Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಡಿಸೆಂಬರ್‌ನಲ್ಲಿದೆ ಗುರು ಪುಷ್ಯಾ ಯೋಗ: ಈ ದಿನ ಮನೆಗೆ ಈ ವಸ್ತುಗಳನ್ನು ತಂದರೆ ತುಂಬಾನೇ ಶುಭ
ಗುರು ಪುಷ್ಯಾ ಯೋಗ ಎಂಬುವುದು ತಿಂಬಾನೇ ಅಪರೂಪದ ಯೋಗ. ಈ ವರ್ಷದಲ್ಲಿ 2 ಬಾರಿಯಷ್ಟೇ ಈ ಯೋಗ ಬಂದಿದೆ. ಮೇ. 25ಕ್ಕೆ ಬಂದಿದೆ. ಅದಾದ ಮೇಲೆ ಆ ಯೋಗ ಡಿಸೆಂಬರ್‌ನಲ್ಲಿದೆ. ಗುರು ಪುಷ್ಯ ಯೋಗವನ್ನು ತುಂಬಾನೇ ಶುಭವೆಂದು ಪರಿಗಣಿಸಲಾಗಿದೆ. ಈ ದಿನ ಮದುವೆ ಮಾಡುವುದಿಲ್ಲ ಉಳಿದಂತೆ ಗೃಹ ಪ್ರವೇಶ, ಹೊಸ ಮನೆಗೆ ಹೋಗುವುದು , ಹೊಸ ಬ್ಯುಸ್‌ನೆಸ್ ಪ್ರಾರಂಭಿಸಲು, ಆಸ್ತಿ, ಗಾಡಿ ಖರೀದಿಗೆ ಈ ದಿನ ತುಂಬಾನೇ ಶುಭವಾಗಿದೆ. ಆದ್ದರಿಂದ ವೈದಿಕ ಶಾಸ್ತ್ರದಲ್ಲಿ ಈ ದಿನಕ್ಕೆ ತುಂಬಾನೇ ಮಹತ್ವವಿದೆ. ಈ ತಿಂಗಳಿನಲ್ಲಿ ನೀವು ಏನಾದರೂ ಶುಭ ಕಾರ್ಯ ಮಾಡಬೇಕೆಂದಿದ್ದರೆ ಈ ಗುರು ಪುಷ್ಯಾ ಯೋಗ ತುಂಬಾನೇ ಶುಭವಾಗಿದೆ ನೋಡಿ.

ಈ ಯೋಗದ ಸಮಯದಲ್ಲಿ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದು, ನೀವು ಮಾಡುವ ಕೆಲಸದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಏಕೆಂದರೆ ಪುಷ್ಯ ನಕ್ಷತ್ರವನ್ನು ನಕ್ಷತ್ರಪುಂಜಗಳಲ್ಲಿಯ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಆದ್ದರಿಂದಲೇ ಪುಷ್ಯ ನಕ್ಷತ್ರಕ್ಕೆ ನಕ್ಷತ್ರಪುಂಜಗಳಲ್ಲಿ ರಾಜನ ಬಿರುದು ಎಂದು ಹೇಳಲಾಗಿದೆ. ಈ ನಕ್ಷತ್ರದಲ್ಲಿ ಪ್ರಾರಂಭಿಸಿದ ಕೆಲಸದಲ್ಲಿ ತುಂಬಾನೇ ಪ್ರಗತಿ ಕಾಣುವಿರಿ. ಪುಷ್ಯ ನಕ್ಷತ್ರ ಶಾಶ್ವತವಾದ್ದರಿಂದ ಈ ಸಮಯದಲ್ಲಿ ಮಾಡುವ ಕೆಲಸಗಳಲ್ಲಿ ನಿಮಗೆ ಅಭದ್ರತೆ ಕಾಡುವುದಿಲ್ಲ.
ಡಿಸೆಂಬರ್‌ನಲ್ಲಿ ಗುರು ಪುಷ್ಯ ಯೋಗ ಯಾವಾಗ ರೂಪುಗೊಳ್ಳುತ್ತದೆ? ಶುಭ ಸಮಯ ಯಾವಾಗ ಎಂದು ನೋಡೋಣ ಬನ್ನಿ:
ಡಿಸೆಂಬರ್‌ನಲ್ಲಿ ಗುರು ಪುಷ್ಯಾ ಯೋಗ
ಡಿಸೆಂಬರ್‌ನಲ್ಲಿ ಗುರು ಪುಷ್ಯಾ ಯೋಗ 29ಕ್ಕೆ ಇದೆ. ಈ ಯೋಗ ಡಿಸೆಂಬರ್ 28 ರಾತ್ರಿ 01:05ಕ್ಕೆ ಪ್ರಾರಂಭವಾಗಿ ಡಿಸೆಂಬರ್ 30 ಬೆಳಗ್ಗೆ 03:10ರವರೆಗೆ ಇರಲಿದೆ. ಆದ್ದರಿಂದ ಡಿಸೆಂಬರ್ 29ರ ಇಡೀ ದಿನ ಶುಭ ಕಾರ್ಯಗಳಿಗೆ ತುಂಬಾನೇ ಶುಭವಾಗಿದೆ ನೋಡಿ.
ಗುರು ಪುಷ್ಯಾ ನಕ್ಷತ್ರ ಯಾವಾಗ ರೂಪುಗೊಳ್ಳುತ್ತಿದೆ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವಾರ ಪುಷ್ಯ ನಕ್ಷತ್ರ ಬಂದಾಗ ಈ ಅಪರೂಪದ ಗುರು ಪುಷ್ಯ ಯೋಗ ಉಂಟಾಗುತ್ತದೆ. ಗುರು ಪುಷ್ಯ ಯೋಗವನ್ನು ಗುರು ಪುಷ್ಯ ನಕ್ಷತ್ರ ಯೋಗ ಎಂದೂ ಕರೆಯುತ್ತಾರೆ. ಇದು ಅತ್ಯಂತ ಶುಭವಾದ ಯೋಗವಾಗಿದೆ. ವರ್ಷವಿಡೀ ನಿಮಗೆ ಶುಭ ಕಾರ್ಯಗಳಿಗೆ ಯಾವುದೇ ದಿನ ಸಿಗದಿದ್ದರೆ, ಗುರು ಪುಷ್ಯ ಯೋಗದ ದಿನದಂದು ನೀವು ಶುಭ ಕಾರ್ಯಗಳನ್ನು ಮಾಡಬಹುದು. ಈ ದಿನ ಮಾಡುವ ಕಾರ್ಯದಿಂದ ಖಂಡಿತ ಯಶಸ್ಸು ಸಿಗಲಿದೆ. '
ಈ ದಿನ ಈ ವಸ್ತುಗಳನ್ನು ಖರೀದಿಸಲು ಶುಭವಾಗಿದೆ
* ಈ ದಿನ ಚಿನ್ನವನ್ನು ಖರೀದಿಸಿದರೆ ತುಂಬಾನೇ ಶುಭ ಎಂದು ಪರಿಗಣಿಸಲಿದೆ, ಚಿನ್ನ ಖರೀದಿ ಮಾಡಿದರೆ ಸಂಪತ್ತು ಹೆಚ್ಚಾಗಲಿದೆ
* ಈ ದಿನ ಅರಿಶಿಣದ ತುಂಡುಗಳನ್ನು ಮನೆಗೆ ತರುವುದು ಶುಭ ಎಂದು ಪರಿಗಣಿಸಲಾಗಿದೆ.
* ದೇವ ಗುರು ಬೃಹಸ್ಪತಿಯ ಮಂಗಳಕರ ಬಣ್ಣವು ಹಳದಿ, ಆದ್ದರಿಂದ ನಿಮಗೆ ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದರೆ ಅರಿಶಿಣವನ್ನು ಖರೀದಿಸಬಹುದು.
* ಗುರು ಪುಷ್ಯ ಯೋಗದಲ್ಲಿ ಕಡ್ಲೆ ಬೇಳೆ ಖರೀದಿ ಮಾಡಿದರೆ ಅದೃಷ್ಟಕರ ಎಂದು ಹೇಳಲಾಗುವುದು.
* ಅಲ್ಲದೆ ಈ ದಿನ ಹಳದಿ ಬಣ್ಣದ ಬಟ್ಟೆ, ಹಿತ್ತಾಳೆ, ತುಪ್ಪ ಈ ರೀತಿ ಹಳದಿ ವಸ್ತುಗಳನ್ನು ಖರೀದಿಸುವುದು ಶುಭವಾಗಿದೆ.
* ನಾಣ್ಯ: ಈ ದಿನ ಚಿನ್ನದ, ಬೆಳ್ಳಿಯ ನಾಣ್ಯ ಖರೀದಿಸುವುದು ಶ್ರೇಷ್ಠ ಎಂದು ಹೇಳಲಾಗುವುದು.
ಸರಸ್ವತಿ, ಲಕ್ಷ್ಮಿಯನ್ನು ಆರಾಧಿಸಿ
ಗುರು ಪುಷ್ಯಾ ಯೋಗದಂದು ಸರಸ್ವತಿಯನ್ನು ಪೂಜಿಸಿ. ಈ ದಿನ ದೇವ ಗುರು ಬೃಹಸ್ಪತಿಯ ಪ್ರಭಾವ ಹೆಚ್ಚು. ಈ ದಿನ ಧಾರ್ಮಿಕ ವಸ್ತುಗಳನ್ನು ಖರೀದಿಸಿ.
* ಈ ದಿನ ಶುಕ್ರವಾರದಂದು ಬಂದಿರುವುದರಿಂದ ಲಕ್ಷ್ಮಿ ಪೂಜೆಗೆ ಶ್ರೇಷ್ಠವಾಗಿದೆ. ಈ ದಿನ ಲಕ್ಷ್ಮಿ ದೇವಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿ, ಲಕ್ಷ್ಮಿ ಪೂಜೆಗೆ ಕಮಲದ ಹೂವುಗಳನ್ನು ಅರ್ಪಿಸಿ ಪೂಜಿಸಿ
* ಶ್ರೀಸೂಕ್ತವನ್ನು ಪಠಿಸಿ. ಈ ದಿನದಂದು ಉಪವಾಸವಿದ್ದು ಪೂಜಿಸುವುದರಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗಲಿದೆ.
* ಲಕ್ಷ್ಮಿ ಮಂತ್ರ ಪಠಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
