For Quick Alerts
ALLOW NOTIFICATIONS  
For Daily Alerts

ಮೊದಲ ಡೇಟ್ ನ ಯಶಸ್ಸಿನ ಗುಟ್ಟುಗಳು

By Poornima Hegde
|

ಇಂಗ್ಲೀಷ್ ನಲ್ಲಿ ಒಂದು ಮಾತಿದೆ ಫಸ್ಟ್ ಇಂಪ್ರೆಷನ್ ಇಸ್ ದ ಲಾಸ್ಟ್ ಇಂಪ್ರೆಷನ್ ಎಂದು, ಇದರ ಅರ್ಥ ಮೊದಲ ನೋಟದಲ್ಲಿ ನೀವು ಬೀರಿದ ಪ್ರಭಾವ ಕೊನೆತನಕ ಉಳಿಯುತ್ತದೆ ಎಂದು. ಅದು ಧನಾತ್ಮಕವಾಗಿರಲಿ ಅಥವಾ ಋಣಾತ್ಮಕವಾಗಿರಲಿ. ನಿಮ್ಮ ಮೊದಲ ಭೇಟಿಯ ಪ್ರಭಾವ ಮತ್ತು ನೆನಪು ಕೊನತನಕ ಮರೆಯುವುದಿಲ್ಲ. ಹಾಗಾಗಿ ಮೊದಲ ಬಾರಿಯ ಭೇಟಿ ಎಂದಾಗ ಎಲ್ಲರ ಮನದಲ್ಲಿ ಕುತೂಹಲ ಹಾಗೂ ಸ್ವಲ್ಪ ಹೆದರಿಕೆ ಇದ್ದಿದ್ದೇ.

ಇದೇ ಮಾತು ನಿಮ್ಮ ಮೊದಲ ಡೇಟಿಂಗ್ ಗೂ ಅನ್ವಯಿಸುತ್ತದೆ. ಹಾಗೂ ಅಲ್ಲಿ ಅದರ ಪ್ರಭಾವ ಇನ್ಯಾವುದೇ ಭೇಟಿಗಳಿಗಿಂತಲೂ ಬಹಳ ಹೆಚ್ಚು. ಮೊದಲ ಡೇಟ್ ದಿನ ಈ ಸಂಬಂಧ ಮುಂದುವರೆಸಬಹುದೋ ಅಥವಾ ಅಲ್ಲಿಗೆ ಬಿಟ್ಟು ಬಿಡಬೇಕೋ ಎಂಬ ಬಗ್ಗೆ ಇಬ್ಬರೂ ಆಲೋಚನೆ ಮಾಡುವ ಕಾರಣ ಮೊದಲ ಡೇಟ್ ದಿನದಂದು ಒಳ್ಳೆಯ ಪ್ರಭಾವ ಬೀರುವುದು ಬಹಳ ಅಗತ್ಯ. ಇದು ನಿಮ್ಮ ಜೀವನದ ಪಯಣದ ಮೊದಲ ಹೆಜ್ಜೆಯ ಹಾಗೆ. ಮೊದಲ ಬಾರಿಯೇ ಎಡವಿ ಬಿದ್ದರೆ ಮುಂದಿನ ಪಯಣದಲ್ಲಿ ಎಡವುದು ಸಾಮಾನ್ಯ.

How to be confident on first date

ಸಾಮಾನ್ಯ ಸಂದರ್ಭಗಳಲ್ಲಿ ಬಹಳ ಧೈರ್ಯವಂತರಾದ ಜನರೂ ಕೂಡ ಮೊದಲ ಡೇಟ್ ವೇಳೆಯಲ್ಲಿ ಸ್ವಲ್ಪ ಹೆದರಿಕೊಳ್ಳುವುದು ಸಾಮಾನ್ಯ. ಈ ಡೇಟ್ ಅನ್ನುವ ವಿಷಯವೇ ಹಾಗಾದ ಕಾರಣ ಇದು ಎಲ್ಲರಲ್ಲೂ ಹೆದರಿಕೆ ಹುಟ್ಟಿಸುವುದು ಸಾಮಾನ್ಯ. ಆದರೆ ಇದೇ ಪ್ರಮುಖವಾದ ಕಾರಣ ನೀವಿಲ್ಲಿ ಧೈರ್ಯಗುಂದಬಾರದು. ನಿಮ್ಮಲ್ಲಿ ಧೈರ್ಯ ಒಂದಿದ್ದರೆ ನೀವು ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ನೆನಪಿಡಿ.

ನಿಮ್ಮ ಸಾಮಾನ್ಯ ರೀತಿಯಲ್ಲೇ ವರ್ತಿಸಿರಿ ಏನೂ ಹೊಸದನ್ನು ಪ್ರಯೋಗಿಸಲು ಹೋಗಿ ಎಲ್ಲವನ್ನೂ ಹಾಳುಮಾಡಿಕೊಳ್ಳಬೇಡಿ. ಇಲ್ಲಿ ನಿಮಗಾಗಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಡೇಟ್ ಗೆ ಹೋಗುವ ಮುನ್ನ ಒಮ್ಮೆ ಓದಿಕೊಂಡು ಹೋಗಿ

1. ನೀವಾಗಿಯೇ ಇರಿ- ನೀವಲ್ಲದ ನೀವಾಗಿ ನಿಮ್ಮವರ ಮುಂದೆ ಎಂದೂ ಹೋಗಬೇಡಿ. ನಿಮ್ಮ ನೈಜ ವರ್ತನೆ ಮತ್ತು ಗುಣಗಳನ್ನೇ ಮೊದಲ ಡೇಟ್ ದಿನ ಪ್ರಸ್ತುತ ಪಡಿಸಿ. ಮೊದಲ ಭೇಟಿಯ ವೇಳೆ ಒಳ್ಳೆಯ ಪ್ರಭಾವ ಬೀರಬೇಕು ಎಂದು ಏನೋ ಹೊಸತು ಪ್ರಯೋಗಿಸಲು ಹೋಗಬೇಡಿ.

2. ಆರಾಮವಾಗಿರಿ- ನೀವು ಹೋಗುತ್ತಿರುವುದು ಡೇಟ್ ಗೆ ಯುದ್ಧಕ್ಕಲ್ಲ ಎಂಬ ನೆನಪಿರಲಿ. ಯಾವುದೇ ಒತ್ತಡಕ್ಕೆ ಒಳಗಾಗಬೇಡಿ. ಯಾವುದೇ ತಪ್ಪಾಗದಂತೆ ಎಚ್ಚರ ವಹಿಸಿ. ತಲೆಯಲ್ಲಿ ಬಹಳ ಹುಷಾರಾಗಿರಬೇಕು ಎಂಬ ಒಂದೇ ಗುರಿಯಲ್ಲಿ ಹೆಚ್ಚಿನ ಒತ್ತಡಕ್ಕೆ ಒಳಗಾಗಬೇಡಿ. ಇದರ ಅರ್ಥ ನೀವು ಯಾವುದೇ ಚಿಂತೆಯಲ್ಲಿಲ್ಲ ಎಂದು ತೋರಿಸಬೇಕೆಂದಲ್ಲ. ಹೀಗೆ ತೋರಿಸಲು ಹೋಗಿ ಯಾವುದೋ ತಪ್ಪು ಮಾಡಬೇಡಿ. ನೀವು ನಿಮ್ಮ ಗೆಳೆಯರು ಅಥವಾ ಕುಟುಂಬದವರ ಜೊತೆಗೆ ಇರುವಂತೆ ವರ್ತಿಸಿ.

3. ಹಿತಕರ ಅನುಭವದಿಂದಿರಿ- ಧೈರ್ಯದಿಂದಿದ್ದರೆ ಹಿತಕರ ಅನುಭವ ತನ್ನಿಂದ ತಾನೇ ಬರುತ್ತದೆ. ಇದಕ್ಕಾಗಿ ನೀವೇನೋ ಹೊಸದನ್ನು ಮಾಡಬೇಕಾಗಿಲ್ಲ. ನಿಮಗೆ ಎಲ್ಲಿ ಸರಿ ಆಗುತ್ತದೆಯೋ ಅಲ್ಲೇ ಕುಳಿತುಕೊಳ್ಳಿ ನಿಮಗೆ ಏನು ಇಷ್ಟವೋ ಅದನ್ನೇ ಮಾಡಿ. ನಿಮಗೆ ಏನು ಗೊತ್ತಿದೆಯೋ ಅದನ್ನೇ ಮಾತನಾಡಿ. ಯಾವುದರ ಬಗ್ಗೆ ನಿಖರವಾಗಿ ತಿಳಿದಿದೆಯೋ ಅದನ್ನಷ್ಟೇ ಮಾಡಿ. ಒಟ್ಟಾರೆ ಕಂಫರ್ಟೇಬಲ್ ಆಗಿರಿ.

4. ಉಡುಗೆ ನೀಟಾಗಿರಲಿ- ಆಂತರಿಕವಾಗಿ ಧೈರ್ಯದಿಂದಿರಲು ಮೊದಲು ಮಾಡಬೇಕಾದ ಕೆಲಸವೆಂದರೆ ಹೊರಗೆ ನೀಟಾಗಿ ಕಾಣುವುದು. ಅದಕ್ಕೆ ಮುಖ್ಯವಾಗಿ ನಿಮ್ಮ ಉಡುಗೆ ನೀಟಾಗಿ ಅಂದವಾಗಿರಬೇಕು. ಕೂದಲು ಬಾಚಿರಬೇಕು. ಇದಕ್ಕಾಗಿ ಹೊಸ ಬಟ್ಟೆಯನ್ನು ಖರೀದಿಸಬೇಕು ಡೇಟ್ ನ ಹಿಂದಿನ ದಿನ ಸೆಲೂನ್ ಗೆ ಹೋಗಬೇಕಾಗಿಲ್ಲ. ನೀಟಾಗಿ ಕಂಡರೆ ಸಾಕು.

5. ನಟನೆ ಮಾಡಲು ತಿಳಿದಿರಲಿ- ಇಷ್ಟೆಲ್ಲಾ ಮಾಡಿಯೂ ನೀವು ಮೊದಲ ಡೇಟ್ ದಿನ ಸ್ವಲ್ಪ ಹೆದರುವುದು ಸಾಮಾನ್ಯ. ಆದರೆ ಇದನ್ನು ನಿಮ್ಮ ಸಂಗಾತಿಗೆ ತಿಳಿಯದಂತೆ ಜಾಗೃತೆ ವಹಿಸಿ. ಇದಕ್ಕೆ ನಿಮಗೆ ಎರಡನೆ ಅವಕಾಶ ಸಿಗುವುದಿಲ್ಲ. ಹಾಗಾಗಿ ಸಿಕ್ಕ ಮೊದಲ ಅವಕಾಶವನ್ನೇ ಸದುಪಯೋಗಪಡಿಸಿಕೊಳ್ಳಿ. ಇದು ನಿಮ್ಮ ಭವಿಷ್ಯದ ಭದ್ರ ಬುನಾದಿಯಾಗಿರಲಿ.

ಇವು ಮೊದಲ ಡೇಟ್ ಗೆ ಹೋಗುವ ತರುಣ ತರುಣಿಯರಿಗಾಗಿ ನಾಲ್ಕು ಕಿವಿಮಾತುಗಳು.

English summary

How to be confident on first date

As it is said "First Impression is the last impression", it always makes a difference on how you portray yourself to somebody on your first meet. This is the same case when you go on your first date.
Story first published: Saturday, December 14, 2013, 14:33 [IST]
X
Desktop Bottom Promotion