For Quick Alerts
ALLOW NOTIFICATIONS  
For Daily Alerts

ಹಿಮೋಗ್ಲೋಬಿನ್ ಹೆಚ್ಚಿಸುವ 11 ಸೂಪರ್ ಫುಡ್ಸ್

|

ದೇಹದಲ್ಲಿ ರಕ್ತಕಣಗಳು ಕಮ್ಮಿಯಾದಾಗ ರಕ್ತಹೀನತೆ ಉಂಟಾಗುವುದು. ಅದರಲ್ಲೂ ಹೆಚ್ಚಿನ ಗರ್ಭಿಣಿಯರಲ್ಲಿ ಕಬ್ಬಿಣದಂಶ, ವಿಟಮಿನ್ ಬಿ12, ಫೋಲೆಟ್ ಕೊರತೆ ಕಾಣಿಸಿಕೊಳ್ಳುವುದು. ಇವುಗಳ ಕೊರತೆ ಕಾಣಿಸಿಕೊಂಡರೆ ರಕ್ತಹೀನತೆ ಉಂಟಾಗುವುದು. ರಕ್ತ ಹೀನತೆ ಉಂಟಾದರೆ ಹೆರಿಗೆಯಲ್ಲಿ ತೊಂದರೆ ಕಾಣಿಸಿಕೊಳ್ಳುವುದು, ಅವಧಿಗೆ ಮುನ್ನ ಹೆರಿಗೆಯಾಗಬಹುದು, ಹುಟ್ಟುವ ಮಗುವಿನ ತೂಕ ತುಂಬಾ ಕಮ್ಮಿಯಾಗಿರುವುದು. ಆದ್ದರಿಂದ ರಕ್ತಹೀನತೆ ಸಮಸ್ಯೆ ಉಂಟಾಗದಂತೆ ಒಳ್ಳೆಯ ಆಹಾರಗಳನ್ನು ತಿನ್ನಬೇಕು.

ಇಲ್ಲಿ ನಾವು ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸಿ ರಕ ಕಣಗಳನ್ನು ಹೆಚ್ಚು ಮಾಡುವ ಆಹಾರಗಳ ಬಗ್ಗೆ ಹೇಳಿದ್ದೇವೆ. ಗರ್ಭಿಣಿಯರು ಇವುಗಳನ್ನು ತಿಂದರೆ ರಕ್ತಹೀನತೆ ಸಮಸ್ಯೆ ಬರದಂತೆ ತಡೆಯಬಹುದು.

 ಬಾಳೆಹಣ್ಣು

ಬಾಳೆಹಣ್ಣು

ಇದರಲ್ಲಿ ಕಬ್ಬಿಣದಂಶ ಮತ್ತು ಇತರ ಖನಿಜಾಂಶವಿದ್ದು ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುತ್ತದೆ.

ಖರ್ಜೂರ

ಖರ್ಜೂರ

ಖರ್ಜೂರ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುತ್ತದೆ. ಪ್ರತೀದಿನ 2-3 ಖರ್ಜೂರ ತಿನ್ನುವುದು ಒಳ್ಳೆಯದು.

ನಟ್ಸ್

ನಟ್ಸ್

ನಟ್ಸ್ ನಲ್ಲಿ ಕಬ್ಬಿಣದಂಶ ಅಧಿಕವಿರುತ್ತದೆ. ಗರ್ಭಿಣಿಯರಿಗೆ ಆಗಾಗ ಏನಾದರೂ ತಿನ್ನಬೇಕೆನಿಸುತ್ತದೆ. ಆಗ ಕುರುಕುಲು ತಿಂಡಿ ಬಾಯಿಗೆ ಹಾಕುವ ಬದಲು ಆರೋಗ್ಯಕರ ನಟ್ಸ್ ತಿನ್ನುವುದು ಒಳ್ಳೆಯದು.

ಬ್ರೊಕೋಲಿ

ಬ್ರೊಕೋಲಿ

ಗರ್ಭಿಣಿಯರು ಬ್ರೊಕೋಲಿಯನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು. ಇದರಲ್ಲಿ ಕಬ್ಬಿಣದಂಶ, ವಿಟಮಿನ್ಸ್ ಮತ್ತು ಫೋಲೆಟ್ ಅಧಿಕವಿದೆ.

 ಸೊಪ್ಪು

ಸೊಪ್ಪು

ಪ್ರತೀದಿನ ಸೊಪ್ಪಿನಿಂದ ಮಾಡಿದ ಆಹಾರಗಳನ್ನು ತಿನ್ನುವುದು ಒಳ್ಳೆಯದು. ಸೊಪ್ಪಿನಲ್ಲಿ ಕಬ್ಬಿಣದಂಶ ಅಧಿಕವಿರುವುದರಿಂದ ದೇಹದಲ್ಲಿ ರಕ್ತ ಕಣಗಳು ಹೆಚ್ಚಾಗುವುದು.

ದಾಳಿಂಬೆ

ದಾಳಿಂಬೆ

ದಾಳಿಂಬೆಯನ್ನು ಪ್ರತೀದಿನ ತಿನ್ನಿ, ದಾಳಿಂಬೆ ತಿಂದರೆ ರಕ್ತಹೀನತೆ ಸಮಸ್ಯೆ ಉಂಟಾಗುವುದಿಲ್ಲ, ರಕ್ತ ಹೀನತೆ ಸಮಸ್ಯೆ ಇದ್ದವರಿಗೂ ದೇಹದಲ್ಲಿ ರಕ್ತಕಣಗಳು ಹೆಚ್ಚಾಗಿ ಆರೋಗ್ಯ ಹೆಚ್ಚುವುದು.

ಒಣದ್ರಾಕ್ಷಿ

ಒಣದ್ರಾಕ್ಷಿ

ಒಣದ್ರಾಕ್ಷಿ ಕೂಡ ತುಂಬಾ ಒಳ್ಳೆಯದು. ಅದರಲ್ಲೂ ಸ್ವಲ್ಪ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಹಾಕಿ ಮಾರನೆಯ ದಿನ ಬೆಳಗ್ಗೆ ದಿನ ತಿನ್ನಿ.

ಮೊಟ್ಟೆಯ ಹಳದಿ

ಮೊಟ್ಟೆಯ ಹಳದಿ

ಮೊಟ್ಟೆಯ ಹಳದಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದೆ. ಗರ್ಭಿಣಿಯರು ಪ್ರತೀದಿನ ಒಂದು ಮೊಟ್ಟೆ ತಿನ್ನುವುದು ಒಳ್ಳೆಯದು.

 ಮೃದ್ವಂಗಿಗಳು

ಮೃದ್ವಂಗಿಗಳು

ಮೃದ್ವಂಗಿಗಳು ರಕ್ತಹೀನತೆ ಸಮಸ್ಯೆ ಗುಣಪಡಿಸಲು ಉತ್ತಮವಾದ ಔಷಧಿ. ಇದನ್ನು ತಿಂದರೆ ಯಾವುದೇ ಸಪ್ಲಿಮೆಂಟ್ ಸಹಾಯವಿಲ್ಲದೆ ರಕ್ತಹೀನತೆ ಸಮಸ್ಯೆಯಿಂದ ಹೊರಬರಬಹುದು.

ಕಿತ್ತಳೆ ಜ್ಯೂಸ್

ಕಿತ್ತಳೆ ಜ್ಯೂಸ್

ಕಿತ್ತಳೆ ಜ್ಯೂಸ್ ನಲ್ಲಿ ವಿಟಮಿನ್ ಸಿ ಇದ್ದು, ಇದು ದೇಹವು ಕಬ್ಬಿಣದಂಶವನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಸಿಟ್ರಸ್ ಫುಡ್ಸ್ ಅಧಿಕ ತಿನ್ನಿ.

ಸಮುದ್ರಾಹಾರಗಳು

ಸಮುದ್ರಾಹಾರಗಳು

ಸಮುದ್ರಾಹಾರಗಳು ಕೂಡ ರಕ್ತ ಹೀನತೆ ಸಮಸ್ಯೆ ಹೋಗಲಾಡಿಸುವಲ್ಲಿ ತುಂಬಾ ಸಹಕಾರಿ.

English summary

Foods To Fight Anemia In Pregnancy

Anaemia during pregnancy is linked to an increased risk of preterm delivery and low birth weight. Keeping haemoglobin in the normal range is very important because haemoglobin transports oxygen to your baby. You should take extra care on your diet to include enough iron, which is needed for the formation of haemoglobin.
X
Desktop Bottom Promotion