For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗು ಸುರಕ್ಷಿತ ಬಾಲ್ಯವನ್ನು ಕಾಣಲಿ

|

ಹುಟ್ಟಿದ ಮಗುವಿಗೆ ಬೆಳೆಯುತ್ತಿದ್ದ ಹಾಗೆ ಪ್ರಪಂಚದಲ್ಲಿ ಎಲ್ಲವೂ ಹೊಸದಾಗಿಯೇ ಇರುತ್ತದೆ. ಅದು ನೋಡುವ ದೃಷ್ಟಿಯೂ ಬೇರೆಯದೇ ಆಗಿರುತ್ತದೆ. ಅಂಬೆಗಾಲಿಡುತ್ತಿದ್ದಂತೆ ಮಕ್ಕಳಿಗೆ ಹೊಸದನ್ನು ಕಲಿಯುವ ಕಾತುರ. ಹೊಸದೊಂದು ಅನ್ವೇಷಣೆಯನ್ನು ಮಾಡಲು ಪ್ರಾರಂಭಿಸುತ್ತವೆ. ಇಂತಹ ಮಕ್ಕಳ ಪ್ರಯಾಣದಲ್ಲಿ ಕೆಲವೊಮ್ಮ ಅಪಾಯಕಾರಿ ಘಟನೆಗಳೂ ನಡೆಯಬಹುದು.

ಮನೆಯಲ್ಲಿರುವ ಅಪಾಯಕಾರಿ ವಸ್ತುಗಳನ್ನು ಮುಟ್ಟಿ ತೊಂದರೆಗಳಿಗೆ ಒಳಗಾಗಬಹುದು. ಏಕೆಂದರೆ ಆ ಮಕ್ಕಳಿಗೆ ಪ್ರತಿಯೊಂದನ್ನು ಅನುಭವಿಸಿಯೇ ಅದು ಅರ್ಥವಾಗಬೇಕೇ ವಿನಃ ಯಾರಾದರೂ ಹೇಳಿದರೆ ಅದು ಅವರ ಗಮನಕ್ಕೆ ಬಾರದೇ ಹೋಗಬಹುದು.ಅದನ್ನು ಅರಿತುಕೊಳ್ಳುವಷ್ಟು ಅವರ ಬುದ್ಧಿ ಬೆಳೆದಿರುವುದಿಲ್ಲ ಎನ್ನುವುದು ನೆನಪಿನಲ್ಲಿಡಬೇಕಾದ ವಿಷಯ. ಆದ್ದರಿಂದ ಪಾಲಕರಾದವರು ಮಕ್ಕಳನ್ನು ಇಂತಹ ಯಾವುದೇ ಅನಾಹುತಗಳಿಂದ ದೂರ ಇಡಬೇಕಾದದ್ದು ಅನಿವಾರ್ಯ ಕೂಡಾ.

ಹಾಗೆಂದ ಮಾತಕ್ಕೆ ತಂದೆ ತಾಯಿ ಎಷ್ಟೇ ಜಾಗರೂಕರಾಗಿದ್ದರೂ ಹಲವಾರು ಕುತೂಹಲಗಳನ್ನು ಹೊತ್ತು ಮುಂದೆ ಸಾಗುವ ಮಗುವನ್ನು ಎಲ್ಲಾ ಅಪಾಯಕಾರಿ ಸನ್ನಿವೇಶಗಳಿಂದ ದೂರ ಇಡುವುದು ಕಷ್ಟ ಸಾಧ್ಯವೇ ಸರಿ.ನಿಮ್ಮ ಗಮನ ಅದೆಷ್ಟು ಬಾರಿ ಅವರ ಮೇಲಿದ್ದರೂ ನಿಮ್ಮ ಕಣ್ಣು ತಪ್ಪಿಸಿ ಏನಾದರೊಂದು ಕಿತಾಪತಿಯನ್ನು ಮಾಡುತ್ತಾರೆನ್ನಿ.

Ways To Make Home Safe For Baby

ನಿಮ್ಮ ಮಗುವಿಗೆ ಸಣ್ಣ ಪುಟ್ಟ ಗಾಯಗಳು, ಅಪಘಾತಗಳೂ ಅಪರೂಪಕ್ಕೇ ಸಂಭವಿಸುವುದನ್ನು ನಿಯಂತ್ರಿಸುವುದು ಅಸಾಧ್ಯವಾದರೂ ಕೂಡಾ ನಿಮ್ಮ ಮಗು ಅದೇ ಕೊತೂಹಲದಿಂದ ಅದರ ಅನ್ವೇಷಣೆಯನ್ನು ಯಾವುದೇ ಅಪಾಯವಿಲ್ಲದೇ ಉತ್ತಮ ವಾತಾವರಣದಲ್ಲಿ ಮುಂದುವರಿಯುವಂತೆ ಮಾಡುವುದು ತಂದೆ ತಾಯಿಗಳ ಬವಾಬ್ದಾರಿ. ನಿಮ್ಮ ಮನೆಯನ್ನು ಹೇಗೆ ಮಗುವಿಗೆ ತೊಂದರೆಯಾಗದ ರೀತಿಯಲ್ಲಿ ರಕ್ಷಿಸಬಹುದು ಎನ್ನುವುದಕ್ಕೆ ಕೆಲವು ಮಾರ್ಗೋಪಾಯಗಳು ಇಲ್ಲಿವೆ.

ಸುರಕ್ಷಿತ ಲಾಕ್ ಗಳು / ಕೀಲಿ ಕೈ :

ಮಕ್ಕಳು ತೆವಳುತ್ತಾ ಮನೆಯನ್ನು ಅದೆಷ್ಟು ಬಾರಿ ಸುತ್ತುತ್ತವೂ ಹೇಳಲಾಗದು. ಎಲ್ಲವನ್ನೂ ನೋಡುವ, ಮುಟ್ಟುವ ಕುತೂಹಲ ತಾನೇ? ಆದರೆ ಇದರಿಂದ ಅಪಾಯಗಳೇ ಇದ್ದರೂ ಮಕ್ಕಳನ್ನು ಏನೂ ಮಾಡದಂತೆ ಆಟವಾಡದಂತೆ ತಡೆಯುವುದು ಸರಿಯಲ್ಲ.ಅದು ಅಸಾಧ್ಯ ಕೂಡಾ. ಅನಾಹುತಗಳಿಂದ ಮಗುವನ್ನು ತಪ್ಪಿಸುವುದಲ್ಲಾಗಿ ನಿಮ್ಮ ಮನೆಯಲ್ಲಿಯೇ ಕೆಲವು ಬದಲಾವಣೆಗಳನ್ನು ತರುವುದು ಒಳಿತು.

ಮನೆಗಳಲ್ಲಿ ಕೆಲಸ ಮಾಡುವಾಗ ಕಬೋರ್ಡ್ / ಕಪಾಟುಗಳಿಗೆ ಬೀಗವನ್ನು ಹಾಕದೇ ಎಷ್ಟೋ ಸಲ ಬಿಟ್ಟಿರುತ್ತೇವೆ. ಆದರೆ ಮಕ್ಕಳು ಅದರೊಳಗೆ ಕೈ ಹಾಕಿ ಸಂಶೋಧನೆ ಮಾಡದೇ ಬಿಡುವುದಿಲ್ಲ! ಅದರಲ್ಲೂ ಮಕ್ಕಳಿಗೆ ಕೈಗೆಟಕುವ ಹಾಗೆ ಇರುವ ಯಾವುದೇ ಕಪಾಟುಗಳ ಬಾಗಿಲನ್ನು ತೆಗೆದಿಡುವುದು ಅಪಾಯಕಾರಿ. ಏಕೆಂದರೆ ಅಂತಹ ಕಪಾಟುಗಳಲ್ಲಿ ಔಷಧಗಳನ್ನೋ, ಕಾಗದಗಳನ್ನೋ. ಕತ್ತರಿಯಂತಹ ವಸ್ತುಗಳನ್ನೋ ಇಟ್ಟಿರುತ್ತೀರಿ. ಆದ್ದರಿಂದ ಅಡುಗೆ ಮನೆಯಿಂದ ಹಿಡಿದು ಬಾತ್ ರೂಮ್ / ಸ್ನಾನದ ಮನೆಯವರೆಗಿನ ಎಲ್ಲಾ ಕಪಾಟುಗಳನ್ನು ಮಕ್ಕಳಿಗೆ ಸಿಗದ ಹಾಗೆ ಒಹಳ ಎಚ್ಚರಿಕೆಯಿಂದ ಲಾಕ್ ಮಾಡಿರುವುದು ಉತ್ತಮ.ಆಟವಾಡುತ್ತ ಮಗು ಕಬೋರ್ಡ್ ಒಳಗೆ ನುಸುಳಬಹುದು. ಆದ್ದರಿಂದ ನಿಮ್ಮ ಶಯನದ ಅಥವಾ ವಸ್ತು ಸಮ್ಗ್ರಹಣಾ ಕೋಣೆಯ ಬಾಗಿಲುಗಳನ್ನೂ ಕೂಡಾ ಲಾಕ್ ಮಾಡೂವುದು ಹೆಚ್ಚು ಸುರಕ್ಷಿತ.

ಔಟ್ ಲೆಟ್ / ಹೊರ ಗುಂಡಿಗಳನ್ನು ಮುಚ್ಚಿಡಿ :

ಇಗೀನ ಮನೆಗಳು ಅತ್ಯಂತ ಐಶಾರಾಮಿಯಾಗಿದ್ದು ಸ್ವಿಚ್ ಬೋರ್ಡ್ ಗಳು ಕೈಗೆಟಕುವ ಹಾಗೆಯೇ ನಿರ್ಮಿಸಲಾಗಿರುತ್ತದೆ. ಮಲಗುವ ಹಾಸಿಗೆಯ ಹತ್ತಿರ,ಕುಳಿತುಕೊಳ್ಳುವ ಆಸನಗಳ ಪಕ್ಕದಲ್ಲಿ ಹೀಗೆ ತೀರಾ ಕೆಳಗಡೆ ಜೋಡಿಸಿರುತ್ತಾರೆ. ಆದರೆ ಇದು ನಿಮ್ಮ ಅಂಬೆಗಾಲಿಡುವ ಮಗುವಿಗೆ ಕಂಟಕವಾಗಿ ಪರಿಣಮಿಸಬಾರದಲ್ಲವೇ ?

ಸ್ವಿಚ್ ಬೋರ್ಡ ಗಳಲ್ಲಿ ಇರುವ ತೂತು/ ಗಿಂಡಿ ಮಕ್ಕಳಿಗೆ ತಿಳಿಯದೇ ಅದರಲ್ಲಿ ಕೈ ಹಾಕುವುದು ಅಥವಾ ಕೈಯಲ್ಲಿರುವ ಯಾವುದೇ ವಸ್ತುವನ್ನು ಅದರಲ್ಲಿ ತೂರಿಸುವುದು ಇಂತಹ ತುಂಟತನವನ್ನು ಮಾಡಬಹುದು. ಆದರೆ ಇದು ಶಾಕ್ ಹೊಡೆಯುವ ವಿದ್ಯುನ್ಮಾನ ಯಂತ್ರ ಎಂಬುದು ನಿಮ್ಮ ಮಗುವಿಗೆ ತಿಳಿಯುವ ಮುದಲೇ ನಡೆಯುವ ಅನಾಹುತಗಳನ್ನು ನಿವೇ ಬಹಳ ಜಾಗರೂಕತೆಯಿಂದ ತಡೆಗಟ್ಟಬೇಕು. ಬಟ್ಟೆ ಐರನ್ / ಇಸ್ತ್ರಿ ಮಾಡಿದ ನಂತರ ಪ್ಲಗ್ ತೆಗೆತುವುದನ್ನು ಮರೆಯಬೇಡಿ. ಮಿಕ್ಸರ್ ಗಳನ್ನು ಬಳಸಿದರೂ ಅದು ಮಗುವಿನ ಕೈಗೆ ಸಿಗದ ಹಾಗೆ ಎತ್ತಿಡಿ.

ಸ್ವಿಚ್ ಬೋರ್ಡ್ಗಳ ಕಿಂಡಿಗಳನ್ನು ಮುಚ್ಚಲು ಪ್ಚಾಸ್ಟಿಕ್ ನಿಂದ ತಯಾರಿಸಲಾದ ಮುಚ್ಚಳಗಳನ್ನೂ ಬಳಸಬಹುದು.ಮಗುವಿನ ಕೈಗೆ ಸಿಗ್ಯ್ವ ಹಾಗೆ ಪೆನ್ನು ಮೊಳೆ ಮುಂತಾದ ಚೂಪಾದ ವಸ್ತುಗಳನ್ನು ಇಡಬೇಡಿ. ಇಂತಹ ವಸ್ತುಗಳನ್ನು ಸ್ವಿಚ್ ಬೋರ್ಡ್ ಒಳಗಡೆ ಹಾಕಿದರೆ ಅನಾಹುತ ತಪ್ಪಿದ್ದಲ್ಲ. ನಿಮ್ಮ ನಗು ಶಾಕ್ ಹೊಡೆದು ಅಳುವುದನ್ನು ತಪ್ಪಿಸುವುದು ನಿಮ್ಮ ಹೊಣೆ!

ಸುರಕ್ಷಿತವಾದ ಬೇಬಿ ಗೇಟ್ ಉಪಯೋಗಿಸಿ :

ಹರೆದಾಡುವ ಮಗು ಮೆಟ್ಟಿಲ್ಲಿನಿಂದ ಬಿದ್ದು ದೊಡ್ಡ ಪ್ರಮಾಣದ ಅನಾಹುತಗಳನ್ನಾಗಿದ್ದನ್ನು ನೀವು ದಿನನಿತ್ಯ ಕೇಳುತ್ತಲೇ ಇರುತ್ತಿರಿ. ಇಷ್ಟಾದರೂ ಅನೇಕ ಬಾರಿ ಮತ್ತೆ ಮತ್ತೆ ಎಡವುವ ಸನ್ನಿವೇಶಗಳು ಎದುರಾಗುತ್ತವೆ. ಆದ್ದರಿಂದಲೇ ನಿಮ್ಮ ಮಗು ಯಾವುದೇ ತೊಂದರೆಗಳಿಲ್ಲದೇ ಸುರಕ್ಷಿತವಾಗಿ ಬೆಳೆಯಲು ಬೇಬಿ ಗೇಟ್ ನ್ನು ಮೆಟ್ಟಿಲುಗಳ ಮುಂದೆ ನಿಲ್ಲಿಸಿ. ಇದು ನಿಮ್ಮ ಮಗು ದೂಡಿಕೊಂಡು ಹೋಗಲು ಅಥವಾ ಬೀಳಿಸಲು ಸಾಧ್ಯವಿಲ್ಲ. ಆದರೆ ದೊಡ್ಡವರಿಗೆ ಇದು ಸುಲಭವಾಗಿ ಸಾಗಿಸುವಂತದ್ದು. ಈ ಗೇಟ್ ಗಳಲ್ಲಿ ನಿಮ್ಮ ಮಗು ತಲೆ ಸಿಕ್ಕಿಸಿಕೊಳ್ಳುವುದಿ ಬೆರಳುಗಳನ್ನು ಸಿಕ್ಕಿಸಿಕೊಳ್ಳುವುದು ಇಂತಹ ಯಾವುದೇ ಸಮಸ್ಯೆಗಳಿರುವುದಿಲ್ಲ.

ಸುರಕ್ಷಿತ ಬಾತ್ ರೂಮ್ / ಸ್ನಾನದ ಕೋಣೆ :

ನಿಮ್ಮ ಮಗುವನ್ನು ಇನ್ನಷ್ಟು ಅಪಾಯಗಳನ್ನು ತಪ್ಪಿಸಲಿ ಸ್ನಾನಗೃಹದ ಸುರಕ್ಷತೆ ಬಹಳ ಮುಖ್ಯ. ಟಾಯ್ಲೆಟ್ ಗಳಲ್ಲಿ ಬಳಸುವ ಪೇಪರ್/ ಕಾಗದಗಳು ಇನ್ನಿತರ ವಸ್ತುಗಳನ್ನು ಮಕ್ಕಳಿಗೆ ಸಿಗದ ಹಾಗೆ ಇಡುವುದು ಅಸಾಧ್ಯವಿರಬಹುದು, ಆದರೆ ಮಗುವನ್ನು ರಕ್ಷಿಸಲು ಕೆಲವು ಮಾರ್ಗಗಳನ್ನು ನೀವು ಅನುಸರಿಸಬಹುದು. ಮಗುವಿಗಾಗಿ ವಿಶೇಷವಾದ ಸ್ನಾನದ ಟಬ್ ಗಳನ್ನು ನಿರ್ಮಿಸಿ. ಅದು ನೀರಿನ ನಲ್ಲಿ / ಟ್ಯಾಪ್ ಗಳಿಂದ ಮುಕ್ತವಾಗಿರಲಿ. ಇದರಿಂದ ನಿಮ್ಮ ನಗುವಿನ ಸಂತೋಷಭರಿತ ಸ್ನಾನಕ್ಕೆ ಅನುವುಮಾಡಿಕೊಟ್ಟಂತಾಗುತ್ತದೆ.ಶೇವಿಂಗ್ ಕಿಟ್ ಗಳಂತ ವಸ್ತುಗಳು, ಸೋಪು ಇವುಗಳನ್ನು ಆದಷ್ಟು ಮಗುವಿಗೆ ಸಿಗದ ರೀತಿರಲ್ಲಿ ಎತ್ತರದಲ್ಲಿಯೇ ಜೋಡಿಸಿಡುವುದು ಅಗತ್ಯವಾಗಿದೆ.

ಪೀಠೋಪಕರಣಗಳ ಸುರಕ್ಷತೆ :

ಮಕ್ಕಳು ದಿನದಿಂದ ದಿನಕ್ಕೆ ಬೆಳೆಯುತ್ತವೆ. ಅಂಬೆಗಾಲಿಡುವ ಮಗು ನಡೆದಾಡಲು ಆರಂಭಿಸುತ್ತದೆ. ನಿಮ್ಮ ಮಗು ಎನನ್ನಾದರೂ ಹಿಡಿದುಕೊಂಡು ನಿಂತುಕೊಳ್ಳಲು ಪ್ರಾರಂಭಿಸಿತು ಎಂದುಕೊಳ್ಳಿ. ಅಲ್ಲಿಗೆ ಸಮಸ್ಯೆಗಳೂ ವಿಪರೀತವಾಗಿತ್ತಾ ಹೋಗುತ್ತವೆ. ನೀವು ಅದೆಷ್ಟು ಜಾಗರೂಕರಾಗಿದ್ದರೂ ಕಡಿಮೆಯೇ. ಮಗು ತಾನೇ ಸ್ವತಃ ನಿಂತು ಕೊಳ್ಳಲು ಮುಂದೆ ಹೋಗಲು ಪ್ರಾರಂಭಿಸಿದರೆ ಮನೆಯಲ್ಲಿ ಎತ್ತರದ ಜಾಗದಲ್ಲಿರುವ ಎಲ್ಲಾ ವಸ್ತುಗಳನ್ನು ಮುಟ್ಟಲು ಮುಂದಾಗುತ್ತದೆ. ಮನೆಯಲ್ಲಿರುವ ಸೋಫಾ. ಕುರ್ಚಿಗಳಂತಹ ಪೀಠೋಪಕರಣಗಳನ್ನು ಹತ್ತಿ ಪುಸ್ತಕದ ಕಪಾಟು, ಅಲಂಕಾರಿಕ ವಸ್ತುಗಳನ್ನಿಟ್ಟ ಕಪಾಟುಗಳನ್ನು ಮುಟ್ಟುಲು ನಿಮ್ಮ ಮಗು ಪ್ರಯತ್ನಿಸುತ್ತದೆ. ಆ ಸಂದರ್ಭಗಳಲ್ಲು ಅನಾಹುತಗಳು ಸಂಭವಿಸಬಹುದು. ಆದ್ದರಿಂದ ಪೀಠೋಪಕರಣಗಳನ್ನು ಆಸನಗಳನ್ನೂ ಆದಷ್ಟು ಖಾಲಿ ಗೋಡೆಗಳಿರುವ ಕಡೆಯೇ ಜೋಡಿಸಿ ನಿಮ್ಮ ಆಸನಗಳನ್ನು ಇಟ್ಟಿರುವ ಜಾಗದ ಮೇಲ್ಭಾಗದಲ್ಲಿ ಯಾವುದೇ ಕಪಾಟುಗಳು / ಕವಾಟಗಳು ಇರದಿರುವುದು ಉತ್ತಮ . ಜೊತೆಗೆ ಡಯಾಪರ್ ಬಂಪರ್ ಗಳನ್ನೂ ಮಗುವಿಗೆ ಹಾಕಿಡುವುದೂ ಸರಕ್ಷಿತ.

ಕಿಟಕಿಗಳು ಸರಕ್ಷಿತವಾಗಿರಲಿ :

ಇಂದಿನ ಮನೆಗಳಲ್ಲಿ ಕಿಟಕಿಗಳು ಹೆಚ್ಚಾಗಿ ಗಾಜಿನಿಂದಲೇ ತಯಾರಿಸಲ್ಪಟ್ಟಿರುತ್ತವೆ. ಅಲ್ಲದೇ ಹಗ್ಗದಿಂದ ಸರಿಸುವಂತಹ ಪರದೆ / ಕರ್ಟನ್ ಗಳನ್ನೂ ಮಾಡಿರುತ್ತಾರೆ.

ನಿಮ್ಮ ಮನೆಯಲ್ಲಿರುವ ಕಿಟಕಿ ನಿಮ್ಮ ಮಗುವಿನ ಕೈಗೆಟಕುವಂತಿದ್ದರೆ ಅದರಿಂದ ಮಗುವನ್ನು ಕಾಪಾಡುವತ್ತ ಗಮನವಹಿಸಿ. ಪರದೆಗೆ ಜೋಡಿಸಿರುವ ಹಗ್ಗವು ನೇತಾಡುತ್ತಿದ್ದರೆ ಮಗು ಅದನ್ನು ಎಳೆದು ಕುತ್ತಿಗೆ ಅಥವಾ ಕೈ ಕಾಲುಗಳಿಗೆ ಸಿಕ್ಕಿಸಿಕೊಳ್ಳದಂತೆ ಎಚ್ಚರವಹಿಸಿ. ಇದರಿಂದ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳಿ. ಅಲ್ಲದೇ ಕಿಟಕಿಯ ಬಾಗಿಲುಗಳು ತೆರೆದಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಗಾಳಿ ಬರುವುದಕ್ಕೆ ಒಂದಿಂಚು ಕಿಟಕಿಯ ಗಾಜು / ಬಾಗಿಲನ್ನು ತೆರೆದಿಟ್ಟಿರುವುದನ್ನು ಬಿಟ್ಟು ಹೆಚ್ಚು ಬಾಗಿಲು ತೆರೆದಿದ್ದರೆ ಅದನ್ನು ತಕ್ಷಣ ಮುಚ್ಚಿ. ನಿಮ್ಮ ಮಗು ಕಿಟಕಿಯಿಂದ ಇಣುಕಿ ಆಚೆ ನೋಡಲು ಹೋಗಿ ಬೀಳದಂತೆ ಎಚ್ಚರವಹಿಸಿ. ಕಿಟಕಿಯ ಬದಿಗಳಲ್ಲಿ ಮೊಳೆಗಳು / ಕಬ್ಬಿಣದ ಅಥವಾ ಗಾಜಿನ ಚೂರುಗಳು ಇರದಂತೆ ಮುಂಜಾಗ್ರತೆವಹಿಸುವುದು ಇನ್ನೂಂದು ಪ್ರಮುಖ ವಿಷಯ.

Read more about: ಮಗು ಮನೆ baby home
English summary

WaysTo Make Home Safe For Baby | ನಿಮ್ಮ ಮಗು ಸುರಕ್ಷಿತ ಬಾಲ್ಯವನ್ನು ಕಾಣಲಿ

From the time they learn to crawl, babies are constantly on the move, exploring their exciting -- and sometimes dangerous new world. As a parent, you want to keep your child safe
X
Desktop Bottom Promotion