For Quick Alerts
ALLOW NOTIFICATIONS  
For Daily Alerts

ಬಾಯಿಯಲ್ಲಿ ನೀರೂರಿಸುವ ಮಂಗಳೂರು ಬಜ್ಜಿ ರೆಸಿಪಿ

|

ಗೋಳಿಬಜೆ ಎಂದಾಕ್ಷಣ ದಕ್ಷಿಣ ಕನ್ನಡ ನೆನಪಾಗುವುದು ಸಹಜ ಏಕೆಂದರೆ ಗೋಳಿಬಜೆ ಅಷ್ಟೋಂದು ಇಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಇದನ್ನು ಮಂಗಳೂರು ಬಜ್ಜಿ ಎಂದೂ ಕರೆಯುತ್ತಾರೆ. ಅಲ್ಲದೆ ಇದನ್ನು ಬಹಳ ಸುಲಭವಾಗಿ ಮಾಡಬಹುದಾದ ತಿಂಡಿಯೂ ಹೌದು.

ಸಾಮಾನ್ಯವಾಗಿ ಮಧ್ಯಾಹ್ನ ಊಟ ಮಾಡಿ ಮಲಗಿ ಎದ್ದಾಗ ಏನೋ ತಿನ್ನಬೇಕೆನಿಸುತ್ತದೆ. ಆಗ ತಕ್ಷಣವೇ 20 ನಿಮಿಷದಲ್ಲಿ ಮಾಡಬಹುದಾದ ತಿಂಡಿಯೆಂದರೆ ಗೋಳಿಬಜೆ!. ಹಾಗಾದರೆ ಇನ್ನೇಕೆ ತಡ? ಬನ್ನಿ ಸಂಜೆಯ ಸ್ನ್ಯಾಕ್ಸ್‌ಗೆ ಗೋಳಿ ಬಜೆ ಮಾಡುವ ವಿಧಾನವನ್ನು ಬೋಲ್ಡ್ ಸ್ಕೈ ನಿಮಗಾಗಿ ನೀಡುತ್ತಿದೆ

ಬೇಕಾಗುವ ಸಾಮಗ್ರಿಗಳು:
* ಮೈದಾ ಹಿಟ್ಟು - ಒಂದು ಬಟ್ಟಲು

* ಮೊಸರು - ಒಂದು ಬಟ್ಟಲು/ ಕಲೆಸಲು ಬೇಕಾಗುವಷ್ಟು

* ಸಕ್ಕರೆ ಪುಡಿ - ಅರ್ಧ ಚಮಚಸೋಡ- ಚಿಟಿಕೆ

* ಉಪ್ಪು- ರುಚಿಗೆ ಬೇಕಾಗುವಷ್ಟು

* ಎಣ್ಣೆ - ಕರಿಯಲು

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ದುಡಿಯುವ ಅಮ್ಮಂದಿರಿಗಾಗಿ 8 ಸ್ನಾಕ್ಸ್ ರೆಸಿಪಿ

ತಯಾರಿಸುವ ವಿಧಾನ:

* ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ.

* ಮೈದಾಗೆ ಸೋಡಾ ಪುಡಿ, ಉಪ್ಪು, ಸಕ್ಕರೆಪುಡಿ ಹಾಕಿ ಚೆನ್ನಾಗಿ ಬೆರೆಸಿ, ಅದಕ್ಕೆ ಮೊಸರು ಹಾಕಿ ಗಟ್ಟಿಯಾಗಿ ಕಲೆಸಿ. ತುಂಬಾ ತೆಳ್ಳಗೆ ಇರಬಾರದು, ಇಡ್ಲಿ ಹಿಟ್ಟಿಗಿಂತ ಗಟ್ಟಿ ಇರಬೇಕು. ಕೈಯಲ್ಲಿ ತೆಗೆದುಕೊಂಡು ಬಿಡುವಂತಿರಬೇಕು.

* ಎಣ್ಣೆ ಕಾದ ನಂತರ ಕಲೆಸಿದ ಮಿಶ್ರಣವನ್ನು ಕೈನಲ್ಲಿ ತೆಗೆದುಕೊಂಡು ಒಂದೊಂದಾಗಿ ಚಿಕ್ಕದಾಗಿ ಉಂಡೆ ಉಂಡೆಯಂತೆ ಎಣ್ಣೆಯಲ್ಲಿ ಬಿಡಿ. ಬೋಂಡಾ ತರಹ ಹಾಕಿ, ಕೆಂಪು ಬಣ್ಣ ಬರುವವರೆಗೆ ಕರಿದು, ತೆಗೆಯಿರಿ, ರುಚಿ ರುಚಿಯಾದ ಗೋಳಿ ಬಜೆ ರೆಡಿ! ಇನ್ನು ತೆಂಗಿನ ಕಾಯಿ ಚಟ್ನಿ ಜೊತೆ ಸರ್ವ್ ಮಾಡಿ.

English summary

Goli Baje Recipe for evening snacks

Goli Baje famous in South Karnataka. This Recipe very easy to prepare. Here we have given two type of recipe about goli baje. You can prepare this famous recipe at home only in a easy way.
X
Desktop Bottom Promotion