Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಂಜಾನ್ ಹಬ್ಬಕ್ಕಾಗಿ ವಿಶೇಷ ಅಡುಗೆ ಈರುಳ್ಳಿ ಅನ್ನ!
ಪವಿತ್ರ ಹಬ್ಬ ರಂಜಾನ್‌ನ ತಿಂಗಳು ಪ್ರಾರಂಭವಾಗುತ್ತಿವೆ. ವಿಶ್ವದಲ್ಲಿರುವ ಸಮಸ್ತ ಮುಸ್ಲಿಮ್ ಬಾಂಧವರು ಸೂರ್ಯಾಸ್ತವಾಗುವ ಮುನ್ನ ಆಹಾರವನ್ನು ಸೇವಿಸಿ ಇಡೀ ದಿನ ಉಪವಾಸವನ್ನು ಆಚರಿಸಿ ನಂತರ ಸಂಜೆಯ ಸಮಯದಲ್ಲಿ ಉಪವಾಸವನ್ನು ತ್ಯಜಿಸುತ್ತಾರೆ. ಆದ್ದರಿಂದ ನಿಮಗೆ ಸುಲಭದಲ್ಲಿ ಹಾಗೂ ಹೆಚ್ಚು ತ್ರಾಸದಾಯಕವಾಗಿರದ ಖಾದ್ಯವನ್ನು ತಯಾರಿಸಲು ಸಹಾಯಕವಾಗುವಂತೆ ಇಂದು ಮ್ಯಾಶ್‌ಕೋಲ್ ರೆಸಿಪಿಯೊಂದಿಗೆ ನಾವು ಬಂದಿದ್ದೇವೆ.
ಈ ಖಾದ್ಯವು ಸೌದಿ ಅರೇಬಿಯಾ ಪ್ರಾಂತ್ಯದಿಂದ ಬಂದಿರುವಂತದ್ದಾಗಿದೆ. ಅನ್ನವನ್ನು ಈರುಳ್ಳಿಯೊಂದಿಗೆ ಬೇಯಿಸಿ ಈ ಖಾದ್ಯವನ್ನು ತಯಾರಿಸಲಾಗುತ್ತದೆ. ನಿಮ್ಮ ಇಫ್ತಾರ್ ಕೂಟಕ್ಕೆ ಈ ಮ್ಯಾಶ್‌ಕೋಲ್ ಅನ್ನ ವಿಶೇಷ ಸ್ವಾದವನ್ನು ನೀಡುವುದಂತೂ ಖಂಡಿತ.

ಈ ಹಬ್ಬದ ತಿಂಗಳಿನ ಉಪವಾಸಕ್ಕೆ ವಿಶೇಷವಾಗಿ ಮತ್ತು ಆರಾಮದಾಯಕವಾಗಿ ಸಿದ್ಧಪಡಿಸಬಹುದಾದ ವಿಶೇಷ ಅನ್ನದ ಖಾದ್ಯ ಇದಾಗಿದ್ದು ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುವುದು ಖಂಡಿತ. ಹಾಗಿದ್ದರೆ ಇನ್ನೇಕೆ ತಡ ಈ ವಿಶೇಷ ಮತ್ತು ಸೊಗಸಾಗಿರುವ ಅನ್ನದ ಖಾದ್ಯವನ್ನು ತಯಾರಿಸಿ ನಿಮ್ಮ ಉಪವಾಸ ವೃತವನ್ನು ಪವಿತ್ರವಾಗಿ ಕೈಗೊಳ್ಳಿ.
ರಂಜಾನ್ ಸ್ಪೆಷಲ್ -7 ಮಟನ್ ರೆಸಿಪಿ
ಪ್ರಮಾಣ: 4
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು
ಸಾಮಾಗ್ರಿಗಳು
1. ಬಾಸ್ಮತಿ ಅಕ್ಕಿ - 2 ಕಪ್‌ಗಳು
2. ಈರುಳ್ಳಿ - 2 (ಕತ್ತರಿಸಿದ್ದು)
3. ತುಪ್ಪ - 1/2 ಕಪ್
4.ನೀರು - 6 ಕಪ್‌ಗಳು
5. ಕೇಸರಿ - ಕೆಲವು ತುಂಡುಗಳು
6. ರೋಸ್ ವಾಟರ್ - 1 ಸ್ಪೂನ್
7. ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ
* ದೊಡ್ಡ ಪಾತ್ರೆಯಲ್ಲಿ 6 ಕಪ್‌ಗಳಷ್ಟು ನೀರನ್ನು ಕುದಿಸಿ. ಅದು ಕುದಿ ಬರುತ್ತಿದ್ದಂತೆ ಅದಕ್ಕೆ ಅಕ್ಕಿಯನ್ನು ಸೇರಿಸಿ.
* ಸಣ್ಣ ಉರಿಯಲ್ಲಿ ಅದಕ್ಕೆ ಮುಚ್ಚಿ ಮತ್ತು ಹತ್ತು ನಿಮಿಷಗಳ ಕಾಲ ಬೇಯಿಸಿ.
* ಈ ಸಮಯದಲ್ಲಿ, ತುಪ್ಪವನ್ನು ಬಿಸಿ ಮಾಡಿ ಮತ್ತು ಅದರಲ್ಲಿ ಈರುಳ್ಳಿಯನ್ನು ಸೇರಿಸಿ ಫ್ರೈ ಮಾಡಿ.
*ನೀವು ಹುರಿದಿಟ್ಟ ಅರ್ಧದಷ್ಟು ಈರುಳ್ಳಿಯ ಮೇಲೆ ಬೇಯಿಸಿದ ಅನ್ನದಿಂದ ಪದರವನ್ನು ಮಾಡಿ.
* ಇನ್ನು ಅನ್ನವನ್ನು ಬಸಿದು ಈರುಳ್ಳಿಯ ಮೇಲೆ ಹರಡಿಕೊಳ್ಳಿ. ಅನ್ನದ ಮೇಲೆ ಸ್ವಲ್ಪ ರೋಸ್ ವಾಟರ್ ಮತ್ತು ಕೇಸರಿ ದಳಗಳನ್ನು ಚೆಲ್ಲಿ.
* ಈಗ ಮೇಲ್ಭಾಗದಲ್ಲಿ ಮತ್ತಷ್ಟು ಹುರಿದ ಈರುಳ್ಳಿಯನ್ನು ಹರಡಿ. ಬೇಕಿದ್ದಲ್ಲಿ ಅರ್ಧ ಕಪ್‌ನಷ್ಟು ನೀರನ್ನು ಕೂಡ ಸೇರಿಸಬಹುದು.
* ಪ್ಲಾಸ್ಟಿಕ್ ಹಾಳೆಯಿಂದ ಖಾದ್ಯವನ್ನು ಮುಚ್ಚಿ.
150 ಡಿಗ್ರಿಯಲ್ಲಿ ಓವನ್ ಅನ್ನು ಮುಂಚಿತವಾಗಿ ಬಿಸಿ ಮಾಡಿಕೊಳ್ಳಿ ಮತ್ತು ಅನ್ನವನ್ನು 7-8 ನಿಮಿಷಗಳ ಕಾಲ ಬೇಯಿಸಿ.
ರುಚಿಕರ ಮ್ಯಾಶ್‌ಕೋಲ್ ಅನ್ನ ಸವಿಯಲು ಸಿದ್ಧವಾಗಿದೆ. ಇದನ್ನು ಚಿಕನ್ ಕರಿ ಅಥವಾ ರುಚಿಕರ ಕಬಾಬ್‌ನೊಂದಿಗೆ ಸವಿಯಿರಿ



Click it and Unblock the Notifications