For Quick Alerts
ALLOW NOTIFICATIONS  
For Daily Alerts

ಸಿಸೇರಿಯನ್ ಮಾಡಿಸುವುದಾದರೆ ಈ ಅಂಶಗಳು ತಿಳಿದಿರಲಿ

|

ಇತ್ತೀಚಿನ ದಿನಗಳಲ್ಲಿ ನಾರ್ಮಲ್ ಡೆಲಿವರಿಗಿಂತ ಸಿ ಸೆಕ್ಷನ್ ಅಂದರೆ ಸಿಸೇರಿಯನ್ ಹೆಚ್ಚಾಗಿ ಕಂಡು ಬರುತ್ತದೆ. ಕೆಲವರು ಹೆರಿಗೆ ನೋವನ್ನು ದಿನಗಟ್ಟಲೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಿಸೇರಿಯನ್ ಮಾಡಿಸುವ ನಿರ್ಧಾರಕ್ಕೆ ಬರುತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಕೆಲ ವೈದ್ಯರುಗಳು ಹಣದ ಲಾಭಕ್ಕಾಗಿಯೂ ಸಿ ಸೆಕ್ಷನ್ ಡೆಲಿವರಿ ಮಾಡಲು ಹೇಳುತ್ತಾರೆ. ಏಕೆಂದರೆ ನಾರ್ಮಲ್ ಡೆಲಿವರಿಗಿಂತ ಸಿಸೇರಿಯನ್ ಮಾಡಿಸಿದರೆ ಆಸ್ಪೆತ್ರೆಯ ಬಿಲ್ಲಿನ ಮೊತ್ತ ಅಧಿಕವಾಗುವುದು!

ಕೆಲವೊಂದು ಪರಿಸ್ಥಿತಿಯಲ್ಲಿ ವೈದ್ಯರು ನಿಮಗೆ ನಾರ್ಮಲ್ ಡೆಲಿವರಿಗೆ ಪ್ರಯತ್ನಿಸಿ, ಕೊನೆಗೆ ಹೆರಿಗೆಯಲ್ಲಿ ತುಂಬಾ ತೊಂದರೆ ಕಂಡು ಬಂದರೆ ತಾಯಿ- ಮಗುವಿನ ಜೀವಕ್ಕೆ ಅಪಾಯ ಉಂಟಾಗದಿರಲು ಸಿ ಸೆಕ್ಷನ್ ಮಾಡಿಸುತ್ತಾರೆ. ಇದಲ್ಲದೆ ನೋವು ಸಹಿಸುವುದು ಕಷ್ಟ ಎಂದು ಸಿಸೇರಿಯನ್ ಮಾಡಿಸುವ ಪ್ಲಾನ್ ನಲ್ಲಿದ್ದರೆ ಈ ಕೆಳಗಿನ ಅಂಶಗಳನ್ನು ಖಚಿತ ಪಡಿಸಿಕೊಳ್ಳುವುದು ಒಳ್ಳೆಯದು.

Planned C Section

*. ಸಿ ಸೆಕ್ಷನ್ ಡೆಲಿವರಿ ಬೇಕೆಂದು ನೀವು ಬಯಸುತ್ತಿರುವುದಕ್ಕೆ ಕಾರಣ
ವೈದ್ಯರು ನಿಮಗೆ ಸಿ ಸೆಕ್ಷನ್ ಮಾಡುವಾಗ ನಿಖರವಾದ ಕಾರಣ ಹೇಳಿ, ನಿಮ್ಮ ಒಪ್ಪಿಗೆ ಪಡೆದ ಬಳಿಕವಷ್ಟೇ ಮಾಡುತ್ತಾರೆ. ಆದ್ದರಿಂದ ನೀವು ನೋವು ಸಹಿಸಲು ಸಾಧ್ಯವಿಲ್ಲ ಎನ್ನುವ ಕಾರಣ ಹೇಳಿ ಸಿ ಸೆಕ್ಷನ್ ಮಾಡಿಸುವುದು ಒಳ್ಳೆಯದಲ್ಲ. ಸಿ ಸೆಕ್ಷನ್ ಮಾಡಿಸಿದರೆ ಹೆರಿಗೆ ಸಮಯದಲ್ಲಿ ನೋವು ಸ್ವಲ್ಪ ಕಮ್ಮಿ ಆದರೂ, ನಂತರ ತುಂಬಾ ನೋವು ಸಹಿಸಬೇಕಾಗುತ್ತದೆ.

* ಶಾಶ್ತ್ರ ನಂಬಿ
ಹೆಚ್ಚಿನವರು ಶಾಸ್ತ್ರ ನಂಬಿ, ತಮ್ಮ ಮಗು ಇದೇ ಸಮಯದಲ್ಲಿ ಜನಿಸಬೇಕೆಂಬ ನಿರ್ಧಾರಕ್ಕೆ ಬಂದು ಅದಕ್ಕಾಗಿ ಸಿ ಸೆಕ್ಷನ್ ಮಾಡ ಬಯಸುತ್ತಾರೆ. ಆದರೆ ಸಿ ಸೆಕ್ಷನ್ ಡೆಲಿವರಿಯನ್ನು ಗರ್ಭಿಣಿಯಾಗಿ 38 ವಾರಗಳಿಗಿಂತ ಮೊದಲು, 39ನೇ ವಾರದ ನಂತರ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಶಾಸ್ತ್ರ ನಂಬಿ ಮಗುವು ಹುಟ್ಟುವ ಗಳಿಗೆಯನ್ನು ನೀವು ನಿರ್ಧರಿಸಬೇಡಿ, ನಿಮ್ಮ ವೈದ್ಯರ ಸಲಹೆ ಕೇಳಿ.

* ಯಾವ ಬಗೆಯ ಅನಸ್ತೇಷಿಯಾ
ಹಿಂದೆಯೆಲ್ಲಾ ಸಿಸೇರಿಯನ್ ಮಾಡುವಾಗ ಅನಸ್ತೇಷಿಯಾ ಮದ್ದು ಚುಚ್ಚಿದ ತಕ್ಷಣ ತಾಯಿಗೆ ಸಂಪೂರ್ಣ ಪ್ರಜ್ಞೆ ತಪ್ಪುತ್ತಿತ್ತು. ಆದರೆ ಈಗ ವಿಜ್ಞಾನ ಸಾಕಷ್ಟು ಮಂದುವರೆದಿದ್ದು, ನೋವಿನ ಅನುಭವ ಬರದಿರುವಂತೆ ಆದರೆ ನಿಮಗೆ ಪ್ರಜ್ಞೆ ಇರುವಂತೆ ಅನಸ್ತೇಷಿಯಾ ನೀಡಲಾಗುವುದು. ಇದರಿಂದ ಮಗು ಹುಟ್ಟಿದಾಗ, ನಿಮ್ಮ ಮಗು ಅಳುವ ಶಬ್ದವನ್ನು ಕೇಳಿಸಿಕೊಳ್ಳಬಹುದು. ಯಾವ ಬಗೆಯ ಅನಸ್ತೇಷಿಯಾ ನಿಮಗೆ ಒಳ್ಳೆಯದು ಅನ್ನುವುದಕ್ಕೆ ವೈದ್ಯರ ಹತ್ತಿರ ಸಲಹೆ ಪಡೆಯಿರಿ.

English summary

Planned C Section: Facts You Need To Know

C sections are becoming increasingly common these days.There is much planning to be done if you are having a planned C section. Here some basics you must know
X
Desktop Bottom Promotion