Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಬಾರ್ಷನ್ ಮಾಡಿಸಿದರೆ ಸ್ತನ ಕ್ಯಾನ್ಸರ್ ಬರಬಹುದೇ?
ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ತಿಂಗಳೆಂದು ಗುರುತಿಸಲಾಗಿದೆ. ಏಕೆಂದರೆ ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಕಂಡು ಬರುತ್ತಿರುವ ಮಾರಕ ಸಮಸ್ಯೆಯಾಗಿದ್ದು ಇದರ ಬಗ್ಗೆ ಜಾಗೃತಿ ವಹಿಸಿದರೆ ಇದನ್ನು ಬರದಂತೆ ತಡೆಯಬಹುದು. ಆದ್ದರಿಂದ ಈ ತಿಂಗಳಿನಲ್ಲಿ ಎದೆ ಭಾಗದಲ್ಲಿ ಪಿಂಕ್ ಬಣ್ಣದ ಬ್ಯಾಡ್ಜ್ ಧರಿಸಿ ಅದರ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುವುದು.
ಸ್ತನ ಕ್ಯಾನ್ಸರ್ ನಾನಾ ಕಾರಣಗಳಿಂದ ಬರುತ್ತದೆ ಅದರಲ್ಲೂ ಅನಿಯಮಿತ ಮುಟ್ಟು, ಮದ್ಯಪಾನ, ಅಬಾರ್ಷನ್ ಈ ಎಲ್ಲಾ ಕಾರಣಗಳಿಂದ ಸ್ತನ ಕ್ಯಾನ್ಸರ್ ಬರಬಹುದು. ಅದರಲ್ಲೂ ಅಬಾರ್ಷನ್ ಮಾಡಿಸಿದರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಅದು ಏಕೆ ಬರುತ್ತದೆ ಎಂದು ತಿಳಿಯಲು ಮುಂದೆ ಓದಿ:

ಗರ್ಭಿಣಿಯಾದಾಗ ಮಹಿಳೆಯರ ದೇಹದಲ್ಲಿರುವ ಈಸ್ಟ್ರೋಜನ್ ಹಾರ್ಮೋನ್ ಹೆಚ್ಚಾಗುತ್ತದೆ. ಇದರಿಂದ ಎದೆಯ ಗಾತ್ರ ಹೆಚ್ಚಾಗುವುದು. ಹಾಲು ಉತ್ಪತ್ತಿಯಾಗಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಅಬಾರ್ಷನ್ ಮಾಡಿಸಿದರೆ ದೇಹದಲ್ಲಿರುವ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾಗಿ ಎದೆಯಲ್ಲಿ ಗಂಟುಗಳು ಬಿದ್ದು ಕ್ಯಾನ್ಸರ್ ಉಂಟಾಗುವ ಸಾಧ್ಯೆ ಹೆಚ್ಚು.
ಈ ರೀತಿ ಮಾಡಿದರೆ ಸ್ತನ ಕ್ಯಾನ್ಸರ್ ತಡೆಯಬಹುದು:
ಆಹಾರ ಕ್ರಮ: ದಿನನಿತ್ಯದ ಆಹಾರದಲ್ಲಿ ಪ್ರೋಟನ್ ಅಂಶ, ಪೋಷಕಾಂಶಗಳು ಅಧಿಕವಿರುವ ಆಹಾರವನ್ನು ಸೇವಿಸಬೇಕು, ಅಲ್ಲದೆ ಸೋಯಾ, ಹುಚ್ಚೆಳ್ಳು, ಎಳ್ಳು ಸೇವಿಸ ಬೇಕು.ಸಿಗರೇಟ್, ಮದ್ಯಪಾನಗಳ ಸೇವನೆ ಒಳ್ಳೆಯದಲ್ಲ.
ಫಿಟ್ ನೆಸ್ : ಒಬೆಸಿಟಿಯಿಂದ ಕೂಡ ಸ್ತನ ಕ್ಯಾನ್ಸರ್ ಬರಬಹುದು, ಆದ್ದರಿಂದ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಒಳ್ಳೆಯದು, ಇದಕ್ಕಾಗಿ ಕಡಿಮೆ ಕೊಬ್ಬಿನ ಆಹಾರವನ್ನು ಸೇವಿಸಬೇಕು.
ಕೃತಕ ಜೋಡನೆ: ಸ್ತನವನ್ನು ಕೃತಕವಾಗಿ ಜೋಡಿಸುವುದರಿಂದ ಸಹ ಸ್ತನ ಕ್ಯಾನ್ಸರ್ ಉಂಟಾಗಬಹುದು. ಗರ್ಭ ನಿರೋಧಕ ಮಾತ್ರೆಗಳನ್ನು ಅಧಿಕವಾಗಿ ತೆಗೆದುಕೊಳ್ಳುವುದರಿಂದ ಸಹ ಕ್ಯಾನ್ಸರ್ ಬರಬಹುದು.
ಸ್ತನದ ಪರಿಶೀಲನೆ: ಸ್ತನವನ್ನು ಸ್ವತಃ ಪರಿಶೀಲಿಸುತ್ತಾ ಇರಬೇಕು. ಸ್ತನದಲ್ಲಿ ಯಾವುದಾದರೂ ಬಣ್ಣ ವ್ಯತ್ಯಾಸ, ನೋವು, ಗಂಟು ಕಂಡು ಬಂದರೆ ವೈದ್ಯರನ್ನು ಕಾಣುವುದು ಒಳ್ಳೆಯದು.



Click it and Unblock the Notifications