ಮೊದಲ ವರ್ಷದ ದಾಂಪತ್ಯ ಜೀವನ ಕಲಿಸುವ 3 ಪಾಠಗಳು

Posted by:
Updated: Friday, November 30, 2012, 14:59 [IST]
 

ಮದುವೆಯ ನಂತರ ಹೆಚ್ಚಿನ ಜೋಡಿಗಳು ಸಂಸಾರ ತಾಪತ್ರಯ ಅನುಭವಿಸುತ್ತಾರೆ. ಇಬ್ಬರು ಹುಟ್ಟಿ ಬೆಳೆದ ವಾತಾವರಣ ಬೇರೆ-ಬೇರೆ ಇರಬಹುದು. ಆದರೆ ಮದುವೆಯ ನಂತರ ಹೊಂದಿಕೊಂಡು ಬಾಳಬೇಕಾಗುತ್ತದೆ. ಮದುವೆಯಾದ ಮೊದಲ ವರ್ಷದಲ್ಲಿ ಸಾಕಷ್ಟು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. 'ಇಷ್ಟೆಲ್ಲಾ ಜಂಜಾಟವಿರುತ್ತದೆ ಎಂದರೆ ಮದುವೆನೇ ಮಾಡಿಕೊಳ್ಳುತ್ತಿರಲಿಲ್ಲ'  ಎಂದು ಮದುವೆಯಾದವರು ಹೇಳುವುದನ್ನು  ಕೇಳಬಹುದು. ಪ್ರೀತಿಸಿ ಮದುವೆಯಾದರೂ ಕೂಡ ಮದುವೆಯ ನಂತರದ ಜೀವನ ಭಿನ್ನವಾಗಿರುತ್ತದೆ. ಏಕೆಂದರೆ ಪ್ರೀತಿಸುವಾಗ ಮದುವೆಯ ನಂತರ ಇರುವಷ್ಟು ಜವಬ್ದಾರಿ ಇರುವುದಿಲ್ಲ, ಪ್ರೀತಿಯ ಲೋಕಕ್ಕೂ, ಮದುವೆಯ ನಂತರದ ಜೀವನಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ.

ಮೊದಲ ವರ್ಷದ ದಾಂಪತ್ಯ ಜೀವನ ಕಲಿಸುವ 3 ಪಾಠಗಳು

ಮದುವೆಯ ಜೀವನದ ಬಗ್ಗೆ ಒಂದು ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಮದುವೆಯಾದ ಮೊದಲ 1 ವರ್ಷ ತುಂಬಾ ಒತ್ತಡಗಳಿರುತ್ತವೆ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಹೊಸದಾಗಿ ಮದುವೆಯಾದ ದಂಪತಿಗಳನ್ನು ಕೇಳಿದರೆ  ಈ ಕೆಳಗಿನ ಉತ್ತರಗಳು ದೊರೆಯುತ್ತವೆ.

1. ಬದಲಾವಣೆ: ಮದುವೆಯ ನಂತರ ಕೂಡ ನಾನು ಮೊದಲು ಇದ್ದಂತೆ ಇರಬಹುದು ಎಂದು ಪುರುಷನು ಅಂದುಕೊಂಡಿರುತ್ತಾನೆ. ಆದರೆ ಹೆಂಡತಿಯಾದವಳು ಪುರುಷನ ಆ ಆಲೋಚನೆಯನ್ನು ಸಂಪೂರ್ಣ ಬದಲಾಯಿಸಿ ಬಿಡುತ್ತಾಳೆ. ಜವಬ್ದಾರಿಗಳು ಹೆಚ್ಚಾಗುತ್ತದೆ, ಇದರಿಂದಾಗಿ ಪುರುಷ ಬದಲಾಗಲೇಬೇಕಾಗುತ್ತದೆ.

ಪುರುಷರು ಎಲ್ಲವನ್ನು ನೇರವಾಗಿ ಹೇಳುವ ಸ್ವಭಾವದವನಾದರೂ ಕೂಡ ತನ್ನ  ಗುಣವನ್ನು ಬದಲಾಯಿಸಬೇಕಾಗುತ್ತದೆ. ಹೆಂಡತಿ ಡ್ರೆಸ್ ಮಾಡಿಕೊಂಡು ಬಂದು ಹೇಗೆ ಕಾಣುತ್ತಿದ್ದೇನೆ ಎಂದು ಕೇಳಿದರೆ ಅಷ್ಟೇನು ಚೆಂದ ಕಾಣಿಸುತ್ತಿಲ್ಲ ಎಂದು ಹೇಳುವಂತಿಲ್ಲ, ಚೆಂದ ಕಂಡರೂ, ಕಾಣದಿದ್ದರೂ ಅಪ್ಸರೆ ರೀತಿ ಕಾಣುತ್ತಿದ್ದೀಯ ಅಂತಲೇ ಹೇಳಬೇಕಾಗುತ್ತದೆ. ಅವಳಲ್ಲಿ ಗುಣದೋಷಗಳಿದ್ದರೂ ಹೊಂದಾಣಿಕೆ ಮಾಡಿಕೊಂಡು ಬಾಳಬೇಕಾಗುತ್ತದೆ.

ಇದೇ ವಿಷಯದ ಬಗ್ಗೆ ಮಹಿಳೆಯರ ಹತ್ತಿರ ಕೇಳಿದರೆ ಅವರು ಮದುವೆಯಾಗುವಾಗಲೇ ಮುಂದೆ ನಮ್ಮಲ್ಲಿ ಬದಲಾವಣೆ ಅಗತ್ಯ ಅನ್ನುವ ವಾಸ್ತವ ಅಂಶದ ಬಗ್ಗೆ ಅರಿವಿರುತ್ತದೆ. ಹೊಸ ಮನೆಯವರ ಜೊತೆ ಹೊಂದಿಕೊಳ್ಳಬೇಕಾಗುತ್ತದೆ. ತನ್ನ ಸಂಸಾರ ಜೀವನ ಸರಿಯಾಗಿರಲು ತನ್ನಲ್ಲಿ ಸಾಕಷ್ಟು ಬದಲಾವಣಿಗೆ ಅವಳು ತಯಾರು ಇರುತ್ತಾಳೆ. ಆದ್ದರಿಂದಲೇ ತನ್ನ ಪುರುಷನೂ ನಾನು ಬಯಸಿದಂತೆ ಇರಬೇಕೆಂದು ಬಯಸಿ ಅವನನ್ನು ಬದಲಾಯಿಸಲು ಪ್ರಯತ್ನಿಸುತ್ತಾಳೆ.

2. ನಾನು ಹೋಗಿ ನಮ್ಮದು ಎಂಬ ಚಿಂತನೆ: ಮದುವೆ ನಂತರ ಇದು ಮುಖ್ಯವಾಗಿರುತ್ತದೆ. ಮದುವೆಗೆ ಮುಂಚೆ ನಮಗೆ ಏನು ಅನಿಸುತ್ತದೆ, ಏನು ಇಷ್ಟವಾಗುತ್ತದೆ ಅದರಂತೆ ಇರುತ್ತೇವೆ, ಆದರೆ ನಮ್ಮ ಇಷ್ಟಕ್ಕಿಂತ ನಮ್ಮ ಬೆಲೆ ಕೊಡಬೇಕಾಗುತ್ತದೆ. ಈ ರೀತಿ ಇದ್ದರೆ ಮಾತ್ರ ಸಂಸಾರವನ್ನು ಸುಂದರವಾಗಿ ನಡೆಸಿಕೊಂಡು ಹೋಗಲು ಸಾಧ್ಯ.

3. ಮೊದಲು ಏನು ಮಾಡಲು ಸಾಧ್ಯವಿಲ್ಲವೋ ಅದನ್ನು ಕೊನೆಯತನಕ ಮಾಡಲು ಸಾಧ್ಯವಿಲ್ಲ ಎಂದು ಹೆಣ್ಣು ಮಕ್ಕಳಿಗೆ ಹೇಳುತ್ತಾರೆ. ಈ ಮಾತು ಪುರುಷರಿಗೂ ಅನ್ವಹಿಸುತ್ತದೆ. ಏಕೆಂದರೆ ಮದುವೆಯಾದ ಶುರುವಿನಲ್ಲಿ ಹೆಂಡತಿಯನ್ನು ಹೇಗೆ ನೋಡಿಕೊಳ್ಳುತ್ತೀರ ಅದರ ಮೇಲೆ ಅವಳು ಕೂಡ ನನ್ನ ಗಂಡ ನನ್ನನ್ನು ಮುಂದೆ ಕೂಡ ಇವನು ಇದೇ ರೀತಿ ನೋಡಿಕೊಳ್ಳುತ್ತಾನೆ ಎಂದು ನಂಬುತ್ತಾಳೆ.

ಹಾಗಂತ ಪುರುಷ ಹೆಂಡತಿಗೆ ವಸ್ತುಗಳನ್ನು ಕೊಡಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಪ್ರತಿ ತಿಂಗಳು ಏನಾದರೂ ವಸ್ತುಗಳನ್ನು ತೆಗೆದುಕೊಡುವ ಅಭ್ಯಾಸ ಬೆಳೆಸಿದರೆ ನಂತರ ಒಂದು ತಿಂಗಳು ಕೊಡಿಸುವುದನ್ನು ಮಿಸ್ ಮಾಡಿದರೆ ಅವಳು 'ಇವರಿಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಗಿದೆ' ಎಂದು ಬೇಜಾರು ಮಾಡಿಕೊಳ್ಳುತ್ತಾಳೆ. ಆದ್ದರಿಂದ ಮದುವೆಯಾದ ನಂತರ ಸಂಸಾರವನ್ನು ಪ್ರೀತಿ ಮತ್ತು ಚಾಕಚಕ್ಯತೆಯಿಂದ ನಿಭಾಯಿಸಿದರೆ ಸುಂದರ ದಾಂಪತ್ಯ ಜೀವನ ನಿಮ್ಮದಾಗುವುದು.

Story first published:  Friday, November 30, 2012, 13:03 [IST]
English summary

1st Year Marriage Life Teaches Important 3 Lesson | Love And Relationship | ಮೊದಲ ವರ್ಷದ ದಾಂಪತ್ಯ ಜೀವನ ಕಲಿಸುವ 3 ಪ್ರಮುಖ ಪಾಠಗಳು | ಪ್ರೀತಿ ಮತ್ತು ಸಂಬಂಧ

How many couples that you know personally are in struggling marriages? Let’s take the pessimist’s view here: what makes you think that your relationship is different? Do you really know what you’re getting yourself into? How well do you really know her? Yes, she might be your soulmate, but even soulmates have bad tempers, and expensive tastes…
Write Comments

Subscribe Newsletter
AIFW autumn winter 2015
Boldsky ಈ-ಮಳಿಗೆ