ಈ ವರ್ಷ ಫೆಬ್ರವರಿ 29 ಈ ವರ್ಷ ಮದುವೆಗೆ ತುಂಬಾನೇ ಶುಭ ದಿನ, ಏಕೆ? ಯಾವೆಲ್ಲಾ ತಿಂಗಳಿನಲ್ಲಿ ಮದುವೆಗೆ ಶುಭ ದಿನಾಂಕಗಳಿಲ್ಲ?

2024ರ ಮದುವೆ ಸೀಸನ್‌ ಜನವರಿ 16ರಿಂದ ಶುರುವಾಗಿದೆ, ವರ್ಷದ ಮೊದಲ ಎರಡು ವಾರದಲ್ಲಿ ಶುಭ ಕಾರ್ಯಗಳನ್ನು ಮಾಡಲು ಒಳ್ಳೆಯ ದಿನಾಂಕಗಳಿರಲಿಲ್ಲ, ಏಕೆಂದರೆ ಮದುವೆಗೆ ದಿನಾಂಕ ನೋಡುವಾಗ ಶುಕ್ರ ಹಾಗೂ ಗುರುವಿನ ಸ್ಥಾನವನ್ನು ವೈದಿಕ ಶಾಸ್ತ್ರದಲ್ಲಿ ನೋಡಲಾಗುವುದು. ಗುರು ಅಥವಾ ಶುಕ್ರ ಅಸ್ತಮಿಸಿದಾಗ ಅದು ಶುಭ ಸಮಯ ಎಂದು ಪರಿಗಣಿಸುವುದಿಲ್ಲ, ಹಾಗಾಗಿ ಜನವರಿ 15ರವರೆಗೆ ಶುಭ ದಿನಾಂಕಗಳಿರಲಿಲ್ಲ.

ಜನವರಿ 16ರಿಂದ ಮಾರ್ಚ್‌ 06ರವರೆಗೆ ತುಂಬಾನೇ ಶುಭ ದಿನಾಂಕಗಳಿವೆ, ಈ ಮೂರು ತಿಂಗಳು ಫುಲ್ ಮದುವೆ ಸೀಸನ್...ಏಪ್ರಿಲ್‌, ಜೂನ್ ತಿಂಗಳಿನಲ್ಲಿ ಮದುವೆಗೆ ದಿನಾಂಕಗಳಿವೆ, ಆದರೆ ತುಂಬಾ ಶುಭ ದಿನಾಂಕಗಳಿಗೆ ನೀವು ನವೆಂಬರ್‌ವರೆಗೆ ಕಾಯಬೇಕು.

Auspicious days for wedding 2024

ಮದುವೆಯ ಸಮಯದ ಪ್ರಾಮುಖ್ಯತೆ
ವಿವಾಹ ಒಬ್ಬ ವ್ಯಕ್ತಿಯ ಜೀವನದಲ್ಲಿ ತುಂಬಾ ಪ್ರಮುಖವಾದ ಘಟ್ಟ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಭ ಮುಹೂರ್ತದಲ್ಲಿ ಮದುವೆಯಾದರೆ ಆ ಸಂಬಂಧ ಚೆನ್ನಾಗಿರುತ್ತದೆ, ಗಂಡ-ಹೆಂಡತಿ ತುಂಬಾ ಚೆನ್ನಾಗಿ ಹೊಂದಾಣಿಕೆಯಿಂದ ಇರುತ್ತೀರಿ ಎಂದು ನಂಬಲಾಗಿದೆ. ಅಶುಭ ಸಮಯದಲ್ಲಿ ನಡೆದರೆ ಅವರ ಜೀವನ ಚೆನ್ನಾಗಿರಲ್ಲ ಎಂದು ಹೇಳಲಾಗುವುದು. ಆದ್ದರಿಂದಲೇ ಹಿರಿಯರು ಶುಭ ದಿನಾಂಕಕ್ಕೆ ತುಂಬಾನೇ ಪ್ರಾಮುಖ್ಯತೆ ನೀಡಲಾಗುವುದು.

ತುಂಬಾ ಮದುವೆ ಆಮಂತ್ರಣ ಫೆಬ್ರವರಿ 29ಕ್ಕೆ ಬರಬಹುದು
ನಾಲ್ಕು ವರ್ಷಗಳ ನಂತರ ಈ ವರ್ಷ ಫೆಬ್ರವರಿಯಲ್ಲಿ 29 ದಿನಗಳಿವೆ. ಈ ದಿನದಂದು ಗರಿಷ್ಠ ಸಂಖ್ಯೆಯ ಮದುವೆಗಳು ನಡೆಯಲಿವೆ ಎಂದು ಅಂದಾಜಿಸಲಾಗಿದೆ. ಫೆಬ್ರವರಿ 29 ರ ದಿನಾಂಕವು ನಾಲ್ಕು ವರ್ಷಗಳಿಗೊಮ್ಮೆ ಬಂದಿದೆ, ಅಲ್ಲದೆ ಈ ದಿನ ಮದುವೆಗೂ ತುಂಬಾ ಶುಭವಾಗಿದೆ.

ಫೆಬ್ರವರಿ 29 ಗುರುವಾರ. ಈ ದಿನಾಂಕದಂದು, ಮಾರ್ಚ್ 01 ರಂದು ಬೆಳಗ್ಗೆ 10.22 ರಿಂದ ಮರುದಿನ ಬೆಳಿಗ್ಗೆ 06.46 ರವರೆಗೆ ಶುಭ ಮುಹೂರ್ತವಿರುತ್ತದೆ. ಈ ದಿನ ಸ್ವಾತಿ ನಕ್ಷತ್ರ ಮತ್ತು ಪಂಚಮಿ ತಿಥಿಗಳು ಇವೆ, ಆದ್ದರಿಂದ ಈ ದಿನಾಂಕ ಮದುವೆಗೆ ತುಂಬಾ ಶುಭವಾಗಿದೆ.

ಫೆಬ್ರವರಿ 29 ರಂದು ಶುಭ ಯೋಗವು ರೂಪುಗೊಳ್ಳುತ್ತಿದೆ
ವೃದ್ಧಿ ಯೋಗವು ಫೆಬ್ರವರಿ 28 ರಂದು ಸಂಜೆ 5:16 ರಿಂದ ಪ್ರಾರಂಭವಾಗುತ್ತದೆ ಮತ್ತು ಮರುದಿನ ಫೆಬ್ರವರಿ 29 ರಂದು ಸಂಜೆ 05:54 ರವರೆಗೆ ಮುಂದುವರಿಯುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ವೃದ್ಧಿ ಯೋಗವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಶುಭ ಯೋಗದಲ್ಲಿ ಮಾಡಿದ ಕೆಲಸವು ಖಂಡಿತವಾಗಿಯೂ ಯಶಸ್ಸನ್ನು ನೀಡುತ್ತದೆ. 27 ಯೋಗಗಳಲ್ಲಿ ವೃದ್ಧಿ ಯೋಗವು ಹನ್ನೊಂದನೇ ಸ್ಥಾನದಲ್ಲಿದೆ. ಈ ಯೋಗದ ಅಧಿಪತಿ ಸೂರ್ಯ ದೇವರು. ಈ ಯೋಗವು ವ್ಯಕ್ತಿಯ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ವಿವಾಹಕ್ಕೆ ಈ ದಿನ ತುಂಬಾನೇ ಶುಭ ಎಂದು ಹೇಳಲಾಗುವುದು.

ಏಪ್ರಿಲ್ ನಿಂದ ಮದುವೆಗಳು ಕಡಿಮೆಯಾಗಲಿವೆ
ಜನವರಿ 16ರಿಂದ ಮತ್ತೆ ಮದುವೆಗೆ ಶುಭ ಮುಹೂರ್ತ ಶುರುವಾಗುತ್ತದೆ. ಜನವರಿ 20, 2024 ರಿಂದ ಫೆಬ್ರವರಿ 19, 2024 ರವರೆಗೆ ಮದುವೆಯ ಉತ್ತಮ ದಿನಗಳಿವೆ. ಇದರ ನಂತರ, ಫೆಬ್ರವರಿ 28 ರಿಂದ ಮಾರ್ಚ್ 12 ರವರೆಗೆ ಮದುವೆಗೆ ಅತ್ಯಂತ ಮಂಗಳಕರ ಸಮಯ. ಮಾರ್ಚ್ 12 ರ ನಂತರ, ಏಪ್ರಿಲ್ ತಿಂಗಳಲ್ಲಿ ಮದುವೆಗೆ ಕೇವಲ ಐದು ಮಂಗಳಕರ ದಿನಾಂಕಗಳಿವೆ ಮತ್ತು ಅದರ ನಂತರ ಜುಲೈನಲ್ಲಿ ಮದುವೆಗೆ ಮಂಗಳಕರ ದಿನಗಳಿವೆ, ಆದರೆ ನವೆಂಬರ್‌ನಲ್ಲಿ ತುಂಬಾನೇ ಶುಭ ದಿನಾಂಕಗಳಿವೆ. ಡಿಸೆಂಬರ್ ತಿಂಗಳಿನಲ್ಲಿ ಮದುವೆಗೆ 6 ಮಂಗಳಕರ ದಿನಗಳಿವೆ.

2024 ರಲ್ಲಿ ಮದುವೆಗೆ ಶುಭ ಸಮಯಗಳು ಯಾವಾಗ?
ಈ ವರ್ಷ ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್, ಜುಲೈ, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಮದುವೆಗೆ ಶುಭ ದಿನಾಂಕಗಳಿವೆ. ಮದುವೆಗೆ ಯಾವ ತಿಂಗಳು ಯಾವ ದಿನಾಂಕ ಶುಭವಾಗಿದೆ ನೋಡೋಣ:
ಜನವರಿ: 16, 17, 20, 21, 22, 27, 28, 30, 31

ಫೆಬ್ರವರಿ: 06, 06, 07, 08, 12, 13, 17, 24, 25, 26, 29

ಮಾರ್ಚ್: 01, 02, 03, 04, 05, 06, 07, 10, 11, 12
ಏಪ್ರಿಲ್: 18, 19, 20, 21, 22

ಜುಲೈ: 09, 11, 12, 13, 14, 15

ನವೆಂಬರ್: 12, 13, 16, 17, 18, 22, 23, 25, 26, 28, 29,

ಡಿಸೆಂಬರ್: 04, 05, 09, 14, 15

ಏಪ್ರಿಲ್ ನಂತರ, ಮೇ, ಜೂನ್ ಮತ್ತು ನಂತರ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋರ್‌ನಲ್ಲಿ ಮದುವೆಗೆ ಮಂಗಳಕರ ದಿನಗಳಿಲ್ಲ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Auspicious Days For Wedding Start From January 16, February 29 Is Very Special For Wedding Why?

These Are The Very Auspicious days for wedding, read on...
Story first published: Thursday, January 18, 2024, 23:45 [IST]
X
Desktop Bottom Promotion