Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
2024 ಕುರಿತು ಬಾಬಾ ವಂಗಾ ನುಡಿದ 7 ಭಯಾನಕ ಭವಿಷ್ಯವಾಣಿಗಳಿವು
ಬಾಬಾ ವಂಗಾ ಬಗ್ಗೆ ನೀವೆಲ್ಲಾ ಕೇಳಿರುತ್ತೀರಿ. ಇವರು ಹೇಳಿರುವ ಬಹುತೇಕ ಭವಿಷ್ಯಗಳು ನಿಜವಾಗಿವೆ. ಆದ್ದರಿಂದ ಬಾಬಾ ವಂಗಾ ಹೇಳಿದ ಭವಿಷ್ಯದ ಬಗ್ಗೆ ತಿಳಿಯಲು ಇಡೀ ಜಗತ್ತೇ ಆಸಕ್ತಿ ತೋರುತ್ತದೆ. 9/11 ದಾಳಿ ಬಗ್ಗೆ ನಿಮಗೆ ಗೊತ್ತು, ಆದರೆ ಆ ರೀತಿಯ ದಾಳಿಯಾಗುತ್ತೆ ಎಂಬುವುದನ್ನು ಬಾಬಾ ವಂಗಾ ಆ ಕಾಲದಲ್ಲಿಯೇ ಹೇಳಿದ್ದರು. 2022ರಲ್ಲಿ ವೈರಸ್ ದಾಳಿಯಾಗಲಿದೆ ಎಂದಿದ್ದರು, ಜಗತ್ತು ಜಲಕ್ಷಾಮ ಎದುರಿಸಲಿದೆ ಎಂದಿದ್ದರು, ಅದೆಲ್ಲವೂ ನಿಜವಾಗಿದೆ.
ಎಂದೂ ಕಂಡಿರದ ತಾಪಮಾನ ಕಂಡು ಬರಲಿದೆ ಎಂದು ಭವಿಷ್ಯ ವಾಣಿಯಲ್ಲಿ ಹೇಳಿದ್ದರು. ಆದರೆ ದೆಹಲಿ ಸೇರಿದಂತೆ ಹಲವು ಕಡೆ ಹೀಟ್ ವೇವ್ ಉಂಟಾಗಿತ್ತು. ಅಮೆರಿಕದ ಅಧ್ಯಕ್ಷ ಪಟ್ಟಕ್ಕೆ ಕಪ್ಪು ವರ್ಣೀಯ ಬರುತ್ತಾರೆ ಎಂದಿದ್ದರು ಅದುವೂ ನಿಜವಾಗಿದೆ, ಹೀಗೆ ಅವರು ನುಡಿದ ಭವಿಷ್ಯವಾಣಿಯಲ್ಲಿ ಬಹುತೇಕ ವಿಷಯಗಳು ನಿಜವಾಗಿದೆ.

ಬಾಬಾ ವಂಗಾ ಯಾರು?
ಇವರು ಬಲ್ಗೇರಿಯಾದ ನಿವಾಸಿ, 1961ರಲ್ಲಿ ಜನಿಸಿದರು. ತಮ್ಮ 2ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಳ್ಳುತ್ತಾರೆ. ಅವರಿಗೆ ದೃಷ್ಟಿ ಹೋದ ಮೇಲೆ ಅದ್ಭುತ ಸಿದ್ಧಿ ಬಂತು, ಅವರು ತಮ್ಮ ದಿವ್ಯ ದೃಷ್ಟಿ ಮೂಲಕ ಭವಿಷ್ಯ ಹೇಳಲಾರಂಭಿಸಿದರು. ಅವರು ನುಡಿದ ಭವಿಷ್ಯವನ್ನು ಅವರು ಎಲ್ಲಿಯೂ ದಾಖಲಿಸಿಲ್ಲ, ಆದರೆ ಯಾರೋ ಇವರು ಹೇಳುತ್ತಿದ್ದಂತೆ ಬರೆಯುತ್ತಾ ಹೋಗಿದ್ದಾರೆ ಎಂದು ಹೇಳಲಾಗುವುದು. ಇವರ ಪ್ರಕಾರ 5079ರಲ್ಲಿ ಜಗತ್ತು ಅಂತ್ಯವಾಗಲಿದೆ. ನಾವೀಗ 2023ರಲ್ಲಿ ಇದ್ದೇವೆ, 2024ರಲ್ಲಿ ಭವಿಷ್ಯ ಹೇಗಿರಲಿದೆ ಎಂದು ನೋಡೋಣ:
2024 ಭವಿಷ್ಯ ವಾಣಿ
2024ರಲ್ಲಿ ಚೀನಾ ಸೂಪರ್ ಪವರ್ ರಾಷ್ಟ್ರವಾಗಲಿದೆ
2024ರಲ್ಲಿ ಡ್ರ್ಯಾಗನ್ ಸೂಪರ್ ಪವರ್ ರಾಷ್ಟ್ರವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಚೀನಾ ಈಗಲೇ ತನ್ನ ಅಧಿಕಾರ ಸ್ಥಾಪಿಸಲು ತುಂಬಾ ಪ್ರಯತ್ನಿಸುತ್ತಿರುವ ಕಾಣುತ್ತಿದೆ. ಇಸ್ರೇಲ್ ಯುದ್ಧದಲ್ಲಿಯೂ ಚೀನಾ ಹಸ್ತಕ್ಷೇಪ ಮಾಡುತ್ತಿದೆ. ಭಾರತದ ವಿರುದ್ಧ ಒಳಸಂಚು ರೂಪಿಸುವಲ್ಲಿ ಚೀನಾ ಎತ್ತಿದ ಕೈ. ಇಂಥ ಚೀನಾ 2024ರಲ್ಲಿ ಸೂಪರ್ ರಾಷ್ಟ್ರವಾದರೆ ಅದರ ಅಟ್ಟಹಾಸಕ್ಕೆ ಬ್ರೇಕ್ ಹಾಕುವವರು ಯಾರು?
1. ಬಾಬಾ ವಂಗಾ ನುಡಿದ ಆತಂಕಾರಿ ವಿಷಯ
ಹವಾಮಾನ ವೈಪರೀತ್ಯದಿಂದಾಗಿ ನೈಸರ್ಗಿಕ ವಿಕೋಪಗಳು ಸಂಭವಿಸಲಿದೆ. ಭೂಕಂಪ ಸಂಭವಿಸಬಹುದು, ಭೂಮಿಯ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ತಂಪಾಗಿದ್ದ ಸ್ಥಳಗಳು ತುಂಬಾ ಬಿಸಿಯಾಗಲಿದೆ. ಹಿಮಗಡ್ಡೆಗಳು ಕರಗಲಿದೆ, ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಿ ಕೆಲ ಪ್ರದೇಶಗಳು ಮುಳುಗಡೆಯಾಗಲಿದೆ ಎಂಬ ಆತಂಕಾರಿ ಭವಿಷ್ಯ ನೋಡಿದ್ದಾರೆ.
2. ರಷ್ಯಾನ ಅಧ್ಯಕ್ಷನಿಗೆ ಅಪಾಯವಿದೆ
ಬಾಬಾ ವಂಗಾ ಭವಿಷ್ಯವಾಣಿಯ ಪ್ರಕಾರ ರಷ್ಯಾದ ಅಧ್ಯಕ್ಷನಿಗೆ ಅಪಾಯವಿದೆ. ಪ್ರತಿಷ್ಠಿತ ನಾಯಕರಿಗೆ ಅಪಾಯವಿದೆ ಎಂದು ಹೇಳಿದ್ದಾರೆ.
3. ಯುರೋಪ್‌ನಲ್ಲಿ ಭಯೋತ್ಪಾದನೆ ಹೆಚ್ಚಾಗಲಿದೆ
ದೊಡ್ಡ ರಾಷ್ಟ್ರಗಳ ನಡುವೆ ಯುದ್ಧವಾಗಬಹುದು, ಭಯೋತ್ಪಾದನೆ ಹೆಚ್ಚಾಗಲಿದೆ ಎಂಬ ಭವಿಷ್ಯ ನುಡಿದ್ದಾರೆ. ಈಗಾಗಲೇ ಹಲವು ಕಡೆ ಯುದ್ಧಗಳು ನಡೆಯುತ್ತಿವೆ. ಇಸ್ರೇಲ್ ಯುದ್ಧ ಜಗತ್ತಿನ ಆತಂಕ ಹೆಚ್ಚಿಸಿದೆ, ಯುದ್ಧವಾದರೆ ಅದು 3ನೇ ಮಹಾಯುದ್ಧವಾಗಬಹುದು ಎಂಬ ಆತಂಕವಿದೆ.
4. ಆರ್ಥಿಕ ಸಂಕಷ್ಟ ಎದುರಾಗಲಿದೆ
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಗಲಿದೆ. ಸಾಲ ಹೆಚ್ಚಾಗಲಿದೆ, ಭೌಗೋಳಿಕವಾಗಿ ಸಂಕಷ್ಟ ಹೆಚ್ಚಾಗಲಿದೆ. ಆರ್ಥಿಕ ಸಂಕಷ್ಟ ಎದುರಾದರೆ ಸಾಕಷ್ಟು ಜನರು ಕೆಲಸ ಕಳೆದುಕೊಳ್ಳುತ್ತಾರೆ, ಆರ್ಥಿಕವಾಗಿ ಹೊಡೆತಬಿದ್ದರೆ ಆ ದೇಶಕ್ಕೆ ಸಾಮಾಜಿಕವಾಗಿಯೂ ಹೊಡೆತ ಬೀಳುವುದು, ವ್ಯಾಪಾರಕ್ಕೆ ಹೊಡೆತ ಬೀಳುವುದು. ಜೀವನಶೈಲಿಗೆ ಹೊಡೆತ ಬೀಳುವುದು.
5. ಸೈಬರ್ ದಾಳಿ ಹೆಚ್ಚಾಗುತ್ತದೆ
ಸೈಬರ್ ದಾಳಿ ಹೆಚ್ಚಾಗುತ್ತದೆ, ಇದು ಕೂಡ ಆಧುನಿಕ ರೀತಿಯ ಭಯೋತ್ಪಾದನೆಯಾಗಿದೆ. ಸೈಬರ್ ದಾಳಿಯಿಂದ ದೇಶಕ್ಕೆ ದೊಡ್ಡ ನಷ್ಟವೇ ಸಂಭವಿಸಬಹುದು, ಆದ್ದರಿಂದ ಸೈಬರ್ ದಾಳಿ ಬಗ್ಗೆ ಪ್ರತಿಯೊಂದು ದೇಶವೂ ಅಲರ್ಟ್ ಆಗಿರುತ್ತದೆ. ಬಾಬಾ ವಂಗಾ 2024ರಲ್ಲಿ ಸೈಬರ್ ದಾಳಿ ನಡೆಯಲಿದೆ ಎಂದಿದ್ದಾರೆ.
6. ಭಯಾನಕ ಕಾಯಿಲೆಗಳಿಗೆ ಔಷಧಿಕಂಡು ಹಿಡಿಯಲಾಗುವುದು
2024ರಲ್ಲಿ ಭಯಾನಕ ಕಾಯಿಲೆಗಳಾದ ಕ್ಯಾನ್ಸರ್, ಅಲ್ಜೈಮರ್ಸ್ ಕಾಯಿಲೆಗಳಿಗೆ ವಷಧಿ ದೊರೆಯಲಿದೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ.
7. ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಕ್ರಾಂಗತಿಯಾಗಲಿದೆ ಎಂದು ಕೂಡ ಭವಿಷ್ಯ ನೀಡಿದ್ದಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
