ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು 5 ಟಿಪ್ಸ್

By:

ಬಂಜೆತನ ಇತ್ತೀಚಿಗೆ ಹೆಚ್ಚಿನ ಮಹಿಳೆಯರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಮಗು ಬೇಕೆಂದು ಬಯಸಿ ಮಕ್ಕಳಾಗದೆ ಇದ್ದರೆ ಕೂಡಲೇ ವೈದ್ಯರನ್ನು ಸಂರ್ಕಿಸಬೇಕು. ಏಕೆಂದರೆ ಲೇಟ್ ಮಾಡಿದಷ್ಟು ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಾ ಹೋಗುತ್ತದೆ. ಮಕ್ಕಳಾಗದಿದ್ದರೆ ದಾಂಪತ್ಯ ಜೀವನದಲ್ಲೂ ಬಿರುಕು ಕಂಡು ಬರಬಹುದು. ಆದ್ದರಿಂದ ಸಮಸ್ಯೆ ಹೆಚ್ಚಾಗುವ ಮುನ್ನ ಎಚ್ಚೆತ್ತು ಕೊಳ್ಳಬೇಕು.

ಮಕ್ಕಳಾಗದಿದ್ದರೆ ಅಷ್ಟೇನು ಹೆದರಬೇಕಾಗಿಲ್ಲ ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಇನ್ ವಿಟ್ರೋ ಫರ್ಟಿಲಿಟಿಯಂತಹ ಸೌಲಭ್ಯದಿಂದಾಗಿ ಎಷ್ಟೋ ತಾಯಿಂದಿರ ಮಡಿಲು ತುಂಬಿದೆ. ಮಗುಬೇಕೆಂದು ಬಯಸುವ ಮಹಿಳೆಯು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು.

1. ಗರ್ಭಧಾರಣೆಗೆ ಸೂಕ್ತ ಸಮಯ:

ಓವ್ಯೂಲೇಶನ್ ಸಮಯ ಗರ್ಭಧಾರಣೆಗೆ ಸೂಕ್ತವಾದ ಸಮಯವಾಗಿದೆ. ಮೊದಲು ಮುಟ್ಟಿನ ದಿನಾಂಕವನ್ನು 3 ತಿಂಗಳವರೆಗೆ ನೋಟ್ ಮಾಡಿಕೊಳ್ಳಬೇಕು. ಈ ರೀತಿ ಮಾಡಿದರೆ ಓವ್ಯೂಲೇಶನ್ ಸಮಯವನ್ನು ಸುಲಭವಾಗಿ ತಿಳಿಯಬಹುದು. ಈ ಓವ್ಯೂಲೇಶನ್ ಸಮಯದಲ್ಲಿ ಲೈಗಿಕ ಕ್ರಿಯೆ ನಡೆಸಿದರೆ ಗರ್ಭದಾರಣೆಯಾಗುವ ಸಾಧ್ಯತೆ ಹೆಚ್ಚು.

2. ಆಹಾರಕ್ರಮದಲ್ಲಿ ಬದಲಾವಣೆ

ಅಧಿಕ ಪೋಷಕಾಂಶವಿರುವ ಆಹಾರಗಳನ್ನು ತಿನ್ನಬೇಕು. ಸೊಪ್ಪು, ನಾರಿನಂಶವಿರುವ ಪದಾರ್ಥಗಳು, antioxidants ಮತ್ತು ಫಾಲಿಕ್ ಆಸಿಡ್ ಅಧಿಕವಿರುವ ಪದಾರ್ಥಗಳು , ಮೊಟ್ಟೆ, ಆಲೂಗೆಡ್ಡೆ, ಬೀಟ್ ರೂಟ್ ಈ ರೀತಿಯ ಆಹಾರಗಳ ಸೇವನೆ ಒಳ್ಳೆಯದು.

3. ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು

ಅಧಿಕ ಮಾನಸಿಕ ಒತ್ತಡ ಕೂಡ ಗರ್ಭದಾರಣೆ ಆಗದಿರಲು ಒಂದು ಕಾರಣವಾಗಿದೆ. ಯೋಗ ಮಾಡುವುದು, ಸಂಗೀತವನ್ನು ಕೇಳುವುದು ಇವುಗಳಿಂದ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.

4. ದೇಹದ ತೂಕ

ತುಂಬಾ ದಪ್ಪಗಿದ್ದರೆ ಗರ್ಭಧಾರಣೆಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಅಧಿಕ ತೂಕವಿದ್ದರೆ ದೇಹದ ತೂಕವನ್ನು ಕಡಿಮೆ ಮಾಡಕೊಳ್ಳಬೇಕು. ತುಂಬಾ ಸಣ್ಣಗಿದ್ದರೆ ಕೂಡ ಗರ್ಭೀಣಿಯಾಗುವ ಸಾಧ್ಯತೆ ಕಡಿಮೆ. ಆದ್ದರಿಂದ ಸಮತೂಕದಿಂದ ಇರುವಂತೆ ನೋಡಿಕೊಳ್ಳಿ.

See next photo feature article

5. ಲೈಂಗಿಕ ಕ್ರಿಯೆ

ಪ್ರತಿದಿನ ಲೈಂಗಿಕ ಕ್ರಿಯೆ ನಡೆಸಿದರೆ ಸ್ತ್ರೀಯರಿಗೆ ಗರ್ಭಿಣಿಯಾಗುವ ಸಾಮರ್ಥ್ಯ ನೈಸರ್ಗಿಕವಾಗಿ ಹೆಚ್ಚಾಗುವುದು. ಆದ್ದರಿಂದ ಮಗು ಬೇಕೆಂದು ಬಯಸುವ ದಂಪತಿಗಳು ವೈದ್ಯರ ಸಲಹೆಯ ಜೊತೆಗೆ ಇಲ್ಲಿ ಹೇಳಿರುವ ವಿಷಯಗಳ ಕಡೆಗೂ ಗಮನ ಕೊಡುವುದು ಒಳ್ಳೆಯದು.

Read more about: ಗರ್ಭಧಾರಣೆ, ಮಹಿಳೆ, pregnancy, women
English summary

Ways To Boost Fertility Among Women | Tips For Women | ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು 5 ಟಿಪ್ಸ್ | ಮಹಿಳೆಯರಿಗಾಗಿ ಕೆಲ ಸಲಹೆ

There are synthetic steps or medicinal treatments that can help you increase your fertility but, it is best to be cautious before it gets late. Women can try these natural ways to boost their fertility.
Story first published: Friday, November 30, 2012, 16:36 [IST]
Please Wait while comments are loading...
Subscribe Newsletter