Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಶನಿ ಅಮವಾಸ್ಯೆಯಂದು ಈ ಪರಿಹಾರ ಮಾಡಿದರೆ ಜೀವನದಲ್ಲಿ ಏಳಿಗೆ ಉಂಟಾಗುವುದು
ಅಕ್ಟೋಬರ್ 14ಕ್ಕೆ ಈ ವರ್ಷದ ಪಿತೃಪಕ್ಷ ಮುಕ್ತಾಯವಾಗಲಿದೆ. ತಮ್ಮ ಪೂರ್ವಜರಿಗೆ ಶ್ರಾದ್ಧ, ತರ್ಪಣವನ್ನು ಮಾಡಲು ಸಾಧ್ಯವಾಗದವರು ಈ ದಿನ ತರ್ಪಣ ನೀಡುವುದರ ಮೂಲಕ ಪುಣ್ಯದ ಫಲ ಪಡೆಯಲು ಸಾಧ್ಯವಾಗುವುದು.
ಪಿತೃದೋಷವಿದ್ದರೆ ತುಂಬಾನೇ ಸಮಸ್ಯೆ ಎದುರಿಸಬೇಕಾಗುವುದು, ಕುಟುಂಬದಲ್ಲಿ ನೆಮ್ಮದಿ ಇರಲ್ಲ, ವ್ಯಾಪಾರದಲ್ಲಿ, ವೃತ್ತಿ ಜೀವನದಲ್ಲಿ ಏಳಿಗೆ ಉಂಟಾಗುವುದಿಲ್ಲ, ತುಂಬಾನೇ ನಷ್ಟ ಅನುಭವಿಸಬೇಕಾಗುವುದು, ಸಂತಾನ ಭಾಗ್ಯ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳಲು ಪಿತೃಪಕ್ಷ ಅತ್ಯುತ್ತಮವಾದ ಪರಿಹಾರ ಮಾರ್ಗವಾಗಿದೆ. ಪಿತೃತರ್ಪಣ ಮಾಡುವುದರಿಂದ ಪಿತೃಗಳಿಗೆ ಮೋಕ್ಷ ಸಿಗುತ್ತದೆ, ಅಲೆಯುತ್ತಿರುವ ಆತ್ಮಗಳಿಗೆ ಮೋಕ್ಷ ಸಿಕ್ಕಾಗ ಅವರು ಸಂತುಷ್ಟರಾಗಿ ಅನುಗ್ರಹಿಸುತ್ತಾರೆ. ಇದರಿಂದ ಕುಟುಂಬಕ್ಕೆ ಒಳಿತಾಗುವುದು, ಆದ್ದರಿಂದ ಪಿತೃಪಕ್ಷಕ್ಕೆ ತುಂಬಾನೇ ಮಹತ್ವವಿದೆ.

ಅಮವಾಸ್ಯೆ ತಿಥಿಯಂದು ಧಾರ್ಮಿಕ ವಿಧಿಯ ಪ್ರಕಾರ ತರ್ಪಣ ನೀಡಬೇಕು. ಈ ವರ್ಷ ಮಹಾಲಯ ಅಮವಾಸ್ಯೆ ಶನಿವಾರ ಬಂದಿರುವುದರಿಂದ ಈ ದಿನಾಂಕಕ್ಕೆ ವಿಶೇಷ ಮಹತ್ವವಿದೆ. ಈ ದಿನ ಈ ರೀತಿ ಮಾಡುವುದರಿಂದ ಪಿತೃದೋಷದಿಂದ ಮುಕ್ತರಾಗಬಹುದು:
* ಸರ್ವ ಪಿತೃ ಅಮಾವಾಸ್ಯೆಯಂದು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಧ್ಯಾನ ಮಾಡಿ ಶುಭ್ರ ಬಟ್ಟೆ ಧರಿಸಿ ನಂತರ ಆಲದ ಮರಕ್ಕೆ ನೀರು ಹಾಕಿ, ಸಾಸಿವೆಯೆಣ್ಣೆಯಿಂದ ದೀಪ ಹಚ್ಚಿ.
* ಪಿತೃ ಪಕ್ಷದ ಅಮವಾಸ್ಯೆಯಂದು ಕಾಗೆಗಳಿಗೆ ಆಹಾರವನ್ನು ನೀಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಶನಿಕೃಪೆಗೆ ಪಾತ್ರರಾಗುವುದು.
* ಸರ್ವ ಪಿತೃ ಅಮವಾಸ್ಯೆಯಂದು ಕಪ್ಪು ಹಸುವಿಗೆ ಸಾಸಿವೆ ಎಣ್ಣೆ ಸ್ವಲ್ಪ ಹಾಕಿ ತಯಾರಿಸಿದ ಹಿಟ್ಟು ತಿನ್ನಿಸಿ. ಇದರಿಂದ ಶನಿ ಕೃಪೆಗೆ ಪಾತ್ರರಾಗಬಹುದು.
* ಈ ದಿನ ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಬೇಕು. ಇದರಿಂದ ಶನಿಯ ಆಶೀರ್ವಾದ ಸಿಗಲಿದೆ.
* ಶಾಸ್ತ್ರ ಪ್ರಕಾರ ಪಿತೃತರ್ಪಣ ಅರ್ಪಿಸಿ. ಬೆಳಗ್ಗೆ ಸೂರ್ಯನಿಗೆ ಆರ್ಘ್ಯ ಅರ್ಪಿಸುವಾಗ ಎಳ್ಳು ಹಾಕಿರುವ ಆರ್ಘ್ಯ ಅರ್ಪಿಸಿ.
* ಪಿಂಡದಾನ ಮಾಡಿ
ಪಿತೃ ಪೂಜೆ ಮಾಡುವಾಗ ಈ ಮಂತ್ರ ಪಠಿಸಿ ಓಂ ದೇವತಾಭ್ಯ ಪಿತೃಭಕ್ಷ್ಯ ಮಹಾಯೋಗಿಭ್ಯೇವ ಚನಮಃ ಸ್ವಾಹಾಯಃ ।। ಈ ಮಂತ್ರವನ್ನು ಶ್ರದ್ಧೆಯಿಂದ ಪಠಿಸಿ.
ಅಚನಂ ಮಾಡುವಾಗ ಈ ಮಂತ್ರ ಪಠಿಸಿ ಓಂ ಕೇಶವಾಯ ನಮಃ, ಓಂ ಮಾಧವಾಯ ನಮಃ, ಓಂ ನಾರಾಯಣಾಯ ನಮಃ ಮಂತ್ರ ಪಠಿಸಿ.
ಈ ಮಂತ್ರ 108 ಬಾರಿ ಪಠಿಸಿ
ಓಂ ಶ್ರೀ ಸರ್ವ ಪಿತೃ ದೋಷ ನಿವಾರಣಾಯ ಕ್ಲೇಷಂ ಹನ್ ಹನ್ ಸುಖ್ ಶಾಂತಿ ದೇಹಿ ಪತ್ ಸ್ವಾಹಾ
ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ?
* ಮನೆಯಲ್ಲಿ ನೆಮ್ಮದಿ ಇಲ್ಲದಿರುವುದು
* ಮನೆಯ ಸದಸ್ಯರಿಗೆ ಬಿಡದೆ ಕಾಡುವ ಕಾಯಿಲೆ
* ಆಗಾಗ ಗರ್ಭಪಾತ ಉಂಟಾಗುವುದು
* ಸಂತಾನ ಭಾಗ್ಯ ದೊರೆಯದಿರುವುದು
* ಗಂಡ-ಹೆಂಡತಿ ನಡುವೆ ಹೊಂದಾಣಿಕೆಯೇ ಇಲ್ಲದಿರುವುದು
* ಹಣಕಾಸಿನ ತೊಂದರೆ ಉಂಟಾಗುವುದು
* ದೈಹಿಕ, ಮಾನಸಿ ಸಮಸ್ಯೆಗಳು ಕಾಡುವುದು
ತರ್ಪ ನೀಡುವುದರಿಂದ ಪಿತೃದೋಷ ದೂರಾಗುವುದು, ಪಿತೃಗಳ ಆಶೀರ್ವಾದದಿಂದ ಬದುಕು ತುಂಬಾ ಚೆನ್ನಾಗಿ ಆಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
