೆ. ಆದರೆ ವರ್ಷದ ಕೊನೆಯ ತಿಂಗಳು ನಿಮಗೆ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ತರಲಿದೆ.

ಕನ್ಯಾರಾಶಿ
ಹೊಸ ವರ್ಷದಲ್ಲಿ ನೀವು ಯೋಚಸಿದಂತೆಯೇ ವೃತ್ತಿಯಲ್ಲಿ ಬೆಳವಣಿಗೆ ಹೊಂದುತ್ತೀರಿ. ಕೆಲಸದ ಒತ್ತಡ ಅಧಿಕವಿರುತ್ತದೆ, ಆದರೆ ನೀವು ನಿಮ್ಮ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತೀರಿ. ಆದರೆ ಕಚೇರಿಯಲ್ಲಿ ನಡೆಯುವ ಒಳ ರಾಜಕೀಯದ ಬಗ್ಗೆ ಜಾಗ್ರತೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನೀವು ಕೆಲಸದ ಕಡೆಗೆ ಅಧಿಕ ಗಮನಹರಿಸಬೇಕು. ನಂತರ ನಿಮ್ಮ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ವರ್ಷದ ಕೊನೆಯಲ್ಲಿ ನೀವು ದೊಡ್ಡ ಪ್ರಗತಿಯನ್ನು ಪಡೆಯಬಹುದು. ನೀವು ಉನ್ನತ ಸ್ಥಾನವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಫೆಬ್ರವರಿಯಿಂದ ಮಾರ್ಚ್ ವರೆಗಿನ ಸಮಯವು ನಿಮಗೆ ಸ್ವಲ್ಪ ಕಷ್ಟಕರವಾಗಿರುತ್ತದೆ. ಈ ಅವಧಿಯಲ್ಲಿ ಕೆಲವು ಉದ್ಯೋಗ ಸಂಬಂಧಿತ ಸಮಸ್ಯೆಗಳಿರಬಹುದು. ಈ ಅವಧಿಯಲ್ಲಿ ನೀವು ಬೇರೆ ಉದ್ಯೋಗಕ್ಕೆ ಟ್ರೈ ಮಾಡುವುದು ಒಳ್ಳೆಯದು. ಮೇ, ಜೂನ್ ತಿಂಗಳುಗಳಲ್ಲಿ, ನಿಮ್ಮ ವಿರೋಧಿಗಳೊಂದಿಗೆ ಜಾಗರೂಕರಾಗಿರಿ . ನಂತರದ ಸಮಯ ನಿಮಗೆ ಚೆನ್ನಾಗಿರಲಿದೆ. ಡಿಸೆಂಬರ್ ತಿಂಗಳಲ್ಲಿ ನಿಮಗೆ ಒಳ್ಳೆಯ ಅವಕಾಶ ಸಿಗಬಹುದು.

ವೃಶ್ಚಿಕ ರಾಶಿ
2024ರಲ್ಲಿ ನೀವು ನಿಮ್ಮ ವೃತ್ತಿ ಜೀವನದಲ್ಲಿ ಸ್ಥಿರತೆ ಕಾಣಬಹುದು. ನೀವು ಮಾಡುವ ಕೆಲಸ ನಿಮಗೆ ತೃಪ್ತಿ ಸಿಗಲಿದೆ. ಆಗಸ್ಟ್ ನಿಂದ ಅಕ್ಟೋಬರ್ ನಡುವೆ ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ನೀವು ನಿಮ್ಮ ಕೆಲಸವನ್ನು ಇಷ್ಟಪಡುತ್ತೀರಿ.

ಧನು ರಾಶಿ
ಈ ವರ್ಷ ವೃತ್ತಿ ಜೀವನದಲ್ಲಿ ಏರಿಳಿತಗಳಿರಲಿದೆ. ನಿಮ್ಮ ಶ್ರಮಕ್ಕೆ ಫಲ ಸಿಗದೆ ಹೋದಾಗ ನಿಮಗೆ ತುಂಬಾ ನಿರಾಸೆ ಉಂಟಾಗುವುದು. ಆದರೆ ಏಪ್ರಿಲ್ ನಿಂದ- ಆಗಸ್ಟ್‌ ತಿಂಗಳವರೆಗೆ ನೀವು ತುಂಬಾ ಜಾಗರೂಕರಾಗಿರಿ, ಅಲ್ಲದೆ ಆತುರದಲ್ಲಿ ಕೆಲಸ ಬಿಡುವ ನಿರ್ಧಾರ ಮಾಡಬೇಡಿ, ಒಂದು ಕೆಲಸ ಸಿಕ್ಕ ಬಳಿಕವಷ್ಟೇ ಮಾಡುತ್ತಿರುವ ಕೆಲಸವನ್ನು ಬಿಡಿ. ಉದ್ಯೋಗ ಬದಲಾವಣೆಯು ನಿಮಗೆ ಲಾಭದಾಯಕವಾಗಿರುತ್ತದೆ. ವೃತ್ತಿಜೀವನದ ದೃಷ್ಟಿಯಿಂದ ಸೆಪ್ಟೆಂಬರ್ ತಿಂಗಳು ತುಂಬಾ ಉತ್ತಮವಾಗಿರುತ್ತದೆ.

ಮಕರ ರಾಶಿ
ಮಕರ ರಾಶಿಯವರಿಗೆ 2024 ವರ್ಷ ತುಂಬಾ ಉತ್ತಮವಾಗಿರಲಿದೆ. ಶನಿಯ ಸ್ಥಾನದಿಂದಾಗಿ ನೀವು ನಿಮ್ಮ ಕೆಲಸದಲ್ಲಿ ನೀವು ಉತ್ತಮ ಫಲ ಪಡೆಯಲು ಸಾಧ್ಯವಾಗುವುದು. ಈ ಅವಧಿಯಲ್ಲಿ ಜವಾಬ್ದಾರಿ ಹೆಚ್ಚಾಗುವುದು, ಆದರೆ ಅದನ್ನು ನೀವು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತೀರಿ. ನೀವು ವೃತ್ತಿ ಜೀವನದಲ್ಲಿ ಬಯಸುತ್ತಿದ್ದ ಬಡ್ತಿ ಸಿಗಲಿದೆ.

ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ವರ್ಷ ಉತ್ತಮವಾಗಿರಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ನೀವು ಪಡೆಯುತ್ತೀರಿ. ನೀವು ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಉತ್ತಮ ಫಲ ಸಿಗಲಿದೆ. ಫೆಬ್ರವರಿ- ಮಾರ್ಚ್ವರೆಗೆ ಕೆಲಸದ ಒತ್ತಡ ಅಧಿಕವಿರಲಿದೆ. ಈ ವರ್ಷ ನಿಮ್ಮ ಕೆಲಸದ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಜುಲೈ-ಆಗಸ್ಟ್ ವರೆಗೆ ಕೆಲಸದಲ್ಲಿ ಒತ್ತಡ ಹೆಚ್ಚಿರಲಿದೆ. ವರ್ಷ ಕೊನೆಯ ತಿಂಗಳು ಕೆಲಸದ ದೃಷ್ಟಿಯಿಂದ ಉತ್ತಮವಾಗಿದೆ.

ಮೀನ ರಾಶಿ
ಮೀನ ರಾಶಿಯವರಿಗೆ ವರ್ಷದ ಆರಂಭವು ತುಂಬಾ ಒಳ್ಳೆಯದು. ಇದು ನಿಮ್ಮ ವೃತ್ತಿ ಜೀವನದಲ್ಲಿ ಅದ್ಭುತ ಯಶಸ್ಸು ಸಿಗಲಿದೆ. ಮಾರ್ಚ್, ಏಪ್ರಿಲ್ ನಡುವಿನ ಸಮಯವು ನಿಮಗೆ ಬಹಳ ಮುಖ್ಯವಾಗಿದೆ. ವಿದೇಶಕ್ಕೆ ಹೋಗಲು ಬಯಸುವವರಿಗೆ ಆಗಸ್ಟ್, ಸೆಪ್ಟೆಂಬರ್ ತಿಂಗಳು ಉತ್ತಮವಾಗಿದೆ. ಅಕ್ಟೋಬರ್, ಡಿಸೆಂಬರ್‌ನಲ್ಲಿ ಕೆಲಸದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಜಾಗ್ರತೆವಹಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Job Horoscope 2024: How Will 2024 For 12 Zodiac Signs In Job In Kannada

Job Horoscope 2024: Here are 12 zodiac signs job horoscope 2024, read on...
Story first published: Wednesday, December 20, 2023, 14:30 [IST]
X
Desktop Bottom Promotion