ಈ ಮೂರು ರಾಶಿಗಳಿಗೆ ಇಂದಿನಿಂದ (ನವೆಂಬರ್ 16) ಗಜ ಕೇಸರಿ ಯೋಗ

ವೈದಿಕ ದೃಷ್ಟಿಯಿಂದ ನವೆಂಬರ್‌ 16 ತುಂಬಾ ವಿಶೇಷವಾದ ದಿನ, ಏಕೆಂದರೆ ಈ ದಿನ ವೃಶ್ಚಿಕ ಸಂಕ್ರಾಂತಿ,ಇದೇ ದಿನ ಗುರು ಮತ್ತು ಚಂದ್ರನ ಸಂಯೋಗವಾಗಲಿದೆ. ಗುರು ಮತ್ತು ಚಂದ್ರನ ಸಂಯೋಗದಿಂದಾಗಿ ಗಜಕೇಸರಿ ಯೋಗ ಉಂಟಾಗುವುದು, ಗಜಕೇಸರಿ ಯೋಗದಿಂದಾಗಿ ಕೆಲ ರಾಶಿಗಳು ಅತ್ಯಾದ್ಭುತ ಪ್ರಯೋಜನ ಪಡೆಯಲಿದ್ದಾರೆ.

ಈ ಗಜಕೇಸರಿ ಯೋಗ ಎಂದರೇನು? ಈ ಗಜಕೇಸರಿ ಯೋಗದಿಂದಾಗಿ ಯಾವೆಲ್ಲಾ ರಾಶಿಗಳು ಅದ್ಭುತ ಪ್ರಯೋಜನ ಪಡೆಯಲಿದ್ದಾರೆ ಎಂದು ನೋಡೋಣ ಬನ್ನಿ:

Gaja Kesari Yog

ಗಜಕೇಸರಿ ಯೋಗ ಎಂದರೇನು?

ಗುರು, ಚಂದ್ರ ಒಂದೇ ರಾಶಿಯಲ್ಲಿ ಬಂದಾಗ ಗಜಕೇಸರಿ ಯೋಗ ಉಂಟಾಗುವುದು. ಈ ಗಜಕೇಸರಿ ಯೋಗ ಆರ್ಥಿಕ ಸ್ಥಿತಿ, ಆರೋಗ್ಯ, ಸಂಪತ್ತು ಎಲ್ಲದರ ಮೇಲೆ ಪರಿಣಾಮ ಬೀರುವುದು. ಈ ಗಜಕೇಸರಿ ಯೋಗದಿಂದಾಗಿ ಈ 3 ರಾಶಿಯವರು ಅದ್ಭುತ ಪ್ರಯೋಜನ ಪಡೆಯುತ್ತೀರಿ:

ಯಾವೆಲ್ಲಾ ರಾಶಿಗಳಿಗೆ ಗಜಕೇಸರಿ ಯೋಗವಿದೆ:

ಕರ್ಕ ರಾಶಿ

ಕರ್ಕ ರಾಶಿಯವರು ಇತರ ಗ್ರಹಗಳ ಪ್ರಭಾವದಿಂದ ಆರ್ಥಿಕ ಸವಾಲು ಎದುರಿಸುತ್ತಿದ್ದೀರಿ. ಆದರೆ ಈ ಗಜಕೇಸರಿ ಯೋಗ ನಿಮ್ಮೆಲ್ಲಾ ಸಮಸ್ಯೆಗೆ ಪರಿಹಾರ ಎಂಬಂತೆ ಬಂದಿದೆ. ನೀವು ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಈ ಯೋಗದ ಬಲದಿಂದಾಗಿ ನಿಮಗೆ ವೃತ್ತಿ ಬದುಕಿನಲ್ಲಿ ಹಲವು ಅವಕಾಶಗಳು ದೊರೆಯಲಿದೆ. ನೀವು ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಇನ್ನಷ್ಟು ಲಾಭ ಗಳಿಸಲು ನಿಮಗೆ ಸಾಧ್ಯವಾಗುವುದು. ಇನ್ನು ಸಾಲವಿದ್ದರೆ ಸಾಲ ತೀರಿಸಲು ಸಾಧ್ಯವಾಗುವುದು, ಆರ್ಥಿಕವಾಗಿ ಲಾಭ ಗಳಿಸಲು ಸಾಧ್ಯವಾಗುವುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೂ ಗಜಕೇಸರಿ ಯೋಗವಿದೆ, ಈ ಯೋಗದ ಬಲದಿಂದ ನಿಮ್ಮ ಸಂಪತ್ತು ವೃದ್ಧಿಸಲಿದೆ, ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ನಡೆಯಲಿದೆ. ಕುಟುಂಬ ವಾತಾವರಣ ತುಂಬಾ ಚೆನ್ನಾಗಿರಲಿದೆ, ನಿಮ್ಮ ನಡುವೆ ಒಳ್ಳೆಯ ಹೊಂದಾಣಿಕೆ, ಗೌರವಿರಲಿದೆ. ಸಾಮಾಜಿಕವಾಗಿ ಈ ಅವಧಿ ಅನುಕೂಲಕರವಾಗಿರಲಿದೆ. ಹೊಸ ಉದ್ಯಮ ಪ್ರಾರಂಭಿಸಿದರೆ ನೀವು ಒಳ್ಳೆಯ ಲಾಭ ಗಳಿಸುತ್ತೀರಿ. ಈ ಸಮಯ ನಿಮಗೆ ವೃತ್ತಿ ಬದುಕಿನಲ್ಲಿ, ವೈಯಕ್ತಿಕ ಬದುಕಿನಲ್ಲಿ ತುಂಬಾ ಸಂತೋಷವಾಗಿರುತ್ತೀರಿ.

ಮೀನ ರಾಶಿ

ಮೀನ ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿರಲಿದೆ. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿದ್ದ ಸವಾಲುಗಳು ದೂರಾಗಲಿದೆ. ನಿಮ್ಮ ಕೌಶಲ್ಯ ವೃದ್ಧಿಸಲು ಹೊಸ ಅವಕಾಶಗಳು ದೊರೆಯಲಿದೆ. ಆರ್ಥಿಕವಾಗಿ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ಅವಧಿಯಲ್ಲಿ ಧಾರ್ಮಿಕ ಕ್ಷೇತ್ರದ ಕಡೆಗೆ ಒಲವು ತೋರಿಸುತ್ತೀರಿ.

ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಸ್ವಂತ ವ್ಯವಹಾರ ಪ್ರಾರಂಭಿಸಲು ಈ ಅವಧಿ ಅನುಕೂಲಕರವಾಗಿರಲಿದೆ. ಉದ್ಯೋಗಿಗಳು ಬಡ್ತಿಗೆ ಕಾಯುತ್ತಿದ್ದರೆ ಈ ಸಮಯದಲ್ಲಿ ಬಡ್ತಿ ಪಡೆಯುವಿರಿ.

ಗಜಕೇಸರಿ ಯೋಗದ ಪ್ರಯೋಗಗಳು

ಆರ್ಥಿಕವಾಗಿ ಪ್ರಯೋಜನ ಪಡೆಯುತ್ತೀರಿ: ಗಜಕೇಸರಿ ಯೋಗದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ
ವೃತ್ತಿ ಬದುಕು: ಈ ಯೋಗದಿಂದಾಗಿ ವೃತ್ತಿ ಬದುಕಿನಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ. ಬಡ್ತಿ ದೊರೆಯಬಹುದು ಅಥವಾ ಹೊಸ ಜವಾಬ್ದಾರಿಗಳು ದೊರೆಯಬಹುದು, ಪ್ರಾಜೆಕ್ಟ್‌ನಲ್ಲಿ ಯಶಸ್ವಿಯಾಗಲಿದೆ.
ಧಾರ್ಮಿಕ ಒಲವು ಹೆಚ್ಚಾಗಲಿದೆ: ಈ ಸಮಯದಲ್ಲಿ ಈ ಅವಧಿ ಮನಸ್ಥಿತಿ ತುಂಬಾ ಚೆನ್ನಾಗಿರಲಿದೆ. ಧಾರ್ಮಿಕ ಚಟುವಟಿಕೆ ಕಡೆಗೆ ಒಲವು ಹೆಚ್ಚಾಗಲಿದೆ.
ಆರೋಗ್ಯ ಚೆನ್ನಾಗಿರಲಿದೆ: ನಿಮ್ಮ ಶಕ್ತಿ ಹೆಚ್ಚಾಗಿಲಿದೆ, ಆರೋಗ್ಯ ಚೆನ್ನಾಗಿರಲಿದೆ
ನಿಮ್ಮ ಖ್ಯಾತಿ ಹೆಚ್ಚಾಗಲಿದೆ
ಸೌಕರ್ಯಗಳು ಹೆಚ್ಚಾಗಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Gaja Kesari Yog : These 3 Zodiac Signs Gets More Benfits In Kannada

Gaja Kesari Yog: These 3 zodiac gets these yog benefits, their financial, social status will improve
Story first published: Saturday, November 16, 2024, 10:48 [IST]
X
Desktop Bottom Promotion