2024 ದ್ವಾದಶ ರಾಶಿಗಳ ವ್ಯಾಪಾರಿಗಳಿಗೆ ರಾಶಿಫಲ: ಈ ವರ್ಷ ಯಾವ ರಾಶಿಗಳ ವ್ಯಾಪಾರಿಗಳಿಗೆ ಹೇಗಿರಲಿದೆ?

ಹೊಸ ವರ್ಷ ಬರ್ತಿದೆ... ಈ ಹೊಸ ವರ್ಷದಲ್ಲಿ ದ್ವಾದಶ ರಾಶಿಗಳ ವ್ಯಾಪಾರಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಪಾಲುದಾರಿಕೆಯ ವ್ಯಾಪಾರ ಮಾಡುತ್ತಿದ್ದರೆ, ನಿಮ್ಮ ಪಾಲುದಾರರೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಇಲ್ಲದಿದ್ದರೆ ವ್ಯವಹಾರದಲ್ಲಿ ವಿವಾದಗಳು ನಷ್ಟವನ್ನು ಉಂಟುಮಾಡಬಹುದು. ವ್ಯಾಪಾರವನ್ನು ವಿಸ್ತರಿಸಲು ಬಯಸಿದರೆ ಈ ವರ್ಷ ನೀವು ಯಶಸ್ಸನ್ನು ಪಡೆಯಬಹುದು.

Business Horoscope 2024

ವೃಷಭ ರಾಶಿ
ಈ ವರ್ಷ ನಿಮಗೆ ಅದ್ಭುತವಾಗಿರಲಿದೆ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ಸಮಯವು ನಿಮಗೆ ತುಂಬಾ ಲಾಭದಾಯಕವಾಗಿರುತ್ತದೆ. ವ್ಯವಹಾರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವರ್ಷದ ಮಧ್ಯದಲ್ಲಿ, ನೀವು ಸ್ವಲ್ಪ ಜಾಗರೂಕರಾಗಿರಲು ಸಲಹೆ ನೀಡಲಾಗುವುದು. ಹಣ ಹೂಡಿಕೆ ಮಾಡುವಾಗ ತುಂಬಾನೇ ಜಾಗ್ರತೆವಹಿಸಿ. ಈ ವರ್ಷ ಹೊಸ ಬ್ಯುಸ್‌ನೆಸ್‌ ಪ್ರಾರಂಭಿಸಿಲು ಬಯಸಿದರೆ ಅದು ನೆರವೇರಲಿದೆ.

ಮಿಥುನ ರಾಶಿ
ಈ ವರ್ಷ ನೀವು ಜಾಗ್ರತೆವಹಿಸಬೇಕು. ಆದರೆ ಮೇ ತಿಂಗಳಿನಿಂದ ಪರಿಸ್ಥಿತಿಯಲ್ಲಿ ಸುಧಾರಣೆ ಇರಲಿದೆ. ಮಾರ್ಚ್, ಆಗಸ್ಟ್, ನವೆಂಬರ್, ಡಿಸೆಂಬರ್ ತಿಂಗಳುಗಳು ನಿಮ್ಮ ವ್ಯಾಪಾರಕ್ಕೆ ಹೆಚ್ಚು ಸೂಕ್ತವಾಗಿರುತ್ತದೆ. ಜನವರಿ-ಫೆಬ್ರವರಿ, ಏಪ್ರಿಲ್‌ನಿಂದ-ಜೂನ್, ಆಗಸ್ಟ್‌ನಿಂದ-ಸೆಪ್ಟೆಂಬರ್ ತಿಂಗಳಿನಲ್ಲಿ ನಿಮ್ಮ ವ್ಯವಹಾರದಲ್ಲಿ ಲಾಭಗಳಿಸುತ್ತೀರಿ.

ಕರ್ಕ ರಾಶಿ
2024ರಲ್ಲಿ ನಿಮ್ಮ ವ್ಯಾಪಾರ ಯೋಜನೆಗಳಲ್ಲಿ ಕೆಲವು ಅಡೆತಡೆಗಳಿರಬಹುದು. ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡಬೇಡಿ. ಇದರ ಹೊರತಾಗಿ, ಯೋಚಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಈ ವರ್ಷ ಹೂಡಿಕೆ ಮಾಡುವಾಗ ಜಾಗ್ರತೆವಹಿಸಿ. ನೀವು ಸಾಲವನ್ನು ತೆಗೆದುಕೊಂಡಿದ್ದರೆ ಸಾಧ್ಯವಾದಷ್ಟು ಬೇಗ ಮರುಪಾವತಿಸಲು ಪ್ರಯತ್ನಿಸಬೇಕು. ಡಿಸೆಂಬರ್‌ನಲ್ಲಿ ವ್ಯವಹಾರದಲ್ಲಿ ಪ್ರಗತಿ ಕಾಣಲಿದೆ.

ಸಿಂಹ ರಾಶಿ
ಈ ವರ್ಷ ನೀವು ಬಯಸಿದ ಫಲಿತಾಂಶ ಕಷ್ಟವಾಗಬಹುದು. ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದಿರಬಹುದು, ಆದರೆ ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ವ್ಯವಹಾರದಲ್ಲಿ ನೀವು ಪ್ರಗತಿಯನ್ನು ಕಾಣುವಿರಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ತುಂಬಾನೇ ಜಾಗ್ರತೆವಹಿಸಿ. ಜುಲೈನಿಂದ ಅಕ್ಟೋಬರ್ ವರೆಗಿನ ಸಮಯವು ನಿಮಗೆ ಬಹಳ ಮುಖ್ಯವಾಗಿರುತ್ತದೆ. ನಿಮ್ಮ ವ್ಯಾಪಾರವು ಎರಡು ಪಟ್ಟು ವೇಗವಾಗಿ ಬೆಳೆಯುತ್ತದೆ.

ಕನ್ಯಾ ರಾಶಿ
2024ರಲ್ಲಿ ನೀವು ಲಾಭ ಗಳಿಸಲು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸ ಕುಸಿಯಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಕೆಲ ಸಮಸ್ಯೆಗಳು ಉಂಟಾಗಬಹುದು, ಅಂತಹ ಪರಿಸ್ಥಿತಿಯಲ್ಲಿ, ನೀವು ಸಾಕಷ್ಟು ಕಿರಿಕಿರಿಯನ್ನು ಅನುಭವಿಸಬಹುದು. ಏಪ್ರಿಲ್ ನಿಂದ ಮೇ ವರೆಗಿನ ಅವಧಿಯು ನಿಮಗೆ ತುಂಬಾ ಕಷ್ಟಕರವಾಗಿರುತ್ತದೆ. ಈ ಅವಧಿಯಲ್ಲಿ ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆಗಸ್ಟ್ ನಂತರದ ಸಮಯವು ನಿಮಗೆ ಉತ್ತಮವಾಗಿರುತ್ತದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ವರ್ಷದ ಆರಂಭವು ನಿಮಗೆ ತುಂಬಾ ಒಳ್ಳೆಯದು. ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಏಪ್ರಿಲ್ ನಂತರದ ಸಮಯವು ನಿಮಗೆ ಸ್ವಲ್ಪ ಸವಾಲಿನ ಸಮಯವಾಗಿರುತ್ತದೆ. ಈ ಅವಧಿಯಲ್ಲಿ, ಸುಲಭವಾಗಿ ಮುಗಿಸುವ ಕಾರ್ಯಗಳಲ್ಲಿ ಕೂಡ ಸಮಸ್ಯೆಗಳು ಎದುರಾಗುವುದು. ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತದೆ. ವರ್ಷದ ಕೊನೆಯಲ್ಲಿ, ನಿಮ್ಮ ಕ್ಷೇತ್ರದಲ್ಲಿ ಪ್ರತಿಷ್ಠಿತ ವ್ಯಕ್ತಿಯ ಬೆಂಬಲವನ್ನು ಪಡೆಯುತ್ತೀರಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ವರ್ಷದ ಆರಂಭವು ಉತ್ತಮವಾಗಿರುತ್ತದೆ. ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ. ಮಾರ್ಚ್ ಮತ್ತು ಮೇ ನಡುವಿನ ಸಮಯವು ಸ್ವಲ್ಪ ಒತ್ತಡದಿಂದ ಕೂಡಿರಲಿದೆ. ಈ ಅವಧಿಯಲ್ಲಿಖರ್ಚುಗಳು ಹೆಚ್ಚಾಗುವುದು. ಮೇ ತಿಂಗಳಿನಿಂದ ವ್ಯಾಪಾರದಲ್ಲಿ ಅನಿರೀಕ್ಷಿತ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನಿಮ್ಮ ವ್ಯವಹಾರ ಹೆಚ್ಚಾಗುವುದು.

ಧನು ರಾಶಿ
ಧನು ರಾಶಿಯವರಿಗೆ ವರ್ಷದ ಆರಂಭವು ಅನುಕೂಲಕರವಾಗಿರುತ್ತದೆ. 2024ರ ಏಪ್ರಿಲ್, ಆಗಸ್ಟ್ ಮತ್ತು ನವೆಂಬರ್ ನಿಂದ ಡಿಸೆಂಬರ್ ನಡುವೆ ವ್ಯವಹಾರದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಆದ್ದರಿಂದ ನೀವು ಈ ಅವಧಿಯಲ್ಲಿ ಜಾಗರೂಕರಾಗಿರಬೇಕು. ವರ್ಷದ ಮಧ್ಯಭಾಗವು ನಿಮ್ಮ ವ್ಯವಹಾರಕ್ಕೆ ಉತ್ತಮವಾಗಿದೆ.

ಮಕರ ರಾಶಿ
2024ರಲ್ಲಿ ನಿಮ್ಮ ವ್ಯವಹಾರದಲ್ಲಿ ಸವಾಲುಗಳನ್ನು ಎದುರಿಸಬಹುದು. ಕಷ್ಟಗಳು ಎದುರಾದರೂ ನೀವು ವ್ಯವಹಾರದಲ್ಲಿ ಉತ್ತಮ ಯಶಸ್ಸು ಪಡೆಯಲು ಸಾಧ್ಯವಾಗುವುದು. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಸಾಧ್ಯವಾಗುವುದು.

ಕುಂಭ ರಾಶಿ
ನೀವು ಮಾಡುತ್ತಿರುವ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ವ್ಯವಹಾರದಲ್ಲಿ ಬೆಳವಣಿಗೆ ಕಾಣುತ್ತೀರಿ. ನಿಮ್ಮ ಯೋಜನೆಗಳನ್ನು ವಿಸ್ತರಿಸಲು ನಿಮಗೆ ಉತ್ತಮ ಅವಕಾಶ ಸಿಗಲಿದೆ. ನಿಮ್ಮ ವ್ಯಾಪಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನೀವು ಬಯಸಿದರೆ, ಏಪ್ರಿಲ್‌ನಿಂದ ಜುಲೈ ತಿಂಗಳ ಒಳಗಡೆ ಮಾಡಿ. ಅಕ್ಟೋಬರ್ ಮತ್ತು ಡಿಸೆಂಬರ್ ನಡುವಿನ ಅವಧಿಯು ಸ್ವಲ್ಪ ದುರ್ಬಲವಾಗಿರುತ್ತದೆ.

ಮೀನ ರಾಶಿ
ಮೀನ ರಾಶಿಯವರಿಗೆ ವರ್ಷದ ಆರಂಭವು ವ್ಯಾಪಾರಸ್ಥರಿಗೆ ಏರಿಳಿತಗಳಿಂದ ತುಂಬಿರುತ್ತದೆ. ಮೇ 01 ರಿಂದ, ದೇವ ಗುರು ಗುರು ನಿಮ್ಮ ಮೂರನೇ ಮನೆಗೆ ಪ್ರವೇಶಿಸಿದಾಗ ನಿಮಗೆ ತುಂಬಾ ಅನುಕೂಲಕರವಾಗಿದೆ. ನಿಮ್ಮ ವ್ಯವಹಾರದಲ್ಲಿ ಪ್ರಗತಿ ಕಾಣುತ್ತೀರಿ. ಮಾರ್ಚ್, ಆಗಸ್ಟ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ನಿಮ್ಮ ವ್ಯಾಪಾರಕ್ಕೆ ಹೆಚ್ಚು ಸೂಕ್ತವಾಗಿರುತ್ತದೆ. ಜನವರಿ-ಫೆಬ್ರವರಿ, ಏಪ್ರಿಲ್‌ನಿಂದ-ಜೂನ್, ಆಗಸ್ಟ್‌ನಿಂದ-ಸೆಪ್ಟೆಂಬರ್ ತಿಂಗಳುಗಳು ಹೆಚ್ಚು ಲಾಭದಾಯಕವಾಗಿರಲಿದೆ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Business Horoscope 2024: How Will 2024 For 12 Zodiac Signs In Buisness In Kannada

Business Horoscope 2024: Here are 12 zodiac signs Business horoscope 2024, read on....
Story first published: Wednesday, December 20, 2023, 22:28 [IST]
X
Desktop Bottom Promotion