For Quick Alerts
ALLOW NOTIFICATIONS  
For Daily Alerts

ಮಗು ಮಾತನಾಡುವ ಮುನ್ನ ಹಾವಭಾವ ಹೇಗಿರುತ್ತೇ..?

By Deepak
|

ಮಕ್ಕಳು ಏನು ಮಾತನಾಡಿದರು ಚೆನ್ನ. ಅದರಲ್ಲೂ ತೊದಲು ನುಡಿಯುವ ಮಕ್ಕಳು ಮನೆಯ ಸಂತೋಷವನ್ನು ಹೆಚ್ಚಿಸಿ ಬಿಡುತ್ತಾರೆ. ಅದಕ್ಕೆ ನಮ್ಮ ಜನಪದರಲ್ಲಿ ಒಂದು ಪ್ರಸಿದ್ಧ ಹಾಡಿನ ಸಾಲು ಹೀಗೆ ಹೇಳಿದೆ " ಕೂಸು ಇದ್ದ ಮನೆಗೆ ಬೀಸಣಿಕೆ ಯಾತಾಕ, ಕೂಸು ಕಂದಯ್ಯ ಒಳ ಹೊರಗ ಆಡಿದರೆ ಬೀಸಣಿಕೆ ಗಾಳಿ ಸುಳಿದಾವಾ". ಹೀಗೆ ಮಕ್ಕಳು ನಮ್ಮ ಆಸ್ತಿಯಾಗಿ, ಆನಂದವಾಗಿ, ಆಶಾ ಕಿರಣವಾಗಿ ನಮ್ಮ ಜೀವನದ ಪ್ರಮುಖ ಭಾಗವಾಗಿರುತ್ತಾರೆ.

ಇಂತಹ ಮಕ್ಕಳ ಮೇಲೆ ನಡೆಸಿರುವ ಇತ್ತೀಚಿನ ಅಧ್ಯಯನದಲ್ಲಿ ಹಸುಗೂಸುಗಳು ತಾವು ಮಾತನಾಡುವುದನ್ನು ಕಲಿಯುವ ಮೊದಲೆ ತಮ್ಮ ಪರಿಸರ ಮತ್ತು ತಮ್ಮ ಸುತ್ತ-ಮುತ್ತ ಇರುವ ಜನರು ಮಾತನಾಡುವುದನ್ನು ಕೇಳಿ ಅದಕ್ಕೆ ಪ್ರತಿಕ್ರಿಯಿಸುತ್ತಲೆ ಬಹಳಷ್ಟು ಕಲಿಯುತ್ತಾರೆ ಎಂಬುದನ್ನು ಸಾಬೀತು ಮಾಡಿವೆ.

What Babies Say Before They Talk

ಇದು ನಮಗೂ ಗೊತ್ತು ಎಂದು ನೀವು ಭಾವಿಸಬಹುದು. ಆದರೆ ಮಕ್ಕಳು ಮಾತನಾಡುವ ಮುನ್ನ ಪ್ರತಿಕ್ರಿಯಿಸುವುದನ್ನು ಕಲಿಯುತ್ತಾರೆ. ಆದರೆ ಮಾತನಾಡುವುದನ್ನು ಕಲಿತ ಮೇಲೆ ಅವರು ಮಾತನ್ನು ಸ್ವಲ್ಪ ನಿಧಾನ ಮಾಡುತ್ತಾರೆ. ಒಂದು ಬಗೆಯ ತೊದಲುವಿಕೆಯನ್ನು ಸಹ ಒಮ್ಮೊಮ್ಮೆ ತೋರಿಸಬಹುದು. ಏಕೆಂದರೆ ಆಗ ಅವರು ಪರಿಸ್ಥಿತಿಯನ್ನು ವಿವರಿಸಲು ಬಳಸುವ ದೊಡ್ಡ ವಾಕ್ಯಗಳನ್ನು ಯೋಚಿಸಿ ಹೇಳಲು ಸಮಯ ಬೇಕಾಗುತ್ತದೆ.

ತಜ್ಞರು ಈ ಪರಿಸ್ಥಿತಿಯ ಹಿಂದಿನ ಕಾರಣವನ್ನು ವಿವರಿಸಿದ್ದಾರೆ. ಮಕ್ಕಳು ಕೇಳುವಿಕೆ ಮತ್ತು ಮಾತನಾಡುವಿಕೆ ನಡುವೆ ಏಕೆ ದೀರ್ಘ ಅಂತರ ಇರುತ್ತದೆ ಎಂಬುದನ್ನು ಅವರು ತಿಳಿಸಿದ್ದಾರೆ. ಮಕ್ಕಳು ಮಾತನಾಡುವ ಮುನ್ನ ಜಾಗರೂಕತೆಯಿಂದ ಪದಗಳನ್ನು ಆಲೋಚಿಸುತ್ತದೆ, ಇದಕ್ಕಾಗಿ ಸಮಯಾವಕಾಶ ಬೇಕಾಗುತ್ತದೆ ಆ ಮಗುವಿಗೆ ಎಂಬುದು ಅವರ ಅಭಿಪ್ರಾಯ. ಬಹಳಷ್ಟು ಮಕ್ಕಳ ಪೋಷಕರು ತಮ್ಮ ಎಳೆಯ ಮಕ್ಕಳು ಯಾವುದೇ ಸನ್ನಿವೇಶಕ್ಕೆ ಬೇಗ ಪ್ರತಿಕ್ರಿಯಿಸಬೇಕು ಎಂಬ ಅವಸರದಲ್ಲಿ ಮಾತನಾಡುತ್ತಾರೆ. ಹಾಗಾಗಿ ಅವರ ಮಾತುಗಳಲ್ಲಿ ಸ್ಪಷ್ಟತೆ ಇರುವುದಿಲ್ಲ ಎಂಬ ಅಭಿಪ್ರಾಯವನ್ನು ಇರಿಸಿಕೊಂಡಿರುತ್ತಾರೆ. ಮಕ್ಕಳು ಬಿಕ್ಕುತ್ತಾ ಮಾತನಾಡುವ ಸಮಸ್ಯೆಗೆ ಪರಿಹಾರ

ಆದರೆ ಇವರು ಬೆಳೆದಂತೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮಾತನಾಡುವುದನ್ನು ಕಲಿಯುತ್ತಾರೆ. ಇದರಿಂದ ಅವರ ಮಾತುಗಳು ನಿಧಾನವಾಗುತ್ತದೆ. ಏಕೆಂದರೆ ಈ ಹಂತದಲ್ಲಿ ಮಕ್ಕಳು ಭಾಷೆಯ ಸೂಕ್ಷ್ಮಗಳನ್ನು ತಿಳಿದುಕೊಂಡು ಮಾತನಾಡಲು ಪ್ರಯತ್ನಿಸುತ್ತಾರೆ. ಅಸಲಿಗೆ ಮಕ್ಕಳು ಮಾತನಾಡುವ ಮುನ್ನ ಏನು ಹೇಳುತ್ತಾರೆ ಎಂದು ಆಲೋಚಿಸಿದ್ದೀರಾ? ಅವರು ನೀವು ಕೇಳಿದ ಪ್ರಶ್ನೆಗೆ ತಮ್ಮ ತೊದಲು ಮಾತಿನಲ್ಲಿ ಉತ್ತರವನ್ನು ನೀಡುತ್ತಾರೆ. ಅದು ನಿಮಗೆ ಅರ್ಥವಾಗದೆ ಇರಬಹುದು. ಆದರೆ ಅವರು ಸರಿಯಾದ ಉತ್ತರವನ್ನೆ ನೀಡಿರುತ್ತಾರೆ, ಅದು ಅವರ ಭಾಷೆಯಲ್ಲಿ. ಅವರು ನಿಮ್ಮ ಪ್ರಶ್ನೆಗೆ ಉತ್ತರವಾಗಿ ಕೆಲವೊಂದು ಬಗೆಯ ಸದ್ದುಗಳನ್ನು ಸೃಷ್ಟಿಸುತ್ತಾರೆ, ಆದರೆ ಅದು ಸಹ ಅವರ ಭಾಷೆಯಲ್ಲಿ ನಿಖರ ಉತ್ತರವಾಗಿರುತ್ತದೆ!

ಈ ಅಧ್ಯಯನವು ಪೋಷಕರಿಗೆ ಸಹ ಕೆಲವೊಂದು ಸಲಹೆಗಳನ್ನು ನೀಡಿದೆ, ಅದೇನಪ್ಪಾ ಎಂದರೆ ಹಸುಗೂಸು ಒಂದು ನಿಮ್ಮ ಮನೆಯಲ್ಲಿ ಇದ್ದರೆ. ಆ ಮಗು ಭಾಷೆಯನ್ನು ಸರಿಯಾಗಿ ಕಲಿಯಲು ಸ್ಪಷ್ಟವಾದ ವಾತಾವರಣವನ್ನು ನಿರ್ಮಿಸಿ. ಮನೆಯಲ್ಲಿ ಗದ್ದಲವನ್ನು ಮಾಡಬೇಡಿ. ಜೋರಾಗಿ ಟಿ.ವಿ. ರೇಡಿಯೊ, ಮ್ಯೂಸಿಕ್ ಪ್ಲೇಯರ್ ಹಾಕಬೇಡಿ.


ಮಗುವು ನಿಮ್ಮ ಮನೆಯ ಪ್ರಶಾಂತ ವಾತಾವರಣದಲ್ಲಿ ಭಾಷೆಯನ್ನು ಸ್ಪಷ್ಟವಾಗಿ ಕೇಳಿ, ಕಲಿಯಲಿ. ನಿಮ್ಮ ಮಗುವಿನ ಮುಂದೆ ಕೆಟ್ಟ ಮಾತುಗಳನ್ನು, ಅಶ್ಲೀಲ ಪದಗಳನ್ನು ಮತ್ತು ಜಗಳಗಳಲ್ಲಿ ಬಳಸುವಂತಹ ಪದಗಳನ್ನು ಯಾವುದೇ ಕಾರಣಕ್ಕು ಬಳಸಬೇಡಿ. ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬೇಡಿ.
English summary

What Babies Say Before They Talk

A new study claims that toddlers learn a lot about responding to their environment and communicating with others much before they learn any language to speak. In fact, babies respond faster before they learn to speak. After they start speaking, they become a bit slower in their responses as they need time to construct the sentence in their minds before they speak.
Story first published: Thursday, January 7, 2016, 14:44 [IST]
X
Desktop Bottom Promotion