Latest Updates
-
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್
ಅವನು ಏಕೆ ನನಗೆ ಮೋಸ ಮಾಡಿದ?

ತನ್ನ ಸಂಸಾರ , ನಾನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಭಾವನೆ ಪ್ರತಿಯೊಬ್ಬ ಪುರುಷನಲ್ಲಿ ಇರುತ್ತದೆ. ಆದರೆ ಕೆಲ ಪುರುಷರು ಈ ಎಲ್ಲಾ ಭಾವನೆಗಳಿಂದ ಹೊರಬಂದು, ಬೇಡದ ಭಾವನೆಗೆ ಅರ್ಥ ಹುಡುಕುತ್ತಾ ಸಂಸಾರ, ಸಂಬಂಧ ಮುರಿಯುವ ಕೆಲಸವನ್ನು ಮಾಡುತ್ತಾರೆ. ಅದಕ್ಕೆ ಕಾರಣಗಳು ಹಲವು ಇದ್ದರೂ, ಸಾಕಷ್ಟು ಜನರ ಸಂಸಾರ ಒಡೆದು ಹೋಗಲು ಈ ಕೆಳಗಿನ ಅಂಶಗಳು ಕೂಡ ಪ್ರಮುಖ ಕಾರಣವಾಗಿದೆ.
ಸಂಶಯ: ಕೆಲ ಮಹಿಳೆಯರಿಗೆ ತಮ್ಮ ಪುರುಷ ಬೇರೊಬ್ಬ ಮಹಿಳೆಯನ್ನು ನೋಡಿ ನಕ್ಕರೆ, ಮಾತನಾಡಿಸಿದರೆ ಅದೇ ದೊಡ್ಡ ತಪ್ಪು ಅನ್ನುವಂತೆ ದೊಡ್ಡ ರಾದ್ಧಂತ ಮಾಡಿ ಬಿಡುತ್ತಾರೆ. ಅದು ಮಹಿಳೆಯರು ಮಾಡುವ ದೊಡ್ಡ ತಪ್ಪು ಆಗಿರುತ್ತದೆ. ತಮ್ಮ ಪುರುಷರ ಮೇಲೆ ಸ್ವಲ್ಪ ಮಟ್ಟಿಗಿನ ಪೊಸೆಸಿವ್ ಇದ್ದರೆ ಸರಿ ಆದರೆ ಮಿತಿ ಇದ್ದರೆ ಅದು ಅವರಿಗೆ ಬಂಧನದಂತೆ ಭಾಸವಾಗುತ್ತದೆ. ಈ ರೀತಿಯ ನಡುವಳಿಕೆ ಪುರುಷರನ್ನು ಬೇರೆ ಹೆಣ್ಣಿನೆಡೆಗೆ ನೋಡುವಂತೆ ಮಾಡುವುದು.
ಮತ್ತೊಂದು ಮುಖ್ಯವಾದ ಕಾರಣವೆಂದರೆ ಮಹಿಳೆಯರು ತಮ್ಮ ಪುರುಷನಿಗೆ ಮಾನಸಿಕ ಮತ್ತು ದೈಹಿಕ ತೃಪ್ತಿ ನೀಡುವಲ್ಲಿ ಅಸಮರ್ಥರಾದಾಗ ಬೇರೆ ಸ್ತ್ರೀಯತ್ತ ಆಕರ್ಷಿತರಾಗುತ್ತಾರೆ. ಆದ್ದರಿಂದ ಮಹಿಳೆಯರು ತಮ್ಮ ಪುರುಷನ ಭಾವನೆಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು. ಅಲ್ಲದೆ ಈ ರೀತಿ ಆಗಲು ಹೆಣ್ಣನ್ನು ಮಾತ್ರ ದೂಷಿಸಿ ಪ್ರಯೋಜವಿಲ್ಲ, ಅವನು ಕೂಡ ಅವಳ ಭಾವನೆಗಳನ್ನು ಅರ್ಥೈಸಿಕೊಳ್ಳಬೇಕು. ಅವಳಲ್ಲಿರುವ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಿದರೆ ಸಂಸಾರ ಸರಿಯಾಗುವುದು.
ಈ ಮೇಲಿನ ಕಾರಣಗಳನ್ನು ನೋಡಿದಾಗ ಪುರುಷರು ಮಹಿಳೆಯರನ್ನು ಮೋಸ ಮಾಡಲು ಪುರುಷ ಮತ್ತು ಮಹಿಳೆ ಇಬ್ಬರೂ ಕಾರಣರಾಗಿದ್ದಾರೆ ಎಂಬ ಅಭಿಪ್ರಾಯಕ್ಕೆ ಬರಬಹುದು. ಗಂಡ-ಹೆಂಡತಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಸಿಕೊಂಡರೆ, ಅಲ್ಲಿ ಒಬ್ಬರಿಗೊಬ್ಬರು ಮೋಸ ಮಾಡಿಕೊಳ್ಳುವ ಪ್ರಮೇಯವೆ ಇರುವುದಿಲ್ಲ.



Click it and Unblock the Notifications